1,600 ವರ್ಷಗಳಿಂದ ನಾಪತ್ತೆ! ರೋಮ್‌ನ ದೋಚಿದ ಚಿನ್ನ ಇನ್ನೂ ಸಿಕ್ಕಿಲ್ಲ, ಲಕ್ಕುಂಡಿಯಂತೆ ಇಲ್ಲೂ ಸವಾಲಾದ ರಹಸ್ಯ

ಇತ್ತೀಚೆಗೆ ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಸಿಕ್ಕಿದ್ದು ದೊಡ್ಡ ಸುದ್ದಿಯಾಗಿದ್ದು, ಹಿರಿಯರು ಇಲ್ಲಿ ಹೂತಿಟ್ಟಿರುವ ಚಿನ್ನದ ಬಗ್ಗೆ ನೂರಾರು ಕಥೆಗಳನ್ನು ಹೇಳುತ್ತಾರೆ .ವಿಜಯನಗರ ಸಾಮ್ರಾಜ್ಯದೊಂದಿಗೆ ಲಕ್ಕುಂಡಿಗೆ ಸಂಪರ್ಕ ಉಂಟು ಎನ್ನುತ್ತಾರೆ. ಒಟ್ಟಿನಲ್ಲಿ ಇಲ್ಲಿಯ ಚಿನ್ನದ ರಹಸ್ಯದ ಬಗ್ಗೆ ಇತಿಹಾಸಕಾರರಿಗೂ ಗೊತ್ತಿಲ್ಲ. ಅದೇ ರೀತಿ ರೋಮ್‌ನ ಅಪಾರ ಚಿನ್ನದ ಬಗ್ಗೆಯೂ ಇದೀಕ ಕುತೂಹಲ ಹೆಚ್ಚಾಗಿದೆ.

ಇತಿಹಾಸದಲ್ಲಿ ನಾಪತ್ತೆಯಾದ ಖಜಾನೆಗಳ ಕಥೆಗಳು ಜನರನ್ನು ಸದಾ ಕುತೂಹಲ ಕೆರಳಿಸುತ್ತದೆ. ಕೆಲವು ಖಜಾನೆಗಳು ನಿಜವಾಗಿಯೂ ಕಣ್ಮರೆಯಾಗಿದ್ದರೆ, ಇನ್ನೂ ಕೆಲವು ಕಥೆಗಳು ಕೇವಲ ದಂತಕಥೆಗಳಾಗಿರಬಹುದು. ಆದರೆ ಇತಿಹಾಸಕಾರರ ಪ್ರಕಾರ, ವಿಶ್ವದ ಅತ್ಯಂತ ರಹಸ್ಯಮಯ ನಿಧಿಗಳಲ್ಲಿ ಒಂದಾಗಿದೆ ವಿಸಿಗೋಥ್ ರಾಜ ಅಲಾರಿಕ್ ದೋಚಿದ ರೋಮ್‌ನ ಖಜಾನೆ.

Rome s Stolen Gold Still Missing

ರೋಮ್ ದೋಚಿದ ವಿಸಿಗೋಥ್ ರಾಜ

ಕ್ರಿ.ಶ. 410ರಲ್ಲಿ ವಿಸಿಗೋಥ್ ರಾಜ ಅಲಾರಿಕ್ ತನ್ನ ಸೇನೆಯೊಡನೆ ರೋಮ್ ನಗರವನ್ನು ದೋಚಿದ್ದನು. ಆ ಕಾಲದಲ್ಲಿ ರೋಮ್ ಯುರೋಪಿನ ಶ್ರೀಮಂತ ಮತ್ತು ಅತ್ಯಂತ ಶಕ್ತಿಶಾಲಿ ನಗರವಾಗಿತ್ತು. ಮೂರು ದಿನಗಳ ಕಾಲ ನಡೆದ ಯುದ್ದದಲ್ಲಿ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಮತ್ತು ಅಮುಲ್ಯ ವಸ್ತುಗಳು ಹಾಗೂ ರಾಜಮನೆತನದ ಸಂಪತ್ತು ವಿಸಿಗೋಥ್ ರಾಜನ ಕೈಗೆ ಸಿಕ್ಕಿತು.

