Hanuman's favorite Signs: ಈ ರಾಶಿಯವರೆಂದರೆ ಹನುಮನಿಗೆ ತುಂಬಾ ಇಷ್ಟ: ಇವರು ನೀವೇನಾ?
ಹನುಮ ಜನ್ಮೋತ್ಸವವನ್ನು ಏಪ್ರಿಲ್ 23 ರಂದು ಆಚರಿಸಲಾಗುತ್ತದೆ. ಈ ದಿನ ಶ್ರದ್ಧಾ ಭಕ್ತಿಯಿಂದ ಹನುಮಂತನನ್ನು ಪೂಜಿಸಿದರೆ ಭಕ್ತರಿಗೆ ಹನುಮನ ವಿಶೇಷ ಅನುಗ್ರಹವಿದೆ ಎಂದು ನಂಬಲಾಗಿದೆ. ಅಲ್ಲದೆ ಕೆಲವು ರಾಶಿಯವರು ಹನುಮಂತನ ನೆಚ್ಚಿನ ರಾಶಿಯವರಾಗಿದ್ದಾರೆ.
ಈ ರಾಶಿಚಕ್ರದ ಜನರ ಮೇಲೆ ಹನುಮನ ಆಶೀರ್ವಾದ ಯಾವಾಗಲೂ ಇರುತ್ತದೆ. ಹಾಗಾದರೆ ಬನ್ನಿ ಹನುಮನ ನೆಚ್ಚಿನ ರಾಶಿಚಕ್ರ ಚಿಹ್ನೆಗಳು ಯಾವುವು ಎಂದು ತಿಳಿಯೋಣ ಮತ್ತು ಹನುಮ ಜಯಂತಿಯಂದು ಶನಿಯ ಸಾಡೇಸಾತ್ ಮತ್ತು ಮಂಗಳದೋಷ ನಿವಾರಣೆಗೆ ಯಾವ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಯೋಣ.

ಮೇಷ ರಾಶಿ
ಮೇಷ ಹನುಮನ ನೆಚ್ಚಿನ ರಾಶಿಯಾಗಿದೆ. ಮೇಷ ರಾಶಿಯ ಅಧಿಪತಿ ಮಂಗಳ ಗ್ರಹವಾಗಿದೆ. ಮಂಗಳ ಗ್ರಹ ಹನುಮಾನಿಗೆ ಸಮರ್ಪಿತವಾಗಿದೆ. ಮಂಗಳ ಗ್ರಹ ಹನುಮನೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ. ಹೀಗಾಗಿ ಮೇಷ ರಾಶಿ ಹನುಮನ ನೆಚ್ಚಿನ ರಾಶಿಚಕ್ರ ಚಿಹ್ನೆಗಳಲ್ಲಿ ಒಂದಾಗಿದೆ.
ಹೀಗಾಗಿ ಒಂದು ವೇಳೆ ಮೇಷ ರಾಶಿಯವರ ಜಾತಕದಲ್ಲಿ ಮಂಗಳ ಪ್ರತಿಕೂಲ ಪರಿಣಾಮಗಳನ್ನು ಹೊಂದಿದ್ದರೆ ಅಥವಾ ಉತ್ತಮ ಸ್ಥಾನದಲ್ಲಿ ಇಲ್ಲದೇ ಇದ್ದರೆ ನೀವು ಹನುಮನ ಜಯಂತಿಯಂದು ಮಾತ್ರವಲ್ಲದೆ ಇತರ ದಿನಗಳಲ್ಲಿಯೂ ಹನುಮಂತನನ್ನು ಪೂಜಿಸಬೇಕು.

