ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೈವ ಕೋಪ ಅಂದರೇನು, ಅದರ ಪರಿಹಾರ ಹೇಗೆ?

By ಪಂಡಿತ್ ವಿಠ್ಠಲ ಭಟ್
|
Google Oneindia Kannada News

ವಿವಾಹ ವಿಳಂಬ, ಉದ್ಯೋಗ ಸಮಸ್ಯೆ, ಸಂತಾನ ನಿಧಾನ ಹೀಗೆ ಅನೇಕ ಸಮಸ್ಯೆಗಳನ್ನು ತೆಗೆದುಕೊಂಡು ಬರುತ್ತಾರೆ. ಆದರೆ ಅವರ ಜಾತಕದಲ್ಲಿ ಆ ದೋಷ ಕಂಡುಬರುವುದಿಲ್ಲ. ಅಥವಾ ಪರಿಹಾರ ಮಾಡಿಸಿಕೊಂಡ ನಂತರವೂ ಸಮಸ್ಯೆ ಹಾಗೇ ಉಳಿದುಕೊಂಡಿರುತ್ತದೆ. ಅದನ್ನು ತಿಳಿದುಕೊಳ್ಳುವ ಸಲುವಾಗಿ ಪ್ರಶ್ನ ಶಾಸ್ತ್ರದ ಮೊರೆ ಹೋಗಬೇಕಾಗುತ್ತದೆ.

ಅದರಲ್ಲಿ ಕಂಡುಬರುವ ಮುಖ್ಯ ಸಮಸ್ಯೆಯೇ ಪ್ರಾಗ್ ಆಧಾರಿತ ದೇವತಾ ಕೋಪ. ಹಾಗಂದರೆ ಮೊದಲನೇ ಪೂಜೆ ಮಾಡುವ ಗಣಪತಿಗೆ ದೇವತಾ ಆರಾಧನೆ ಸಮಯದಲ್ಲಿ ನಮಗೆ ತಿಳಿದೋ ತಿಳಿಯದೆಯೋ ಅಪಚಾರ ಅಥವಾ ಅಜಾಗರೂಕತೆ ಆಗಿರುತ್ತದೆ. ಶ್ರದ್ಧೆ- ಭಕ್ತಿಯಲ್ಲಿನ ಕೊರತೆ ಆಗಿರಬಹುದು ಅಥವಾ ದೇವತಾ ಬಿಂಬಕ್ಕೆ ಲೋಪ ಮಾಡಿರಬಹುದು.

ಯಾವ ಹೋಮದಿಂದ ಏನು ಫಲ? ಶಾಸ್ತ್ರೋಕ್ತವಾಗಿ ಮಾಡುವುದು ಹೇಗೆ?ಯಾವ ಹೋಮದಿಂದ ಏನು ಫಲ? ಶಾಸ್ತ್ರೋಕ್ತವಾಗಿ ಮಾಡುವುದು ಹೇಗೆ?

ಉದಾಹರಣೆಗೆ ಮನೆಯ ಷೋಕೇಸಿನಲ್ಲಿರುವ ಗಣಪತಿ ವಿಗ್ರಹ ಇರಬಹುದು, ದೇವರ ಮನೆಯಲ್ಲಿಟ್ಟಿರುವ ಗಣಪತಿ ವಿಗ್ರಹ ಇರಬಹುದು ಅಥವಾ ವರ್ಷಾ ವರ್ಷ ಮಾಡುವ ವಿನಾಯಕ ಚತುರ್ಥಿ ಸಂದರ್ಭದಲ್ಲಿನ ಮಣ್ಣಿನ ಗಣಪತಿ ವಿಗ್ರಹಕ್ಕೆ ಇರಬಹುದು ಅದು ಭಗ್ನವಾಗಿದ್ದರೆ ಅದನ್ನು ಪ್ರಾಗ್ ಆಧಾರಿತ ದೇವತಾ ಕೋಪ ಎನ್ನುತ್ತೇವೆ. ಆ ವಿಚಾರ ಕೂಡ ನಮಗೆ ಗೊತ್ತಾಗುವುದು ಪ್ರಶ್ನ ಶಾಸ್ತ್ರದಲ್ಲಿ.

ಬಾಲ ಗಣಪತಿ ಹೋಮ

ಬಾಲ ಗಣಪತಿ ಹೋಮ

ಹಾಗೊಂದು ವೇಳೆ ಗೊತ್ತಾದ ನಂತರ ಪರಿಹಾರ ರೂಪವಾಗಿ ಕೇರಳೀಯ ಪದ್ಧತಿಯಲ್ಲಿ ಬಾಲ ಗಣಪತಿ ಹೋಮವನ್ನು ಮಾಡಿಸುತ್ತೇವೆ. ಗಣಪತಿ ಫೋಟೋ ಒಡೆದು ಹಾಕುವುದು, ವಿಗ್ರಹ ಒಡೆದು ಹಾಕುವುದು ಹೀಗೆ ನಾನಾ ವಿಧದಲ್ಲಿ ಗಣಪತಿಗೆ ಅಪಚಾರ ಮಾಡಿದಲ್ಲಿ ಈ ಬಾಲ ಗಣಪತಿ ಹೋಮ ಮಾಡಲಾಗುತ್ತದೆ.

