ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಡಿದ ಮತ್ತಿನಲ್ಲಿ ಪರಲೋಕ ಸೇರಿದ ಕೊಡಗಿನ ಯುವತಿ

By Srinath
|
Google Oneindia Kannada News

alcohol-influence-weekend-party-kills-moksha-nanaiah
ಬೆಂಗಳೂರು, ಜುಲೈ 2: ವೀಕೆಂಡ್ ಮೋಜಿನ ವೇಳೆ ಮದ್ಯದ ಅಮಲಿನಲ್ಲಿ ಮೈಮರೆತ ಯುವತಿಯೊಬ್ಬಳು ಕಟ್ಟಡದಿಂದ ಕೆಳಗಿಳಿಯುವ ವೇಳೆ ಆಯತಪ್ಪಿ ಬಿದ್ದು ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಬಿಟಿಎಂ ಲೇಔಟ್‌ನ ಬನ್ನೇರುಘಟ್ಟ ರಸ್ತೆಯಲ್ಲಿರುವ CPWD ವಸತಿ ಸಮುಚ್ಚಯದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ.

ಕೊಡಗು ಜಿಲ್ಲೆಯ ವಿರಾಜಪೇಟೆಯ ಕುಟ್ಟಂದಿ ಗ್ರಾಮದ ನಿವಾಸಿ ನಾಣಯ್ಯ ಎಂಬುವರ ಪುತ್ರಿ ಮೋಕ್ಷಾ (24) ಮೃತಪಟ್ಟ ಯುವತಿ. ಅವರು ನಗರದ ಅರಕೆರೆ ಲೇಔಟ್‌ನ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಮಂಗಳೂರಿನಲ್ಲಿ ಬಿಕಾಂ ವ್ಯಾಸಂಗ ಮಾಡಿದ್ದ ಮೋಕ್ಷಾ, ಸರ್ಜಾಪುರ ರಿಂಗ್ ರೋಡಿನಲ್ಲಿರುವ Northern Trust Bankನಲ್ಲಿ ಅನಲಿಸ್ಟ್ ಆಗಿ ಉದ್ಯೋಗದಲ್ಲಿದ್ದರು.

ಕೊಡಗು ಜಿಲ್ಲೆಯ ಕಾಳಪ್ಪ (26) ಸಾಫ್ಟ್‌ವೇರ್ ಇಂಜಿನಿಯರ್. ಈತ ಕೊಡಗಿನವರೇ ಆದ ಮೋಕ್ಷಾಳ ಸ್ನೇಹಿತರಾಗಿದ್ದರು. ಟೆಕ್ಕಿ ಕಾಳಪ್ಪ ನಿತಿನ್ ಎಂಬ ಸ್ನೇಹಿತನ ಜತೆ ಸಿಪಿಡಬ್ಲ್ಯೂಡಿ ವಸತಿ ಸಮುಚ್ಚಯದಲ್ಲಿ ವಾಸವಾಗಿದ್ದಾರೆ. ಮೋಕ್ಷಾ ಆಗಾಗ ಕಾಳಪ್ಪ ಮನೆಗೆ ಬಂದು ಹೋಗುತ್ತಿದ್ದರು. ಅಂತೆಯೇ ಅವರು ಶನಿವಾರ ರಾತ್ರಿ ಆತನ ಮನೆಗೆ ಬಂದಿದ್ದರು. ಈ ವೇಳೆ ನಿತಿನ್ ಊರಿಗೆ ಹೋಗಿದ್ದರು.

ಮನೆಯಲ್ಲಿದ್ದ ಕಾಳಪ್ಪ ಜತೆ ಮೋಕ್ಷಾ, ಮೂರನೇ ಮಹಡಿಯಲ್ಲಿ ಕುಳಿತು ಸಂಜೆ 7 ಗಂಟೆಯಾಗುತ್ತಿದ್ದಂತೆ ಮದ್ಯ ಸೇವಿಸತೊಡಗಿದವರು, ರಾತ್ರಿ 10 ಗಂಟೆಗೆ ಗ್ಲಾಸ್ ಪಕ್ಕಕ್ಕಿಟ್ಟು ಎದ್ದಿದ್ದಾರೆ. ನಂತರ ಅವರು ಕಬ್ಬಿಣದ ಏಣಿ ಮೂಲಕ ಕೆಳಗಿಳಿಯುವ ವೇಳೆ ನಿಯಂತ್ರಣ ತಪ್ಪಿ ಕಟ್ಟಡದಿಂದ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಯಿತು. ಮೃತಳು ಮದ್ಯ ಸೇವಿಸಿದಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ.

English summary
A 24-year-old Moksha Nanaiah, a native of Kodagu, accidentally slipped and fell from the third floor of the CPWD quarters in BTM 1st Stage near KAS Layout on Saturday night. Madivala police said the deceased was working at Northern Trust Bank. The girl was under the influence of alcohol.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X