ರೈಲು ಅಲ್ಲ ಓಯೋ ರೂಂ... ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಫುಲ್ ವೈರಲ್! Train Timings
ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು... ಈ ಹಾಡು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಕನ್ನಡ ಸಿನಿಮಾ ರಂಗದಲ್ಲಿ ಧೂಳ್ ಎಬ್ಬಿಸಿದ್ದ, ರವಿಚಂದ್ರನ್ ಅವರ ರಣಧೀರ ಸಿನಿಮಾದ ಸಾಂಗ್ ಇದು. ಹೀಗೆ ಸಿನಿಮಾಗಳಲ್ಲಿ ಕೂಡ ಲವ್ ಅಂದ್ರೆ ಪ್ರೀತಿ ಮಾಡುವವರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗಿತ್ತು. ಆದರೆ, ಹೀಗೆ ಪ್ರೀತಿ ಮಾಡುವವರಿಗೆ ಧೈರ್ಯ ತುಂಬಿದ್ದು ಮದುವೆ ಆಗಿ ಸಂಸಾರ ನಡೆಸಲಿ ಅಂತಾ. ಹೀಗಿದ್ದಾಗ, ರೈಲು ಬೋಗಿಯ ಒಳಗೆ ನೂರಾರು ಜನರ ಎದುರಲ್ಲೇ ಈ ಲವ್ವರ್ಸ್ ಮಾಡಿದ್ದು ಏನು ಗೊತ್ತಾ?
ಬೆಂಗಳೂರಿನ ಪಾರ್ಕ್ & ಸಾರ್ವಜನಿಕ ಸ್ಥಳಗಳಲ್ಲಿ ಲವ್ವರ್ಸ್ ಕಾಟ ಜಾಸ್ತಿ ಆಗಿದೆ ಅಂತಾ ಪದೇ ಪದೇ ದೂರು ಹೇಳುತ್ತಿದ್ದರು ಸಾರ್ವಜನಿಕರು. ಹಾಗೇ ಮೌಲ್ಯದ ಪಾಠವನ್ನೂ ಈಗಿನ ಕಾಲದ ಪ್ರೇಮಿಗಳಿಗೆ ಹಿರಿಯರು ಮಾಡಿದ್ದಾರೆ. ಇಷ್ಟೆಲ್ಲಾ ಮಾಡಿದ್ದರೂ ಲವ್ವರ್ಸ್ ಮಾತ್ರ ಬದಲಾಗುವ ಲಕ್ಷಣಗಳೇ ಈಗ ಕಾಣಿಸುತ್ತಿಲ್ಲ ಅಂತಾ ಹೇಳಬಹುದು. ಹೀಗಿದ್ದಾಗಲೇ, ರೈಲು ಅಲ್ಲ ಓಯೋ ರೂಂ... ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಫುಲ್ ವೈರಲ್!

ರೈಲು ಅಲ್ಲ ಓಯೋ ರೂಂ...
ಹೌದು, ಭಾರತದಲ್ಲಿ ಜನಸಂಖ್ಯೆ ಹೆಚ್ಚು ಹೀಗಿದ್ದಾಗ ಅನಿವಾರ್ಯ ಸ್ಥಿತಿಯಲ್ಲಿ ಜನರು ರೈಲು ಪ್ರಯಾಣ, ಮತ್ತು ಸರಕು ಸಾಗಾಣಿಕೆಗೆ ಕೂಡ ಬಹುತೇಕ ರೈಲುಗಳನ್ನೇ ಅವಲಂಬಿಸಿದ್ದಾರೆ. ಹೀಗಿದ್ದಾಗ ಭಾರತೀಯ ರೇಲ್ವೆಗೆ ದೊಡ್ಡ ಇತಿಹಾಸ ಇದ್ದು, ಜಗತ್ತಿನಾದ್ಯಂತ ದೊಡ್ಡ ಹೆಸರು ಕೂಡ ಇದೆ. ಆದರೆ ಇತ್ತೀಚಿಗೆ ಕೆಲ ವಿಡಿಯೋಗಳು ವೈರಲ್ ಆಗುತ್ತಿವೆ. ಅದರಲ್ಲೂ ಇದೀಗ ರೈಲಿನಲ್ಲೇ ಲವ್ವರ್ಸ್ ಮಾಡಿರುವ ಆ ಕೆಲಸಕ್ಕೆ ಸಂಚಲನ ಸೃಷ್ಟಿಯಾಗಿದೆ...
ರೈಲಿನಲ್ಲಿ ಲವರ್ಸ್ ರೊಮ್ಯಾನ್ಸ್ ಮಾಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನ ಸೃಷ್ಟಿ ಮಾಡಿದ್ದು, ಪಬ್ಲಿಕ್ ಪ್ಲೇಸ್‌ನಲ್ಲಿ ಈ ರೀತಿ ವರ್ತಿಸುವುದು ಎಷ್ಟು ಸರಿ? ಅಂತಾ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ ನಡೆಯುತ್ತಿದೆ. ