Get Updates
Get notified of breaking news, exclusive insights, and must-see stories!

May Horoscope: ವೃಶ್ಚಿಕ, ಮಕರ ಸೇರಿದಂತೆ ಮೇ ತಿಂಗಳಲ್ಲಿ ಈ ರಾಶಿಗಳಿಗೆ ಅದೃಷ್ಟವೋ..ಅದೃಷ್ಟ

ಕ್ರೋಧಿ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಚೈತ್ರ/ವೈಶಾಖ ಮಾಸದ ಮಾಸ ಭವಿಷ್ಯ.

ಮೇ-2024 ರ ದ್ವಾದಶರಾಶಿಗಳ ಗೋಚಾರ ಫಲ

ಮಾಸ ವಿಶೇಷ

ಮೇ 1. ಗುರು ಮೇಷದಿಂದ ವೃಷಭರಾಶಿಗೆ ಪ್ರವೇಶ

ಮೇ1: ಕಾರ್ಮಿಕರ ದಿನಾಚರಣೆ.

ಮೇ 10: ಮೇಷರಾಶಿಗೆ ಬುಧನ ಪ್ರವೇಶ.

ಮೇ 14: ಸೂರ್ಯ ವೃಷಭರಾಶಿಗೆ ಪ್ರವೇಶ

ಮೇ 19: ವೃಷಭ ರಾಶಿಗೆ ಶೂಕ್ರ ಪ್ರವೇಶ

ಮೇ 31: ವೃಷಭರಾಶಿಗೆ ಬುಧನ ಪ್ರವೇಶ

ಇದೇ ಮೇ 1 2024 ರಂದು ಗುರು ಗ್ರಹ ಇದುವರೆಗೂ ಇದ್ದ ಮೇಷರಾಶಿಯನ್ನು ಬಿಟ್ಟು ವೃಷಭರಾಶಿಗೆ ಪ್ರವೇಶ ಮಾಡುತ್ತಾನೆ. ಗುರುಗ್ರಹದ ಬದಲಾವಣೆ ಗೋಚಾರದಲ್ಲಿ ಮಹತ್ವ ಎನಿಸಿದೆ. ಗುರು 2024 ಮೇ 1 ರಿಂದ 2025 ಮೇ 14 ರ ವರೆಗೂ ವೃಷಭ ರಾಶಿಯಲ್ಲಿ ಇರುತ್ತಾನೆ. ಇದರಿಂದ ಮೇಷ, ಕಟಕ, ಕನ್ಯಾ, ವೃಶ್ಚಿಕ, ಮಕರ ಈ ರಾಶಿಯವರಿಗೆ ಬಹಳ ಶುಭಫಲಗಳು ಸಿಗುತ್ತದೆ. ವೃಷಭ, ಮಿಥುನ, ತುಲಾ, ಧನಸ್ಸು ರಾಶಿಯವರಿಗೆ ಮಧ್ಯಮಫಲ. ಸಿಂಹ, ಕುಂಭ,ಮೀನ ರಾಶಿಯವರಿಗೆ ಕೊಂಚ ಕಷ್ಟಗಳು ಒತ್ತಡಗಳು ಇರುತ್ತದೆ.

Monthly Horoscope For May 2024 Masika Rashi Bhavishya For 12 Zodiac Signs In Kannada

ಮೇಷ ರಾಶಿಯ ಮಾಸ ಭವಿಷ್ಯ

ನಿಮಗೆ ಈಗ ಎರಡು ತಿಂಗಳಿಂದ ಸೂಚನೆಯನ್ನು ಕೊಡುತ್ತಲೇ ಬಂದಿದ್ದೇವೆ. ಗುರು ಬದಲಾವಣೆಯ ನಂತರ ನಿಮಗೆ ಬಹಳ ಶುಭಫಲಗಳು ಇವೆ ಎಂದು ಈಗಾಗಲೇ ತಿಳಿಸಿದ್ದೇವೆ. ಈಗ ಗುರು ಮೇ 1 ರಿಂದಲೇ ಬದಲಾವಣೆ ಆಗುತ್ತಾನೆ. ನಿಮಗೆ ಮೇ 1 ರಿಂದ ಗುರುಬಲ ಶುರುವಾಗುತ್ತದೆ. ಒಂದು ವರ್ಷ ನಿಮಗೆ ಅತ್ಯಂತ ಶೂಭಫಲಗಳು ದೊರೆಯುತ್ತದೆ. ಶನಿ ಕೂಡ ಲಾಭಸ್ಥಾನವಾದ 11 ನೇ ಮನೆಯಲ್ಲಿ ಇರುವುದರಿಂದ ನಿಮಗೆ ಡಬಲ್ ಧಮಾಕ. ಶನಿಯೂ ನಿಮಗೆ ಯಶಸ್ಸನ್ನೂ ಧನವನ್ನೂ ಪರಾಕ್ರಮವನ್ನೂ ಕೊಡುತ್ತಾನೆ. ಗುರು ಸಹ ನಿಮಗೆ ಮಂಗಳಕರವಾದ ಸಂಗತಿಗಳನ್ನು ಜೀವನಕ್ಕೆ ಭದ್ರತೆಯನ್ನೂ ಕೊಡುತ್ತಾನೆ.

ಅವಿವಾಹಿತರಿಗೆ ಈಗ ಖಂಡಿತಾ ವಿವಾಹ ಪ್ರಾಪ್ತಿ ಇದೆ. ಹೊಸ ನೌಕರಿಯ ಬೇಟೆಯಲ್ಲಿ ಇರುವವರಿಗೆ ಈಗ ಶುಭಸುದ್ದಿ ಇದೆ. ವಿದೇಶಪ್ರಯಾಣಕ್ಕೆ ಹೋಗಲು ಇಚ್ಛಿಸುವವರಿಗೆ ಈಗ ವೀಸಾ ಸುಲಭವಾಗಿ ದೊರೆಯುತ್ತದೆ. ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತದೆ. ಸುಗ್ರಾಸ ಭೋಜನ , ಸಂತೋಷ ಆಮೋದ-ಪ್ರಮೋದಗಳು ಇವೆ. ನಿಮ್ಮಮನಸ್ಸಿಗೆ ಸಂತೋಷವಾಗುವಂಥ ಸುಮಾರು ಸಂಗತಿಗಳು ಈಗ ನಡೆಯುತ್ತದೆ. ಆಸ್ತಿ ಕೊಳ್ಳುವ ಯೋಗ ಇದೆ. ನೀವು ಯಾವುದಾದರೂ ಹೊಸ ಯೋಜನೆಗಳಲ್ಲಿ ತೊಡಗಿಸಿಕೊಳ್ಳಬಹುದು. ಜೀವನಕ್ಕೆ ಭದ್ರತೆ ಮನಸ್ಸಿಗೆ ಸಂತೋಷ ಹಾಗೂ ಧನಾದಾಯ ಎಲ್ಲವೂ ಇದೆ.

Monthly Horoscope For May 2024 Masika Rashi Bhavishya For 12 Zodiac Signs In Kannada

ವೃಷಭ ರಾಶಿಯ ಮಾಸ ಭವಿಷ್ಯ

ಈಗ ನಿಮಗೆ ಗುರು ನಿಮ್ಮ ರಾಶೀಗೇ ಪ್ರವೇಶಿಸುತ್ತಿದ್ದಾನೆ. ಇದು ನಿಮಗೆ ಕೊಂಚ ಮಾನಸಿಕ ಒತ್ತಡವನ್ನು ಹಣದ ಖರ್ಚನ್ನೂ ತೋರಿಸುತ್ತದೆ. ಗುರು ನಿಮ್ಮ ರಾಶಯಲ್ಲೇ ಇರುವುದು ಅಷ್ಟೊಂದು ನಿಮಗೆ ಉಪಕಾರ ಆಗದಿದ್ದರೂ ನಿಮಗೆ ಈಗ ರಾಹು ಲಾಭಸ್ಥಾನದಲ್ಲಿ ಇದ್ದಾನೆ. ಹಾಗಾಗಿ ಗುರುಬಲ ಇಲ್ಲದಿದ್ದರೂ ರಾಹುಬಲ ಇದೆ. ಇದು ನಿಮಗೆ ಪರಾಕ್ರಮವನ್ನೂ ಹಣಬಲವನ್ನೂ ಕೊಡುತ್ತದೆ. ಆದರೆ ಯಾವುದಾದರೂ ಯೋಜನೆಗಳು ಅಥವಾ ಕೆಲಸಗಳು ನೀವು ಅಂದುಕೊಂಡದ್ದು ಈಗ ಶೀಘ್ರ ನಡೆಯದೆ ನಿಧಾನವಾಗುತ್ತದೆ. ಅವಿವಾಹಿತರಿಗೆ ವಿವಾಹ ಕೂಡ ತಡವಾಗುತ್ತದೆ. ನೀವು ಎಷ್ಟು ವೇಗದಲ್ಲಿ ಇರುತ್ತೀರೋ ಕೆಲಸಗಳು ಅಷ್ಟೇ ನಿಧಾನಗತಿಯಲ್ಲಿ ನಡೆಯುತ್ತದೆ. ಹಣದ ಖರ್ಚಿಗೆ ನಾನಾ ದಾರಿಗಳು ತೆರೆದುಕೊಳ್ಳುತ್ತದೆ.

ಖರ್ಚು ಕಡಿಮೆ ಮಾಡಬೇಕೆಂದುಕೊಂಡರೂ ನಿಮ್ಮ ನಿಯಂತ್ರಣದಲ್ಲಿ ಇಲ್ಲದೆ ಖರ್ಚಾಗುತ್ತದೆ. ನಿಮಗೆ ಈಗ ಗೊಂದಲಗಳು ಹೆಚ್ಚು. ವಿದ್ಯಾರ್ಥಿಗಳಿಗೂ ನಿಧಾನಪ್ರಗತಿ. ಅಂದುಕೊಂಡಂತೆ ಅಂಕಗಳು ಸಿಗದೆ ಹತಾಶರಾಗುತ್ತೀರಿ. ನೀವು ಬಯಸಿದ ಕೋರ್ಸ್ ಬಿಟ್ಟು ಬೇರೇನೋ ಆಯ್ದುಕೊಳ್ಳುವ ಪ್ರಸಂಗ ಎದುರಾಗಬಹುದು. ನಿರಾಶರಾಗಬೇಡಿ. ಈಗ ನೀವು ಏನೇ ಮಾಡಿದರೂ ಅದು ಮುಂದಿನ ನಿಮ್ಮ ಜೀವನಕ್ಕೆ ದಾರಿದೀವಿಗೆಯಾಗುತ್ತದೆ. ಬೇರೆಯ ಕೋರ್ಸ್ ಓದಬೇಕಾಗಿ ಬಂದರೂ ಅದರಲ್ಲೇ ನಿಮ್ಮ ಉಜ್ವಲ ಭವಿಷ್ಯ ಅಡಗಿರಬಹುದು. ನಿರಾಶರಾಗದೆ ಸಂಧರ್ಭಾನುಸಾರ ನಡೆದುಕೊಳ್ಳಿ.

Monthly Horoscope For May 2024 Masika Rashi Bhavishya For 12 Zodiac Signs In Kannada

ಮಿಥುನ ರಾಶಿಯ ಮಾಸ ಭವಿಷ್ಯ

ಈಗ ಗುರು ನಿಮಗೆ 12 ನೇ ಮನೆ ಅಂದರೆ ವ್ಯಯಸ್ಥಾನವನ್ನು ಪ್ರವೇಶಮಾಡಲಿದ್ದಾನೆ. ಇದು ನಿಮಗೆ ಶುಭಕಾರ್ಯಕ್ಕೆ ಖರ್ಚುಗಳನ್ನು ತೋರಿಸುತ್ತದೆ. ದೈವಕಾರ್ಯ ಧರ್ಮಕಾರ್ಯ ಮೊದಲಾದವಕ್ಕೆ ಖರ್ಚು ಮಾಡುವ ಸಂದರ್ಭ ತಾನೇತಾನಾಗಿ ಬರುತ್ತದೆ. ವೈಯುಕ್ತಿಕ ಪ್ರಗತಿ ಕೊಂಚ ಕುಂಠಿತವಾಗುತ್ತದೆ. ಒಂದು ಜಾಗ ಬದಲಾವಣೆಯ ಸಂದರ್ಭ ಇದೆ. ಇದು ವೈಯುಕ್ತಿಕವಾಗಿಯೂ ಇರಬಹುದು ಅಂದರೆ ವಾಸಸ್ಥಾನ ಬದಲಿಸಬೇಕಾಗಬಹುದು ಅತವಾ ವೃತ್ತಿಪರವಾಗಿಯೂ ಆಗಬಹುದು ಅಂದರೆ ವರ್ಗಾವಣೆ ಆಗಬಹುದು. ನೀವು ಯೋಚಿಸಿ ಸರಿಯಾದ ಕ್ರಮದಲ್ಲಿ ಮುಂದುವರೆಯಿರಿ.

