ಪತ್ರ : ಕರ್ನಾಟಕ ಬರೀ ಲಿಂಗಾಯಿತರೇ ಆಳಬೇಕಾ?

* ದಿನಕರ ಗೌಡ
***
ಈ ಸುದೀಪ್ ಬಚ್ಚಾ, ಆಕ್ಟಿಂಗ್ ಅಲ್ಪ ಸ್ವಲ್ಪ ಬರುತ್ತೆ. ಅದಕ್ಕೆ ಸುಮ್ನೆ ಈ ರೀತಿ ಮಹಾ ನಟನಿಗೆ ಹೋಲಿಸುವುದು ಎಷ್ಟು ಸಮಂಜಸ? ನಮ್ಮ ಭಾರತ ಫಿಲಂ ಇಂಡಸ್ಟ್ರಿಯಲ್ಲಿ ರಾಜ್ , NTR, MGR, ಶಿವಾಜಿ ಅಂಡ್ ಕಮಲ್ ಹಸನ್... ಈವರು ನಿಜವಾದ ನಟರು. ಸುದೀಪ್‌ನನ್ನು ಕಮಲ್‌ಗೆ ಹೋಲಿಸಿ ಸುಮ್ನೆ ಈ ರೀತಿ ಎಲ್ಲ ಪುಬ್ಲಿಶ್ ಮಾಡಬೇಡಿ. ಈಗಲೆ ನಮ್ ಕನ್ನಡ ಇಂಡಸ್ಟ್ರೀನ ನೋಡಿ ಬೇರೆ ಸ್ಟೇಟ್ ಅವ್ರು ನಗುತಾ ಇದಾರೆ? [ಕಮಲ್ ನಂತರ ಕಿಚ್ಚನೇ ಬೆಸ್ಟ್]
* ಮುರಳಿ
***
ಲೇಖನ ತುಂಬಾ ಅರ್ಥಪೂರ್ಣವಾಗಿದೆ. ಕಾರ್ಯಕರ್ತರನೇಕರ ನಿಸ್ವಾರ್ಥದ ದುಡಿತದ ಫಲವೇ ಅಕ್ಕ ಸಮ್ಮೇಳನದ ವಿಜಯ/ಕೀರ್ತಿಗೆ ಕಾರಣ. ಎಲ್ಲ ಅಭಿನಂದನೆ ಅವರಿಗೆ ಸಲ್ಲುತ್ತದೆ. ವತ್ಸ ಧನ್ಯವಾದಗಳು!! [ಸಮ್ಮೇಳನದ ಯಶಸ್ಸು ಹೇಗೆ?]
* ಅಮರನಾಥ್ ಗೌಡ
***
ಇದು ಅವರು ಮನೆಯಲ್ಲೇ ಕುಡಿದು ಬಿದ್ದಿರೋ ವಿಚಾರ. ಆದರೆ ಬೆಂಗಳೂರಿನ ಸುತ್ತ ಮುತ್ತ ನಾಯಿಕೊಡೆಗಳಂತೆ ತಲೆಯೆತ್ತುತಿರುವ ಬಾರ್, ಪಬ್, ಡಿಸ್ಕೋಥೆಕ್, ರೆಸಾರ್ಟ್ ಗಳ ಬಗ್ಗೆ ಸಾರ್ವಜನಿಕರು ಈಗಲೇ ತಲೆಕೆಡಿಸಿಕೊಳ್ಳದಿದ್ರೆ ಮುಂದೆ ಇಂಥ ದುರಂತಗಳು ನಿತ್ಯ ಸಂಗತಿಗಳಾದರೆ ಆಶ್ಚರ್ಯ ಪಡಬೇಕಿಲ್ಲ. ನಮ್ಮ ಸಂಸ್ಕೃತಿ ಹಾಳಾಗುತ್ತಿರುವುದೇ ಇವುಗಳಿಂದ. ಇವನ್ನು ಮುಚ್ಚಿಸಲಿಕ್ಕೆ ಸರ್ಕಾರಕ್ಕೆ ತಾಕತ್ತಿಲ್ಲ. ಜನರೇ ರೋಚ್ಚಿಗೆಳಬೇಕು ಅಷ್ಟೇ. [ಕುಡಿದ ಮತ್ತಿನಲ್ಲಿ...]