ಇತಿಹಾಸದ ದಾಖಲೆಗಳ ಪ್ರಕಾರ, ರೋಮನ್ ಪ್ರಸಿದ್ಢ ಕಟ್ಟಡಗಳು ಮತ್ತು ಸಮಾಧಿಗಳನ್ನು ಸಹ ಲೂಟಿ ಮಾಡಲಾಯಿತು. ಸಾವಿರ ಕಿಲೋಗ್ರಾಂಗೂ ಹೆಚ್ಚು ತೂಕದ ಬೆಳ್ಳಿಯಿಂದ ನಿರ್ಮಿತವಾದ ವಿಶಾಲ ಅಲಂಕಾರಿಕ ವಸ್ತುವನ್ನೂ ವಿಸಿಗೋಥರ್ ರಾಜ ಕೊಂಡೊಯ್ದಿದ್ದರು ಎಂದು ಹೇಳಲಾಗಿದೆ.

ಸಾವಿರಾರು ವರ್ಷಗಳ ಬಳಿಕ ಬಯಲಾಯ್ತು ಚಿನ್ನದ ನಿಧಿ; ಸೌದಿಯಲ್ಲಿ ಪತ್ತೆಯಾದ 100ಕ್ಕೂ ಹೆಚ್ಚು ಅಪರೂಪದ ಆಭರಣಗಳು!
ಸಾವಿರಾರು ವರ್ಷಗಳ ಬಳಿಕ ಬಯಲಾಯ್ತು ಚಿನ್ನದ ನಿಧಿ; ಸೌದಿಯಲ್ಲಿ ಪತ್ತೆಯಾದ 100ಕ್ಕೂ ಹೆಚ್ಚು ಅಪರೂಪದ ಆಭರಣಗಳು!

ನಿಧಿಯನ್ನು ಅನುಭವಿಸುವ ಮುನ್ನವೇ ವಿಸಿಗೋಥ್ ರಾಜ ನಿಧನ

ರೋಮ್ ದೋಚಿದ ಕೆಲವೇ ತಿಂಗಳುಗಳ ಬಳಿಕ ಅಲಾರಿಕ್ ದಕ್ಷಿಣ ಇಟಲಿಯಲ್ಲಿ ಅಜ್ಞಾತ ಕಾಯಿಲೆಯಿಂದ ಮೃತಪಟ್ಟನು. ಆತನ ನಿಧನ ನಂತರ ದೋಚಿದ ಅಪಾರ ಸಂಪತ್ತಿನ ಭವಿಷ್ಯದ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡವು. ಈ ದಂತಕಥೆಗಳ ಪ್ರಕಾರ, ಅಲಾರಿಕ್‌ನ ಸಮಾಧಿಯೊಂದಿಗೆ ಕೆಲವು ಅಮೂಲ್ಯ ನಿಧಿಗಳನ್ನು ಸಹ ಹೂಳಲಾಗಿತ್ತು. ಆದರೆ ಆ ನಿಧಿ ಎಲ್ಲಿದೆ ಎಂಬುದು ಇಂದಿಗೂ ರಹಸ್ಯವಾಗಿಯೇ ಉಳಿದಿದೆ.

ನದಿಯ ತಳದಲ್ಲಿ ಅಡಗಿದ ಖಜಾನೆ?

ಜನಪ್ರಿಯ ದಂತಕಥೆಯ ಪ್ರಕಾರ, ಅಲಾರಿಕ್‌ನ ಸಮಾಧಿಯನ್ನು ಉತ್ತರ ಇಟಲಿಯ ಬುಸೆಂಟೋ ನದಿಯ ತಳದಲ್ಲಿ ನಿರ್ಮಿಸಲಾಗಿತ್ತು. ಸಮಾಧಿ ನಿರ್ಮಿಸಲು ನದಿಯ ಹರಿವನ್ನು ತಾತ್ಕಾಲಿಕವಾಗಿ ತಿರುಗಿಸಲಾಗಿತ್ತು ಎಂದು ಹೇಳಲಾಗುತ್ತದೆ. ಸಮಾಧಿ ಪೂರ್ಣಗೊಂಡ ಬಳಿಕ ಅದರ ಸ್ಥಳದ ಬಗ್ಗೆ ಯಾರಿಗೂ ತಿಳಿಯದಂತೆ ಮಾಡಲು ಅದಕ್ಕೆ ಕೆಲಸ ಮಾಡಿದವರನ್ನು ಕೊಲ್ಲಲಾಯಿತು ಎಂಬ ಕಥೆಯು ಇದೆ. ಆದ್ದರಿಂದಲೇ ಸಮಾಧಿಯ ನಿಖರ ಸ್ಥಳ ಇನ್ನು ಪತ್ತೆಯಾಗಿಲ್ಲ.