ನಾಲ್ಕನೇ ಮನೆಯಲ್ಲಿ ಕೇತು ಇರುವುದರಿಂದ ತಾಯಿಗೆ ಅನಾರೋಗ್ಯ ಅಥವಾ ತಾಯಿಗೆ ಒತ್ತಡ-ಚಿಂತೆ, ಅಥವಾ ತಾಯಿಯಿಂದ ದೂರ ಇರಬೇಕಾದ ಸಂದರ್ಭ ಅಥವಾ ತಾಯಿಯ ಗಮನ ನಿಮ್ಮೆಡೆಗೆ ಕಡಿಮೆಯಾಯಿತು ಎನ್ನುವಂತ ಸಂದರ್ಭಗಳು ಬರುತ್ತದೆ. ಇದನ್ನು ಕೊಂಚ ಸಮಾಧಾನ ಮನಸ್ಸಿನಿಂದ ನಿಭಾಯಿಸಿ. ನಿಮಗೂ ವೃಥಾ ಅಲೆದಾಟ ಒತ್ತಡ ಇರುತ್ತದೆ. ರಾಹು ಹತ್ತನೇ ಮನೆಯಲ್ಲಿ ಇರುವುದರಿಂದ ರಾಸಾಯನಿಕಗಳಿಗೆ ಸಂಬಂಧಪಟ್ಟ, ಔಷಧಿಯ ವಸ್ತುಅಳಿಗೆ ಸಂಬಂಧ ಪಟ್ಟ, ಮ್ಯಾಜಿಕ್, ಇಂದ್ರಜಾಲ, ಮಾಟಮಂತ್ರ ಮೊದಲಾದ ಕೆಲಸ ಮಾಡುವವರಿಗೆ ಅಭಿವೃದ್ಧಿ ಇದೆ. ವಿದ್ಯಾರ್ಥಿಗಳಿಗೆ ಹಿನ್ನಡೆ ಇದೆ. ಆಸ್ತಿ ಜಮೀನು ವಿಷಯಗಳಲ್ಲಿ ಕೊಂಚ ತಂಟೆ ತಕರಾರು ಬರಬಹುದು.

Monthly Horoscope For May 2024 Masika Rashi Bhavishya For 12 Zodiac Signs In Kannada

ಕಟಕ ರಾಶಿಯ ಮಾಸ ಭವಿಷ್ಯ

ನಿಮಗೆ ಗುರು ಹತ್ತನೇ ಮನೆಯಿಂದ ಲಾಭಸ್ಥಾನವಾದ 11 ನೇ ಮನೆಗೆ ಪ್ರವೇಶವಾಗುತ್ತಾನೆ. ಇದು ನಿಮಗೊಂದು ಮಹತ್ವಪೂರ್ಣ ಬದಲಾವಣೆ ಆಗಲಿದೆ. ಕಳೆದ ಒಂದು ವರ್ಷದಿಂದ ಅಷ್ಠಮ ಶನಿ ಹಾಗೂ ಗುರುಬಲವೂ ಇಲ್ಲದೆ ಸಾಕಷ್ಟು ಕಷ್ಟ ಪಟ್ಟಿದ್ದೀರಿ. ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದೀರಿ. ಸಾಕಷ್ಟು ಒತ್ತಡಗಳನ್ನು ಅನುಭವಿಸಿದ್ದೀರಿ. ವೃತ್ತಿಯಲ್ಲೂ ಕಿರುಕುಳಗಳನ್ನು ಅನುಭವಿಸಿದ್ದೀರಿ. ಅವಿವಾಹಿತರು ಸಾಕಷ್ಟು ಪ್ರತ್ನ ಪಟ್ಟರೂ ವಿವಾಹ ಕುದುರದೆ ನಿರಾಶರಾಗಿದ್ದೀರಿ. ಈಗ ಅವೆಲ್ಲ ಕಷ್ಟನಷ್ಟಗಳಿಗೆ ತೆರೆ ಬೀಳಲಿದೆ. ಈಗ ಅವಿವಾಹಿತರಿಗೆ ಕಂಕಣಬಲ ಕೂಡಿಬರಲಿದೆ. ವೃತ್ತಿಯಲ್ಲಿ ಬಡ್ತಿ ಮತ್ತು ಯಶಸ್ಸು ಸಿಗಲಿದೆ. ಹಣದ ಅಭಾವ ಕಡಿಮೆಯಾಗಿ ಹಣದ ಹರಿವು ಉತ್ತಮವಾಗಲಿದೆ.

ವಿದ್ಯಾರ್ಥಿಗಳಿಗೆ ಶುಭಫಲಗಳು ಇವೆ. ವಿದೇಶಕ್ಕೆ ಹೋಗಲು ಕಾತುರರಾಗಿ ಕಾಯುತ್ತಿರುವವರಿಗೆ ಈಗ ಶುಭಸುದ್ದಿ ಸಿಗುತ್ತದೆ. ಯಾವುದಾದರೂ ಅಪವಾದದಲ್ಲಿ ಸಿಕ್ಕಿ ವ್ಯಸನ ಅನುಭವಿಸುತ್ತಿದ್ದರೆ ಈಗ ಅದರಿಂದ ಹೊರಬಂದು ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಹಣದ ಅಡಚಣೆ ಉಂಟಾಗಿ ನಷ್ಟ ಅನುಭವಿಸುತ್ತಿರುವವರಿಗೆ ಈಗ ಅವೆಲ್ಲವೂ ನಿವಾರಣೆಯಾಗಿ ವ್ಯಾಪಾರ ವ್ಯವಹಾರಗಳು ಅಭಿವೃದ್ಧಿ ಆಗಲಿದೆ. ವೃತ್ತಿ ಸಂಬಂಧವಾಗಿ ವಿದೇಶ ಪ್ರಯಾಣ ಇದೆ. ಹಣದ ಅಡಚಣೆ ದೂರವಾಗಿ ಹಣದ ಹರಿವು ಉತ್ತಮವಾಗಲಿದೆ.

Monthly Horoscope For May 2024 Masika Rashi Bhavishya For 12 Zodiac Signs In Kannada

