Get Updates
Get notified of breaking news, exclusive insights, and must-see stories!

Sagittarius Horoscope 2022: ಧನು ರಾಶಿಯವರಿಗೆ ಹೊಸ ವರ್ಷ ಹೇಗಿರಲಿದೆ?

2022 ರ ಭವಿಷ್ಯದ ಪ್ರಕಾರ ಧನು ರಾಶಿಯವರು ವೃತ್ತಿಜೀವನದಲ್ಲಿ ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಆರ್ಥಿಕ ದೃಷ್ಟಿಕೋನದಿಂದ ಈ ವರ್ಷ ನಿಮಗೆ ಉತ್ತಮವಾಗಿರುತ್ತದೆ. ಮತ್ತೆ ಮತ್ತೆ ನೀವು ಪ್ರಯಾಣ ಮಾಡುತ್ತಿರುತ್ತೀರಿ. ಗ್ರಹಗಳ ಸ್ಥಾನವು ನಿಮಗೆ ಅನುಕೂಲಕರವಾಗಿರುತ್ತದೆ. ಎಲ್ಲಾ ರೀತಿಯ ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ, ನೀವು ಪೂರ್ಣ ಉತ್ಸಾಹದಿಂದ ಪಾಲ್ಗೊಳ್ಳುತ್ತೀರಿ. ಕಳೆದ ವರ್ಷ ನೀವು ಮಾಡಿದ ಶ್ರಮದ ಫಲವನ್ನು ಈ ವರ್ಷ ನೀವು ಪಡೆಯುತ್ತೀರಿ. ನಿಮ್ಮ ಮಕ್ಕಳ ವಿಚಾರದಲ್ಲಿ ನೀವು ಸಂತೋಷವನ್ನು ಪಡೆಯುತ್ತೀರಿ. ನಿಮ್ಮ ಸ್ನೇಹಿತರ ಸಂಪೂರ್ಣ ಬೆಂಬಲವನ್ನು ಸಹ ನೀವು ಪಡೆಯುತ್ತೀರಿ. ನಿಮ್ಮ ಕುಟುಂಬದ ಜೊತೆ ಕೆಲವಯ ಸಮಸ್ಯೆಗಳು ಉಂಟಾಗಲಿದೆ. 2022 ರ ಭವಿಷ್ಯದ ಪ್ರಕಾರ ನಿಮ್ಮ ವೃತ್ತಿಜೀವನದಲ್ಲಿ ಬೆಳವಣಿಗೆ ಮತ್ತು ಆರ್ಥಿಕ ಲಾಭ ಉಂಟಾಗಲಿದೆ. ಹಾಗೆಯೇ ಸಂಬಳದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ.

ಜನವರಿ ತಿಂಗಳು ಧನು ರಾಶಿಯವರಿಗೆ ಅನಿರೀಕ್ಷಿತ ಘಟನೆಗಳಾಗಬಹುದು. ಆದ್ದರಿಂದ ಅವುಗಳನ್ನು ಧೈರ್ಯದಿಂದ ಎದುರಿಸಬೇಕಾಗುತ್ತದೆ. ಫೆಬ್ರವರಿ ತಿಂಗಳು ನಿಮ್ಮ ಸೃಜನಶೀಲ ಆಲೋಚನೆಗಳನ್ನು ಬರೆದು ಪುಸ್ತಕ ಪ್ರಕಟಿಸಲು ಮತ್ತು ಹೊಸ ಉದ್ಯಮವನ್ನು ಪ್ರಾರಂಭಿಸಲು ಉತ್ತಮ ಸಮಯವಾಗಿದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ, ನಿಮ್ಮ ವೃತ್ತಿಜೀವನದಲ್ಲಿ ನೀವು ಹೆಚ್ಚು ತೊಡಗಬಹುದು. ನೀವು ಹೆಚ್ಚು ಕೆಲಸದ ಕಡೆಗೆ ಗಮನಹರಿಸಿ. ಏಕೆಂದರೆ ಈ ಸಂದರ್ಭದಲ್ಲಿ ಸಂಬಳ ಹೆಚ್ಚಳ ಆಗಬಹುದು. ಹೆಚ್ಚು ಮೃದುವಾಗಿರಲು ಪ್ರಯತ್ನಿಸಿ ಮತ್ತು ಪಾಲುದಾರರ ಭಾವನೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಇದರಿಂದಾಗಿ ನಿಮಗೆ ಲಾಭವಾಗಲಿದೆ. ಮೇ ಮತ್ತು ಜುಲೈ ತಿಂಗಳುಗಳಲ್ಲಿ ಯಾವುದೆ ಹಠಾತ್‌ ನಿರ್ಧಾರ ಕೈಗೊಳ್ಳಬೇಡಿ. ಈ ಸಂದರ್ಭದಲ್ಲಿ ಸುತ್ತಮುತ್ತಲಿನ ವಾತಾವರಣವು ನಿಮ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ದೈಹಿಕ ಮತ್ತು ಮಾನಸಿಕ ಸ್ಥಿತಿಯು ಈ ತಿಂಗಳು ತುಂಬಾ ಉತ್ತಮವಾಗಿರುತ್ತದೆ.

 ಮಂಗಳಕರ ವರ್ಷ: ಆಲೋಚಿಸಿ ಖರ್ಚು ಮಾಡಿ

ಮಂಗಳಕರ ವರ್ಷ: ಆಲೋಚಿಸಿ ಖರ್ಚು ಮಾಡಿ

ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳು ನಿಮ್ಮ ಸಂಬಂಧವನ್ನು ಬಲಪಡಿಸಲು ಉತ್ತಮ ಸಮಯವಾಗಿದ್ದು, ವೈವಾಹಿಕ ಸಂತೋಷ ಉಂಟಾಗಲಿದೆ. ಸೆಪ್ಟೆಂಬರ್ ತಿಂಗಳ ಮಧ್ಯಭಾಗವು ನಿಮಗೆ ದೊಡ್ಡ ಹಣಕಾಸಿನ ವೆಚ್ಚವನ್ನು ಉಂಟು ಮಾಡಲಿದೆ. ವರ್ಷದ ಕೊನೆಯ ತ್ರೈಮಾಸಿಕದಲ್ಲಿ, ಕೆಲಸದಿಂದ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಬೇಕು. ಈ ರಾಶಿಯವರು ಬುದ್ಧಿವಂತಿಕೆಯಿಂದ ಖರ್ಚು ಮಾಡಿದರೆ ಆರ್ಥಿಕವಾಗಿ ಉತ್ತಮ ಅವಧಿ ಆಗಲಿದೆ. 2022 ರ ಕೊನೆಯ ತಿಂಗಳುಗಳಲ್ಲಿ ಬಹಳಷ್ಟು ಸಂತಸದ ದಿನಗಳು ಆಗಲಿದೆ. ನೀವು ಆಂತರಿಕ ಶಾಂತಿಯನ್ನು ಕಾಣುತ್ತೀರಿ. ಒಟ್ಟಾರೆಯಾಗಿ 2022 ರ ವರ್ಷವು ಧನು ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಆದಾಗ್ಯೂ, ಈ ವರ್ಷ ನಿಮ್ಮ ವೃತ್ತಿಜೀವನವು ಕೆಲವು ಏರಿಳಿತಗಳನ್ನು ಎದುರಿಸಬಹುದು. ಮದುವೆ ಮತ್ತು ಸಂಬಂಧಗಳಲ್ಲಿ ನಿಮ್ಮ ಪ್ರೀತಿಗೆ ಶನಿಯು ಅಡ್ಡಿಯಾಗಲಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಈ ವರ್ಷ ಬಹಳ ಉತ್ತಮವಾಗಿರಲಿದೆ. ಈ ವರ್ಷ ವೃತ್ತಿಜೀವನದಲ್ಲಿ ನೀವು ತುಂಬಾ ಯಶಸ್ವಿಯಾಗುತ್ತೀರಿ. ಧನು ರಾಶಿ ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಹಿರಿಯರ ಸಹಾಯದಿಂದ ವೃತ್ತಿಯಲ್ಲಿ ಎತ್ತರದ ಸ್ಥಾನಕ್ಕೆ ತಲುಪುತ್ತಾರೆ. ಒಟ್ಟಾರೆ ಆರ್ಥಿಕ ಸ್ಥಿತಿಯು ಈ ವರ್ಷ ಹೆಚ್ಚು ವರ್ಧಿಸುತ್ತದೆ. ವರ್ಷವಿಡೀ ಉತ್ತಮ ಆರೋಗ್ಯ ಮತ್ತು ಉಲ್ಲಾಸದಿಂದ ಇರಲಿದೆ. ಆದರೆ 12 ನೇ ಮನೆಯಲ್ಲಿ ಇರುವ ಕೇತು ಕೆಲವು ಸಣ್ಣ ಆರೋಗ್ಯ ಅಸ್ವಸ್ಥತೆಗಳನ್ನು ತರಬಹುದು.

