ಭಾರತದ ವಿರುದ್ಧ ಸೋತ ಪಾಕಿಸ್ತಾನ ಆಟಗಾರರಿಗೆ ಕಲ್ಲು ತಗೊಂಡು ಹೊಡೆಯಲು... Asia Cup 2025
ಪಾಕಿಸ್ತಾನವೇ ಹೀಗೆ, ಏನೋ ಮಾಡಲು ಹೋಗಿ ಏನೇನೋ ಮಾಡಿಕೊಂಡು ಒದ್ದಾಡುತ್ತೆ. ಪಾಪಿ ಪಾಕ್ ನೆಲದಲ್ಲಿ ರಾಜಕಾರಣಿಗಳು ಮಾತ್ರವಲ್ಲ ಕ್ರಿಕೆಟ್ ಆಟಗಾರರು ಕೂಡ ಭ್ರಷ್ಟಾಚಾರ ನಡೆಸುತ್ತಾ ದೇಶವನ್ನೇ ಹರಾಜು ಹಾಕುತ್ತಿದ್ದಾರೆ. ಭಾರತದ ವಿರುದ್ಧ ಸದಾ ವಿಷ ಕಾರುತ್ತಾ ಪದೇ ಪದೇ ಸುದ್ದಿಯಲ್ಲಿ ಇರುವ ಇದೇ ಪಾಪಿ ಪಾಕಿಸ್ತಾನ ಕೆಲವೇ ದಿನಗಳ ಹಿಂದೆ ಭಾರತದ ವಿರುದ್ಧ ಯುದ್ಧ ಮಾಡಿತ್ತು. ಅಲ್ಲದೆ ಈ ಯುದ್ಧದಲ್ಲಿ ಹೀನಾಯ ಸೋಲು ಕಂಡು ನರಳಿ ಹೋಗಿತ್ತು. ಇಂತಹ ಸಮಯದಲ್ಲೇ ಭಾರತ & ಪಾಪಿ ಪಾಕಿಸ್ತಾನ ನಡುವೆ ಭರ್ಜರಿ ಕ್ರಿಕೆಟ್ ಮ್ಯಾಚ್ ಕೂಡ ನಡೆದು ಹೋಗಿತ್ತು...
ಈ ಪಾಕಿಸ್ತಾನಕ್ಕೆ ಬುದ್ಧಿ ಬರುವ ಯಾವುದೇ ಲಕ್ಷಣ ಕಾಣುತ್ತಿಲ್ಲ, ತಮ್ಮದೇ ದೇಶದಲ್ಲಿ ಪ್ರಜೆಗಳು ನರಳುವ ಸಮಯದಲ್ಲಿ ಪಾಕಿಸ್ತಾನಕ್ಕೆ ಕಿಂಚಿತ್ತೂ ಕಾಳಜಿಯೇ ಇಲ್ಲ. ಆದ್ರೂ ಬೇರೆ ದೇಶಗಳ ವಿಚಾರದಲ್ಲಿ ಮೂಗು ತೂರಿಸುವುದು ಮಾತ್ರ ನಿಲ್ಲಿಸಿಲ್ಲ. ಭಾರತದ ವಿಚಾರದಲ್ಲಿ ಕೂಡ ಕಿರಿಕ್ ಮಾಡಿ, ಪಾಪಿ ಉಗ್ರರನ್ನ ನಮ್ಮ ದೇಶ ಭಾರತದ ಒಳಗೆ ಛೂ ಬಿಟ್ಟು ಭಾರತದ ನಾಗರಿಕರ ಸಾವಿಗೆ ಇದೇ ಪಾಕಿಸ್ತಾನ ಕಾರಣವಾಗಿತ್ತು.

ಇನ್ನು ಭಾರತ ಕೂಡ ಇದೇ ಕಾರಣಕ್ಕೆ ಪಾಪಿ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿತ್ತು, ಕೊನೆಗೂ ಈ ಯುದ್ಧದಲ್ಲಿ ಸೋತು ಅಮೆರಿಕ ಕಾಲು ಹಿಡಿದು ಪಾಪಿ ಪಾಕ್ ಬಚಾವ್ ಆಗಿತ್ತು. ಇದೇ ಕಾರಣಕ್ಕೆ ಭಾರತ & ಪಾಕಿಸ್ತಾನ ನಡುವಿನ ಏಷ್ಯಾ ಕಪ್-2025 ಕ್ರಿಕೆಟ್ ಮ್ಯಾಚ್ ಭರ್ಜರಿಯಾಗಿ ಕುತೂಹಲವನ್ನ ಕೆರಳಿಸಿತ್ತು. ಮ್ಯಾಚ್ ಶುರುವಾಗುವ ಮೊದಲು ಪಾಕಿಸ್ತಾನ ತಂಡದ ಆಟಗಾರರು ಎಗರಾಡುತ್ತಿದ್ದರು, ಆದರೆ ಪಂದ್ಯವನ್ನು ನಮ್ಮ ಭಾರತ ಭರ್ಜರಿಯಾಗಿ ಗೆದ್ದ ನಂತರ ಪಾಕಿಸ್ತಾನ ಗಪ್‌ಚುಪ್ ಆಗಿತ್ತು!