ಸಿಂಹ ರಾಶಿಯ ಮಾಸ ಭವಿಷ್ಯ

ನಿಮಗೆ ಈವರೆಗೂ ಇದ್ದ ಗುರುಬಲ ಮುಗಿದು ಗುರು ಹತ್ತನೇ ಮನೆಗೆ ಪ್ರವೇಶವಾಗುತ್ತಾನೆ. ಹತ್ತನೇ ಮನೆಯ ಗುರು ಅಷ್ಟು ಶುಭಕಾರಕನಲ್ಲ. ನಿಮ್ಮ ವೃತ್ತಿಯಲ್ಲಿ ಬಹಳಷ್ಟು ಏರುಪೇರುಗಳನ್ನು ಅನುಭವಿಸುತ್ತೀರಿ. ಗೃಹಶಾಂತಿಯೂ ಕಡಿಮೆಯಾಗುತ್ತದೆ. ಎರಡನೇ ಮನೆಯಲ್ಲಿ ಕೇತು ಇರುವುದರಿಂದ ಮನೆಯಲ್ಲಿ ಶಾಂತಿ ನೆಮ್ಮದಿಗಳು ಕದಡುತ್ತದೆ. ಮನೆಯಲ್ಲೇ ಒಂದು ವಿರೋಧ ವಲಯ ಸೃಷ್ಟಿಯಾಗುತ್ತದೆ. ನೀವು ಎಷ್ಟು ಎಚ್ಚರಿಕೆಯಿಂದ ಇದ್ದರು ಶತ್ರುಗಳು ತಮ್ಮ ಕೈಚಳಕವನ್ನು ತೋರಿಸಿಯೇ ತೋರಿಸುತ್ತಾರೆ. ನಿಮಗೆ ಹಿತಶತ್ರುಗಳು ಹೆಚ್ಚು. ಸಿಂಹ ಪ್ರಾಣಿಗಳ ರಾಜ ಹಾಗೂ ಸಿಂಹರಾಶಿಯ ಅಧಿಪತಿ ಸೂರ್ಯ ಗ್ರಹಗಳ ರಾಜ ಹಾಗಾಗಿ ನಿಮಗೂ ರಾಜತ್ವದ ಗುಣಗಳು ಇರುತ್ತದೆ.

ಯಾವುದೋ ಒಂದು ರೀತಿಯಲ್ಲಿ ನೀವು ನಿಮ್ಮದೇ ಆದ ಸಾಮ್ರಾಜ್ಯ ಕಟ್ಟಿಕೊಂಡಿರುತ್ತೀರಿ. ರಾಜರಂತೆ ಘನವಾದ ಜೀವನ ನಡೆಸುತ್ತೀರಿ. ಹಾಗಾಗಿ ಈಗ ಗುರುವುನ ಸ್ಥಾನ ಪಲ್ಲಟದಿಂದ ನಿಮ್ಮ ಸಾಮ್ರಾಜ್ಯದಲ್ಲಿ ವಿಪ್ಲವಗಳು ಏಳುತ್ತದೆ. ನಿಮ್ಮ ಕಿರೀಟಕ್ಕೆ ಧಕ್ಕೆ ಒದಗಿಬರುತ್ತದೆ. ಆರೋಗ್ಯ ಕೂಡ ಕೈಕೊಡಬಹುದು. ಎಲ್ಲ ರೀತಿಯಲ್ಲೂ ನೀವು ಸರಕ್ಷಿತರಾಗಿ ಇರಬೇಕು. ನಿಮ್ಮ ಕೋಟೆಯನ್ನು ಭದ್ರ ಮಾಡಿಕೊಳ್ಳಿ. ರಾಜ/ಚಕ್ರವರ್ತಿಗೆ ಇರುವಂತೆ ಹಿತಶತ್ರುಗಳು ಪಿತೂರಿಕಾರರು ನಿಮಗೂ ಇರುತ್ತಾರೆ. ಅಂಥವರನ್ನು ಗುರ್ತಿಸಿ ಅವರಿಂದ ದೂರವಿರಿ. ಹಣದ ಅಭಾವ ಕಾಡಸುತ್ತದೆ. ನೀವು ಮಾಡುವ ಕೆಲಸಗಳಿಗೆ ಅಡ್ಡಿಆತಂಕಗಳು ತಲೆದೋರುತ್ತದೆ. ಗುರುಗಳನ್ನು ಪ್ರಾರ್ಥನೆ ಮಾಡಿಕೊಳ್ಳಿ.

Monthly Horoscope For May 2024 Masika Rashi Bhavishya For 12 Zodiac Signs In Kannada

ಕನ್ಯಾ ರಾಶಿಯ ಮಾಸ ಭವಿಷ್ಯ

ನಿಮಗೆ ಇದುವರೆಗೂ ಶನಿ ಆರನೇ ಮನೆಯಲ್ಲಿದ್ದು ಬಲಾಢ್ಯನಾಗಿದ್ದು ಲಾಭಗಳನ್ನು ಕೊಡುತ್ತಿದ್ದ ಆದರೆ ಗುರುಬಲ ಇರಲಿಲ್ಲ. ಈಗ ನಿಮಗೆ ಸಂಪೂರ್ಣ ಗುರುಬಲ ಇದೆ. ಶನಿ ಬಲ ಹಾಗೂ ಗುರುಬಲ ಎರಡೂ ಸೇರಿ ನೀವು ಈಗ ಅದ್ಭುತಗಳನ್ನೇ ಸೃಷ್ಟಿಸಬಹುದು. ವಿಶೇಷವಾಗಿ ಈ ರಾಶಿಯ ರಾಜಕೀಯ ನಾಯಕರಿಗೆ ದೊಡ್ಡ ಅದೃಷ್ಟಗಳು ಕೂಡಿ ಬರುತ್ತದೆ. ಅಧಿಕಾರ ಪದವಿ ಹುಡುಕಿ ಬರುತ್ತದೆ. ಸಾಮಾನ್ಯ ಜನರಿಗೂ ಕನ್ಯಾರಾಶಿಯವರಿಗೆ ಈಗ ಶುಭಫಲಗಳು ಸಿಗುತ್ತದೆ. ಹೊಸ ನೌಕರಿ. ಅವಿವಾಹಿತರಿಗೆ ವಿವಾಹಯೋಗ, ವಿದೇಶ ಪ್ರಯಾಣ ಯೋಗ, ವಿದ್ಯಾರ್ಥಿಗಳಿಗೆ ಒಳ್ಳೆಯ ಕಾಲೇಜ್ ನಲ್ಲಿ ಸೀಟ್ ಸಿಗುವುದು, ನಿಮ್ಮ ಆಸೆ ಅಭಿರುಚಿಗೆ ತಕ್ಕಂತ ಕೋರ್ಸ್ ಆಯ್ದುಕೊಳ್ಳುವುದು, ನಿಮ್ಮ ಗುರಿ ಸಾಧಿಸಲು ಹಂತಹಂತವಾಗಿ ಮೇಲೇರುವುದು ಇವೆಲ್ಲವೂ ಈ ವರ್ಷ ಸಾಧ್ಯವಿದೆ.

ಆರೋಗ್ಯ ಸುಧಾರಣೆಯಾಗುತ್ತದೆ. ದಂಪತಿಗಳ ನಡುವೆ ಮನಸ್ತಾಪ ಇದ್ದರೆ ಅದು ತಿಳಿಯಾಗುತ್ತದೆ. ಆಸ್ತಿ ಕೊಳ್ಳುವುದು, ವೃತ್ತಿಯಲ್ಲಿ ಯಶಸ್ಸು ಸಿಗುವುದು, ಬಡ್ತಿ ದೊರೆಯುವುದು ಮೊದಲಾದ ಮನಸ್ಸಿಗೆ ಖುಷಿ ಕೊಡುವ ಸಂಗತಿಗಳು ಇವೆ. ಶೇರ್ಸ್ ಅಥವಾ ಇನ್ಯಾವುದೇ ಹೂಡಿಕೆಯಲ್ಲಿ ಹಣ ತೊಡಗಿಸಬಹುದು. ಲಾಭ ಇದೆ. ಬಂಧುಗಳೊಡನೆ ಸಂತಸವಾಗಿ ಕಾಲ ಕಳೆಯುವ ಸಂದರ್ಭಗಳು ಬಹಳಷ್ಟು ಸಿಗುತ್ತದೆ. ನಿಮ್ಮ ಮಾತಿಗೆ ಒಂದು ಪ್ರಭಾವ ಇದೆ. ಜನ ನಿಮ್ಮಲ್ಲಿಗೆ ಬರುತ್ತಾರೆ.

Monthly Horoscope For May 2024 Masika Rashi Bhavishya For 12 Zodiac Signs In Kannada

ತುಲಾ ರಾಶಿಯ ಮಾಸ ಭವಿಷ್ಯ

ನಿಮಗೆ ಈವರೆಗೂ ಇದ್ದ ಗುರುಬಲ ಈಗ ಕಡಿಮೆಯಾಗುತ್ತದೆ. ಆದರೆ ನಿಮಗೂ ವೃಷಭರಾಶಿಯವರಂತೆ ರಾಹುಬಲ ಇದೆ. ರಾಹುಬಲ ನಿಮಗೆ ಬಹಳಷ್ಟು ಉಪಕಾರಗಳನ್ನು ಮಾಡುತ್ತದೆ. ಮಾನಸಿಕ ಶಕ್ತಿ ಹೆಚ್ಚು ಮಾಡುತ್ತದೆ. ಶತ್ರುಗಳಿಂದ ನಿಮಗಾಗುವ ತೊಂದರೆಗಳನ್ನು ನಿವಾರಿಸುತ್ತದೆ. ಮುನ್ನುಗ್ಗುವ ಶಕ್ತಿ ಕೊಡುತ್ತದೆ. ಕುಟುಂಬದಲ್ಲಿ ನಿಮ್ಮ ಮೂಲಕವೂ ಸುಖಶಾಂತಿಗಳು ವೃದ್ಧಿಸುತ್ತದೆ. 12ನೇ ಮನೆಯಲ್ಲಿ ಕೇತು ಇರುವುದರಿಂದ ಕೊಂಚ ಆಧ್ಯಾತ್ಮದಲ್ಲಿ ಮನಸ್ಸು ಕೊಡುತ್ತೀರಿ. ಸಾಧು ಸಂತರ ಗುರುಗಳ ನಿಕಟಕ್ಕೆ ಬರುತ್ತೀರಿ. ಅಂಥವರ ಸೇವೆ ಮಾಡುವ ಅವಕಾಶ ಇದೆ. ಸಾಧು ಸಂತರು ಗುರುಗಳು ನಿಮ್ಮನ್ನು ಪ್ರಭಾವಿಸುತ್ತಾರೆ. ಹಣದ ಅಡಚಣೆ ಕಡಿಮೆಯಾಗಲಿದೆ.

ಮಕ್ಕಳಿಂದ ಶುಭ ಸುದ್ದಿ ಇದೆ. ಮಕ್ಕಳಿಂದ ದೂರ ಇರುವ ಪರಿಸ್ಥಿತಿಯೂ ಬರಬಹುದು. ಅಂದರೆ ಮಕ್ಕಳು ಓದು/ನೌಕರಿಯ ಸಲುವಾಗಿ ದೂರದ ಊರಿಗೆ ಹೋಗುವುದು ಅಥವಾ ಹೆಣ್ಣುಮಕ್ಕಳಿದ್ದರೆ ಅಂಥವರಿಗೆ ವಿವಾಹವಾಗುವುದೂ ನಡೆಯುತ್ತದೆ. ಈ ತಿಂಗಳು 14 ರ ವರೆಗೂ ಸೂರ್ಯ ಉಚ್ಛನಾಗಿದ್ದ ನಿಮ್ಮ ರಾಶಿಯನ್ನು ನೋಡುತ್ತಾನೆ. ಇದರಿಂದ ನಿಮಗೆ ಉಷ್ಣಕ್ಕೆ ಸಂಬಂಧಪಟ್ಟ ತೊಂದರೆಗಳು ಕಾಡಿಸುತ್ತದೆ. ನೀರು ಹೆಚ್ಚಾಗಿ ಕುಡಿಯಿರಿ ಹಾಗೂ ದೇಹಕ್ಕೆ ತಂಪಾಗುವಂತ ಆಹಾರ ಸೇವಿಸಿ. ಶನಿ ಈಗ ಪಂಚಮಸ್ಥಾನದಲ್ಲಿ ಇದ್ದಾನೆ. ಅದು ಕೊಂಚ ಹಿನ್ನಡೆ ಕೊಡುತ್ತದೆ. ಶನಿ ಮುಂದಿನ ದಿನಗಳಲ್ಲಿ ಆರನೇ ಮನೆಗೆ ಪ್ರವೇಶವಾದಾಗ ನಿಮಗೆ ಇನ್ನೂ ಹೆಚ್ಚಿನ ಶುಭಫಲಗಳು ಇವೆ.

Monthly Horoscope For May 2024 Masika Rashi Bhavishya For 12 Zodiac Signs In Kannada

ವೃಶ್ಚಿಕ ರಾಶಿಯ ಮಾಸ ಭವಿಷ್ಯ

ಗುರು ಏಳನೇ ಮನೆಗೆ ಪ್ರವೇಶವಾಗುವುದರಿಂದ ನಿಮಗೆ ಸಂಪೂರ್ಣ ಗುರುವಿನ ಅನುಗ್ರಹ ಇದೆ. ಇದು ನಿಮಗೆ ಏಪ್ರಿಲ್ ಎರಡನೇ ವಾರದಿಂದಲೇ ಅನುಭವಕ್ಕೆ ಬಂದಿರುತ್ತದೆ. ಕೆಲವರು ಉತ್ತಮ ನೌಕರಿಗಾಗಿ ಚಡಪಡಿಸಿರುತ್ತೀರಿ. ಈಗ ಒಳ್ಳೆಯ ಮತ್ತು ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತ ನೌಕರಿ ಹುಡುಕಿ ಬರುತ್ತದೆ. ಅವಿವಾಹಿತರಿಗೆ ವಿವಾಹಯೋಗ ಇದೆ. ಇದುವರೆಗೂ ನೀವು ಮಾಡುತ್ತಿದ್ದ ಪ್ರಯತ್ನವೆಲ್ಲ ನಿಷ್ಫಲವಾಗುತ್ತಿತ್ತು. ಈಗ ಮಾಡುವ ಪ್ರಯತ್ನಗಳು ಕೈ ಹಿಡಿಯುತ್ತದೆ. ಯಶಸ್ಸು ಜಯ ನಿಮ್ಮದಾಗುತ್ತದೆ. ವಿದೇಶ ಪ್ರಯಾಣಯೋಗ ಇದೆ. ಕಳೆದ ವರ್ಷದಲ್ಲಿ ನೀವು ಸಾಕಷ್ಟು ನೋವು ಸಂಕಟಗಳನ್ನು ಅನುಭವಿಸಿದ್ದೀರಿ. ಬಂಧುಬಾಂಧವರಿಂದ ಪೀಡನೆಗೆ ಅವಮಾನಕ್ಕೆ ಒಳಗಾಗಿದ್ದೀರಿ.

