• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Pisces Horoscope 2022: ಹೊಸ ವರ್ಷದಲ್ಲಿ ಮೀನ ರಾಶಿಯ ಭವಿಷ್ಯ ಹೀಗಿರಲಿದೆ

|
Google Oneindia Kannada News

ಮೀನ ರಾಶಿಯ ಭವಿಷ್ಯ 2022 ರ ಪ್ರಕಾರ ಮೀನ ರಾಶಿಯವರಿಗೆ ಹೊಸ ವರ್ಷದ ಜನವರಿ ತಿಂಗಳು ಹೊಸ ಉದ್ಯೋಗ ಮತ್ತು ನಿಮ್ಮ ವೃತ್ತಿಗೆ ಸೂಕ್ತವಾಗಿದೆ. ವ್ಯಾಪಾರ ಪಾಲುದಾರಿಕೆಯಿಂದ ನೀವು ಲಾಭ ಪಡೆಯುತ್ತೀರಿ. ಈ ತಿಂಗಳಿನಲ್ಲಿ ಬಡ್ತಿ, ಪ್ರವಾಸದಂತಹ ಕಾರ್ಯಗಳು ನಡೆಯಲಿದೆ. ಫೆಬ್ರವರಿ ತಿಂಗಳು ನಿಮ್ಮ ಸಂಬಂಧದಲ್ಲಿ ಕೆಲವು ಬದಲಾವಣೆ ಆಗಲಿದೆ. ಸಂಘರ್ಷವೂ ಉಂಟಾಗಲಿದೆ. ಆದರೆ ನಿಮ್ಮ ಮೌಲ್ಯಗಳು ಮತ್ತು ಸಂಪ್ರದಾಯಗಳನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ, ನೀವು ದೀರ್ಘಾವಧಿಯ ಹೂಡಿಕೆ ಮಾಡಬಹುದು. ವೃತ್ತಿಪರ ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ ಕೆಲಸದಲ್ಲಿ ಹೆಚ್ಚಿನ ಚಟುವಟಿಕೆಯಲ್ಲಿ ಹೆಚ್ಚಿನ ಪಾಲ್ಗೊಳ್ಳುವಿಕೆ ಅಗತ್ಯವಿರುತ್ತದೆ. ಏಪ್ರಿಲ್ ತಿಂಗಳಲ್ಲಿ ಉತ್ತಮ ಶಕ್ತಿಯ ಮಟ್ಟವನ್ನು ಹೊಂದಲು ನೀವು ದೈಹಿಕ ವ್ಯಾಯಾಮ ಮಾಡುವುದು ಮತ್ತು ಸರಿಯಾದ ಆಹಾರದ ಸೇವನೆ ಮಾಡುವುದು ಉತ್ತಮ.

ಮೇ ತಿಂಗಳಲ್ಲಿ, ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಉತ್ತಮ ಸಮಯ. ಆದಾಗ್ಯೂ, ನೀವು ಪತ್ರಕ್ಕೆ ಸಹಿ ಮಾಡುವ ಮೊದಲು ವಿವರಗಳನ್ನು ಸರಿಯಾಗಿ ಓದಿಕೊಳ್ಳಿ. ಜೂನ್ ತಿಂಗಳಲ್ಲಿ, ನಿಮ್ಮ ಜೀರ್ಣ ವ್ಯವಸ್ಥೆಯು ಉತ್ತರಮವಾಗಿರುತ್ತದೆ. ನೀವು ತಾಜಾ ಆಹಾರ ಸೇವನೆ ಮಾಡಿ. ಜಂಕ್ ಮತ್ತು ಸಂಸ್ಕರಿಸಿದ ಆಹಾರವನ್ನು ಸೇವನೆ ಮಾಡದಿರುವುದು ಉತ್ತಮ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ, ನಿಮ್ಮ ಆತ್ಮ ಸಂಗಾತಿಯನ್ನು ಭೇಟಿ ಮಾಡಲು ಸಾಧ್ಯವಿದೆ. ಆದರೂ ಆತುರದಲ್ಲಿ ಇರಬೇಡಿ. ಸಂಬಂಧ ಮಾಡಿಕೊಳ್ಳುವ ಮುನ್ನ ಅದರ ಪರಿಣಾಮದ ಬಗ್ಗೆ ಚಿಂತನೆ ಮಾಡಿ. ವೃತ್ತಿಯ ವಿಚಾರದಲ್ಲಿ ಬೇರೆ ಬೇರೆ ಕಡೆ ವಾಲಬೇಡಿ. ಒಂದೇ ಕಡೆ ಗಮನ ಹರಿಸಿದರೆ ಯಶಸ್ಸು ಖಂಡಿತ.

Sagittarius Horoscope 2022: ಧನು ರಾಶಿಯವರಿಗೆ ಹೊಸ ವರ್ಷ ಹೇಗಿರಲಿದೆ?Sagittarius Horoscope 2022: ಧನು ರಾಶಿಯವರಿಗೆ ಹೊಸ ವರ್ಷ ಹೇಗಿರಲಿದೆ?