ಸಿಂಹ ರಾಶಿ
ಸಿಂಹ ರಾಶಿಯವರು ಬಜರಂಗ ಬಲಿಯ ನೆಚ್ಚಿನ ರಾಶಿಯವರಾಗಿದ್ದಾರೆ. ಸಿಂಹ ರಾಶಿಯ ಅಧಿಪತಿ ಸೂರ್ಯ ದೇವರು. ಸೂರ್ಯದೇವನನ್ನು ಎಲ್ಲಾ ಗ್ರಹಗಳ ರಾಜ ಎಂದು ಪರಿಗಣಿಸಲಾಗಿದೆ. ಹನುಮಂತನ ಗುರು ಕೂಡ ಸೂರ್ಯ ದೇವನೇ.
ಬಜರಂಗಬಲಿಯು ಸೂರ್ಯದೇವನಿಂದ ಶಿಕ್ಷಣವನ್ನು ಪಡೆದಿದ್ದಾನೆ ಮತ್ತು ಅನೇಕ ಸಾಧನೆಗಳನ್ನು ಸಾಧಿಸಿದ್ದಾನೆ. ಆದ್ದರಿಂದ ಹನುಮನ ಆಶೀರ್ವಾದ ಯಾವಾಗಲೂ ಅವನ ಗುರುವಿನ ರಾಶಿಚಕ್ರ ಚಿಹ್ನೆಯಾದ ಸಿಂಹ ರಾಶಿಯ ಮೇಲೆ ಇರುತ್ತದೆ. ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಲು ನೀವು ಸೂರ್ಯ ದೇವರನ್ನು ನಿತ್ಯ ಪೂಜಿಸಬೇಕು.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಅಧಿಪತಿಯೂ ಮಂಗಳ ಗ್ರಹವಾಗಿದೆ. ಈ ಕಾರಣಕ್ಕಾಗಿ ವೃಶ್ಚಿಕ ರಾಶಿಯ ಜನರ ಮೇಲೆ ಹನುಮಂತನ ಆಶೀರ್ವಾದ ಯಾವಾಗಲೂ ಇರುತ್ತದೆ. ನೀವು ಹನುಮಂತನ ಆಶೀರ್ವಾದವನ್ನು ಪಡೆಯಲು ಬಯಸಿದರೆ, ಹನುಮ ಜಯಂತಿಯಂದು ಬಜರಂಗಬಲಿಗೆ ಲಡ್ಡುಗಳನ್ನು ಅರ್ಪಿಸಿ. ಇದು ಶಕ್ತಿ, ಬುದ್ಧಿವಂತಿಕೆ ಮತ್ತು ಖ್ಯಾತಿಯನ್ನು ಹೆಚ್ಚಿಸುತ್ತದೆ. ವೃಶ್ಚಿಕ ರಾಶಿಯ ಜನರು ಮಂಗಳವಾರ ಹನುಮಂತನನ್ನು ಪೂಜಿಸಬೇಕು.