ಮನಸ್ಸಿಗೆ ಘಾಸಿಯಾಗುವಂತ ಪರಿಸ್ಥಿತಿಗಳನ್ನು ಎದುರಿಸಿದ್ದೀರಿ. ಆದರೆ ಈಗ ಅಂತಹ ಕಠಿಣ ಪರಿಸ್ಥಿಗಳಿಂದ ಹೊರಬರುತ್ತೀರಿ. ಆರೋಗ್ಯ ಸುಧಾರಿಸುತ್ತದೆ. ಬಂಧುಗಳು ನಿಮ್ಮನ್ನು ಆದರಿಸುತ್ತಾರೆ. ನಿಮ್ಮ ಒಂದು ಸಮುದಾಯದಲ್ಲಿ ನಿಮ್ಮ ಮಾತಿಗೆ ಬೆಲೆ ಸಿಗುತ್ತದೆ. ಕೆಲವು ಕಡೆ ಹಣ ಹೂಡಿಕೆ ಮಾಡಿ ಕಳೆದುಕೊಂಡಿದ್ದೀರಿ. ಈಗ ಕಳೆದುಕೊಂಡ ಹಣ ಶೇ 90 ರಷ್ಟು ವಾಪಸ್ಸು ಬರುತ್ತದೆ. ಹಣದ ಅಡಚಣೆ ದೂರವಾಗುತ್ತದೆ. ಮಾನಸಿಕವಾಗಿ ಬಹಳ ನೆಮ್ಮದಿ ಸಿಗುತ್ತದೆ. ಶೇರ್ಸ್ ನಲ್ಲಿ ಹೂಡಿಕೆ ಮಾಡಿದ್ದರೂ ನಿಮಗೆ ಈಗ ಲಾಭ ಇದೆ. ಮನೆಯಲ್ಲಿ ಶಾಂತಿ ನೆಮ್ಮದಿಗಳು ಇರುತ್ತದೆ. ಮನೆಯಲ್ಲಿ ಶುಭಕಾರ್ಯ ನಡೆಯುವ ಸೂಚನೆ ಇದೆ. ಗುರುಗಳ ಹಿರಿಯರ ಅನುಗ್ರಹಕ್ಕೆ ಪಾತ್ರರಾಗುತ್ತೀರಿ. ಧಾರ್ಮಿಕ ಕ್ಷೇತ್ರಗಳ ದರ್ಶನಭಾಗ್ಯ ಇದೆ.

Monthly Horoscope For May 2024 Masika Rashi Bhavishya For 12 Zodiac Signs In Kannada

ಧನಸ್ಸು ರಾಶಿಯ ಮಾಸ ಭವಿಷ್ಯ

ನಿಮ್ಮ ರಾಶಿಗೆ ಇದುವರೆಗೂ ಗುರುಬಲ ಇದ್ದಿತ್ತು. ಗುರು ಐದನೇ ಮನೆಯಲ್ಲಿ ಇದ್ದು ನಿಮಗೆ ಸಕಲ ಭಾಗ್ಯಗಳನ್ನೂ ಕರುಣಿಸಿದ್ದ. ಈಗ ಗುರು ನಿಮ್ಮ ರಾಶಿಯಿಂದ ಆರನೇ ಮನೆಗೆ ಪ್ರವೇಶಿಸುತ್ತಾನೆ. ಆರನೇ ಮನೆಯ ಗುರು ಎಂದರೆ ಬಂಧುಬಾಂಧವರಲ್ಲಿ ವಿರೋಧ, ಆರೋಗ್ಯ ಹಾನಿ, ಅವಮಾನ, ಹಾಗೂ ಧನನಷ್ಟವನ್ನು ಸೂಚಿಸುತ್ತದೆ. ಆದರೆ ನಿಮಗೆ ಒಂದು ಗುಣಾತ್ಮಕ ಅಂಶ ಇದೆ. ಏನೆಂದರೆ ಶನಿ ಮೂರನೇ ಮನೆ ಪರಾಕ್ರಮ ಸ್ಥಾನದಲ್ಲಿ ಇದ್ದು ನಿಮ್ಮನ್ನು ಕಾಪಾಡುತ್ತಿದ್ದಾನೆ. ಶನಿ ಮೂರನೇ ಮನೆಯಲ್ಲಿ ಇನ್ನೂ ಒಂದು ವರ್ಷ ಇರುತ್ತಾನೆ. ಹಾಗಾಗಿ ನಿಮಗೆ ಅಷ್ಟೊಂದು ಹಿಂಸೆ ಇಲ್ಲ. ಮೂರನೇ ಮನೆಯ ಶನಿಯಿಂದ ಕೆಲವು ಪರಿಹಾರಗಳು ದೊರೆಯುತ್ತದೆ. ಶಕ್ತಿ ದೊರೆಯುತ್ತದೆ.

ಕಂಟಕಗಳನ್ನು ನಿವಾರಿಸಿ ಮುನ್ನುಗ್ಗುವ ಛಾತಿ ದೊರೆಯುತ್ತದೆ. ಆದರೆ ನಾಲ್ಕನೇ ಮನೆಯಲ್ಲಿ ರಾಹು ಇರುವುದರಿಂದ ತಾಯಿಗೆ ಕಷ್ಟ. ತಾಯಿಯಿಂದ ದೂರ ಇರಬೇಕಾಗಬಹುದು. ನಿಮಗೂ ವೃಥಾ ಅಲೆದಾಟ ಸರಿಯಾದ ಸಮಯಕ್ಕೆ ಊಟ ನಿದ್ರೆ ಇಲ್ಲದೆ ಬಳಲುತ್ತೀರಿ. ನಿಮ್ಮ ಹಿಂದೆ ನಿಮ್ಮ ಬಗ್ಗೆ ಪಿತೂರಿ ಮಾಡುವ ಹಿತಶತ್ರುಗಳು ಇರುತ್ತಾರೆ, ಜಾಗ್ರತೆಯಾಗಿರಿ. ಮೇ 14ರಂದು ಸೂರ್ಯ ಆರನೇ ಮನೆಗೆ ಪ್ರವೇಶವಾದಾಗ ನಿಮಗೆ ಇನ್ನೂ ಹೆಚ್ಚಿನ ಶುಭಫಲಗಳು ಸಿಗುತ್ತದೆ.