* ಅಭಿಮಾನಿ
***
ಶಾಮ ಸುಂದರರವರೇ, ನೀವುಗಳು ಪತ್ರಿಕೋದ್ಯಮದಲ್ಲಿ ಹಿರಿಯರು, ನೀವು ಮತ್ತು ಎಚ್.ಆರ್. ರಂಗನಾಥ್ ನೀವುಗಳು ಈ ಸಮಾಜಕ್ಕೆ ಈ ಭ್ರಷ್ಟ ವ್ಯವಸ್ಥೆಯ ವಿರುದ್ಧ ಏನಾದರೂ ಮಾಡಬೇಕು, ನಾವು ಅಂದುಕೊಳ್ಳುವಂತೆ ಮಾಡುತ್ತಿಲ್ಲ. ನಾವು ಒಂದು ವಾಹಿನಿ ಮಾಡಿದ್ದೇವೆ. ಹೇಗೋ 24 ಗಂಟೆ ನಡೆಸಿದರಾಯಿತು ಅನ್ನೋ ಮನೋಭಾವ ಬಿಟ್ಟು ಒಂದು ಮಾಧ್ಯಮ ನಿಮ್ಮ ಕೈಯಲ್ಲಿ ಇದೆ. ನೀವುಗಳು ಮನಸ್ಸು ಮಾಡಿದರೆ ಏನು ಬೇಕಾದರೆ ಮಾಡಬಹುದು. ದಯವಿಟ್ಟು ಮಾಡಿ, ಸುದ್ಧಿ ಕೊಡುವುದಷ್ಟೇ ಅಲ್ಲ ನಿಮ್ಮ ಕರ್ತವ್ಯ. ಭ್ರಷ್ಟಾಚಾರವನ್ನು ಅಳಿಸಲು ಬೇಕಾದಷ್ಟು ದಾರಿಗಳಿವೆ. ಯೋಚಿಸಿ ನೋಡಿ ನಿಮ್ಮಿಂದ ಸಾಧ್ಯ. [ಸ್ವರ್ಣಲತಾ ಅರೆಸ್ಟ್]
* ರಾಜು, ದಾವಣಗೆರೆ
***
ನನಗೆ ಕನ್ನಡ ಟೈಪ್ ಮಾಡಲು ಬರುತ್ತಿಲ್ಲವಾದರು ಅದನ್ನು ನಾನು ಇಂಗ್ಲಿಷ್ ಭಾಷೆಯಲ್ಲೇ ಟೈಪ್ ಮಾಡಿದೆ. ವಿಕಿಪೀಡಿಯ ಕನ್ನಡ ಹೆಬ್ಬಾಗಿಲು (ಪೋರ್ಟಲ್) ಇರುವುದನ್ನು ನಾನು ಇಂದೇ ನೋಡಿದ್ದು. ವಿಕಿಪೀಡಿಯ ಅಮೆರಿಕಾದ ವೆಬ್ಸೈಟ್ ಆದರು ಕನ್ನಡ ಭಾಷೆಯನ್ನು ಅತ್ಯುನ್ನತ ಮಟ್ಟಕ್ಕೆ ಒಯ್ಯುವಲ್ಲಿ ಯಾವುದೇ ಸಂದೇಹವಿಲ್ಲ. ನಾನು ಒಬ್ಬ ಮುಸ್ಲಿಂನಾಗಿದ್ದಾಗ್ಯು ಒಬ್ಬ ಕನ್ನಡಿಗ. ಹೆಮ್ಮೆ ಪಡುವಂಥ ಸಾಧನೆಯನ್ನು ವಿಕಿಪೀಡಿಯ ಮಾಡುತ್ತಿರುವದು ಹೃದಯ ತುಂಬಿ ಬಂದಿದೆ. ಜೈ ಕರ್ನಾಟಕ ಜೈ ವಿಕಿಪೀಡಿಯ. ವಿಕಿಪೀಡಿಯಗೆ ಅನಂತ ಅನಂತ ಧನ್ಯವಾದಗಳು. [ಗ್ರಾಮ ಮಾರಾಟಕ್ಕಿದೆ]
* ಮೊಹಮ್ಮದ್ ಯುಸೂಫ್ ಅಡ್ವಾಣಿ












Click it and Unblock the Notifications