ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾನ್ ಭಾರತಕ್ಕೆ ಎಷ್ಟೊಂದು ಪ್ರಧಾನಿಗಳು!

By Staff
|
Google Oneindia Kannada News

Who will become prime minister of india?
ಭಾರತದ ಪ್ರಧಾನಮಂತ್ರಿಯ ಹುದ್ದೆಗೆ ಈ ಸಲ ಭಾರೀ ಪೈಪೋಟಿ ಏರ್ಪಟ್ಟಿದೆ. ಜನಪ್ರತಿನಿಧಿಗಳನ್ನು ಜನರೇ ಆರಿಸಿದರೂ ಪ್ರಧಾನಿಯನ್ನು ಆರಿಸುವ ಅಧಿಕಾರ ಸಾಮಾನ್ಯನಿಗಿಲ್ಲ, ವಿಪರ್ಯಾಸ. ಯಾರು ಯಾರೊಂದಿಗೆ ಕೈಹಿಡಿದು ಯಾರನ್ನು ಪ್ರಧಾನಿ ಮಾಡುತ್ತಾರೋ ಯಾರಿಗೆ ಗೊತ್ತು. ಅಂತೂ ಪ್ರಧಾನಿ ಹುದ್ದೆಗಾಗಿ ಅಂತಿಂಥವರ ಜೊತೆ ಎಂತೆಂಥವರೂ ಪೈಪೋಟಿಗೆ ಬಿದ್ದಿದ್ದಾರೆ. ಯಾರ್ಯಾರಿದ್ದಾರೆ ನೀವೇ ನೋಡಿ.

* ರಾಮ್, ಬೆಂಗಳೂರು

'ಮನಮೋಹಕ'ವಾಗಿ ದೇಶ ಆಳಿದ್ದಾರೆ, ಆದ್ದರಿಂದ ಮನಮೋಹನ್ ಸಿಂಗರೇ ಮುಂದುವರಿಯಲಿ ಎಂದು ಸೋನಿಯಾ ಹೇಳುತ್ತಿದ್ದಾರೆ.

'ರಾಹುಕಾಲ' ಕಳೆದಿದೆ, ರಾಹುಲ್ ಗಾಂಧಿಗೆ ಇನ್ನು ಪ್ರಧಾನಿ ಪಟ್ಟ ಕಟ್ಟಬಹುದು ಎಂದು ಸ್ವಯಂ ಎಂಎಂ ಸಿಂಗರೇ ಸಂಗೀತ ಹಾಡುತ್ತಿದ್ದಾರೆ.

'ಮೂಕರ್ಜಿ' ನನ್ನದೂ ಇದೆ ಪ್ರಧಾನಿ ಪಟ್ಟಕ್ಕೆ ಎಂದು ಪ್ರಣವ್ ಮುಖರ್ಜಿ ಪ್ರಣವನಾದಗೈಯುತ್ತಿದ್ದಾರೆ.

'ಪ್ರಕಾಶ' ನನ್ನದೇನು ಕಮ್ಮಿಯೇ? ಪ್ರಧಾನಿ ಪಟ್ಟಕ್ಕೆ ನಾನೂ ಅಭ್ಯರ್ಥಿಯೇ ಎನ್ನುತ್ತಿದ್ದಾರೆ ಪ್ರಕಾಶ್ ಕಾರಟ್.

(ಹೌದೌದು, ನನ ಗಂಡ 24 ಕ್ಯಾರಟ್ ಅಪ್ಪಟ ಚಿನ್ನ; ನನ್ನ ಪ್ರಕಾಶ ಪ್ರಕಾಶಮಾನ ವಜ್ರ ಅನ್ನುತ್ತಿದ್ದಾರೆ ಬೃಂದಾ ಕಾರಟ್.)

ರಾಂ ರಾಂ 'ಸೀತಾರಾಂ', ಅಹಂ ಅಪಿ ಅರ್ಹಂ ಎಂದು ಸಿತಾರಂ ಬಾರಿಸತೊಡಗಿದ್ದಾರೆ ಚಾರ್ವಾಕ ಯೆಚೂರಿ ಸೀತಾರಾಂ.

'ಅಧ್ವಾನ'ದ ಮಾತಾಡಬೇಡಿ, ಇದು ರಾಮ ಮಂದಿರ, ನಾ ರಾಮಚಂದಿರ, ಅನ್ನುತ್ತಿದ್ದಾರೆ ಈಗಾಗಲೇ ಪಟ್ಟಾಭಿಷೇಕ ಆದಂತೆ ಕನಸು ಕಾಣುತ್ತಿರುವ ಅದ್ವಾನಿ.

'ಮೋಡಿ' ಹಮಾರೀ, ಜಮೇಗಾ ಐಸೇ ಜಾನೀ, ಹಮ್ ತೋ ಹೈ ಮುಖ್‌ಮಂತ್ರಿ, ಕಲ್ ಬನ್‌ತೇ ಹೈ ಪರ್‌ಧಾನೀ, ಎಂದು 'ಔಲಾದ್' ಫಿಲಂ ಸ್ಟೈಲ್‌ನಲ್ಲಿ ಒಳಗೊಳಗೇ ಹಾಡಿಕೊಳ್ಳುತ್ತಿದ್ದಾರೆ ನರೇಂದ್ರ ಮೋದಿ.

(ಜೋಡೀ ಹಮಾರೀ, ಕಹೇಗಾ ಐಸೇ ಜಾನೀ, ಎಂದು 'ಮೋಡಿ' ಮಾತನ್ನು ಚಲಾವಣೆಗೆ ತರುತ್ತಿದ್ದಾರೆ ಶೌರಿ-ಜೇಟ್ಲಿ ಜೋಡಿ.)

'ಘರ್ ಘರ್ ಮೇ ಪಕಾತೇ ಹೈ ಆಲೂ, ಸರ್‌ಕಾರ್ ಕೋ ಚಲಾತೇ ಹೈ ಲಾಲೂ', ಎನ್ನುತ್ತಿದ್ದಾರೆ ಲಾಲೂ ಪ್ರಸಾದ ತಿಂದ ಭಕ್ತರು.

'ರಾಮ್' ನಹೀ ಕರೇಗಾ 'ವಿಲಾಸ್', ಲೇಕಿನ್ ಪಿಎಂ ಬನೇಗಾ ರಾಮ್ ವಿಲಾಸ್, ಅನ್ನುತ್ತಿದ್ದಾರೆ ಪಾಸ್ವಾನ್.

'ಮುಲಾಂ'ನಂತೆ 'ಮುಲಾಯಂ' ನಾನು, ಈ ಸಲ ಪ್ರಧಾನಿಯಾದೇನು ಎಂದು ಕನಸು ಕಾಣುತ್ತಿದ್ದಾರೆ ರಫ್ ಅಂಡ್ ಟಫ್ ಮುಲಾಯಂ ಸಿಂಗ್ ಯಾದವ್.

'ಚಂದ್ರ' ಸೂರ್ಯುಡು ಸಾಕ್ಷಿ, ನೇನೇ ನೆಕ್ಸ್ಟ್ ಪ್ರಧಾನುಡು ಬಾಬೂ, ಅನ್ನುತ್ತಿದ್ದಾರೆ ಚಂದ್ರಬಾಬು ನಾಯ್ಡು.

'ಪವರ್'ಫುಲ್ ಕಣ್ರೀ ನಾನು, ಪ್ರಧಾನಿ ಆಗ್ದೇ ಏನು? ಎಂದು ಸೋಟೆ ತಿರುವಿ ಚಾಲೆಂಜ್ ಹಾಕುತ್ತಿದ್ದಾರೆ ಶರದ್ ಪವಾರ್.

ಸಿಕ್ಕರೆ ಚಾನ್ಸು 'ಜೈ' ಅಂತೀನಿ, ಪುರಚ್ಚಿ ತಲೈವಿ ಸೈ ಅಂತೀನಿ, ಅನ್ತಿದ್ದಾರೆ ಜೈಲಲಿತಮ್ಮ. (ಕ್ಷಮಿಸಿ, ಅಮ್ಮ ಅಲ್ಲ, ಕುಮಾರಿ.)

ಎಲ್ಲಾ 'ಮಾಯ'ವೋ ಪ್ರಭುವೇ, ಎಲ್ಲಾ ಮಾಯವೋ; ಸಿಎಂ ಮಾಯವೋ ಪಿಎಂ ಮಾಯವೋ ನಾ ಪೀಯೆಮ್ಮಾದ್ರೆ ದೇಶ್ವೇ ಮಾಯವೋ, ಎಂದು ಗುರಿ ತಪ್ಪದ ಮಗಳಂತೆ ಹಾಡುತ್ತಿದ್ದಾರೆ ಮಾಯಾವತಿ ಮೇ'ಢಂ'. (ಮಾಯಾವತಿ ಮೇ ದಂ ಕಿತ್‌ನಾ!)

ಪ್ರಧಾನಿ ಹುದ್ದೆಗೆ ಇಷ್ಟೆಲ್ಲ ಮಂದಿ ಕೂಗು ಹಾಕುತ್ತಿರುವಾಗ ನಮ್ಮ ದೇವೇಗೌಡರು ಮಾತ್ರ, 'ಯಾರೇ ಕೂಗಾಡಲಿ, ಊರೇ ಹೋರಾಡಲಿ, ನನ ನೆಮ್ಮದಿಗೆ ಭಂಗವಿಲ್ಲ, ಮುದ್ದೇ ನಿನಗೆ ಸಾಟಿಯಿಲ್ಲ, ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನಾ ಅಳುಕದೆ ಮುಂದೇ ಸಾಗುವೆ', ಎಂದು ಹಾಡುತ್ತ ಕೂಲಾಗಿ ಮನ್ನಡೆದಿದ್ದಾರೆ.

ನಾಳೆ ಅವರು, 'ದೇವರ ಆಟ ಬಲ್ಲವರಾರು, ಆತನ ಎದಿರು ನಿಲ್ಲುವರಾರು, ಕೇಳದೆ ಸುಖವ ತರುವ, ಹೇಳದೆ ಕುರ್ಚಿಯ ಕೊಡುವ', ಎಂದು ದೇವರ ಕಡೆ ಕೈತೋರಿಸಿ ಪಿಎಂ ಕುರ್ಚಿಯ ಕಡೆ ನಡೆದರೂ ಆಶ್ಚರ್ಯವಿಲ್ಲ. ಗೌಡರ ಹೆಜ್ಜೆ ಬಲ್ಲವರಾರು? 1996ರ ಉದಾಹರಣೆ ನಮ್ಮೆದುರಿದೆಯಲ್ಲಾ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X