ಇಬೇ.ಕಾಂನಲ್ಲಿ 25ಮನೆಗಳ ಗ್ರಾಮ ಮಾರಾಟಕ್ಕಿದೆ

ಸುಮಾರು 25 ಮನೆಗಳನ್ನು ಹೊಂದಿರುವ 800ಕ್ಕೂ ಅಧಿಕ ವರ್ಷ ಇತಿಹಾಸವಿರುವ ಈ ಗ್ರಾಮ ಇಟಲಿಯ ಟಸ್ಕನಿ ಪ್ರದೇಶದಲ್ಲಿದೆ. ಟಸ್ಕನಿ ಪ್ರದೇಶದ ಜನಪ್ರಿಯ ಪ್ರವಾಸಿ ತಾಣವಾಗಿದೆ.
ಕಳೆದ 50 ವರ್ಷಗಳಿಂದ ಭಾರಿ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪ್ರಟರಿಸಿಯಾ ಎಂಬ ಪುಟ್ಟ ಗ್ರಾಮ ಸ್ಟಿಯಾ ಪಾಲಿಕೆಗೆ ಸೇರುತ್ತದೆ. ಫ್ಲೊರೆನ್ಸ್ ನಿಂದ 40 ಕಿ.ಮೀ ದಲ್ಲಿರುವ ಈ ಗ್ರಾಮದಲ್ಲಿ ತೀರಾ ವಿರಳವಾಗಿದೆ. ಮನೆ ಖರೀದಿಸಲು ಬಯಸುವವರು 25 ಮನೆಯೊಂದಿಗೆ ಇಡೀ ಗ್ರಾಮವನ್ನು ಕೊಂಡುಕೊಳ್ಳಬಹುದು. 2.5 ಮಿಲಿಯನ್ ಯುರೋ ಆರಂಭಿಕ ಮೊತ್ತದೊಂದಿಗೆ ಮಾರಾಟಕ್ಕೆ ಇಡಲಾಗಿದ್ದು, ಇಬೇ ನಲ್ಲಿ ಸುಮಾರು 17 ಕೋಟಿ ರು ಎಂದು ಬೆಲೆ ನೀಡಲಾಗಿದೆ.
ಈ ಗ್ರಾಮವನ್ನು ಖರೀದಿಸಿದವರಿಗೆ ಈಗಿರುವ 25 ಮನೆಗಳ ಸ್ಥಿರಾಸ್ಥಿ ಕೂಡಾ ಸಿಗಲಿದೆ. ಜೊತೆಗೆ ಇನ್ನು ಹೆಚ್ಚಿನ ಮನೆಗಳನ್ನು ಕಟ್ಟುವ ಅವಕಾಶ ಕೂಡಾ ಇರುತ್ತದೆ. ಕುತೂಹಲವೆಂದರೆ, ಈ ಗ್ರಾಮ ಮಾರಾಟಕ್ಕೆ ಇಟ್ಟ ನಂತರ ಅನೇಕ ಬಿಡ್ಡರ್ ಗಳು ಮುಗಿ ಬಿದ್ದಿದ್ದಾರೆ. ಟಸ್ಕನಿ ಪ್ರದೇಶವನ್ನು ಜಾಗತಿಕ ಭೂಪಟದಲ್ಲಿ ಅತ್ಯುತ್ತಮ ಪ್ರವಾಸಿ ತಾಣ ಮಾಡುವ ಆಸೆ ಎಲ್ಲರಲ್ಲೂ ವ್ಯಕ್ತವಾಗಿದೆ.
ಇಬೇ.ಕಾಂನ ಇತ್ತೀಚಿನ ದರ ಪಟ್ಟಿಯಂತೆ ಈ ಗ್ರಾಮದ ಮೌಲ್ಯ 17 ಕೋಟಿ ರು ಅಷ್ಟೇ. ಭಾರತದ ಕೋಟ್ಯಾಧಿಪತಿಗಳಿಗೆ ಇದು ಅಂಥ ದೊಡ್ಡ ಮೊತ್ತವೇನಲ್ಲ. ಜಗತ್ತಿನ ಅನೇಕ ಸಿರಿವಂತರನ್ನು ಹೊಂದಿರುವ ಬಡ ಅಭಿವೃದ್ಧಿಶೀಲ ರಾಷ್ಟ್ರ ಭಾರತ.
ಕಾಂಗ್ರೆಸ್ ನ ಕೆಲ ನಾಯಕರು ಈ ಗ್ರಾಮವನ್ನು ಖರೀದಿಸಿ ಸೋನಿಯಾ ಮೇಡಂ ಕೃಪೆಗೆ ಪಾತ್ರರಾಗಲು ಮುಗಿಬಿದ್ದಿದ್ದಾರಂತೆ. ಭಾರತದ ಮೂಲದ ವ್ಯಾಪಾರಿಗಳು ಟಸ್ಕನಿಯ Pratariccia ಗ್ರಾಮವನ್ನು ಖರೀದಿ ಮತ್ತೊಂದು ಮಿನಿ ಭಾರತಸೃಷ್ಟಿಸಲು ಹವಣಿಸಿದ್ದಾರೆ.
ಇಟಲಿಯಲ್ಲಿ ಈ ಹಿಂದೆ ಕೂಡಾ ಇದೇ ರೀತಿ ಒಂದು ಗ್ರಾಮವನ್ನು ಮಾರಾಟಕ್ಕಿಡಲಾಗಿತ್ತು. ಕಲಬ್ರಿಯಾ ಪ್ರದೇಶದ ಸಾನ್ ಬಸಿಲೆ ಗ್ರಾಮವನ್ನು ವೆಬ್ ಸೈಟ್ ಮೂಲಕ ಕೇವಲ 5,000 ಯುರೋ ಆರಂಭಿಕ ಬೆಲೆಯೊಂದಿಗೆ ಮಾರಾಟಕ್ಕಿಡಲಾಗಿತ್ತು. ಇಟಲಿಯ ರಿಯಲ್ ಎಸ್ಟೇಟ್ ಉದ್ಯಮ ಕೈಕೊಟ್ಟಿದ್ದರಿಂದ ಜನರಿಲ್ಲದ ಊರು ಮಾರಾಟಕ್ಕೆ ಆನ್ ಲೈನ್ ಮಾರಾಟವೇ ಸೂಕ್ತ ಎಂದು ಪ್ರಟರಿಸಿಯಾ ಮೇಯರ್ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications