ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Libra Horoscope 2022: ಹೊಸ ವರ್ಷದಲ್ಲಿ ತುಲಾ ರಾಶಿಯ ಸಂಪೂರ್ಣ ಜೀವನ ಸ್ಥಿತಿ ಹೀಗಿರಲಿದೆ

|
Google Oneindia Kannada News

ತುಲಾ ರಾಶಿಯವರ ವಾರ್ಷಿಕ ಭವಿಷ್ಯದ ಪ್ರಕಾರ ಈ ರಾಶಿಯವರಿಗೆ ವರ್ಷದ ಆರಂಭವು ಎಲ್ಲಾ ವಲಯದಲ್ಲಿ ಸಂತೋಷವನ್ನು ತರುತ್ತದೆ. ವರ್ಷ ಆರಂಭವು ಹರ್ಷದಾಯಕವಾಗಿರುತ್ತದೆ. ವರ್ಷದ ಮಧ್ಯದಲ್ಲಿ, ಕುಟುಂಬ ಸಂಬಂಧಗಳ ಮೇಲೆ ಹೆಚ್ಚು ಗಮನ ಹರಿಸಿ. ಪ್ರೀತಿಪಾತ್ರರ ಜೊತೆ ಹೆಚ್ಚು ಸಮಯ ಕಳೆಯಿರಿ. ಈ ಮೂಲಕ ನೀವು ಯಾವುದೇ ಸಮಸ್ಯೆ ಇದ್ದರೂ ಪರಿಹರಿಸಲು ಸಾಧ್ಯವಾಗುತ್ತದೆ. ಇನ್ನು ತುಲಾ ರಾಶಿಯವರಿಗೆ ವಷದ ಮಧ್ಯದಲ್ಲಿ ಉತ್ತಮ ಹಣವನ್ನು ಗಳಿಸುವ ಅವಕಾಶವಿದೆ. ತುಲಾ ರಾಶಿಯವರಿಗೆ ತಿಂಗಳ ಕೊನೆಯ ತ್ರೈಮಾಸಿಕವು ಅನುಕೂಲಕರವಾಗಿರುತ್ತದೆ. ಪ್ರೀತಿಯಲ್ಲಿ ಮತ್ತು ಕೆಲಸದಲ್ಲಿ ಅದೃಷ್ಟವು ನಿಮ್ಮೊಂದಿಗೆ ಇರುತ್ತದೆ. ವರ್ಷದ ಅಂತ್ಯದ ವೇಳೆಗೆ, ಅದೃಷ್ಟದ ವಿಚಾರದಲ್ಲಿ ಬದಲಾವಣೆಗಳು ಆಗುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ನಿಮ್ಮ ಜೀವನದ ದೈನಂದಿನ ಚಟುವಟಿಕೆಯಲ್ಲಿ ಕೊಂಚ ಬದಲಾವಣೆ ಮಾಡುವುದು ಉತ್ತಮ. ನೀವು ಸಣ್ಣ ಪ್ರವಾಸ ಮಾಡುವುದು ಅಥವಾ ರಜೆ ಮಾಡಿ ಕುಟುಂಬದೊಂದಿಗೆ ಕಾಲ ಕಳೆಯುವುದು ಉತ್ತಮ.

ಇನ್ನು ವರ್ಷದ ಮಧ್ಯದಲ್ಲಿ ನಿಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ಲಾಭ ಆಗಲಿದೆ. ನಿಮಗೆ ಬಡ್ತಿಯಾಗುವ ಸಾಧ್ಯತೆ ಇದೆ. ಆದರೆ ಬಳಿಕ ಎಂಟನೇ ಮನೆಯಲ್ಲಿ ಚಂದ್ರನ ಆಗಮನದಿಂದಾಗಿ ನೀವು ಅನಗತ್ಯವಾಗಿ ಖರ್ಚು ಮಾಡುವಿರಿ. ಈ ಸಂದರ್ಭದಲ್ಲಿ ನೀವು ನಿಮ್ಮ ಹಣಕಾಸಿನ ಬಗ್ಗೆ ಜಾಗರೂಕರಾಗಿರಿ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನಿಮ್ಮ ಪ್ರೇಮ ಜೀವನ ಉತ್ತಮವಾಗಿರುತ್ತದೆ. ಜನವರಿಯ ಆರಂಭವು ಉತ್ತಮವಾಗಿರುತ್ತದೆ ಮತ್ತು ನಿಮ್ಮ ಶ್ರಮದಿಂದ ನೀವು ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನೀವು ತುಂಬಾ ಸಕ್ರಿಯರಾಗಿರಬಹುದು ಮತ್ತು ನೀವು ಅನೇಕ ಹೊಸ ಸ್ನೇಹಿತರನ್ನು ಭೇಟಿಯಾಗುತ್ತೀರಿ ಮತ್ತು ನಿಮ್ಮ ಕುಟುಂಬದಲ್ಲಿ ಬಾಂಧವ್ಯ ಹೆಚ್ಚಾಗುತ್ತದೆ. ಫೆಬ್ರವರಿಯಿಂದ ಜೂನ್ ತಿಂಗಳವರೆಗೆ ಮತ್ತು ಸೆಪ್ಟೆಂಬರ್‌‌ನಿಂದ ಡಿಸೆಂಬರ್‌ವರೆಗೆ, ನೀವು ಯಾವುದೇ ಆಸ್ತಿಯನ್ನು ಖರೀದಿ ಮಾಡಬಹುದು. ಮನೆ ಖರೀದಿಸುವ ಅಥವಾ ಮಾರಾಟ ಮಾಡುವ ಮೊದಲು ಕುಟುಂಬದ ಹಿರಿಯರೊಂದಿಗೆ ಮಾತುಕತೆ ನಡೆಸುವುದು ಉತ್ತಮ. ನೀವು ಯಾವುದೇ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ, ಆರ್ಥಿಕ ಲಾಭವನ್ನು ಪಡೆಯಲು ನಿಮಗೆ ಅನುಕೂಲಕರವಾಗಿರುತ್ತದೆ. ಈ ವರ್ಷ ನಿಮ್ಮ ಆರೋಗ್ಯ, ವೈವಾಹಿಕ ಜೀವನ, ಉದ್ಯೋಗ ಮೊದಲಾದವುಗಳು ಹೇಗೆ ಇರಲಿದೆ ಎಂಬ ಬಗ್ಗೆ ತಿಳಿಯಲು ಮುಂದೆ ಓದಿ...

 Virgo Horoscope 2022: ಹೊಸ ವರ್ಷದಲ್ಲಿ ಕನ್ಯಾ ರಾಶಿಯವರ ಭವಿಷ್ಯ ಹೇಗಿರಲಿದೆ? Virgo Horoscope 2022: ಹೊಸ ವರ್ಷದಲ್ಲಿ ಕನ್ಯಾ ರಾಶಿಯವರ ಭವಿಷ್ಯ ಹೇಗಿರಲಿದೆ?

 ಯಶಸ್ಸು ನಿಮ್ಮದು: ಆರೋಗ್ಯದ ಬಗ್ಗೆ ಅಸಡ್ಡೆ ಬೇಡ

ಯಶಸ್ಸು ನಿಮ್ಮದು: ಆರೋಗ್ಯದ ಬಗ್ಗೆ ಅಸಡ್ಡೆ ಬೇಡ

ಇನ್ನು ಆಗಸ್ಟ್ ನಂತರ, ಹಣದ ವಿಷಯವು ಸಮತೋಲನದಲ್ಲಿ ಇರುತ್ತದೆ. ಈ ಅವಧಿಯಲ್ಲಿ ನಿಮ್ಮ ಪೋಷಕರೊಂದಿಗೆ ಘರ್ಷಣೆ ಉಂಟಾಗಬಹುದು. ಆದ್ದರಿಂದ ಯಾವುದೇ ವಿಚಾರದಲ್ಲೂ ಜಾಗರೂಕರಾಗಿರಿ. ಸಂಬಂಧದಲ್ಲಿ ಕೆಲವು ಸಮಸ್ಯೆಗಳಿರಬಹುದು. ನೀವು ಹೊಸ ಕೆಲಸವನ್ನು ಪ್ರಾರಂಭಿಸಿದ್ದರೆ, ಜಾಗರೂಕರಾಗಿರಿ ಹಾಗೂ ಜವಾಬ್ದಾರಿಯಿಂದ ನಿಭಾಯಿಸಿ. ಪ್ರೀತಿ ಮತ್ತು ಹಣದ ವಿಷಯಗಳಲ್ಲಿಯೂ ಸಹ ನೀವು ಸ್ವಲ್ಪ ಕಠಿಣ ಪರಿಶ್ರಮವನ್ನು ಮಾಡಬೇಕಾಗುತ್ತದೆ. ಇನ್ನು ನಿಮ್ಮ ಆರೋಗ್ಯದ ಬಗ್ಗೆಯೂ ನೀವು ಜಾಗರೂಕರಾಗಿದ್ದರೆ ಉತ್ತಮ. ವರ್ಷದ ಕೊನೆಯ ತ್ರೈಮಾಸಿಕದಲ್ಲಿ, ನಿಮ್ಮ ಆರೋಗ್ಯದ ಬಗ್ಗೆ ನೀವು ಜಾಗರೂಕರಾಗಿರಬೇಕು ಮತ್ತು ನಿಮ್ಮ ಆರೋಗ್ಯದ ಬಗ್ಗೆ ಯಾವುದೇ ಅಸಡ್ಡೆ ತೋರಬೇಡಿ. ನಿಯಮಿತವಾಗಿ ಕೆಲಸದ ಜೊತೆಗೆ ವಿಶ್ರಾಂತಿಯನ್ನು ಕೂಡಾ ಮುಖ್ಯ. ಇದರಿಂದಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಉತ್ಸಾಹ ಇರುತ್ತದೆ. ಒಟ್ಟಾರೆಯಾಗಿ ಉತ್ತಮ ವರ್ಷ ನಿಮ್ಮ ಮುಂದಿದೆ. ಯಶಸ್ಸು ನಿಮ್ಮಲ್ಲಿ ಇರುತ್ತದೆ. ಇದು ನಿಮ್ಮ ಯೋಗ್ಯತೆಯನ್ನು ಸಾಬೀತುಪಡಿಸುವ ಸಮಯ, ಸದುಪಯೋಗ ಮಾಡಿಕೊಳ್ಳಿ. ಈ ದಿನಗಳಲ್ಲಿ ಬದಲಾವಣೆಗಳು ಮತ್ತು ಅವಕಾಶಗಳು ಹೇರಳವಾಗಿವೆ. ಆದರೆ ಕೆಲಸವನ್ನು ಮೈಮೇಲೆ ಎಳೆದುಕೊಂಡು ನೀವು ಅತಿಯಾಗಿ ಕೆಲಸ ಮಾಡಬೇಡಿ.

 ತುಲಾ ರಾಶಿ ಪ್ರೇಮ ಜೀವನ ಭವಿಷ್ಯ 2022

ತುಲಾ ರಾಶಿ ಪ್ರೇಮ ಜೀವನ ಭವಿಷ್ಯ 2022

ತುಲಾ ರಾಶಿಯ ಪ್ರೇಮ ಜೀವನ ಭವಿಷ್ಯ 2022 ರ ಪ್ರಕಾರ ಈ ರಾಶಿಯವರ ಜೀವನವು ಸ್ವಲ್ಪ ಸುಗಮವಾಗಿ ಸಾಗಬಹುದು. ಉತ್ತಮ ಬಂಧವನ್ನು ಹೊಂದಿರುವ ಜೋಡಿಯು ಈ ವರ್ಷ ಯಶಸ್ವಿ ಸಂಬಂಧವನ್ನು ಹೊಂದಬಹುದು. ಅಂದರೆ ಈ ವರ್ಷ ಮದುವೆಯಾಗಬಹುದು. ಒಂಟಿಯಾಗಿರುವ ತುಲಾ ರಾಶಿಯವರು ಪ್ರೇಮ ಜೀವನವನ್ನು ಆರಂಭ ಮಾಡಬಹುದು. ಅಂದರೆ ನಿಮಗೆ ಪ್ರೇಮ ಉಂಟಾಗಬಹುದು. ವಿವಾಹಿತ ದಂಪತಿಗಳಿಗೆ ಪ್ರೀತಿ ಮತ್ತು ಶಾಂತಿಯು ಹೆಚ್ಚಾಗಲಿದೆ. ನಿಮ್ಮ ಸಂಗಾತಿಯ ಜೊತೆ ಕಠಿಣವಾದ ವಾದಗಳು ಮತ್ತು ಕೆಟ್ಟ ನಡವಳಿಕೆಯನ್ನು ತಪ್ಪಿಸಲು ಪ್ರಯತ್ನಿಸಿ. ಸ್ವಲ್ಪ ಗೌರವದಿಂದ ವರ್ತನೆ ಮಾಡಿ. ನೀವು ಉತ್ತಮ ಪ್ರೇಮ ಜೀವನವನ್ನು ಹೊಂದಲು ಇದೊಂದೆ ಮಾರ್ಗ.

Gemini Horoscope 2022: ಹೊಸ ವರ್ಷದಲ್ಲಿ ಮಿಥುನ ರಾಶಿಯ ಸಂಪೂರ್ಣ ಜೀವನ ಸ್ಥಿತಿ ಹೇಗಿರಲಿದೆ?Gemini Horoscope 2022: ಹೊಸ ವರ್ಷದಲ್ಲಿ ಮಿಥುನ ರಾಶಿಯ ಸಂಪೂರ್ಣ ಜೀವನ ಸ್ಥಿತಿ ಹೇಗಿರಲಿದೆ?