 ದ್ವಿತೀಯಾರ್ಧ ಉತ್ತಮ: ವೃತ್ತಿ ಜೀವನ ಸುಧಾರಣೆ

ದ್ವಿತೀಯಾರ್ಧ ಉತ್ತಮ: ವೃತ್ತಿ ಜೀವನ ಸುಧಾರಣೆ

ವರ್ಷದ ಅಂತ್ಯದ ವೇಳೆಗೆ, ನಿಮ್ಮ ಎಲ್ಲಾ ಹಣಕಾಸು ಯೋಜನೆಗಳನ್ನು ಸರಿಯಾಗಿ ನಿಭಾಯಿಸಬೇಕು. ಹಿಂದಿನ ತಿಂಗಳುಗಳಲ್ಲಿ ಮಾಡಿದ ಹೂಡಿಕೆಯು ಸ್ಥಳೀಯರಿಗೆ ಉತ್ತಮ ಲಾಭವನ್ನು ತರುತ್ತದೆ. ವರ್ಷದ ಕೊನೆಯ ತ್ರೈಮಾಸಿಕವು ಸಾಮಾನ್ಯ ಆಯಾಸದಂತಹ ಕೆಲವು ಸಣ್ಣ ಆರೋಗ್ಯ ಸಮಸ್ಯೆಗಳನ್ನು ತರಬಹುದು. ಆರೋಗ್ಯದ ಕಡೆ ಗಮನವಿರಲಿ. ಒಟ್ಟಾರೆಯಾಗಿ 2022 ವರ್ಷದ ಮೊದಲಾರ್ಧದಲ್ಲಿ, ಮೀನ ರಾಶಿಯವರು ಸವಾಲುಗಳನ್ನು ಎದುರಿಸಬೇಕಾಗಬಹುದು. ಪ್ರತಿ ಹಂತದಲ್ಲೂ ನಿಮ್ಮ ಕೌಶಲ್ಯ, ಸಾಮರ್ಥ್ಯವನ್ನು ತೋರಿಸುವುದು ಉತ್ತಮ. ಕುಟುಂಬದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರಬಹುದು. ಆದ್ದರಿಂದ ಕಠಿಣ ವಾದಗಳಿಂದ ದೂರವಿರಿ. ನಿಮ್ಮ ಪ್ರೇಮ ಜೀವನದಲ್ಲಿ ಅಡೆತಡೆಗಳು ಉಂಟಾಗಬಹುದು. ನೀವು ಪರಿಸ್ಥಿತಿಯನ್ನು ಉತ್ತಮ ರೀತಿಯಲ್ಲಿ ತೆಗೆದುಕೊಂಡರೆ ಮತ್ತು ವಿಷಯಗಳನ್ನು ಶಾಂತಿಯುತವಾಗಿ ಸರಿಪಡಿಸಲು ಯತ್ನಿಸಿದರೆ, ಆ ಸಮಸ್ಯೆಯ ಕೆಟ್ಟ ಪರಿಣಾಮ ಕಡಿಮೆ ಆಗುತ್ತದೆ. ಎರಡನೇ ತ್ರೈಮಾಸಿಕದಿಂದ ನಿಮ್ಮ ರಾಶಿಯಲ್ಲಿ ಗುರುವಿನ ಸಂಚಾರವಾಗಲಿದೆ. ಇದು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಸ್ಥಿತಿಯನ್ನು ಸುಧಾರಿಸಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಜೀವನ ಗುಣಮಟ್ಟವು ಸುಧಾರಿಸುತ್ತದೆ. ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ನಿಮ್ಮ ಕುಟುಂಬ ಮತ್ತು ಸ್ನೇಹಿತರಿಂದ ನೀವು ಬಲವಾದ ಬೆಂಬಲವನ್ನು ನಿರೀಕ್ಷಿಸಬಹುದು. 2022 ರ ಈ ದ್ವಿತೀಯಾರ್ಧ, ಬಹುಶಃ ಮೀನ ರಾಶಿಯವರಿಗೆ ಉತ್ತಮ ಸಮಯ. ಜೀವನದ ಕೆಲವು ಕ್ಷೇತ್ರಗಳಲ್ಲಿ ಸುಧಾರಣೆಗಳಿದ್ದರೂ, ಇತರ ಕೆಲವು ಕ್ಷೇತ್ರಗಳಲ್ಲಿ ನೀವು ಸಣ್ಣ ಸಮಸ್ಯೆಗಳನ್ನು ಎದುರಿಸಬಹುದು.

