• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಿವ್-ಇನ್ ಸಂಬಂಧ, ಸಂಪ್ರದಾಯಕ್ಕೆ ಇತಿಶ್ರೀ

By * ಸುಪ್ರಿಯಾ , ಬೆಂಗಳೂರು
|

ಪುರಾಣ, ಪುಣ್ಯ ಕಥೆ ಗಳ ಆಧರಿಸಿ ಕೋರ್ಟ್ ತೀರ್ಪು ನೀಡುವುದು ಎಷ್ಟು ಸಮಂಜಸ. ಮದುವೆ ಎಂಬ ಬಂಧನಕ್ಕೆ ಒಳಪಡದೆ ಗಂಡು-ಹೆಣ್ಣು ಒಟ್ಟಾಗಿ ಬಾಳ್ವೆ ಮಾಡುವುದರಲ್ಲಿ ಯಾವುದೇ ಬಾಧಕವಿಲ್ಲ ಎಂದು ಸುಪ್ರಿಂ ಕೋರ್ಟ್ ಈಚೆಗೆ ಮಹತ್ವದ ತೀರ್ಪಿತ್ತಿದೆ. ಇದು ಭಾರತೀಯ ಸಮಾಜದಲ್ಲಿ ತಲ್ಲಣ ಉಂಟು ಮಾಡಿದೆ. ಶತ ಶತಮಾನಗಳಿಂದ, ಅಷ್ಟೇ ಏಕೆ ಯುಗಾಂತರಗಳಿಂದ ಹುಡುಗ-ಹುಡುಗಿಯರು ಸಮಾಜದ ಒಪ್ಪಿಗೆ ಪಡೆದು ಹೆತ್ತವರ/ಪೋಷಕರ, ಬಂಧುಗಳ, ಹಿತೈಷಿಗಳ, ಆಹ್ವಾನಿತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಹಿಂದೂ ಸಮಾಜದಲ್ಲಿ ಮದುವೆ ಶಾಸ್ತ್ರದಲ್ಲಿನ ಎಲ್ಲಾ ಸಂಪ್ರದಾಯದಂತೆ ಮದುವೆಯಾದ ನಂತರ ಗೃಹಸ್ಥಾಶ್ರಮಕ್ಕೆ ಕಾಲಿಡುವ ಪದಟಛಿತಿ ಇಡೀ ವಿಶ್ವಕ್ಕೆ ಮಾದರಿ ಎಂದರೆ ತಪ್ಪಿಲ್ಲ.

ಆದರೂ ಕೆಲವೊಮ್ಮೆ ವಿರಸ ಉಂಟಾಗಿ ಹಿರಿಯರ , ಹಿತೈಷಿಗಳ, ಮಧ್ಯ ಪ್ರವೇಶದಿಂದ ಕೆಲ ಕುಟುಂಬಗಳಲ್ಲಿ ಹೊಂದಾಣಿಕೆ ಆಗಿರುವುದುಂಟು. ಕೆಲವೊಮ್ಮೆ ಯಶಸ್ಸು ಕಾಣದೆ, ವಿಚ್ಛೆದನದಲ್ಲಿ ಕೊನೆಗೊಂಡ ಸಂದರ್ಭಗಳನ್ನೂ ಕಾಣಬಹುದು. ಅಂದ ಮಾತ್ರಕ್ಕೆ ಪದಟಛಿತಿ ನ್ಯೂನತೆಯಿಂದ ಕೂಡಿದೆ ಎಂದು ಅರ್ಥೈಸಬಾರದು. ಈಚಿನ ವರ್ಷಗಳಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಪಥದತ್ತ ದಾಪುಗಾಲು ಹಾಕುತ್ತಿರುವ ನಮ್ಮ ಸಮಾಜ, ವಿದ್ಯುನ್ಮಾನ ಮಾಧ್ಯಮದಲ್ಲಿನ ಕ್ರಾಂತಿಕಾರಿ ಬೆಳವಣಿಗೆಯ ಪ್ರಭಾವ ಹಾಗೂ ಅದರಲ್ಲಿ ಬಿತ್ತರಗೊಳ್ಳುವ ಕಾರ್ಯಕ್ರಮಗಳಿಂದ ಸ್ಫೂರ್ತಿಗೊಂಡು ಯುವ ಜನಾಂಗ ವಿದೇಶಿಯರಿಗೆ ಪ್ರಿಯವಾದ ಲಿವ್-ಇನ್ ಸಂಸ್ಕೃತಿಗೆ ಮಾರುಹೋಗುತ್ತಿರುವುದೊಂದು ಆತಂಕಕಾರಿ ಬೆಳವಣಿಗೆ.

ಅಂತಹ ಒಂದು ಪ್ರಕರಣ ಕೋರ್ಟ್ ಮೆಟ್ಟಿಲು ಹತ್ತಿ, ಅದನ್ನು ಇತ್ಯರ್ಥಗೊಳಿಸಿದ ಸರ್ವೋಚ್ಛ ನ್ಯಾಯಾಲಯ ಮದುವೆ ಇಲ್ಲದೆಯೇ ಗಂಡು-ಹೆಣ್ಣು ಒಟ್ಟಾಗಿ ಜೀವನ ನಡೆಸಿದರೆ ಅಡ್ಡಿಯಿಲ್ಲ ಎಂಬ ತೀರ್ಮಾನಕ್ಕೆ ಬಂದಿದೆ. ರಾಧಾ-ಕೃಷ್ಣರ ಪ್ರೇಮ ಪ್ರಕರಣವನ್ನು ಉಲ್ಲೇಖಿಸಿ, ಮದುವೆಯಾದರೆ ಅವರಿಬ್ಬರು ದ್ವಾಪರ ಯುಗದಲ್ಲಿ ಒಟ್ಟಾಗಿ ಜೀವಿಸಿದ್ದರೆ, ಎಲ್ಲ ರಂಗಗಳಲ್ಲೂ ಸಾಕಷ್ಟು ಪ್ರಗತಿ ಸಾಧಿಸಿ, ಮುಂದುವರೆದ ಸಮಾಜದಲ್ಲಿ ವಾಸಿಸುತ್ತಿರುವ ಗಂಡು-ಹೆಣ್ಣು ಮದುವೆಯಿಲ್ಲದೆ ಒಟ್ಟಾಗಿರುವುದರಲ್ಲಿ ತಪ್ಪೇನು ಎಂದು ಅಂದಿನ ಮುಖ್ಯ ನ್ಯಾಯಮೂರ್ತಿ ಕೆಜಿ ಬಾಲಕೃಷ್ಣನ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಈ ಅನಿಸಿಕೆಯನ್ನು ಸಮಾಜ ಸ್ವೀಕರಿಸುವುದಾದರೆ, 16 ಸಾವಿರ ಗೋಪಿಕಾ ಸ್ತ್ರೀಯರ ಗೆಳೆತನ ಹೊಂದಿದ್ದ ಕೃಷ್ಣ, ಅವರೊಂದಿಗೂ ಲಿವ್-ಇನ್ ಸಂಬಂಧ ಹೊಂದಿದ್ದನೆಂದು ಭಾವಿಸಬೇಕೇ? ಪತ್ನಿಯರಾದ ರುಕ್ಮಿಣಿ, ಸತ್ಯಭಾಮ, ಜಾಂಬುವತಿಯವರ ಗತಿಯೇನು? ತೊಟ್ಟಿಲಿನಲ್ಲೇ ಮದುವೆ ಆಗುತ್ತಿದ್ದಯುಗದಲ್ಲಿ ವಯಸ್ಸಿಗೆ ಬಂದ ಹೆಣ್ಣು ಮಗಳು ಹುಡುಗನೊಂದಿಗೆ ಮದುವೆಯಿಲ್ಲದೆ ಜೀವಿಸುವ ಧೈರ್ಯವಿತ್ತೆ ಎಂಬುದಿಲ್ಲಿ ಯಕ್ಷ ಪ್ರಶ್ನೆ.

ಕಾರಣ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದರೆ, ಅವರು ಹಾದಿ ತಪ್ಪುತ್ತಾರೆ ಎಂಬ ಭಯದಿಂದ ಹೆತ್ತವರು ಅವರನ್ನು ಶಿಕ್ಷಣ ವಂಚಿತರನ್ನಾಗಿ ಮಾಡುತ್ತಿದ್ದ ದಿನಗಳಲ್ಲಿ ಹುಡುಗನೊಂದಿಗೆ ಸಂಬಂಧ ಹೊಂದಿರುತ್ತಿದ್ದಳೇ? ಹಲವು ಕಟ್ಟುಪಾಡುಗಳ ನಡುವೆ ಬೆಳೆಯುತ್ತಿದ್ದ ಹೆಣ್ಣು ಮಗಳು ತಂದೆ-ತಾಯಿ, ಸಹೋದರ, ಪತಿಯ ನೆರಳಿನಲ್ಲೇ ವಾಸಿಸಬೇಕೆಂಬ ನಿಯಮವಿದ್ದ ಕಾಲವದು.