ಪಾಕಿಸ್ತಾನ ಆಟಗಾರರಿಗೆ ಕಲ್ಲು ತಗೊಂಡು...
ಹೌದು, ಭವ್ಯ ಭಾರತದ ಕ್ರಿಕೆಟ್ ಆಟ ನೋಡಲು ಇಡೀ ಜಗತ್ತೇ ಕಾಯುತ್ತದೆ. ಅದರಲ್ಲೂ ಭಾರತದ ಆಜನ್ಮ ವೈರಿ ಪಾಕಿಸ್ತಾನ ವಿರುದ್ಧದ ಮ್ಯಾಚ್ ನೋಡಲು ಸಿಕ್ಕಾಪಟ್ಟೆ ಕುತೂಹಲದಿಂದ ಕಾಯುತ್ತಾರೆ ಜನ. ಹೀಗಿದ್ದಾಗ ಭಾರತದ ವಿರುದ್ಧ ಯುದ್ಧವನ್ನೂ ಸೋತಿದ್ದ ಪಾಪಿ ಪಾಕ್, ಮೊನ್ನೆ ಮೊನ್ನೆ ಕ್ರಿಕೆಟ್ ಪಂದ್ಯವನ್ನೂ ಸೋತು ಹೋಗಿತ್ತು. ಇದೇ ಕಾರಣಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ರೊಚ್ಚಿಗೆದ್ದಿರುವ ಪಾಕಿಸ್ತಾನ ಪ್ರಜೆಗಳು & ಕ್ರಿಕೆಟ್ ಅಭಿಮಾನಿಗಳು, ಭಾರತದ ವಿರುದ್ಧ ಸೋತ ಪಾಕಿಸ್ತಾನ ಆಟಗಾರರಿಗೆ ಕಲ್ಲು ತಗೊಂಡು ಹೊಡೆಯಲು ಸಜ್ಜಾಗಿದ್ದೀವಿ ಅಂತಾ ಆಕ್ರೋಶ ಹೊರ ಹಾಕುತ್ತಿದ್ದಾರೆ!
ಭಾರತ ತಂಡಕ್ಕೆ ಭರ್ಜರಿ ಗೆಲುವು ಸಿಕ್ಕಿತ್ತು!
ಪಾಕಿಸ್ತಾನ ವಿರುದ್ಧ ಮೊನ್ನೆ ಮೊನ್ನೆ ನಡೆದ ಪಂದ್ಯದಲ್ಲಿ ಭಾರತ ಸಖತ್ ಆಗಿ ಆಟವಾಡಿತ್ತು, ಹೀಗೆ ನಮ್ಮ ದೇಶದ ಕ್ರೀಡಾ ಶಕ್ತಿಯನ್ನೂ ಪಾಕಿಗಳಿಗೆ ಮನದಟ್ಟು ಮಾಡಲಾಗಿತ್ತು. ಪಾಕಿಸ್ತಾನದ ದಾಂಡಿಗರು ಭಾರತದ ಬೌಲಿಂಗ್ ಎದುರಿಸಲು ಆಗದೆ ಕೇವಲ 97 ರನ್ ತಲುಪುವ ಒಳಗೆ 8 ವಿಕೆಟ್ ಕಳೆದುಕೊಂಡಿದ್ರು. ನಿಗದಿತ 20 ಓವರ್ ಮುಗಿಸಿ 9 ವಿಕೆಟ್ ಕಳೆದುಕೊಂಡು 127 ರನ್ ಮಾತ್ರ ಗಳಿಸಿತ್ತು ಪಾಕಿಸ್ತಾನ. ನಂತರ ಸುಲಭದ ಗುರಿ ಬೆನ್ನುಹತ್ತಿದ್ದ ಭಾರತ ಕ್ರಿಕೆಟ್ ತಂಡ, ಕೇವಲ 15.5 ಓವರ್ ಮುಗಿಸುವ ಒಳಗೆ 131 ರನ್ ಚಚ್ಚಿ ತನ್ನ ಗುರಿ ತಲುಪಿತ್ತು. ಹೀಗೆ ಭಾರತದ ವಿರುದ್ಧ ಸೋತ ಪಾಕಿಸ್ತಾನ ತಂಡಕ್ಕೆ ಪಾಠ ಕಲಿಸಲು ಸ್ವತಃ ಪಾಕಿಸ್ತಾನ ಪ್ರಜೆಗಳು ಈಗ ಸಜ್ಜಾಗಿದ್ದಾರಂತೆ...












Click it and Unblock the Notifications