ಕುಂಭ ರಾಶಿ
ಕುಂಭ ರಾಶಿಯವರು ಬಜರಂಗ ಬಲಿಯ ಅಚ್ಚುಮೆಚ್ಚಿನ ರಾಶಿಯವರಾಗಿದ್ದಾರೆ. ಕುಂಭ ರಾಶಿಯ ಅಧಿಪತಿ ಶನಿದೇವನಾಗಿದ್ದಾನೆ. ಪೌರಾಣಿಕ ಕಥೆಯ ಪ್ರಕಾರ ಶನಿದೇವನು, ರಾವಣನ ಲಂಕೆಯಲ್ಲಿ ದಹನವಾದಾಗ ಆ ನೋವಿನಿಂದ ಮುಕ್ತಿ ಹೊಂದಲು ಹನುಮಂತನು ಶನಿದೇವನ ದೇಹಕ್ಕೆ ಸಾಸಿವೆ ಎಣ್ಣೆಯನ್ನು ಲೇಪಿಸಿದನೆಂದು ಹೇಳಲಾಗುತ್ತದೆ. ಕುಂಭ ರಾಶಿಯ ಜನರು ಹನುಮಂತನಿಂದ ಆಶೀರ್ವಾದ ಪಡೆದಿದ್ದಾರೆ ಎಂದು ನಂಬಲಾಗಿದೆ.
ಅಂದಿನಿಂದ ಶನಿದೇವನಿಗೆ ಎಣ್ಣೆಯನ್ನು ಅರ್ಪಿಸಲಾಗುತ್ತದೆ. ಅದೇ ಸಮಯದಲ್ಲಿ ಹನುಮಂತನ ಆರಾಧನೆ ಮಾಡುವುದರಿಂದ ಜನರು ಶನಿಯ ಪ್ರಭಾವದಿಂದ ಮುಕ್ತರಾಗುತ್ತಾರೆ ಎಂದು ಶನಿದೇವರು ಹೇಳಿದ್ದಾನೆ ಎನ್ನಲಾಗುತ್ತದೆ. ಅಂದಿನಿಂದ ಹನುಮ ಮತ್ತು ಶನಿದೇವ ಸ್ನೇಹಿತರೆಂದು ಪರಿಗಣಿಸಲಾಗಿದೆ.
ಮಿಥುನ ರಾಶಿ
ಮಿಥುನ ರಾಶಿಯವರು ಹನುಮ ಜಯಂತಿಯಂದು ಹನುಮಂತನ ವಿಶೇಷ ಆಶೀರ್ವಾದ ಪಡೆಯುತ್ತಾರೆ. ಅವರ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ನೀವು ಸಾಲದಿಂದ ಮುಕ್ತರಾಗುವಿರಿ. ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ದೊರೆಯಲಿದೆ.
ಹೂಡಿಕೆ ಮಾಡಿದರೆ ಉತ್ತಮ ಲಾಭ ಸಿಗುತ್ತದೆ. ವ್ಯಾಪಾರದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ಪ್ರೇಮಿಗಳಿಗೆ ಒಳ್ಳೆಯ ಸಮಯವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಪ್ರಗತಿ ಕಾಣಲಿದ್ದಾರೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಹನುಮಂತನ ಕೃಪೆಯಿಂದ ನೀವು ದೀರ್ಘಕಾಲದ ಅನಾರೋಗ್ಯದಿಂದ ಮುಕ್ತರಾಗುತ್ತೀರಿ.
ಹನುಮಾನ್ ಜಯಂತಿಯಂದು ಬಜರಂಗಬಲಿಯನ್ನು ಮೆಚ್ಚಿಸುವ ಮಾರ್ಗಗಳು:
*ಹನುಮಾನ್ ಜಯಂತಿಯಂದು ಬಜರಂಗಬಲಿಗೆ ಲಡ್ಡು ಪ್ರಸಾದವನ್ನು ಅರ್ಪಿಸಿ. ಇದು ಒಂಬತ್ತು ಗ್ರಹಗಳನ್ನು ಶಾಂತಗೊಳಿಸುತ್ತದೆ. ಜೀವನದ ಎಲ್ಲಾ ತೊಂದರೆಗಳಿಂದ ನಿಮಗೆ ಮುಕ್ತಿಯನ್ನು ನೀಡುತ್ತದೆ.

*ಹನುಮಾನ್ ಜಯಂತಿಯಂದು ನೀವು ಹನುಮಾನ್ ದೇವಸ್ಥಾನದಲ್ಲಿ ಸಿಹಿ ವೀಳ್ಯದೆಲೆ, ಸಿಂಧೂರ ಮತ್ತು ಕೆಂಪು ಬಣ್ಣದ ಬಟ್ಟೆಯನ್ನು ಅರ್ಪಿಸಬೇಕು.
*ಶನಿದೇವನ ಸಾಡೇಸಾತ್ ನಿಮ್ಮ ಮೇಲೆ ನಡೆಯುತ್ತಿದ್ದರೆ, ಹನುಮ ಜಯಂತಿಯಂದು ಸಾಸಿವೆ ಎಣ್ಣೆಯ ದೀಪದಲ್ಲಿ ಕಪ್ಪು ಎಳ್ಳನ್ನು ಹಾಕಿ ಹನುಮಂತನಿಗೆ ಆರತಿಯನ್ನು ಮಾಡಿ, ಇದು ಜಾತಕದಲ್ಲಿ ಶನಿಯ ನೆರಳಿನಿಂದ ಮುಕ್ತಿಯನ್ನು ನೀಡುತ್ತದೆ.
*ಹನುಮ ಜಯಂತಿಯಂದು ಮಾತ್ರವಲ್ಲದೆ ಪ್ರತಿ ಮಂಗಳವಾರದಂದು ಸ್ನಾನದ ನಂತರ ಕೆಂಪು ಬಟ್ಟೆಗಳನ್ನು ಧರಿಸಿ ಮತ್ತು ಸಂಪ್ರದಾಯದಂತೆ ಹನುಮಂತನಿಗೆ ಪೂಜಿಸಿ ಮತ್ತು ಸಿಂಧೂರವನ್ನು ಅರ್ಪಿಸಿ.












Click it and Unblock the Notifications