 ತುಲಾ ರಾಶಿ ವೃತ್ತಿ ಭವಿಷ್ಯ 2022

ತುಲಾ ರಾಶಿ ವೃತ್ತಿ ಭವಿಷ್ಯ 2022

ತುಲಾ ರಾಶಿ ವೃತ್ತಿ ಭವಿಷ್ಯ 2022 ರ ಪ್ರಕಾರ ತುಲಾ ರಾಶಿಯವರಿಗೆ ವೃತ್ತಿ ವಿಚಾರದಲ್ಲಿ ಇದು ಸರಾಸರಿಯಾಗಿರುವ ವರ್ಷವಾಗಲಿದೆ. ತುಲಾ ರಾಶಿಯ ಕಾರ್ಪೊರೇಟ್ ಕೆಲಸಗಾರರಿಗೆ ತಮ್ಮ ವೃತ್ತಿಜೀವನದಲ್ಲಿ ಉತ್ತಮ ವರ್ಷ ಇದಾಗಿದೆ. ಮೊದಲ ಕೆಲವು ತಿಂಗಳುಗಳಲ್ಲಿ ನೀವು ಕೊಂಚ ತೊಂದರೆಗೆ ಉಂಟಾಗಬಹುದು. ಬಳಿಕ ದ್ವಿತೀಯಾರ್ಧವು ನಿಮ್ಮ ಕಾರ್ಯಕ್ಷೇತ್ರದಲ್ಲಿ ಸಾಕಷ್ಟು ಸವಾಲನ್ನು ಒಡ್ಡಬಹುದು. ಆದ್ದರಿಂದ ಸಹೋದ್ಯೋಗಿಗಳು ಮತ್ತು ಹಿರಿಯರೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳುವುದು ಉತ್ತಮ. ಉದ್ಯೋಗ ಅಥವಾ ಕೆಲಸವನ್ನು ಬದಲಾಯಿಸಬೇಕು ಎಂದು ಅಂದುಕೊಂಡಿರುವವರು ಈಗ ಇರುವ ಕೆಲಸವನ್ನು ತೊರೆಯುವ ಮೊದಲು ಜಾಗರೂಕರಾಗಿರಿ. ಹೊಸ ಕೆಲಸಕ್ಕೆ ಸೇರುವ ಮೊದಲು ಸರಿಯಾಗಿ ಪರಿಶೀಲನೆ ನಡೆಸಿ.

 ತುಲಾ ರಾಶಿ ಶಿಕ್ಷಣ ಭವಿಷ್ಯ 2022

ತುಲಾ ರಾಶಿ ಶಿಕ್ಷಣ ಭವಿಷ್ಯ 2022

ತುಲಾ ರಾಶಿ ಶಿಕ್ಷಣ ಭವಿಷ್ಯ 2022 ರ ಪ್ರಕಾರ ಈ ವರ್ಷವು ತುಲಾ ರಾಶಿಯವರಿಗೆ ಅತ್ಯುತ್ತಮ ಶೈಕ್ಷಣಿಕ ವರ್ಷವಾಗಿದೆ. ಈ ವರ್ಷ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮವಾಗಿದೆ. ಹೆಚ್ಚಿನ ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವ ವಿದ್ಯಾರ್ಥಿಗಳು ಜನವರಿಯಿಂದ ಜೂನ್‌ವರೆಗೆ ಅವಕಾಶವನ್ನು ಪಡೆಯಬಹುದು. ನಿಮ್ಮ ಮುಂಬರುವ ವೃತ್ತಿಜೀವನಕ್ಕೆ ಈ ವರ್ಷವು ಪ್ರಮುಖ ವರ್ಷವಾಗಿದೆ. ನೀವು ಕಠಿಣ ಪರಿಶ್ರಮವನ್ನು ಹಾಕಬೇಕು. ಈ ಮೂಲಕ ಉತ್ತಮ ಫಲಿತಾಂಶ ಖಂಡಿತ.

 ತುಲಾ ರಾಶಿ ಹಣಕಾಸು ಭವಿಷ್ಯ 2022

ತುಲಾ ರಾಶಿ ಹಣಕಾಸು ಭವಿಷ್ಯ 2022

ತುಲಾ ರಾಶಿ ಹಣಕಾಸು ಭವಿಷ್ಯ 2022 ರ ಪ್ರಕಾರ ತುಲಾ ರಾಶಿಯವರಿಗೆ ಈ ವರ್ಷ ಆರ್ಥಿಕ ಸ್ಥಿರತೆ ಇರಲಿದೆ. ಆದರೂ, ನೀವು ವಿಶೇಷವಾಗಿ ವರ್ಷದ ದ್ವಿತೀಯಾರ್ಧದಲ್ಲಿ ಜಾಗರೂಕರಾಗಿರಬೇಕು. ವರ್ಷದ ದ್ವಿತೀಯಾರ್ಧದಲ್ಲಿ, ಖರ್ಚು ಹೆಚ್ಚಿರಬಹುದು. ಆದ್ದರಿಂದ ನೀವು ಜಾಗರೂಕರಾಗಿರಬೇಕು ಮತ್ತು ಉಳಿತಾಯದತ್ತ ಗಮನ ಹರಿಸಬೇಕು. ಜನವರಿಯಿಂದ ಏಪ್ರಿಲ್ ವರೆಗೆ ಹಣವು ಇರಲಿದೆ. ಈ ವರ್ಷ ನಿಮಗೆ ಹೊಸ ಆದಾಯದ ಮೂಲ ಇರಲಾರದು. ಈ ವರ್ಷದಲ್ಲಿ ನಿಮ್ಮ ಖರ್ಚುಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಿದರೆ ಉತ್ತಮ.

 ತುಲಾ ರಾಶಿಯ ಕುಟುಂಬ ಭವಿಷ್ಯ 2022

ತುಲಾ ರಾಶಿಯ ಕುಟುಂಬ ಭವಿಷ್ಯ 2022

ತುಲಾ ರಾಶಿಯ ಕುಟುಂಬ ಭವಿಷ್ಯ 2022 ಪ್ರಕಾರ ಈ ವರ್ಷ ಕುಟುಂಬದೊಂದಿಗೆ ನೀವು ಹೆಚ್ಚು ಹತ್ತಿರವಾಗಲಿದ್ದೀರಿ. ಕುಟುಂಬ ಮತ್ತು ಸಮುದಾಯದೊಂದಿಗಿನ ಸಂಬಂಧಗಳು ಸುಧಾರಿಸಬೇಕು. ನೀವು ಕುಟುಂಬದ ಬಗ್ಗೆ ಅದರಲ್ಲೂ ಮುಖ್ಯವಾಗಿ ನಿಮ್ಮದೇ ರಾಶಿಯವರ ಜೊತೆ ಉತ್ತಮ ಮನೋಭಾವವನ್ನು ಹೊಂದುತ್ತೀರಿ. ನಿಮ್ಮಲ್ಲಿ ಕೆಲವರು ನಿಮ್ಮ ಮನೆಯನ್ನು ಸುಧಾರಿಸಲು ಮತ್ತು ನಿಮ್ಮ ಪರಿಸರವನ್ನು ಸಂತೋಷವಾಗಿಡುವ ನಿಟ್ಟಿನಲ್ಲಿ ಶ್ರಮ ಪಡಬಹುದು.

 ತುಲಾ ರಾಶಿಯ ಮಕ್ಕಳ ಭವಿಷ್ಯ 2022

ತುಲಾ ರಾಶಿಯ ಮಕ್ಕಳ ಭವಿಷ್ಯ 2022

ತುಲಾ ರಾಶಿಯ ಮಕ್ಕಳ ಭವಿಷ್ಯ 2022 ರ ಪ್ರಕಾರ ಗುರುವು ಐದನೇ ಮನೆಯ ಮೇಲೆ ಉತ್ತಮ ಪ್ರಭಾವವನ್ನು ಬೀರುವುದರಿಂದಾಗಿ ಈ ವರ್ಷದ ಆರಂಭವು ಮಕ್ಕಳಿಗೆ ಅನುಕೂಲಕರವಾಗಿರುತ್ತದೆ, ಇದು ಮಕ್ಕಳು ಅಧ್ಯಯನವನ್ನು ಹೆಚ್ಚಾಗಿ ಮಾಡಲು ಸಹಾಯಕ. ನಿಮ್ಮ ಮಕ್ಕಳು ಉನ್ನತ ಶಿಕ್ಷಣವನ್ನು ಪಡೆಯುವ ಬಯಕೆ ಹೊಂದಿದ್ದರೆ, ಅವರನ್ನು ಉನ್ನತ ಶಿಕ್ಷಣಕ್ಕಾಗಿ ಕಾಲೇಜಿಗೆ ಸೇರಿಸಿ. ಒಟ್ಟಾರೆಯಾಗಿ ನಿಮ್ಮ ಮಗು ಈ ವರ್ಷ ಯಶಸ್ಸನ್ನು ಸಾಧಿಸುವುದು ಖಂಡಿತ. ನಿಮ್ಮ ಮಕ್ಕಳು ಮದುವೆಯ ವಯಸ್ಸಾಗಿದ್ದರೆ, ಈ ವರ್ಷ ಮದುವೆಯಾಗುತ್ತಾರೆ. ಈ ಅವಧಿಯಲ್ಲಿ ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ನೀವು ಚಿಂತಿಸಬೇಕಾಗುತ್ತದೆ.

 ತುಲಾ ರಾಶಿ ಮದುವೆ ಭವಿಷ್ಯ 2022

ತುಲಾ ರಾಶಿ ಮದುವೆ ಭವಿಷ್ಯ 2022

ತುಲಾ ರಾಶಿ ಮದುವೆ ಭವಿಷ್ಯ 2022 ರ ಪ್ರಕಾರ ವಿವಾಹಿತರು ಈ ವರ್ಷ ಮಿಶ್ರ ಫಲಿತಾಂಶಗಳನ್ನು ಪಡೆಯುತ್ತಾರೆ. ಏಕೆಂದರೆ ವರ್ಷದ ಆರಂಭವು ನಿಮಗೆ ಕೆಲವು ಅಡೆತಡೆಗಳನ್ನು ತರಬಹುದು. ನೀವು ಕೆಲವು ಕೌಟುಂಬಿಕ ಸಮಸ್ಯೆಗಳಿಗೆ ಒಳಗಾಗುತ್ತೀರಿ. ನಿಮ್ಮ ಸಂಗಾತಿಯೊಂದಿಗೂ ವೈಮನಸ್ಸು ಉಂಟಾಗಬಹುದು. ಆದಾಗ್ಯೂ, ನೀವು ವರ್ಷದ ಆರಂಭದಲ್ಲಿ ನಿಮ್ಮ ಸಂಗಾತಿಯ ಬೆಂಬಲವನ್ನು ಪಡೆಯುತ್ತೀರಿ; ಈ ಅವಧಿಯಲ್ಲಿ ನಿಮ್ಮ ಏಳನೇ ಮನೆಯ ಮೇಲೆ ಪ್ರಭಾವವಿರುವ ಹಿನ್ನೆಲೆ ನಿಮ್ಮ ಸಂಗಾತಿಯೊಂದಿಗೆ ವಾದ ಉಂಟಾಗಲಿದೆ. ಆದ್ದರಿಂದಾಗಿ ವರ್ಷದ ಮಧ್ಯದಲ್ಲಿ ನೀವು ಎಚ್ಚರದಿಂದ ಮತ್ತು ಜಾಗರೂಕರಾಗಿರಿ. ಅದೇ ಸಮಯದಲ್ಲಿ, ನೀವು ಭವಿಷ್ಯದಲ್ಲಿ ಎಲ್ಲಾ ಅನುಮಾನಗಳನ್ನು, ಎಲ್ಲಾ ವಿವಾದಗಳು ಮತ್ತು ತಪ್ಪುಗ್ರಹಿಕೆಯನ್ನು ನಿವಾರಿಸುತ್ತೀರಿ ಮತ್ತು ಪರಸ್ಪರ ನಂಬಿಕೆ ಮತ್ತು ವಿಶ್ವಾಸದಿಂದ ನಿಮ್ಮ ಜೀವನವನ್ನು ಸಾಗಿಸುತ್ತೀರಿ.

 ತುಲಾ ರಾಶಿಯ ವ್ಯಾಪಾರ ಭವಿಷ್ಯ 2022

ತುಲಾ ರಾಶಿಯ ವ್ಯಾಪಾರ ಭವಿಷ್ಯ 2022

ತುಲಾ ರಾಶಿಯ ವ್ಯಾಪಾರ ಭವಿಷ್ಯ 2022 ರ ಪ್ರಕಾರ ತುಲಾ ರಾಶಿಯವರಿಗೆ ಈ ವರ್ಷ ಕೆಲವು ಸಮಸ್ಯೆಗಳು ಉಂಟಾಗಲಿದೆ. ಪಾಲುದಾರಿಕೆ ವ್ಯವಹಾರಗಳು ವ್ಯಾಪಾರ ದಾಖಲೆಗಳು ಮತ್ತು ಫೈಲಿಂಗ್‌ಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ಲುದಾರರಲ್ಲಿ ಯಾವುದೇ ಕುರುಡು ನಂಬಿಕೆಯನ್ನು ಹೊಂದಬೇಡಿ. ನಿಮ್ಮ ಪ್ರತಿಭೆ ಮತ್ತು ಕೌಶಲ್ಯಗಳನ್ನು ಅವಲಂಬಿಸಿ ಕೆಲಸ ಮಾಡಿ. ಈ ವರ್ಷ ಗಮನಾರ್ಹ ಹೂಡಿಕೆಯು ಹೆಚ್ಚು ಫಲಪ್ರದವಾಗದಿರಬಹುದು ಮತ್ತು ಬಹಳಷ್ಟು ನಷ್ಟವನ್ನು ಉಂಟುಮಾಡಬಹುದು. ನೀವು ಪಾಲುದಾರಿಕೆ ವ್ಯವಹಾರವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ, ಈ ವರ್ಷ ಮಾಡದಿರುವುದು ಉತ್ತಮ. ಈ ವರ್ಷ ಯಾವುದೇ ಹೊಸ ಕಾನೂನು ವ್ಯವಹಾರದಿಂದ ದೂರವಿರಿ, ಈ ವರ್ಷ ನೀವು ಹೊಸ ಯೋಜನೆಯನ್ನು ಪ್ರಾರಂಭಿಸಬೇಕಾದರೆ ಸರಿಯಾದ ಯೋಜನೆಯಲ್ಲಿ ಸಮಯ ಕಳೆಯಿರಿ.

 ತುಲಾ ರಾಶಿ ಆಸ್ತಿ ಮತ್ತು ವಾಹನ ಭವಿಷ್ಯ 2022

ತುಲಾ ರಾಶಿ ಆಸ್ತಿ ಮತ್ತು ವಾಹನ ಭವಿಷ್ಯ 2022

ತುಲಾ ರಾಶಿ ಆಸ್ತಿ ಮತ್ತು ವಾಹನ ಭವಿಷ್ಯ 2022 ರ ಪ್ರಕಾರ ಈ ವರ್ಷ ತುಲಾ ರಾಶಿಯವರಿಗೆ ಖರೀದಿಸಲು ಮತ್ತು ಮಾರಾಟ ಮಾಡಲು ಫಲಪ್ರದವಾದ ವರ್ಷವಾಗಿದೆ. ನಿಮಗಾಗಿ ಸ್ವತ್ತುಗಳನ್ನು ಖರೀದಿಸಲು ನೀವು ಪ್ರಯತ್ನಿಸಿದಾಗ ನೀವು ಯಶಸ್ವಿಯಾಗುತ್ತೀರಿ. ಆದರೆ ಪಿತ್ರಾರ್ಜಿತವಾಗಿ ಪಡೆದ ಆಸ್ತಿಯನ್ನು ಮಾರುವುದು ಬೇಡ. ನೀವು ಪಿತ್ರಾರ್ಜಿತವಾಗಿ ಪಡೆದ ಆಸ್ತಿಯನ್ನು ಮಾರುವ ಮುನ್ನ ಕುಟುಂಬದೊಂದಿಗೆ ಮಾತುಕತೆ ನಡೆಸಿ. ಈ ವರ್ಷ ಭೂಮಿ, ಕಟ್ಟಡ, ವಾಹನಗಳನ್ನು ಖರೀದಿಸುವ ಸಾಧ್ಯತೆಯೂ ಇದೆ.

 ತುಲಾ ರಾಶಿ ಸಂಪತ್ತು ಮತ್ತು ಲಾಭದ ಭವಿಷ್ಯ 2022

ತುಲಾ ರಾಶಿ ಸಂಪತ್ತು ಮತ್ತು ಲಾಭದ ಭವಿಷ್ಯ 2022

ತುಲಾ ರಾಶಿ ಸಂಪತ್ತು ಮತ್ತು ಲಾಭದ ಭವಿಷ್ಯ 2022ರ ಪ್ರಕಾರ ತುಲಾ ರಾಶಿಯವರು 2022 ರಲ್ಲಿ ಸ್ಥಿರ ಆದಾಯವನ್ನು ಗಳಿಸುತ್ತಾರೆ. ಆಸ್ತಿ ಮತ್ತು ಅಮೂಲ್ಯ ಲೋಹಗಳಲ್ಲಿ ಹೂಡಿಕೆ ಮಾಡುವ ಮೂಲಕ ತಮ್ಮ ಅದೃಷ್ಟದ ಪರೀಕ್ಷೆ ಮಾಡಿಕೊಳ್ಳುವುದು ಉತ್ತಮವಲ್ಲ. ಕಠಿಣ ಪರಿಶ್ರಮವು 2022 ರಲ್ಲಿ ನಿಮಗೆ ಹೆಚ್ಚಿನ ಆದಾಯವನ್ನು ಪಡೆಯಲು ಸಹಾಯಕವಾಗಿದೆ. ಆನ್‌ಲೈನ್ ಲಾಟರಿ ಅಥವಾ ಜೂಜಿನ ಮೂಲಕ ನಿಮ್ಮ ಸಂಪತ್ತನ್ನು ಹಾಳು ಮಾಡಿಕೊಳ್ಳಬೇಡಿ

 ತುಲಾ ರಾಶಿ ಆರೋಗ್ಯ ಭವಿಷ್ಯ 2022

ತುಲಾ ರಾಶಿ ಆರೋಗ್ಯ ಭವಿಷ್ಯ 2022

ತುಲಾ ರಾಶಿ ಆರೋಗ್ಯ ಭವಿಷ್ಯ 2022 ರ ಪ್ರಕಾರ ತುಲಾ ರಾಶಿಯವರು ಈ ವರ್ಷ ಸಣ್ಣ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ಜೀರ್ಣಕ್ರಿಯೆಗೆ ಸಂಬಂಧಿಸಿದ ರೋಗಗಳು ಮತ್ತು ವೈರಲ್ ಸೋಂಕುಗಳು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಆದರೆ ದೀರ್ಘ ಕಾಲ ಆರೋಗ್ಯ ಸಮಸ್ಯೆ ಇರಲಾರದು. ಈ ವರ್ಷ ನಿಮಗೆ ಗಾಯವಾಗುವ ಸಾಧ್ಯತೆಗಳೂ ಇವೆ. ಆದ್ದರಿಂದ ನೀವು ವ್ಯಾಯಾಮ ಮಾಡಬೇಕು ಮತ್ತು ನಿಮ್ಮ ದೇಹದ ಫಿಟ್ನೆಸ್ ಮತ್ತು ತೂಕದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಮಾಡಿಕೊಳ್ಳಬೇಕು. ಉತ್ತಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಒತ್ತಡವನ್ನು ತಪ್ಪಿಸುವ ಪ್ರಯತ್ನ ಮಾಡಿ.

 ತುಲಾ ರಾಶಿ ವಾರ್ಷಿಕ ಭವಿಷ್ಯ 2022 ರ ಪ್ರಕಾರ ಅದೃಷ್ಟ ಸಂಖ್ಯೆ

ತುಲಾ ರಾಶಿ ವಾರ್ಷಿಕ ಭವಿಷ್ಯ 2022 ರ ಪ್ರಕಾರ ಅದೃಷ್ಟ ಸಂಖ್ಯೆ

ತುಲಾ ರಾಶಿ ವಾರ್ಷಿಕ ಭವಿಷ್ಯ 2022 ರ ಪ್ರಕಾರ ಅದೃಷ್ಟ ಸಂಖ್ಯೆಯು ಏಳು ಆಗಿದೆ. ನಿಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳು ಉಂಟಾಗಲಿದೆ. ಗುರುವು ನಿಮ್ಮ ರಾಶಿಯ ಮೇಲೆ ಅತ್ಯಂತ ಮಹತ್ವದ ಗ್ರಹಗಳ ಪ್ರಭಾವವನ್ನು ಉಂಟು ಮಾಡಲಿದೆ. ಆದಾಗ್ಯೂ, ನಿಮ್ಮ ಜೀವನವು ಏಪ್ರಿಲ್ ಮತ್ತು ಅಕ್ಟೋಬರ್ ನಡುವೆ ಏರಿಳಿತ ಕಾಣಲಿದೆ. ಈ ಸಮಯದಲ್ಲಿ, ಸುರಕ್ಷಿತವಾಗಿ ಆಡುವುದು ಉತ್ತಮ. ನವೆಂಬರ್‌ನಲ್ಲಿ ನಿಮ್ಮ ಜೀವನ ಸಹಜ ಸ್ಥಿತಿಗೆ ಮರಳಲಿದೆ.

 ತುಲಾ ರಾಶಿ ಭವಿಷ್ಯ 2022: ಜ್ಯೋತಿಷ್ಯ ಪರಿಹಾರಗಳು

ತುಲಾ ರಾಶಿ ಭವಿಷ್ಯ 2022: ಜ್ಯೋತಿಷ್ಯ ಪರಿಹಾರಗಳು

ಯಾವುದೇ ಶುಕ್ರವಾರದಂದು ಉಂಗುರದ ಬೆರಳಿನಲ್ಲಿ ಬೆಳ್ಳಿಯ ಉಂಗುರದಲ್ಲಿ ಕೆತ್ತಿದ ಉತ್ತಮ ಗುಣಮಟ್ಟದ ಡೈಮಂಡ್ ಅಥವಾ ರತ್ನವನ್ನು ಧರಿಸಿ. ಆದಷ್ಟು ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಈ ಮೂಲಕ ನಿಮಗೆ ಉತ್ತಮವಾಗಲಿದೆ ಮತ್ತು ಶನಿವಾರದಂದು ಶನಿದೇವರ ದೇವಸ್ಥಾನಕ್ಕೆ ಹೋಗಿ ಕರಿಬೇವಿನ ಪ್ರಸಾದವನ್ನು ವಿತರಣೆ ಮಾಡಿ. ಈ ವರ್ಷ ಯಾರೊಂದಿಗೂ, ವಿಶೇಷವಾಗಿ ನಿಮ್ಮ ಸಹೋದ್ಯೋಗಿಗಳೊಂದಿಗೆ ಅನುಚಿತವಾಗಿ ವರ್ತಿಸಬೇಡಿ. ಇರುವೆಗಳಿಗೆ ಗೋಧಿ ಹಿಟ್ಟು ನೀಡಿ.

English summary
Tula Rashi Varshika Bhavishya 2022 in Kannada: Check out the Libra yearly horoscope 2022 predictions in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X