• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಯಕತ್ವ ಬದಲಾವಣೆ ಬಗ್ಗೆ ಒಕ್ಕಲಿಗರ ನೇರ ಪ್ರಶ್ನೆ

By * ಒಕ್ಕಲಿಗರ ಸಂಘ, ವಿಶ್ವೇಶ್ವರ ಪುರ, ಬೆಂಗಳೂ
|
ಪಾರದರ್ಶಕತೆ, ದಕ್ಷತೆ, ಪ್ರಮಾಣಿಕತೆಯಿಂದ ಜಾತ್ಯಾತೀತವಾಗಿ ಆಡಳಿತ ನೀಡುತ್ತಿರುವ ಕರ್ನಾಟಕದ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸದಾನಂದಗೌಡರನ್ನು ಬದಲಾಯಿಸಬೇಕೆಂದು ಅನೇಕ ಶಾಸಕರು, ಸಚಿವರು ಶ್ರಮಿಸುತ್ತಿದ್ದಾರೆ.

ಕರ್ನಾಟಕ ಹಿತವನ್ನು ಬದಿಗಿಟ್ಟು, ಬರಗಾಲದಿಂದ ತತ್ತರಿಸುತ್ತಿರುವ ಜನರ ಸಂಕಷ್ಟಗಳಿಗೆ ಸ್ಪಂದಿಸದೆ ಹಗಲಿರುಳು ಬದಲಾವಣೆಯೇ ಮುಖ್ಯ ಎಂಬ ಪ್ರಯತ್ನದಲ್ಲಿರುವ ಶಾಸಕ, ಸಂಸದ ಹಾಗೂ ಸಚಿವರುಗಳ ಕ್ರಮವನ್ನು ಒಕ್ಕಲಿಗರ ಸಂಘವು ಸಮಸ್ತ ಕರ್ನಾಟಕದ ಜನತೆಯ ಪರವಾಗಿ ಕಟುವಾಗಿ ಖಂಡಿಸುತ್ತದೆ.

ಇದೇ ಸಂದರ್ಭದಲ್ಲಿ ಸದಾನಂದಗೌಡರ ಬದಲಾವಣೆಗೆ ಹೋರಾಟ ಮಾಡುತ್ತಿರುವವರಿಗೆ ನಮ್ಮ ಕೆಲವು ಪ್ರಶ್ನೆಗಳು, ಸದಾನಂದ ಗೌಡರು,

* ಯಾವುದಾದರೂ ಹಗರಣದಲ್ಲಿ ಭಾಗಿಯಾಗಿದ್ದಾರಾ?
* ಅಕ್ರಮವಾಗಿ ಡೀ ನೋಟಿಫಿಕೇಷನ್ ಮಾಡಿದ್ದಾರಾ?
* ಅಕ್ರಮ ಸಂಪಾದನೆಯಲ್ಲಿ ತೊಡಗಿದ್ದಾರಾ?
* ಯಾವುದಾದರು ಟ್ರಸ್ಟ್ ಗಳಲ್ಲಿ ಬೇನಾಮಿಯಾಗಿ ವ್ಯವಹಾರ ನಡೆಸುತ್ತಿದ್ದಾರಾ?
* ಕರ್ನಾಟಕದ ಜನತೆಗೆ ಹಾಗೂ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಅಗೌರವ ತರುವ ರೀತಿಯಲಿ ವರ್ತಿಸಿದ್ದಾರಾ?

ಕೇವಲ ಸ್ವಹಿತಾಸಕ್ತಿಗಾಗಿ ಬದಲಾವಣೆಗಾಗಿ ಹಪಹಪಿಸುತ್ತಿದ್ದರೆ ನಾವುಗಳಾರು ಈ ಪ್ರಹಸನವನ್ನು ಸುಮ್ಮನೆ ಸಹಿಸಲು ಸಾಧ್ಯವಿಲ್ಲ. ಜಾತಿಯ ಆಧಾರದ ಮೇಲೆ ಬದಲಾವಣೆ ಬಯಸುವುದು ನಮ್ಮ ಹಕ್ಕೆಂದು ಹೇಗೆ ಕೆಲವು ಶಾಸಕರು ಹಾಗೂ ಸಂಸದರು ಪ್ರತಿಪಾದಿಸುತ್ತಿರುವರೊ ಹಾಗೆಯೇ ಉತ್ತಮ ಮುಖ್ಯಮಂತ್ರಿಯನ್ನು ಬೆಂಬಲಿಸುವುದು ನಮ್ಮ ಕರ್ತವ್ಯ ಎಂದು ಈ ಸಂದರ್ಭದಲ್ಲ್ಲಿ ಘೋಷಿಸುವುದು ಅನಿವಾರ್ಯವಾಗಿದೆ.