Monthly Horoscope For May 2024 Masika Rashi Bhavishya For 12 Zodiac Signs In Kannada

ಮಕರ ರಾಶಿಯ ಮಾಸ ಭವಿಷ್ಯ

ಈಗ ನಿಮಗೆ ಭಾಗ್ಯೋದಯವಾಗುವ ಕಾಲ. ಇಷ್ಟು ವರ್ಷ ಅಂದರೆ ಐದಾರು ವರ್ಷಗಳಿಂದ ಬಹಳ ಕಷ್ಟ ಪಟ್ಟಿದ್ದೀರಿ. ಮನೆ ಮಾರು ಕಳೆದುಕೊಂಡವರೂ ಇದ್ದಾರೆ, ನೌಕರಿ ಕಳೆದುಕೊಂಡವರು ಇದ್ದಾರೆ ಮಾನಸಿಕ ಕಿರುಕುಳ, ಹಣಕಾಸಿನ ಅಡಚಣೆ ಅನುಭವಿಸಿ ಹೈರಾಣಾಗಿದ್ದೀರಿ. ಈಗ ನಿಮಗೆ ಶುಭಕಾಲ ಬಂದಿದೆ. ಈಗಾಗಲೇ ಮೂರನೇ ಮನೆ ಪರಾಕ್ರಮ ಸ್ಥಾನದಲ್ಲಿ ರಾಹು ಇದ್ದು ನಿಮಗೆ ಸಾಕಷ್ಟು ಅನುಕೂಲ ಕೊಟ್ಟಿದ್ದಾನೆ. ಧೈರ್ಯ ಸಾಹಸಗಳನ್ನು ಕೊಟ್ಟಿದ್ದಾನೆ. ಧನಸಹಾಯವನ್ನೂ ಮಾಡಿದ್ದಾನೆ. ಆದರೆ ಗುರುಬಲ ಇರಲಿಲ್ಲ. ಈಗ ಗುರು ಮೇ 1 ರಂದೇ ಐದನೇ ಮನೆಗೆ ಪ್ರವೇಶ ಮಾಡುವುದು ನಿಮಗೆ ಅನೇಕ ಭಾಗ್ಯಗಳನ್ನು ಸೂಚಿಸುತ್ತದೆ.

ಸಾಡೆಸಾತಿ ಶನಿಯ ಪ್ರಭಾವ ಕೂಡ ಈಗ ಕ್ರಮೇಣ ಕಡಿಮೆಯಾಗಲಿದೆ. ಹೀಗಾಗಿ ಈಗ ನೀವು ಮುಟ್ಟಿದ್ದೆಲ್ಲ ಚಿನ್ನ ಎಂಬಥ ಪರಿಸ್ಥಿತಿ. ನಿಮ್ಮ ಸಾಮಥ್ರ್ಯಕ್ಕೆ ತಕ್ಕಂತ ನೌಕರಿ ಸಿಗುವುದು, ಬಡ್ತಿ ಸಿಗುವುದು, ಅವಿವಾಹಿತರಿಗೆ ವಿವಾಹಯೋಗ, ಸಂತಾನಫಲ, ವಿದೇಶ ಪ್ರಯಾಣ, ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅನುಕೂಲ ಮೊದಲಾದ ಶುಭಸಂಗತಿಗಳು ನಡೆಯಲಿವೆ.

ರಾಜಕೀಯ ವ್ಯಕ್ತಿಗಳಿಗೂ ಪದವಿ ಅಧಿಕಾರ ಸಿಗುವ ಸಂಭವ ಇದೆ. ರಾಹು ಮೂರನೇ ಮನೆಯಲ್ಲಿ ಹಾಗೂ ಗುರು ಐದನೇ ಮನೆಯಲ್ಲಿ ಇರುವುದು ನಿಮಗೆ ಡಬಲ್ ಧಮಾಕಾ ರೀತಿ ಶುಭಫಲಗಳನ್ನು ಕೊಡುತ್ತದೆ. ಹಣದ ಹರಿವು ಉತ್ತಮವಾಗುತ್ತದೆ. ಸಾಮಾಜಿಕ ಗೌರವ, ಸ್ಥಾನಮಾನ ಸಿಗುತ್ತದೆ. ಬಂಧುಬಾಂಧವರಲ್ಲಿ ಇಮ್ಮ ಬೆಲೆ ಹೆಚ್ಚುತ್ತದೆ. ಮನೆಯಲ್ಲಿ ಶುಭಕಾರ್ಯ ನಡೆಯುವ ಸೂಚನೆ ಇದೆ. ಎಲ್ಲೆಲ್ಲೂ ಸಂತೋಷವೇ ಎಂಬಂತೆ ನಿಮಗೆ ಈಗ ಸಕಲವೂ ಒಳ್ಳೆಯದಾಗುತ್ತದೆ. ಮನಸ್ಸಿಗೆ ಉತ್ಸಾಹ ಬರುತ್ತದೆ.

Monthly Horoscope For May 2024 Masika Rashi Bhavishya For 12 Zodiac Signs In Kannada

ಕುಂಭ ರಾಶಿಯ ಮಾಸ ಭವಿಷ್ಯ

ನಿಮಗೆ ಈಗ ಕೊಂಚ ಗಂಭೀರ ಕಾಲ. ರಾಜಕೀಯ ವ್ಯಕ್ತಿಗಳಿಗೆ ಪದವಿ ಅಧಿಕಾರ ಕಳೆದುಕೊಳ್ಳುವ ಸಮಯ. ನಿಮ್ಮ ಒಂದೊಂದು ನಡೆಯೂ ಎಚ್ಚರಿಕೆಯಿಂದ ಹತ್ತುಸಲ ಯೋಚಿಸಿ ಇಡಬೇಕಾಗುತ್ತದೆ. ಹಿತಶತ್ರುಗಳು ಸುತ್ತಲೂ ಇದ್ದಾರೆ. ಈಗ ಗುರು ನಾಲ್ಕನೇ ಮನೆಗೆ ಪ್ರವೇಶವಾಗುತ್ತಾನೆ. ನಾಲ್ಕರ ಗುರು ಅಷ್ಟು ಶುಭಕಾರಕನಲ್ಲ. ಜೊತೆಗೆ ರಾಹು ಸಹ ಎರಡನೇ ಮನೆಯಲ್ಲಿ ಇದ್ದು ಕುಟುಂಬ ಸೌಖ್ಯಕ್ಕೆ ಧಕ್ಕೆ ತರುತ್ತಾನೆ. ಕುಟುಂಬದಲ್ಲಿ ನೆಮ್ಮದಿ ಕದಡುವಂಥ ಪರಿಸ್ಥಿತಿಗಳು ಎದುರಾಗುತ್ತದೆ. ಕುಟುಂಬ ಸದಸ್ಯರಲ್ಲಿ ಮನಸ್ಥಾಪ ಏರ್ಪಡಬಹುದು. ಹಣಕಾಸಿನ ಅಡಚಣೆ ತೀವ್ರವಾಗಿ ಕಾಡುತ್ತದೆ. ಯಾವ ಹೊಸ ಹೂಡಿಕೆಯಲ್ಲಿ ಹಣ ಹೂಡಬೇಡಿ. ಅಪರಿಚಿತ ಸ್ಥಳಗಳಲ್ಲಿ ನಿಲ್ಲಬೇಡಿ. ಅಪರಿಚಿತ ಜಾಗಗಳಲ್ಲಿ ಆಹಾರ ಸೇವಿಸಬೇಡಿ. ಆದಷ್ಟು ಮನೆದೇವರಿಗೆ ನಡೆದುಕೊಳ್ಳಿ. ಪ್ರಾಮಾಣಿಕರಾಗಿರಿ. ಸತ್ಯವಂತರಾಗಿರಿ.

ಸತ್ಯ ಮತ್ತು ಪ್ರಾಮಾಣಿಕತೆಯೇ ನಿಮ್ಮನ್ನು ಕಾಪಾಡುತ್ತದೆ. ರಾಸಾಯನಿಕಗಳು, ಔಷಧಿಗಳು ಕ್ರಿಮಿಕೀಟಗಳು ಇವುಗಳಿಂದ ಹಾನಿ ಇದೆ. ಕಾಸ್ಮೆಟಿಕ್ಸ್ ಉತ್ತಮ ಕಂಪೆನಿಯದ್ದೇ ಉಪಯೋಗಿಸಿ. ಮುಖಕ್ಕೆ ಹಾನಿಯಾಗುವ ಸಂಭವ ಇರುತ್ತದೆ. ಎಂಟನೇ ಮನೆಯಲ್ಲಿ ಕೇತು ಇರುವುದರಿಂದ ಚೂಪಾದ ವಸ್ತುಗಳಿಂದ ಗಾಯವಾಗಬಹುದು. ತೀವ್ರ ರಕ್ತಸ್ರಾವ ಆಗಬಹುದು. ಸಾಧುಸಂತರನ್ನು ಎದುರು ಹಾಕಿಕೊಳ್ಳಬೇಡಿ. ಅವರಿಗೆ ಆದಷ್ಟು ಸಹಾಯ ಮಾಡಿ. ಆದಷ್ಟು ಮೈಯೆಲ್ಲ ಎಚ್ಚರಿಕೆಯಿಂದ ನಿಮಗೆ ನೀವೇ ಕಣ್ಗಾವಲಾಗಿ ಇರಿ.

Monthly Horoscope For May 2024 Masika Rashi Bhavishya For 12 Zodiac Signs In Kannada

ಮೀನ ರಾಶಿಯ ಮಾಸ ಭವಿಷ್ಯ

ನಿಮಗೂ ಕುಂಭರಾಶಿಗೂ ಅಂಥ ವ್ಯತ್ಯಾಸ ಇಲ್ಲ. ನೀವೂ ಸಹ ಸಾಡೆಸಾತಿಯ ಪ್ರಭಾವದಲ್ಲಿ ಇದ್ದೀರಿ. ಖರ್ಚುಗಳು ಹೆಚ್ಚು ಹೆಚ್ಚು ಬರುತ್ತವೆ. ಸಂಪಾದನೆಯಾದ ಹಣ ಹೇಗೆ ಮಾಯವಾಗುತ್ತದೆ ಎಂಬುದೇ ತಿಳಿಯದಂತೆ ಹಣದ ಖರ್ಚು ಇರುತ್ತದೆ. ನಿಮ್ಮ ರಾಶೀಯಲ್ಲೇ ರಾಹು ಇದ್ದು ನಿಮ್ಮ ದೇಹಕ್ಕೆ ನಾನಾ ತರದ ಕಿರುಕುಳ ಕೊಡುತ್ತಾನೆ. 12ನೇ ಮನೆ ವ್ಯಯಸ್ಥಾನದಲ್ಲಿ ಶನಿ ಇದ್ದು ಖರ್ಚುಗಳನ್ನು ಹೆಚ್ಚಿಸುತ್ತಾನೆ. ಈ ರಾಶೀಯ ರಾಜಕೀಯ ನಾಯಕರೂ ಸಹ ಅನೇಕ ವ್ಯತಿರಿಕ್ತ ಬದಲಾವಣೆಗಳನ್ನು ಎದುರಿಸಬೇಕಾಗುತ್ತದೆ. ಏಳನೇ ಮನೆಯಲ್ಲಿ ಕೇತು ಇರುವುದು ಸಂಗಾತಿಯ ಅಭ್ಯುದಯಕ್ಕೆ ಒಳ್ಳೆಯದಲ್ಲ.

ಗುರು ಈಗ ನಿಮಗೆ ಮೂರನೇ ಮನೆಗೆ ಪ್ರವೇಶ ಮಾಡುತ್ತಾನೆ. ಇದು ನಿಮಗೆ ಲಾಭವೂ ಇಲ್ಲ ನಷ್ಟವೂ ಇಲ್ಲ. ಆದರೆ ಗುರುಬಲ ಇರುವುದಿಲ್ಲವಾದ್ದರಿಂದ ಏನಾದರೂ ಕಷ್ಟಕೋಟಲೆಗಳು ಎದುರಾದರೆ ಪರಿಹಾರ ಬೇಗ ಕಾಣುವುದಿಲ್ಲ. ಇದಕ್ಕಾಗಿ ನೀವು ನೀವು ಆರಾಧಿಸುವ ನಂಬುವ ಗುರುಗಳನ್ನು ಮೊರೆಹೋಗಿ. ಗುರುಗಳ ಸೇವೆ ಮಾಡಿ. ದಾನಧರ್ಮ ಮಾಡಿ. ಯಾವುದಾರೂ ನೀವಂದುಕೊಂಡ ಕೆಲಸಗಳು ಗುರುಬಲ ಇಲ್ಲದೆ ಇರುವುದರಿಂದ ಬಹಳ ನಿಧಾನ ಗತಿಯಲ್ಲಿ ಮುಂದುವರೆಯುತ್ತದೆ. ಯಾವುದೇ ಸಂಗತಿಗಳಿಗೂ ನಿಧಾನಫಲ ನಿಮ್ಮ ವೇಗಕ್ಕೆ ತಕ್ಕಂತ ಕೆಲಸ ಆಗುವುದಿಲ್ಲ. ವಿದೇಶ ಪ್ರಯಾಣ ಬಯಸುವವರಿಗೆ ನಿಧಾನವಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+