ಹೀಗಿರುವಾಗ ರಾಧಾ, ಕೃಷ್ಣನೊಂದಿಗೆ ಮದುವೆಯಾಗದೆ ಬಾಳ್ವೆ ನಡೆಸಿದ್ದಳು ಎಂಬುದನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ? ಇಂದಿಗೂ ಈ ಧೋರಣೆಯಲ್ಲಿ ಅಷ್ಟೇನು ಬದಲಾವಣೆಯಾಗಿಲಿ ಪ್ರಗತಿಯಾಗಲಿ ನಮಗೆ ಕಂಡು ಬರುವುದಿಲ್ಲ. ಮುಖ್ಯ ನ್ಯಾಯಮೂರ್ತಿಗಳು ಅವರ ವಿಶ್ಲೇಷಣೆಗೆ ಆಧಾರ ಯಾವುದೆಂದು ನನ್ನಂತಹ ಅಮಾಯಕರಿಗೆ ನೀಡಿದರೆ ಕೃತಾರ್ಥರಾಗುತ್ತಾರೆ. ಇನ್ನು ಸಮಾಜವನ್ನು ಧಿಕ್ಕರಿಸಿ ಒಂದು ವೇಳೆ ಹುಡುಗ-ಹುಡುಗಿಯರು ಮದುವೆ ಇಲ್ಲದೆ ಒಟ್ಟಾಗಿ ಬಾಳ್ವೆ ಮಾಡಿದರೆ ಹುಡುಗಿ ತಾಯ್ತನದ ಹಂತ ತಲುಪಿದಾಗ ಅದರ ಜವಾಬ್ದಾರಿ ತನಗೆ ಬೇಡ ಎಂದು ಹುಡುಗ ಅವಳನ್ನು ತೊರೆದರೆ? ಅವಳ ಭವಿಷ್ಯ? ಅಥವಾ ಅವರಿಬ್ಬರಿಗೂ ಹೊಂದಾಣಿಕೆಯಾದಗದೆ ಬೇರೆಯಾದರೆ, ಹೊಸ ಸಂಗಾತಿಯನ್ನು ಹುಡುಕುವಂತಹ ಪರಿಸ್ಥಿತಿ ಉಂಟಾಗಬಹುದಲ್ಲವೆ? ಹಳೆ ಅಂಗಿ ಕಳಚಿ ಹೊಸ ಅಂಗಿ ತೊಡುವಂತೆ

ಸಂಗಾತಿಗಳನ್ನು ಬದಲಾಯಿಸಲು ಸಾಧ್ಯವೇ? ಇದು ಸಮಾಜದ ಸ್ವಾಸ್ಥ್ಯ ಕೆಡಲು ಕಾರಣವಾಗುವುದಿಲ್ಲವೇ?

ಏಡ್ಸ್ ನಂತಹ ಹಲವು ಭಯಂಕರ ಕಾಯಿಲೆಗಳು ನಮ್ಮನು ಕಾಡುತ್ತಿರುವಾಗ, ಕೇವಲ ಸಮಾಜದ ಮೇಲ್ವರ್ಗದ ಕೆಲ ಕುಟುಂಬಗಳಿಗಷ್ಟೇ ಸೀಮಿತವಾಗಿರುವ

ಲಿವ್-ಇನ್ ಸಂಬಂಧ, ಜನಸಾಮಾನ್ಯ ಕುಟುಂಬಗಳಿಗೂ ವ್ಯಾಪಿಸಿದರೆ ಪೋಷಕರ ಪಾಡೇನು? ಅಂತೆಯೇ ನಗರಗಳಿಂದ ಹಳ್ಳಿಗಳಿಗೂ ಇದು ವ್ಯಾಪಿಸಿದರೆ ಸಾವಿರಾರು ವರ್ಷಗಳಿಂದ ಇಡೀ ವಿಶ್ವಕ್ಕೆ ಮಾದರಿಯಾಗಿರುವ ಭಾರತೀಯ ಮದುವೆ ಸಂಪ್ರಾದಾಯಕ್ಕೆ ಎಂಬ ತಿಲಾಂಜಲಿ ಹಾಡಿದಂತಾಗುವುದಿಲ್ಲವೇ?. ತಮ್ಮ ಮದುವೆ ಶೈಲಿಯಿಂದ ಹೆಚ್ಚುತ್ತಿರುವ ವಿವಾಹ ವಿಚ್ಛೇಧನಗಳಿಂದ ಮುಕ್ತರಾಗಲು ಭಾರತೀಯ ವಿಚಾಹ ಪದಟಛಿತಿಯ ಅನುಕರಣಿಯತ್ತ ಪಾಶ್ಚಾತ್ಯರು ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಿರುವಾಗ, ನಾವು ಲಿವ್-ಇನ್ ಸಂಬಂಧಕ್ಕೆ ಹೆಚ್ಚು ಒತ್ತು ನೀಡುತ್ತಾ ಹೋದರೆ, ನಮ್ಮ ಸಂಪ್ರದಾಯಕ್ಕೆ ಇತಿಶ್ರೀ ಹಾಡಿದಂತಾಗುವುದಿಲ್ಲವೇ ?

ಓದಲು ಮರೆಯದಿರಿ : ಕೊನೆಗೂ ಉಳಿಯುವುದು ಸ್ನೇಹಿತರಷ್ಟೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more