ಜಾತಿಯ ಆಧಾರದ ಮೇಲೆ ವ್ಯವಸ್ಥೆ ಸಫಲವಾಗುವುದಿಲ್ಲ. ಎಲ್ಲಾ ಜಾತಿ ಮತ್ತು ಎಲ್ಲಾ ಧರ್ಮದ ಸಹೋದರ, ಸಹೋದರಿಯರನ್ನ ಜೊತೆಯಾಗಿ ವಿಶ್ವಾಸಕ್ಕೆ ತೆಗೆದುಕೊಂಡಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ಪ್ರಜಾಪ್ರಭುತ್ವಕ್ಕೆ ಮಾರಕವಾಗುವಂಥ ಇಂಥ ಮಹನೀಯರನ್ನು ಖಂಡಿಸಬೇಕಾದುದು ನಮ್ಮಲ್ಲರ ಆದ್ಯ ಕರ್ತವ್ಯ.

ಸಮಾಜದ ಸ್ವಾಸ್ಥ್ಯ ಕೆಡಿಸುವ ವ್ಯಕ್ತಿಗಳ ವಿರುದ್ಧ ಎಲ್ಲರೂ ಒಗ್ಗೂಡಿ ಮುಂದಿನ ಚುನಾವಣೆಯಲ್ಲಿ ಬುದ್ಧಿಕಲಿಸಬೇಕಾದುದರ ಜೊತೆಗೆ ಅವಶ್ಯ ಎನಿಸಿದರೆ ಬೀದಿಗಿಳಿದು ಹೊರಾಡಲು ಸಿದ್ದರಾಗಬೇಕಾಗಿದೆ. ಇನ್ನು ಮುಂದಾದರೂ ಈ ಅಸಹ್ಯ ವರ್ತನೆಗಳನ್ನು ಬಿಟ್ಟು ಕರ್ನಾಟಕದ ಗೌರವ, ಘನತೆಯನ್ನು ಎತ್ತಿ ಹಿಡಿಯುವಂಥ ಕೆಲಸ ಎಲ್ಲಾ ಜನಪ್ರತಿನಿಧಿಗಳಿಂದಾಗಲಿ ಎಂದು ರಾಜ್ಯ ಒಕ್ಕಲಿಗರ ಸಂಘ ಆಶಿಸುತ್ತದೆ.

ಸದಾನಂದಗೌಡರು ಒಕ್ಕಲಿಗರೆಂಬ ಕಾರಣಕ್ಕಾಗಿ ನಾವು ಅವರನ್ನು ಬೆಂಬಲಿಸುತ್ತಿಲ್ಲ, ಅವರೊಬ್ಬ ಸುಸಂಸ್ಕೃತರು, ಸಜ್ಜನರು, ಪ್ರಾಮಾಣಿಕರು, ಜನಪರ ಕಾಳಜಿವುಳ್ಳವರು. ಅಖಂಡ ಕರ್ನಾಟಕವನ್ನು ಕೆಂಗಲ್ ಹನುಮಂತಯ್ಯನವರ ತ್ಯಾಗ, ಶಾಂತವೇರಿ ಗೋಪಾಲಗೌಡರ ಸಮಾಜಪರ ಧೋರಣೆ, ನಿಜಲಿಂಗಪ್ಪನವರ ನಿಸ್ವಾರ್ಥ ಸೇವೆ, ವೀರೇಂದ್ರ ಪಾಟೀಲರ ದಿಟ್ಟತನ, ರಾಮಕೃಷ್ಣ ಹೆಗಡೆ ಅವರ ಚಾಣಕ್ಯತೆ, ದೇವೇಗೌಡರ ಕಾರ್ಯದಕ್ಷತೆ, ಎಸ್ ಎಂ ಕೃಷ್ಣರ ತಾಳ್ಮೆ, ಎಚ್ ಡಿ ಕುಮಾರಸ್ವಾಮಿ ಅವರ ರೈತಪರ ಕಾಳಜಿಯನ್ನು ಮೈಗೂಡಿಸಿಕೊಂಡು ಸರ್ವರನ್ನೂ ಐಕ್ಯತೆಯಿಂದ ಕರೆದೊಯ್ಯುವ ಸಾಮರ್ಥ್ಯವುಳ್ಳವರೆಂಬ ನಂಬಿಕೆಯಿಂದ ಸದಾನಂದಗೌಡರನ್ನು ಬೆಂಬಲಿಸುತ್ತಿದ್ದೇವೆ. ಸದಾನಂದ ಗೌಡರನ್ನು ಪದಚ್ಯುತಗೊಳಿಸುವ ಯಾವುದೇ ಹುನ್ನಾರವನು ಬಿಜೆಪಿ ಹೈಕಮಾಂದ್ ಪರಿಗಣಿಸಬಾರದೆಂದು ಒಕ್ಕಲಿಗರ ಸಂಘ ಆಗ್ರಹಿಸುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಸದಾನಂದ ಗೌಡ ಸುದ್ದಿಗಳುView All

English summary
Vokkaliga Sangha Bangalore questioned BJP dissident demand to change Karnataka CM Sadananda Gowda on the ground of caste. Vokkaligas Sangha in its open lettar also asked question why they are against a clean and eminent administer, why they are dividing the democracy on the basis of caste system

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more