 ಮೀನ ರಾಶಿ ಪ್ರೇಮ ಜೀವನ ಭವಿಷ್ಯ 2022

ಮೀನ ರಾಶಿ ಪ್ರೇಮ ಜೀವನ ಭವಿಷ್ಯ 2022

ಮೀನ ರಾಶಿ ಪ್ರೇಮ ಜೀವನ ಭವಿಷ್ಯ 2022 ರ ಪ್ರಕಾರ 2022 ರಲ್ಲಿ ನಿಮ್ಮ ಪ್ರೇಮ ಜೀವನದಲ್ಲಿ ಸಂತೋಷ ಇರಲಿದೆ. ನೀವು ಬದ್ಧವಾದ ಸಂಬಂಧದಲ್ಲಿದ್ದರೆ, ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಕೆಲವು ರೀತಿಯ ತಪ್ಪು ತಿಳುವಳಿಕೆ ಇರಬಹುದು. ಆದ್ದರಿಂದ ಯಾವುದೇ ಅನಗತ್ಯ ವಾದ ಅಥವಾ ಜಗಳ ಮಾಡಬೇಡಿ. ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿ. ವರ್ಷದ ದ್ವಿತೀಯಾರ್ಧದಲ್ಲಿ, ಪ್ರೇಮ ಜೀವನ ಉತ್ತಮಗೊಳ್ಳಲಿದೆ. ಎಲ್ಲಾ ಸಮಸ್ಯೆಗಳಲ್ಲಿ ನಿಮ್ಮ ಸಂಗಾತಿಯು ನಿಮ್ಮೊಂದಿಗೆ ಇರಲಿದ್ದಾರೆ.

Libra Horoscope 2022: ಹೊಸ ವರ್ಷದಲ್ಲಿ ತುಲಾ ರಾಶಿಯ ಸಂಪೂರ್ಣ ಜೀವನ ಸ್ಥಿತಿ ಹೀಗಿರಲಿದೆLibra Horoscope 2022: ಹೊಸ ವರ್ಷದಲ್ಲಿ ತುಲಾ ರಾಶಿಯ ಸಂಪೂರ್ಣ ಜೀವನ ಸ್ಥಿತಿ ಹೀಗಿರಲಿದೆ

 ಮೀನ ರಾಶಿ ವೃತ್ತಿ ಭವಿಷ್ಯ 2022

ಮೀನ ರಾಶಿ ವೃತ್ತಿ ಭವಿಷ್ಯ 2022

ಮೀನ ರಾಶಿ ವೃತ್ತಿ ಭವಿಷ್ಯ 2022 ರ ಪ್ರಕಾರ ಪದವೀಧರರು ಅಥವಾ ಉದ್ಯೋಗವನ್ನು ಹುಡುಕುತ್ತಿರುವ ಮೀನ ರಾಶಿಯವರು ಈ ವರ್ಷ ಉದ್ಯೋಗವನ್ನು ಪಡೆಯಬಹುದು. ಈಗಾಗಲೇ ಕೆಲಸ ಮಾಡುತ್ತಿರುವ ಜನರು ಕೆಲಸದ ಪ್ರದೇಶದಲ್ಲಿ ಕೆಲವು ಸವಾಲುಗಳನ್ನು ಎದುರಿಸಬಹುದು. ಕೆಲಸದ ಸ್ಥಳದಲ್ಲಿ ಯಾವುದೇ ರೀತಿಯ ಆಕ್ರೋಶಭರಿತ ನಡವಳಿಕೆಯನ್ನು ತೋರಬೇಡಿ. ತಾಳ್ಮೆ ಕಳೆದುಕೊಂಡರೆ ನಿಮ್ಮ ಕೆಲಸವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ನೀವು ಈ ವರ್ಷ ವರ್ಗಾವಣೆ ಹೊಂದುವ ಸಾಧ್ಯತೆ ಇದೆ. 2022 ರಲ್ಲಿ ನಿಮ್ಮ ವೃತ್ತಿಜೀವನವನ್ನು ಬದಲಾಯಿಸಲು ನೀವು ಬಯಸಿದರೆ ಹೊಸ ಕಂಪನಿಯ ಬಗ್ಗೆ ಸರಿಯಾಗಿ ತಿಳಿದು ಕೊಳ್ಳಿ.

 ಮೀನ ರಾಶಿ ಶಿಕ್ಷಣ ಭವಿಷ್ಯ 2022

ಮೀನ ರಾಶಿ ಶಿಕ್ಷಣ ಭವಿಷ್ಯ 2022

ಮೀನ ರಾಶಿ ಶಿಕ್ಷಣ ಭವಿಷ್ಯ 2022 ಮೀನ ರಾಶಿಯ ವಿದ್ಯಾರ್ಥಿಗಳು 2022 ರಲ್ಲಿ ಉತ್ತಮ ಶೈಕ್ಷಣಿಕ ವರ್ಷವನ್ನು ಕಾಣಲಿದ್ದಾರೆ. ಈ ವರ್ಷವು ಉನ್ನತ ಶಿಕ್ಷಣಕ್ಕೆ ಉತ್ತಮ ಸಮಯವನ್ನು ತರಬಹುದು. ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವವರಿಗೆ ಈ ವರ್ಷ ಅವಕಾಶ ಸಿಗಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಈ ವರ್ಷ ಯಶಸ್ಸನ್ನು ಪಡೆಯಬಹುದು. ಹಿರಿಯರ ಮಾರ್ಗದರ್ಶನ ಮತ್ತು ಎಲ್ಲಾ ಶಿಕ್ಷಕರ ಸಹಾಯವನ್ನು ಪಡೆಯಿರಿ. ಈ ವರ್ಷ ನಿಮಗೆ ಬಹಳಷ್ಟು ಪ್ರಯೋಜನವನ್ನು ನೀಡುತ್ತದೆ. ಅಧ್ಯಯನದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ನೀವು ಬಯಸಿದ ಫಲಿತಾಂಶವನ್ನು ಪಡೆಯಬಹುದು.

 ಮೀನ ರಾಶಿ ಹಣಕಾಸು ಭವಿಷ್ಯ 2022

ಮೀನ ರಾಶಿ ಹಣಕಾಸು ಭವಿಷ್ಯ 2022

ಮೀನ ರಾಶಿ ಹಣಕಾಸು ಭವಿಷ್ಯ 2022 ರ ಪಕ್ರಾರ ವರ್ಷದ ಆರಂಭವು ಆರ್ಥಿಕ ರಂಗದಲ್ಲಿ ನಿಮಗೆ ಉತ್ತಮವಾಗಿರುತ್ತದೆ. ವರ್ಷದ ಮಧ್ಯದಲ್ಲಿ, ನಿಮ್ಮ ಆದಾಯದ ಹೆಚ್ಚಳದೊಂದಿಗೆ ನಿಮ್ಮ ತೆರಿಗೆ ಹೊಣೆಗಾರಿಕೆಯು ಹೆಚ್ಚಾಗಬಹುದು. ಏಕೆಂದರೆ ನಿಮ್ಮ ಹಣಕಾಸಿನ ವ್ಯವಸ್ಥೆಗಳ ಬಗ್ಗೆ ನೀವು ಗಮನ ಹರಿಸಬೇಕು. ಹೂಡಿಕೆಗೆ ಸಂಬಂಧಿಸಿದ ಯೋಜನೆಗಳು ನಿಮಗೆ ತುಂಬಾ ಉಪಯುಕ್ತವಾಗುತ್ತವೆ. ಅದಕ್ಕೆ ಸಂಬಂಧಿಸಿದ ಯಾವುದೇ ಕಾನೂನು ವಿಷಯಗಳು ನಡೆಯುತ್ತಿದ್ದರೆ, ನಿಮ್ಮ ಪರವಾಗಿ ತೀರ್ಪು ಬರುವ ಸಾಧ್ಯತೆಯಿದೆ. ವರ್ಷದ ಎರಡನೇ ಭಾಗದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಆರ್ಥಿಕ ಪರಿಸ್ಥಿತಿಗಳು ಉತ್ತಮವಾಗಿರುತ್ತವೆ. ಭವಿಷ್ಯದಲ್ಲಿ ನಿಮ್ಮ ಅದೃಷ್ಟಕ್ಕೆ ಈ ವರ್ಷವೂ ಬಹಳ ಮುಖ್ಯವಾಗಿರುತ್ತದೆ.

 ಮೀನ ರಾಶಿಯ ಕುಟುಂಬ ಭವಿಷ್ಯ 2022

ಮೀನ ರಾಶಿಯ ಕುಟುಂಬ ಭವಿಷ್ಯ 2022

ಮೀನ ರಾಶಿಯ ಕುಟುಂಬ ಭವಿಷ್ಯ 2022 ರ ಪ್ರಕಾರ 2022 ರಲ್ಲಿ ಕುಟುಂಬ ಜೀವನವು ಮಧ್ಯಮ ಒತ್ತಡದಿಂದ ಕೂಡಿರುತ್ತದೆ. ಕಠಿಣ ಪರಿಶ್ರಮ ಮತ್ತು ಇತರ ಜವಾಬ್ದಾರಿಗಳ ಕಾರಣದಿಂದಾಗಿ, ನೀವು ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಕೆಲವರೊಂದಿಗೆ ಹೊಂದಿಕೊಳ್ಳಲು ಕಷ್ಟವಾಗಬಹುದು. ನಿಮ್ಮ ಕುಟುಂಬದ ಸದಸ್ಯರು ಮತ್ತು ನೀವು ಈ ಸಮಯದಲ್ಲಿ ನಿಮ್ಮ ಮಕ್ಕಳನ್ನು ಸಹ ನಿರ್ಲಕ್ಷಿಸಬಹುದು. ನೀವು ಮಕ್ಕಳನ್ನು ಹೊಂದಿದ್ದರೆ, ಶಾಲೆಯಲ್ಲಿ ಕಷ್ಟಪಟ್ಟು ಅಧ್ಯಯನ ಮಾಡಲು ಅವರನ್ನು ಪ್ರೋತ್ಸಾಹಿಸಲು ಸಮಯ ತೆಗೆದುಕೊಳ್ಳಿ. ಇದು ಅವರ ವರ್ಷವನ್ನು ಹೆಚ್ಚು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ನವವಿವಾಹಿತ ದಂಪತಿಗಳು ತಮ್ಮ ಕುಟುಂಬ ಜೀವನದಲ್ಲಿ ಈ ವರ್ಷ ಸ್ವಲ್ಪ ಒತ್ತಡವನ್ನು ಎದುರಿಸುತ್ತಾರೆ. ನಿಮ್ಮ ಎರಡನೇ ಮಗುವಿಗೆ ಈ ವರ್ಷವು ಮದುವೆಯಾಗಲು ಉತ್ತಮ ಸಮಯ.

 ಮೀನ ರಾಶಿಯ ಮಕ್ಕಳ ಭವಿಷ್ಯ 2022

ಮೀನ ರಾಶಿಯ ಮಕ್ಕಳ ಭವಿಷ್ಯ 2022

ಮೀನ ರಾಶಿಯ ಮಕ್ಕಳ ಭವಿಷ್ಯ 2022 ರ ಪ್ರಕಾರ ಈ ವರ್ಷ ಮಕ್ಕಳ ನಿಟ್ಟಿನಲ್ಲಿ ಉತ್ತಮ ವರ್ಷವಾಗಿದೆ. ಏಪ್ರಿಲ್‌ ತಿಂಗಳಿನಲ್ಲಿ ನಿಮ್ಮ ಮಕ್ಕಳು ತಮ್ಮ ಕಠಿಣ ಪರಿಶ್ರಮದಿಂದ ಯಶಸ್ಸನ್ನು ಪಡೆಯುತ್ತಾರೆ. ಈ ಅವಧಿಯು ನಿಮ್ಮ ಎರಡನೇ ಮಗುವಿಗೆ ತುಂಬಾ ಅನುಕೂಲಕರವಾಗಿದೆ. ನಿಮ್ಮ ಮಗುವಿಗೆ ಮದುವೆಯ ವಯಸ್ಸಾಗಿದ್ದರೆ, ಅವನು ಅಥವಾ ಅವಳು ಅವರ ವಿವಾಹವನ್ನು ನಡೆಸಬಹುದು. ಒಟ್ಟಾರೆಯಾಗಿ ವರ್ಷವು ಮಗುವಿನ ನಿಟ್ಟಿನಲ್ಲಿ ತೃಪ್ತಿಕರವಾಗಿರುತ್ತದೆ. ನಿಮ್ಮ ಮಕ್ಕಳು ಪ್ರಗತಿ ಸಾಧಿಸಬಹುದು. ನವವಿವಾಹಿತ ದಂಪತಿಗಳಿಗೆ ಮಗು ಜನಿಸುವ ಸಾಧ್ಯತೆ ಇದೆ. ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗಿನ ಅವಧಿಯು ಸ್ವಲ್ಪ ಪ್ರತಿಕೂಲವಾಗಿರುತ್ತದೆ, ಆದರೆ ಸೆಪ್ಟೆಂಬರ್ ನಂತರ, ನಿಮ್ಮ ಮಕ್ಕಳಿಗೆ ಮತ್ತೆ ಅನುಕೂಲಕರ ಮತ್ತು ಸಂತೋಷದಾಯಕವಾಗಿರುತ್ತದೆ.

 ಮೀನ ರಾಶಿ ಮದುವೆ ಭವಿಷ್ಯ 2022

ಮೀನ ರಾಶಿ ಮದುವೆ ಭವಿಷ್ಯ 2022

ಮೀನ ರಾಶಿ ಮದುವೆ ಭವಿಷ್ಯ 2022 ರ ಪ್ರಕಾರ ಈ ಅವಧಿಯು ವೈವಾಹಿಕ ಜೀವನಕ್ಕೆ ಅನುಕೂಲಕರವಾಗಿಲ್ಲ. ಈ ವರ್ಷ ನಿಮ್ಮ ಪ್ರೀತಿಪಾತ್ರರೊಂದಿಗಿನ ಸಂಬಂಧದಲ್ಲಿ ನೀವು ತೊಂದರೆಗಳನ್ನು ಎದುರಿಸಬಹುದು. ಆದ್ದರಿಂದ ನೀವು ಜಾಗರೂಕರಾಗಿರಬೇಕು. ಮಹಿಳೆಯರಿಗೆ ಹೆರಿಗೆ ಮತ್ತು ಗರ್ಭಾವಸ್ಥೆಯು ಯಶಸ್ವಿಯಾಗುವ ಸಾಧ್ಯತೆಯಿದೆ. ವರ್ಷದ ಮೊದಲಾರ್ಧದಲ್ಲಿ, ನೀವು ಅನುಕೂಲಕರ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗದಿರಬಹುದು. ವರ್ಷದ ದ್ವಿತೀಯಾರ್ಧದಲ್ಲಿ, ನೀವು ಕಡಿಮೆ ಸಮಸ್ಯೆಗಳನ್ನು ಹೊಂದಿರಬಹುದು. ನಿಮ್ಮ ಪ್ರೀತಿಯ ಸಂಗಾತಿಯನ್ನು ಮದುವೆಯಾಗಲು ಉತ್ತಮ ಸಮಯ.

 ಮೀನ ರಾಶಿಯ ವ್ಯಾಪಾರ ಭವಿಷ್ಯ 2022

ಮೀನ ರಾಶಿಯ ವ್ಯಾಪಾರ ಭವಿಷ್ಯ 2022

ಮೀನ ರಾಶಿಯ ವ್ಯಾಪಾರ ಭವಿಷ್ಯ 2022 ರ ಪ್ರಕಾರ ವ್ಯಾಪಾರ ಮಾಲೀಕರು 2022 ರಲ್ಲಿ ಲಾಭದಾಯಕ ವರ್ಷವನ್ನು ಹೊಂದಿರಬಹುದು. ನೀವು 2022 ರಲ್ಲಿ ಹೊಸ ವ್ಯಾಪಾರವನ್ನು ಪ್ರಾರಂಭಿಸುತ್ತಿದ್ದರೆ, ಏಪ್ರಿಲ್ ತಿಂಗಳಲ್ಲಿ ಪ್ರಾರಂಭಿಸಿವುದು ಉತ್ತಮ. ವರ್ಷದ ಆರಂಭದಲ್ಲಿ, ಅಂದರೆ ಜನವರಿಯಿಂದ ಮಾರ್ಚ್ ವರೆಗೆ ಯೋಜನೆಗಳಲ್ಲಿ ಹೂಡಿಕೆ ಮಾಡಬೇಡಿ. ಏಕೆಂದರೆ ಈ ವರ್ಷ ನಿಮ್ಮ ವ್ಯವಹಾರವನ್ನು ಸುಗಮವಾಗಿ ನಡೆಸಲು ನೀವು ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕಾಗಬಹುದು. ಪಾರಕ್ಕೆ ಸಂಬಂಧಿಸಿದ ಕಾನೂನು ಚಟುವಟಿಕೆಗಳ ಬಗ್ಗೆ ಸರಿಯಾಗಿ ಪರಿಶೀಲನೆ ಮಾಡಿ. ನಿಮ್ಮ ವ್ಯಾಪಾರ ಅಥವಾ ಲಾಭವನ್ನು ಹೆಚ್ಚು ಮಾಡಲು ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದರೆ ನೀವು ತೊಂದರೆಗೆ ಸಿಲುಕಬಹುದು. ವ್ಯಾಪಾರಸ್ಥರು ತಮ್ಮ ವ್ಯಾಪಾರ ಪಾಲುದಾರರಿಂದ ಉತ್ತಮ ಬೆಂಬಲವನ್ನು ಪಡೆಯಬಹುದು. ನಿಮ್ಮ ಮಾಜಿ-ವ್ಯಾಪಾರ ಪಾಲುದಾರ ವ್ಯವಹಾರ ಪ್ರಸ್ತಾಪದೊಂದಿಗೆ ನಿಮ್ಮ ಬಳಿಗೆ ಹಿಂತಿರುಗುವ ಸಾಧ್ಯತೆಯೂ ಇದೆ. ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅನೇಕ ಅವಕಾಶಗಳು ವರ್ಷದ ಮೊದಲ ತ್ರೈಮಾಸಿಕದ ನಂತರ ಬರಲಿದೆ. ಇದರ ಜೊತೆಗೆ, ಅಂತರರಾಷ್ಟ್ರೀಯ ಗ್ರಾಹಕರೊಂದಿಗೆ ಮಾತುಕತೆ ನಡೆಸಲು ವರ್ಚುವಲ್ ಸಭೆಗಳನ್ನು ಹೆಚ್ಚಾಗಿ ಮಾಡಬೇಕಾಗುತ್ತದೆ. ವರ್ಷದ ಮಧ್ಯದಲ್ಲಿ ನಿಮ್ಮ ವ್ಯವಹಾರವು ಸುಗಮ ತಿರುವನ್ನು ತೆಗೆದುಕೊಳ್ಳಬಹುದು. ವರ್ಷದ ಅಂತ್ಯದವರೆಗೆ ವ್ಯಾಪಾರ ಉತ್ತಮವಾಗಿ ಇರಲಿದೆ.

 ಮೀನ ರಾಶಿ ಆಸ್ತಿ ಮತ್ತು ವಾಹನ ಭವಿಷ್ಯ 2022

ಮೀನ ರಾಶಿ ಆಸ್ತಿ ಮತ್ತು ವಾಹನ ಭವಿಷ್ಯ 2022

ಮೀನ ರಾಶಿ ಆಸ್ತಿ ಮತ್ತು ವಾಹನ ಭವಿಷ್ಯ 2022 ರ ಪ್ರಕಾರ ಆಸ್ತಿ ಅಥವಾ ವಾಹನದ ಖರೀದಿ ಮತ್ತು ಮಾರಾಟದ ವಿಷಯದಲ್ಲಿ ಇದು ಲಾಭದಾಯಕ ವರ್ಷವಾಗಿದೆ. ಏಪ್ರಿಲ್ ಮತ್ತು ಸೆಪ್ಟೆಂಬರ್ ನಡುವಿನ ಅವಧಿಯು ಖರೀದಿಸಲು ಅಥವಾ ಮಾರಾಟ ಮಾಡಲು ಅನುಕೂಲಕರ ಸಮಯ. ಆಸ್ತಿಯನ್ನು ಖರೀದಿಸುವಾಗ ನೀವು ತುಂಬಾ ಜಾಗರೂಕರಾಗಿರಬೇಕು. ಹಠಾತ್ ವೆಚ್ಚಗಳು ಉಂಟಾಗುವ ಕಾರಣ ನಿಮ್ಮ ಖರ್ಚು ವೆಚ್ಚ ಸರಿಯಾಗಿ ನಿಭಾಯಿಸಿ. ಕುಟುಂಬದ ಸದಸ್ಯರಿಗೆ ಸಹ ಹಣವನ್ನು ಸಾಲವಾಗಿ ನೀಡುವಾಗ ಜಾಗರೂಕರಾಗಿರಿ. ನೀವು ಇತರ ಮೂಲಗಳ ಮೂಲಕ ಹಣವನ್ನು ತೆಗೆದುಕೊಂಡರೆ ನೀವು ಸ್ವಲ್ಪ ತೊಂದರೆಗೆ ಒಳಗಾಗಬಹುದು. ನೀವು ಸಾಲಗಳನ್ನು ಪಡೆಯುವ ಸಾಧ್ಯತೆ ಇದೆ. ನೀವು ಈ ವರ್ಷ ಸಾಲಗಳನ್ನು ತೆಗೆದುಕೊಂಡು ಅವುಗಳನ್ನು ಮರುಪಾವತಿಸಬೇಕಾಗುತ್ತದೆ. ನೀವು ಕೆಲವು ಆಸ್ತಿಯನ್ನು ಖರೀದಿಸಲು ಸಾಲ ಮಾಡಬಹುದು.

 ಮೀನ ರಾಶಿ ಸಂಪತ್ತು ಮತ್ತು ಲಾಭದ ಭವಿಷ್ಯ 2022

ಮೀನ ರಾಶಿ ಸಂಪತ್ತು ಮತ್ತು ಲಾಭದ ಭವಿಷ್ಯ 2022

ಮೀನ ರಾಶಿ ಸಂಪತ್ತು ಮತ್ತು ಲಾಭದ ಭವಿಷ್ಯ 2022 ರ ಪ್ರಕಾರ ಈ ವರ್ಷ ಸಂಪತ್ತಿನ ದೃಷ್ಟಿಕೋನದಿಂದ ಮಂಗಳಕರವಾಗಿರುತ್ತದೆ. ಗುರುವು 12 ನೇ ಮನೆಯಲ್ಲಿದ್ದು, ನೀವು ಹೆಚ್ಚಿನ ಖರ್ಚುಗಳನ್ನು ಮಾಡುತ್ತೀರಿ. 11 ನೇ ಮನೆಯಲ್ಲಿ ಶನಿಯು ನಿಮಗೆ ಉತ್ತಮ ಆದಾಯ ಸೃಷ್ಟಿಗೆ ಸಹಕಾರಿ. ನೀವು ಹಿಂದಿನ ಅಥವಾ ದೀರ್ಘಕಾಲದ ಸಾಲವನ್ನು ತೀರಿಸಬಹುದು. ನೀವು ಹಿರಿಯ ಸಹೋದರ ಅಥವಾ ಸ್ನೇಹಿತರಿಂದ ಲಾಭವನ್ನು ಪಡೆಯುತ್ತೀರಿ. ಹೊಸ ಹೂಡಿಕೆಗಳನ್ನು ಮಾಡಲು ಈ ಸಮಯವು ವಿಶೇಷವಾಗಿ ಮುಖ್ಯವಾಗಿದೆ. ಈ ಸಮಯದಲ್ಲಿ ನೀವು ಹೂಡಿಕೆ ಮಾಡಿದರೆ, ನೀವು ಬಯಸಿದ ಉಳಿತಾಯವನ್ನು ಮಾಡಬಹುದು. ಒಟ್ಟಾರೆ ಮೀನ ರಾಶಿಯವರು ಆರ್ಥಿಕ ದೃಷ್ಟಿಯಿಂದ ಲಾಭದಾಯಕ ಅವಧಿಯನ್ನು ಹೊಂದಿರುತ್ತಾರೆ. ಕುಟುಂಬದಲ್ಲಿ ಶುಭ ಸಮಾರಂಭಗಳು ಅಥವಾ ಕಾರ್ಯಗಳಿಗಾಗಿ ಸ್ವಲ್ಪ ಹೆಚ್ಚು ಖರ್ಚು ಇರಬಹುದು.

 ಮೀನ ರಾಶಿ ಆರೋಗ್ಯ ಭವಿಷ್ಯ 2022

ಮೀನ ರಾಶಿ ಆರೋಗ್ಯ ಭವಿಷ್ಯ 2022

ಮೀನ ರಾಶಿ ಆರೋಗ್ಯ ಭವಿಷ್ಯ 2022 ರ ಪ್ರಕಾರ ಈ ವರ್ಷವು ನಿಮಗೆ ಸರಾಸರಿ ಫಲಿತಾಂಶಗಳನ್ನು ತರುತ್ತದೆ. ಈ ವರ್ಷ ನೀವು ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಮೀನ ರಾಶಿಯವರಿಗೆ ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆಯ ಸಾಧ್ಯತೆಗಳು ತುಂಬಾ ಕಡಿಮೆ. ಜೀರ್ಣಕ್ರಿಯೆ, ಯಕೃತ್ತು, ವೈರಲ್ ಸೋಂಕು, ಇತ್ಯಾದಿ ಸಣ್ಣ ಸಮಸ್ಯೆಗಳು ಸಂಭವಿಸಬಹುದು. ಉತ್ತಮ ಆಹಾರ ಪದ್ಧತಿ ಮತ್ತು ಉತ್ತಮ ಜೀವನಶೈಲಿಯನ್ನು ಕಾಪಾಡಿಕೊಳ್ಳಿ. ಇದು ಈ ವರ್ಷ ಎಲ್ಲಾ ಆರೋಗ್ಯ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಈ ವರ್ಷ ನೀವು ಕೆಲವು ಮಾನಸಿಕ ಒತ್ತಡವನ್ನು ಎದುರಿಸಬಹುದು. ಶಾಂತವಾಗಿ ಮತ್ತು ತಾಳ್ಮೆಯಿಂದಿರಲು ನೀವು ಹೆಚ್ಚಿನ ಪ್ರಯತ್ನವನ್ನು ಮಾಡಬೇಕಾಗುತ್ತದೆ.