 ಧನು ರಾಶಿ ಪ್ರೇಮ ಜೀವನ ಭವಿಷ್ಯ 2022

ಧನು ರಾಶಿ ಪ್ರೇಮ ಜೀವನ ಭವಿಷ್ಯ 2022

ಧನು ರಾಶಿ ಪ್ರೇಮ ಜೀವನ ಭವಿಷ್ಯ 2022 ರ ಪ್ರಕಾರ ನಿಮ್ಮ ಪ್ರೇಮ ಜೀವನದಲ್ಲಿ ಗಮನಾರ್ಹ ಬದಲಾವಣೆಗಳು ಇರುವುದಿಲ್ಲ. ನಿಮ್ಮ ಅರ್ಧದಷ್ಟು ಸಮಯವನ್ನು ನೀವು ಪ್ರೇಮ ಜೀವನದಲ್ಲೇ ಕಳೆಯುತ್ತೀರಿ. ನಿಮ್ಮ ಪ್ರೇಮ ಜೀವನ ಉತ್ತಮವಾಗಿರುತ್ತದೆ. ಈ ವರ್ಷ ನಿಮಗೆ ಶಕ್ತಿ, ಪ್ರಣಯ, ಕುಟುಂಬ ಮತ್ತು ಅಧಿಕಾರ ಲಭ್ಯವಾಗಲಿದೆ. 2022 ರಲ್ಲಿ ಸಾಮಾಜಿಕ ಸ್ಥಾನಮಾನವು ದೊರಕಲಿದೆ. ಈ ವರ್ಷ ಏನನ್ನಾದರೂ ಮಾಡುವ ಮೊದಲು ನೀವು ಪರಿಸ್ಥಿತಿಗೆ ಅನುಗುಣವಾಗಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಫೆಬ್ರವರಿ ನೀವು ಮದುವೆಯಾಗಲು ಅತ್ಯಂತ ಅನುಕೂಲಕರ ತಿಂಗಳು.

 ಧನು ರಾಶಿ ವೃತ್ತಿ ಭವಿಷ್ಯ 2022

ಧನು ರಾಶಿ ವೃತ್ತಿ ಭವಿಷ್ಯ 2022

ಧನು ರಾಶಿ ವೃತ್ತಿ ಭವಿಷ್ಯ 2022 ರ ಪ್ರಕಾರ ಈ ವರ್ಷ ಧನು ರಾಶಿಯವರಿಗೆ ಸರಾಸರಿ ವರ್ಷವಾಗಿರುತ್ತದೆ. ವ್ಯಾಪಾರವನ್ನು ಪ್ರಾರಂಭಿಸಲು ಬಯಸುವ ಧನು ರಾಶಿಯವರು ವರ್ಷದ ಆರಂಭದಲ್ಲಿ ಯಾವುದೇ ವ್ಯಾಪಾರ ಆರಂಭ ಮಾಡಬೇಡಿ. ಏಕೆಂದರೆ ನೀವು ಯಾವುದೇ ಹೊಸ ಅಥವಾ ಭಾರೀ ಭಾರೀ ಹೂಡಿಕೆಗಳನ್ನು ಮಾಡುವುರಿಂದ ನಷ್ಟ ಉಂಟಾಗಬಹುದು. ಸ್ಟಾಕ್‌ನಂತಹ ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಡಿ. ನಿಮ್ಮ ವ್ಯವಹಾರದಲ್ಲಿ ಹಿರಿಯರಿಂದ ನೀವು ಸ್ವಲ್ಪ ಸಹಾಯವನ್ನು ಪಡೆಯಬೇಕು. ಎಪ್ರಿಲ್ ನಂತರ ಪರಿಸ್ಥಿತಿ ಸುಧಾರಿಸಿಕೊಳ್ಳುತ್ತದೆ. ಆ ಸಮಯದಲ್ಲಿ ನೀವು ಉದ್ಯಮವನ್ನು ಆರಂಭ ಮಾಡಬಹುದು. ವಿಶೇಷವಾಗಿ ನೀವು ಪಾಲುದಾರಿಕೆ ವ್ಯವಹಾರವನ್ನು ಯೋಜಿಸುತ್ತಿದ್ದರೆ, ಅದು ನಿಮ್ಮ ನಿರೀಕ್ಷೆಯಂತೆ ಲಾಭ ನೀಡಲಿದೆ.

 ಧನು ರಾಶಿ ಶಿಕ್ಷಣ ಭವಿಷ್ಯ 2022

ಧನು ರಾಶಿ ಶಿಕ್ಷಣ ಭವಿಷ್ಯ 2022

ಧನು ರಾಶಿ ಶಿಕ್ಷಣ ಭವಿಷ್ಯ 2022 ಪ್ರಕಾರ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಈ ವರ್ಷ ಉತ್ತಮವಾಗಿರುತ್ತದೆ. ಈ ವರ್ಷ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಯಶಸ್ವಿಯಾಗುತ್ತಾರೆ. ವಿದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳಿಗೆ ಈ ವರ್ಷ ಅದೃಷ್ಟವನ್ನು ನೀಡುತ್ತದೆ. ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಲು ಯೋಚಿಸುತ್ತಿದ್ದರೆ, ಅದನ್ನು ಮಾಡಿ. ಏಕೆಂದರೆ ನೀವು ಸ್ಪರ್ಧೆಯಲ್ಲಿ ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತೀರಿ.

 ಧನು ರಾಶಿ ಹಣಕಾಸು ಭವಿಷ್ಯ 2022

ಧನು ರಾಶಿ ಹಣಕಾಸು ಭವಿಷ್ಯ 2022

ಧನು ರಾಶಿ ಹಣಕಾಸು ಭವಿಷ್ಯ 2022 ರ ಪ್ರಕಾರ ಧನು ರಾಶಿಯವರಿಗೆ ಈ ವರ್ಷವು ಮಿಶ್ರ ಫಲಿತಾಂಶಗಳೊಂದಿಗೆ ಪ್ರಾರಂಭವಾಗುತ್ತದೆ. ಎರಡನೇ ಮನೆಯಲ್ಲಿ ಶನಿಯು ಇರುವುದರಿಂದ ನೀವು ಸಂಪತ್ತನ್ನು ಗಳಿಸುವುದನ್ನು ಮುಂದುವರಿಯುತ್ತದೆ. ನೀವು ಉಳಿಸಲು ಮತ್ತು ಹೂಡಿಕೆ ಮಾಡುವುದನ್ನು ಮುಂದುವರಿಸುವುದರಿಂದ ನಿಮ್ಮ ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ. ನೀವು ರತ್ನಗಳು ಮತ್ತು ಆಭರಣಗಳಲ್ಲಿ ಹೂಡಿಕೆ ಮಾಡಬಹುದು. ನೀವು ಪೂರ್ವಜರ ಆಸ್ತಿಯನ್ನು ಗಳಿಸುವ ಸೂಚನೆ ಇದೆ. ನೀವು ಕುಟುಂಬದ ಕಾರ್ಯಗಳಿಗಾಗಿ ಹಣವನ್ನು ಖರ್ಚು ಮಾಡಬಹುದು. 2022 ರಲ್ಲಿ ಹೂಡಿಕೆ ಮಾಡುವಾಗ ನೀವು ಜಾಗರೂಕರಾಗಿರಬೇಕು ಮತ್ತು ಈ ವರ್ಷ ಹಣದ ವಿಚಾರದಲ್ಲಿ ಯಾವುದೇ ಅಪಾಯಕಾರಿ ಸಾಹಸವನ್ನು ಮಾಡಬೇಡಿ.

 ಧನು ರಾಶಿಯ ಕುಟುಂಬ ಭವಿಷ್ಯ 2022

ಧನು ರಾಶಿಯ ಕುಟುಂಬ ಭವಿಷ್ಯ 2022

ಧನು ರಾಶಿಯ ಕುಟುಂಬ ಭವಿಷ್ಯ 2022 ರ ಪ್ರಕಾರ ಕುಟುಂಬ ಜೀವನ ಉತ್ತರಮವಾಗಿರಲಿದೆ. ಕುಟುಂಬ ವಿಸ್ತಾರವಾಗಬಹುದು. 2022 ರ ವರ್ಷವು ಹೊಸ ಮತ್ತು ಅಸಾಮಾನ್ಯ ಅನುಭವಗಳು ನಿಮಗೆ ಮೊದಲು ತಿಳಿದಿರದ ಅನೇಕ ವಿಷಯಗಳನ್ನು ನಿಮಗೆ ಕಲಿಸುತ್ತದೆ. ಮಕ್ಕಳ ಮೂಲಕ ಆಶ್ಚರ್ಯದ ಸುದ್ದಿ ಬರಬಹುದು. ಹೊಸ ಜೀವನವು ನಿಮ್ಮದಾಗಲಿದೆ. ಇದು ಕುಟುಂಬಕ್ಕೆ ಉತ್ತಮ ಸಮಯ, ಮತ್ತು ನೀವು ಉತ್ತೇಜಕ ಮತ್ತು ಸ್ಪೂರ್ತಿದಾಯಕ ಅನುಭವಗಳನ್ನು ಎದುರಿಸುವ ಸಾಧ್ಯತೆಯಿದೆ.

 ಧನು ರಾಶಿಯ ಮಕ್ಕಳ ಭವಿಷ್ಯ 2022

ಧನು ರಾಶಿಯ ಮಕ್ಕಳ ಭವಿಷ್ಯ 2022

ಧನು ರಾಶಿಯ ಮಕ್ಕಳ ಭವಿಷ್ಯ 2022 ರ ಪ್ರಕಾರ ಈ ವರ್ಷವು ಮಕ್ಕಳ ವಿಚಾರದಲ್ಲಿ ಮಿಶ್ರ ಫಲಿತಾಂಶಗಳನ್ನು ತರುತ್ತದೆ. ವರ್ಷದ ಆರಂಭದಲ್ಲಿ ನಿಮ್ಮ ಮಕ್ಕಳು ತಮ್ಮ ಕಠಿಣ ಪರಿಶ್ರಮದಿಂದ ಪ್ರಗತಿಯನ್ನು ಸಾಧಿಸುತ್ತಾರೆ. ಈ ವರ್ಷವು ನಿಮ್ಮ ಎರಡನೆಯ ಮಕ್ಕಳಿಗೆ ಅನುಕೂಲಕರವಾಗಿರುತ್ತದೆ. ಮಗು ಮತ್ತು ಅಪೇಕ್ಷಿತ ಉನ್ನತ ಶಿಕ್ಷಣಕ್ಕಾಗಿ ಸರಿಯಾದ ಪ್ರಯತ್ನವನ್ನು ಮಾಡಿದರೆ ಅವನು / ಅವಳು ಸುಪ್ರಸಿದ್ಧ ಸಂಸ್ಥೆಯಲ್ಲಿ ಪ್ರವೇಶ ಪಡೆಯಬಹುದು. ಏಪ್ರಿಲ್ ಸಮಯದಲ್ಲಿ ನಿಮ್ಮ ಮಕ್ಕಳ ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಜಾಗರೂಕರಾಗಿರಬೇಕು. ಆ ಅವಧಿಯಲ್ಲಿ ಗರ್ಭಿಣಿಯರು ಹೆಚ್ಚು ಜಾಗರೂಕರಾಗಿರಬೇಕು.

 ಧನು ರಾಶಿ ಮದುವೆ ಭವಿಷ್ಯ 2022

ಧನು ರಾಶಿ ಮದುವೆ ಭವಿಷ್ಯ 2022

ಧನು ರಾಶಿ ಮದುವೆ ಭವಿಷ್ಯ 2022 ರ ಪ್ರಕಾರ 2022 ರ ಆರಂಭವು ಕುಟುಂಬಕ್ಕೆ ಮಂಗಳಕರವಾಗಿರುತ್ತದೆ. ಎರಡನೇ ಮನೆಯಲ್ಲಿ ಶನಿಯ ಸಂಚಾರದ ಕಾರಣ ನಿಮ್ಮ ಕುಟುಂಬಕ್ಕೆ ಸದಸ್ಯರ ಸೇರ್ಪಡೆ ಇರುತ್ತದೆ. ಇದು ಹೊಸ ಮದುವೆ ಅಥವಾ ಮಗುವಿನ ಜನನದ ಕಾರಣದಿಂದಾಗಿ ಸಂಭವಿಸಬಹುದು. ಏಪ್ರಿಲ್ ನಂತರ, ಎರಡನೇ ಮಗುವಿಗೆ ಅನುಕೂಲಕರ ಅವಧಿಯ ಸೂಚನೆಗಳಿವೆ. ಗುರುವು ನಿಮ್ಮಲ್ಲಿ ವಿಶ್ವಾಸವನ್ನು ತರುವುದರಿಂದ ಮತ್ತು ನೀವು ಸಂಬಂಧವನ್ನು ನಿಭಾಯಿಸುವುದರಿಂದ ನಿಮ್ಮ ದಾಂಪತ್ಯದಲ್ಲಿ ಶಾಂತಿಯು ನೆಲೆಸಲಿದೆ. ಸಂಬಂಧವನ್ನು ಉಳಿಸಿಕೊಳ್ಳಲು ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಿರಿ

 ಧನು ರಾಶಿಯ ವ್ಯಾಪಾರ ಭವಿಷ್ಯ 2022

ಧನು ರಾಶಿಯ ವ್ಯಾಪಾರ ಭವಿಷ್ಯ 2022

ಧನು ರಾಶಿಯ ವ್ಯಾಪಾರ ಭವಿಷ್ಯ 2022 ರ ‌ಪ್ರಕಾರ ಈ ವರ್ಷ ಶುಕ್ರ ಗ್ರಹವು ಉತ್ತಮ ಸ್ಥಾನದಲ್ಲಿದೆ. ಈ ನವೆಂಬರ್ ನಿಂದ ಮಾರ್ಚ್ ತಿಂಗಳಲ್ಲಿ, ನಿಮ್ಮ ವ್ಯವಹಾರದಲ್ಲಿ ಹೆಚ್ಚಿನ ಆರ್ಥಿಕ ಲಾಭವನ್ನು ನೀವು ಹೊಂದಿರುತ್ತೀರಿ. ಆದ್ದರಿಂದ, ಹಣಕಾಸಿನ ವ್ಯವಹಾರದಲ್ಲಿ ನೀವು ಸ್ವಲ್ಪ ಜಾಗರೂಕರಾಗಿರಬೇಕು. ನೀವು ಯಾವುದೇ ಬ್ರೋಕರ್ ಅಥವಾ ಕಮಿಷನ್ ಏಜೆಂಟರನ್ನು ಕುರುಡಾಗಿ ನಂಬಬಾರದು. ವರ್ಷದ ಆರಂಭವು ನಿಮಗೆ ಉತ್ತಮವಾಗಿರುತ್ತದೆ. ವ್ಯವಹಾರದಲ್ಲಿ ನಿಮ್ಮ ಪಾಲುದಾರರು ನಿಮಗೆ ಸಂಪೂರ್ಣ ಪ್ರಾಮುಖ್ಯತೆಯನ್ನು ನೀಡುತ್ತಾರೆ. ನಿಮ್ಮ ವ್ಯವಹಾರದ ವಿಸ್ತರಣೆಯಲ್ಲಿ ನಿಮ್ಮ ಪಾಲುದಾರರ ಸಹಾಯವನ್ನು ನೀವು ಪಡೆಯುತ್ತೀರಿ. ನಿಮ್ಮ ವ್ಯವಹಾರವನ್ನು ವೇಗಗೊಳಿಸಲು ವರ್ಷದ ಮಧ್ಯಭಾಗವು ಉತ್ತಮವಾಗಿದೆ. ಕೆಲವು ಸಮಸ್ಯೆಗಳಿರಬಹುದು, ಆದರೆ ನೀವು ಅವುಗಳನ್ನು ಪರಿಹರಿಸುವಲ್ಲಿ ಯಶಸ್ವಿಯಾಗುತ್ತೀರಿ. ಯಾವುದೇ ಸಮಸ್ಯೆ ಇದ್ದರೂ ಪರಿಶೀಲನೆ ಮಾಡಿ, ಇಲ್ಲವಾದರೆ ನೀವು ನಷ್ಟವನ್ನು ಎದುರಿಸಬಹುದು. ಯಂತ್ರೋಪಕರಣಗಳ ಸಿಬ್ಬಂದಿ ಉದ್ಯೋಗಿಗಳಿಗೆ ಸಂಬಂಧಿಸಿದ ಸಮಸ್ಯೆಗಳು ಏಪ್ರಿಲ್ ವೇಳೆಗೆ ಪರಿಹಾರವಾಗಲಿದೆ. ವ್ಯಾಪಾರ ಪ್ರವಾಸಗಳು ಸಹ ಹೆಚ್ಚಾಗುತ್ತವೆ.

 ಧನು ರಾಶಿ ಆಸ್ತಿ ಮತ್ತು ವಾಹನ ಭವಿಷ್ಯ 2022

ಧನು ರಾಶಿ ಆಸ್ತಿ ಮತ್ತು ವಾಹನ ಭವಿಷ್ಯ 2022

ಧನು ರಾಶಿ ಆಸ್ತಿ ಮತ್ತು ವಾಹನ ಭವಿಷ್ಯ 2022 ರ ಪ್ರಕಾರ ಈ ರಾಶಿಯವರ ಆಸ್ತಿಯನ್ನು ಸಂಪಾದಿಸುವ ಉತ್ತಮ ಅವಕಾಶವನ್ನು ಹೊಂದಿದ್ದೀರಿ ನೀವು ನಿಮ್ಮ ತಂದೆಯ ಮೂಲಕ ಪೂರ್ವಜರ ಆಸ್ತಿಯನ್ನು ಪಡೆಯುವ ಅವಕಾಶವನ್ನು ಹೊಂದಿದ್ದೀರಿ. ಸ್ವತ್ತುಗಳನ್ನು ಖರೀದಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಮನೆ ಅಥವಾ ವಾಹನವನ್ನು ಖರೀದಿಸುವ ನಿಮ್ಮ ಕನಸು ಯಶಸ್ವಿಯಾಗುತ್ತದೆ. ಈ ವರ್ಷ ನೀವು ಮಾಡಿದ ಹೂಡಿಕೆಯು ಉತ್ತಮ ಲಾಭಾಂಶವನ್ನು ಪಡೆಯುತ್ತದೆ. ನೀವು ಹಠಾತ್ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಯಾವುದೇ ಒಪ್ಪಂದವನ್ನು ಮಾಡಿಕೊಳ್ಳುವ ಮುನ್ನ ಪರಿಶೀಲನೆ ಮಾಡಿಕೊಳ್ಳಿ. ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ನಿಮಗೆ ಸಂಪತ್ತನ್ನು ಸಂಗ್ರಹಿಸಲು ಮತ್ತು ನಿಮ್ಮ ಆಸ್ತಿಯನ್ನು ಹೆಚ್ಚಿಸಲು ಬಹಳ ಅನುಕೂಲಕರ ಅವಧಿಯಾಗಿದೆ.

 ಧನು ರಾಶಿ ಸಂಪತ್ತು ಮತ್ತು ಲಾಭದ ಭವಿಷ್ಯ 2022

ಧನು ರಾಶಿ ಸಂಪತ್ತು ಮತ್ತು ಲಾಭದ ಭವಿಷ್ಯ 2022

ಧನು ರಾಶಿ ಸಂಪತ್ತು ಮತ್ತು ಲಾಭದ ಭವಿಷ್ಯ 2022 ರ ಪ್ರಕಾರ ವರ್ಷದ ಆರಂಭವು ಆರ್ಥಿಕ ದೃಷ್ಟಿಕೋನದಿಂದ ಮಧ್ಯಮವಾಗಿ ಶುಭವಾಗಿರುತ್ತದೆ. ಸಂಪತ್ತಿನ ವಿಚಾರದಲ್ಲಿ ಹೇಳುವುದಾದರೆ ನಿಮ್ಮ ಕೈಯಲ್ಲಿ ಉತ್ತಮ ಆದಾಯದ ಹರಿವು ಇರಬಹುದು. ಈ ಆದಾಯದಿಂದ ನೀವು ಹಳೆಯ ಬಾಕಿ ಇರುವ ಸಾಲಗಳನ್ನು ಪಾವತಿ ಮಾಡಬಹುದು. ಗುರು ಮತ್ತು ಶನಿಯ ಸ್ಥಾನವು ಈ ವರ್ಷ ನಿರಂತರ ಸಂಪತ್ತನ್ನು ಗಳಿಸಲು ಅನುವು ಮಾಡಿಕೊಡುತ್ತದೆ. ತಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಬಹುದು ಮತ್ತು ಉತ್ತಮಗೊಳಿಸಬಹುದು. ಪೂರ್ವಜರ ಆಸ್ತಿಯನ್ನು ಪಡೆಯಬಹುದು ಮತ್ತು ಈ ಅವಧಿಯಲ್ಲಿ ಕೆಲವು ರತ್ನಗಳು ಮತ್ತು ಆಭರಣಗಳನ್ನು ಸಹ ಪಡೆಯುವ ಅವಕಾಶವಿದೆ.

 ಧನು ರಾಶಿ ಆರೋಗ್ಯ ಭವಿಷ್ಯ 2022

ಧನು ರಾಶಿ ಆರೋಗ್ಯ ಭವಿಷ್ಯ 2022

ಧನು ರಾಶಿ ಆರೋಗ್ಯ ಭವಿಷ್ಯ 2022 ರ ಪ್ರಕಾರ ಈ ವರ್ಷ ನಿಮ್ಮ ಆರೋಗ್ಯಕ್ಕೆ ಸರಾಸರಿ ವರ್ಷವಾಗಿದೆ. ಈ ವರ್ಷ ನಿಮ್ಮ ಹಿಂದಿನ ಸಾಮಾಜಿಕ ಚಟುವಟಿಕೆಯಿಂದಾಗಿ, ನಿಮ್ಮ ಆಹಾರವನ್ನು ಸಮಯಕ್ಕೆ ಸರಿಯಾಗಿ ಸೇವಿಸಲು ನಿಮಗೆ ಸಾಧ್ಯವಾಗದಿರಬಹುದು. ಇದು ನಿಮ್ಮ ಆರೋಗ್ಯದ ಕ್ಷೀಣತೆಗೆ ಕಾರಣವಾಗಬಹುದು. ನಿಮ್ಮ ದೈನಂದಿನ ದಿನಚರಿ ಮತ್ತು ಆಹಾರಕ್ರಮಕ್ಕೆ ಸಂಬಂಧಿಸಿದಂತೆ ನೀವು ಕ್ರಮಬದ್ಧತೆ ಮತ್ತು ಸಮಯಪಾಲನೆಯನ್ನು ಕಾಪಾಡಿಕೊಳ್ಳಬೇಕು. ಐದನೇ ಮನೆಯಲ್ಲಿ ರಾಹುವು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳನ್ನು ಉಂಟು ಮಾಡಬಹುದಾದ ಕಾರಣ ಈ ವಿಷಯದಲ್ಲಿ ನಿರ್ಲಕ್ಷ್ಯ ಬೇಡ.

 ಧನು ರಾಶಿ ವಾರ್ಷಿಕ ಭವಿಷ್ಯ 2022 ರ ಪ್ರಕಾರ ಅದೃಷ್ಟ ಸಂಖ್ಯೆ

ಧನು ರಾಶಿ ವಾರ್ಷಿಕ ಭವಿಷ್ಯ 2022 ರ ಪ್ರಕಾರ ಅದೃಷ್ಟ ಸಂಖ್ಯೆ

ಧನು ರಾಶಿ ವಾರ್ಷಿಕ ಭವಿಷ್ಯ 2022 ರ ಪ್ರಕಾರ ಅದೃಷ್ಟ ಸಂಖ್ಯೆ ಮೂರು ಮತ್ತು ಒಂಬತ್ತು ಆಗಿದೆ. 3, 12, 21, 30 ಸಂಖ್ಯೆಗಳು ನಿಮ್ಮ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ. ಈ ವರ್ಷ, ಧನು ರಾಶಿಯವರಿಗೆ ಸ್ಫೂರ್ತಿ, ಆಶ್ಚರ್ಯಕರ ಮತ್ತು ಅನಿರೀಕ್ಷಿತ ಸಾಧನೆಗಳನ್ನು ಮಾಡಲು ಸಹಾಯಕವಾಗಿದೆ.

 ಧನು ರಾಶಿ ಭವಿಷ್ಯ 2022: ಜ್ಯೋತಿಷ್ಯ ಪರಿಹಾರಗಳು

ಧನು ರಾಶಿ ಭವಿಷ್ಯ 2022: ಜ್ಯೋತಿಷ್ಯ ಪರಿಹಾರಗಳು

2022 ರಲ್ಲಿ, ವಿವಿಧ ರೀತಿಯ ತೊಂದರೆಗಳನ್ನು ತೊಡೆದುಹಾಕಲು ಮತ್ತು ಉತ್ತಮ ಫಲಿತಾಂಶವನ್ನು ಪಡೆಯಲು ನೀವು ಬಡವರಿಗೆ ಸಹಾಯ ಮಾಡುವುದು ಉತ್ತಮ. ನಿಮ್ಮ ಮನೆಯಿಂದ ದೂರದಲ್ಲಿರುವ ಉದ್ಯಾನವನ ಅಥವಾ ದೇವಸ್ಥಾನದಲ್ಲಿ ಗಿಡವನ್ನು ನೆಟ್ಟು ಅದನ್ನು ಬೆಳೆಸಿ. ಶನಿವಾರದಂದು ಕಪ್ಪು ಎಳ್ಳು, ಕಪ್ಪು ಬಟ್ಟೆ, ಉದ್ದಿನ ಬೇಳೆ, ಸಾಸಿವೆ ಅಥವಾ ಎಳ್ಳಿನ ಎಣ್ಣೆ ಮತ್ತು ಕಬ್ಬಿಣವನ್ನು ದಾನ ಮಾಡಿ. ಪ್ರತಿದಿನ ಪಕ್ಷಿಗಳಿಗೆ ಆಹಾರ ನೀಡಿ, ಸಾಮಾಜಿಕ ಕಾರ್ಯ ಮತ್ತು ದಾನವನ್ನು ಮಾಡಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+