ಯಾವ ಹೋಮದಿಂದ ಏನು ಫಲ? ಶಾಸ್ತ್ರೋಕ್ತವಾಗಿ ಮಾಡುವುದು ಹೇಗೆ?ಯಾವ ಹೋಮದಿಂದ ಏನು ಫಲ? ಶಾಸ್ತ್ರೋಕ್ತವಾಗಿ ಮಾಡುವುದು ಹೇಗೆ?

ಪುರೋಹಿತರ ಮಾರ್ಗದರ್ಶನ

ಪುರೋಹಿತರ ಮಾರ್ಗದರ್ಶನ

ಅದೇ ರೀತಿ ಆಯಾ ದೇವತೆಗಳಿಗೆ ಮಾಡಿದ ಅಪಚಾರಕ್ಕೆ ಪ್ರಾಯಶ್ಚಿತ್ತವಾಗಿ ಪೂಜೆ -ಪುನಸ್ಕಾರ ಮಾಡಲಾಗುತ್ತದೆ. ಇನ್ನು ಗಣಪತಿಗೆ ಅಪಚಾರ ಆಗಿದ್ದಲ್ಲಿ ಏಕೋತ್ತರ ವೃದ್ಧಿ ಪದ್ಧತಿಯಲ್ಲಿ ಅಷ್ಟ ದ್ರವ್ಯ ಗಣಪತಿ ಹವನ ಮಾಡಲಾಗುತ್ತದೆ. ಈ ಪದ್ಧತಿಯನ್ನು ವೇದಾಧ್ಯಯನ ಮಾಡಿದ ಜ್ಯೋತಿಷಿ ಅಥವಾ ಪುರೋಹಿತರ ಮಾರ್ಗದರ್ಶನ ಪಡೆಯಬಹುದು.

ಹರಕೆ ತಪ್ಪಿಸಿದ್ದರೂ ಅಡೆ ತಡೆ

ಹರಕೆ ತಪ್ಪಿಸಿದ್ದರೂ ಅಡೆ ತಡೆ

ಇನ್ನು ಹರಕೆ ಹೊತ್ತುಕೊಂಡು ಅದನ್ನು ಪೂರೈಸದಿದ್ದಲ್ಲಿ, ಉದಾಹರಣೆಗೆ ಯಾವುದೋ ಸಂದಿಗ್ಧದಲ್ಲೋ ಅಥವಾ ಸಂತೋಷದ ಸಮಯದಲ್ಲೋ ದೇವತಾ ವಿಚಾರವಾಗಿ ಹರಕೆಯೊಂದನ್ನು ಹೊತ್ತಿದ್ದು, ಅದು ಪೂರೈಸುವುದನ್ನು ಮರೆತು ಬಿಟ್ಟಿದ್ದಲ್ಲಿ ಯಾವುದಾದರೂ ಒಂದು ಕೆಲಸಕ್ಕೆ ಪದೇಪದೇ ತಡೆ, ಸಮಸ್ಯೆ ಆಗುತ್ತಿರುತ್ತದೆ.

ಹಿರಿಯರು ಮಾಡುತ್ತಿದ್ದ ದೇವತಾರಾಧನೆ ನಿಂತಿದ್ದಲ್ಲಿ

ಹಿರಿಯರು ಮಾಡುತ್ತಿದ್ದ ದೇವತಾರಾಧನೆ ನಿಂತಿದ್ದಲ್ಲಿ

ಇನ್ನು ಮನೆಯಲ್ಲಿ ಹಿರಿಯರು ನಡೆಸಿಕೊಂಡು ಬಂದ ದೇವತಾ ಆರಾಧನೆಯನ್ನು ನಿಲ್ಲಿಸಿದ್ದಲ್ಲಿ ಅಂದರೆ ವರ್ಷಕ್ಕೆ ಒಮ್ಮೆಯೋ ಅಥವಾ ನಿರ್ದಿಷ್ಟ ದಿನವೋ ಕುಟುಂಬದ ಹಿರಿಯರು ಒಂದು ದೇವರ ಆರಾಧನೆ ಮಾಡಿಕೊಂಡು ಬಂದಿರುತ್ತಾರೆ. ಈಗಿನ ತಲೆಮಾರಿನವರು ಅದನ್ನು ನಿಲ್ಲಿಸಿ ಬಿಟ್ಟಿದ್ದರೆ ಅದರಿಂದ ಕೂಡ ಪ್ರಾಗ್ ಆರಾಧಿತ ದೇವತಾ ಕೋಪ ಆಗುತ್ತದೆ. ಅದಕ್ಕೆ ತಕ್ಕ ಪರಿಹಾರ ಮಾಡಿಸಿಕೊಳ್ಳಬೇಕಾಗುತ್ತದೆ.

English summary
Here is the solution for mistakes or problems done to God or Goddess idol according to vedic astrology. Well known astrologer Pandit Vittal Bhat explains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X