 ಮೀನ ರಾಶಿ ವಾರ್ಷಿಕ ಭವಿಷ್ಯ 2022 ರ ಪ್ರಕಾರ ಅದೃಷ್ಟ ಸಂಖ್ಯೆ

ಮೀನ ರಾಶಿ ವಾರ್ಷಿಕ ಭವಿಷ್ಯ 2022 ರ ಪ್ರಕಾರ ಅದೃಷ್ಟ ಸಂಖ್ಯೆ

ಮೀನ ರಾಶಿ ವಾರ್ಷಿಕ ಭವಿಷ್ಯ 2022 ರ ಪ್ರಕಾರ ಅದೃಷ್ಟ ಸಂಖ್ಯೆ 12, 4, 3 ಆಗಿದೆ. ಈ ವರ್ಷ ಸಂಖ್ಯೆ ಆರು, ಮತ್ತು ಇದನ್ನು ಬುಧ ಗ್ರಹವು ಆಳುತ್ತದೆ. ಗುರು ಮತ್ತು ಬುಧ ಪರಸ್ಪರ ಸ್ನೇಹಪರರಾಗಿದ್ದಾರೆ ಆದ್ದರಿಂದ ಈ ವರ್ಷ ನೀವು ಉದ್ಯೋಗ ಮತ್ತು ವ್ಯವಹಾರದಲ್ಲಿ ಹೊಸ ಸ್ಥಾನವನ್ನು ಹೊಂದಬಹುದು. ನೀವು ಹೊಸ ಅವಕಾಶಗಳನ್ನು ಪಡೆಯುತ್ತೀರಿ ಮತ್ತು ಅದರಿಂದ ನೀವು ಉತ್ತಮ ಲಾಭವನ್ನು ಪಡೆಯುತ್ತೀರಿ. ಕುಟುಂಬ ಜೀವನದಿಂದ ಪ್ರತಿಯೊಂದು ರೀತಿಯ ಒತ್ತಡವು ನಿವಾರಣೆಯಾಗುತ್ತದೆ. ಈ ವರ್ಷ ನೀವು ಬಲವಾದ ಪ್ರೇಮ ಸಂಬಂಧವನ್ನು ಹೊಂದಿರುತ್ತೀರಿ.

 ಮೀನ ರಾಶಿ ಭವಿಷ್ಯ 2022: ಜ್ಯೋತಿಷ್ಯ ಪರಿಹಾರಗಳು

ಮೀನ ರಾಶಿ ಭವಿಷ್ಯ 2022: ಜ್ಯೋತಿಷ್ಯ ಪರಿಹಾರಗಳು

2022 ರಲ್ಲಿ, ವಿವಿಧ ರೀತಿಯ ತೊಂದರೆಗಳನ್ನು ತೊಡೆದುಹಾಕಲು ಮತ್ತು ಉತ್ತಮ ಫಲಿತಾಂಶಗಳನ್ನು ಪಡೆಯಲು ಆದಷ್ಟು ಜನರಿಗೆ ಸಹಾಯ ಮಾಡಿ. ನಿಮ್ಮ ಕೈಳಾದಷ್ಟು ಸಹಾಯ ಮಾಡುವುದರಿಂದ ನಿಮ್ಮ ಜೀವನ ಸುಖಕರವಾಗಿರುತ್ತದೆ. ಗುರುವಾರದಂದು ಅನಾಥ ಮಕ್ಕಳಿಗೆ ಹಳದಿ ಬಣ್ಣದಲ್ಲಿ ಇರುವ ಸಿಹಿ ತಿಂಡಿಯನ್ನು ವಿತರಿಸಿ. ಪ್ರತಿದಿನ ಸೂರ್ಯೋದಯದ ಸಮಯದಲ್ಲಿ ಸೂರ್ಯ ನಮಸ್ಕಾರ ಮಾಡಿ. ನೀರಿಗೆ ಅರಿಶಿನ ಪುಡಿಯನ್ನು ಸೇರಿಸಿ ಸ್ನಾನ ಮಾಡಿ.

Recommended Video

   Rishabh Pant ಅತಿ ವೇಗವಾಗಿ Dhoni ರೆಕಾರ್ಡ್ ಬ್ರೇಕ್ ಮಾಡಿದ್ದು ಹೇಗೆ? | Oneindia Kannada
   English summary
   Meena Rashi Varshika Bhavishya 2022 in Kannada: Check out the Pisces yearly horoscope 2022 predictions in kannada. Read on.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X