ಹೆದ್ದಾರಿ ನಿರ್ಮಾಣದ ಸಮಯದಲ್ಲಿ ಮೇಲೆದ್ದು ಬಂತು ಚಿನ್ನ, ಬೆಳ್ಳಿ !ಯಾವ ಕಾಲದ ಖಜಾನೆಯೋ ಇದು
ಹೆದ್ದಾರಿ ನಿರ್ಮಾಣದ ಸಮಯದಲ್ಲಿ ಮೇಲೆದ್ದು ಬಂತು ಚಿನ್ನ, ಬೆಳ್ಳಿ !ಯಾವ ಕಾಲದ ಖಜಾನೆಯೋ ಇದು

ನಿಜವಾಗಿಯೂ ನಿಧಿ ನದಿಯಲ್ಲಿದೆಯೇ?

ಆದರೆ ಇತಿಹಾಸಕಾರರು ಈ ಕಥೆಯನ್ನು ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲಾ. ಕೆಲವು ಸಂಶೋಧಕರ ಅಭಿಪ್ರಾಯದಲ್ಲಿ, ಅಲಾರಿಕ್‌ನ ಉತ್ತರಾಧಿಕಾರಿಗಳು ನಿಧಿಯನ್ನು ತಮ್ಮೊಂದಿಗೆ ಗಾಲ್ ಪ್ರದೇಶ ಅಂದರೆ ಇಂದಿನ ಫ್ರಾನ್ಸ್ ದೇಶವಿರುವ ಪಶ್ಚಿಮ ಯುರೋಪ್ ಪ್ರದೇಶಕ್ಕೆ ಕೊಂಡೊಯ್ದಿರಬಹುದು.

ರೋಮನಿಂದ ದೋಚಿದ ಸಂಪತ್ತು ನಂತರ ವಿಸಿಗೋಥರ್ ಸಾಮ್ರಾಜ್ಯ ಸ್ಥಾಪನೆಗೆ ನೆರವಾಗಿತ್ತು ಎಂಬ ದಾಖಲೆಗಳು ಲಭ್ಯವಿದೆ. ಆದ್ದರಿಂದ ಸಂಪೂರ್ಣ ಖಜಾನೆ ಸಮಾಧಿಯಲ್ಲೇ ಹೂಳಲ್ಪಿಟ್ಟಿತೇ ಅಥವಾ ನಂತರ ಬೇರೆಡೆಗೆ ಸಾಗಿಸಲಾಯಿತೆ ಎಂಬ ಪ್ರಶ್ನೆಗೆ ಇನ್ನು ಸ್ಪಷ್ಟ ಉತ್ತರ ಸಿಕ್ಕಿಲ್ಲ.

1,600 ವರ್ಷಗಳ ಹುಡುಕಾಟ

ಕಳೆದ 1,600 ವರ್ಷಗಳಲ್ಲಿ ಅನೇಕ ಸಾಹಸಿಗಳು, ನಿಧಿ ಅನ್ವೇಷಕರು ಮತ್ತು ಇತಿಹಾಸ ಸಂಶೋಧಕರು ಅಲಾರಿಕ್‌ನ ಸಮಾಧಿ ಹಾಗೂ ಖಜಾನೆಯನ್ನು ಹುಡುಕಲು ಪ್ರಯತ್ನಿಸಿದ್ದಾರೆ. ಆದರೆ ಇದುವರೆಗೆ ಯಾವುದೇ ಖಚಿತ ಸಾಕ್ಷ್ಯ ಪತ್ತೆಯಾಗಿಲ್ಲ. ಇಂದಿಗೂ ಅಲಾರಿಕ್‌ನ ನಿಧಿ ಇತಿಹಾಸದ ಅತಿದೊಡ್ಡ ರಹಸ್ಯಗಳಲ್ಲಿ ಒಂದಾಗಿ ಉಳಿದಿದೆ. ಅದು ನಿಜವಾಗಿಯೂ ಬುಸೆಂಟೋ ನದಿಯ ತಳದಲ್ಲಿದೆಯೇ ಅಥವಾ ಬಹಳ ಹಿಂದೆಯೇ ಬೇರೆಡೆಗೆ ಸಾಗಿಸಲ್ಪಟ್ಟಿದೆಯೇ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+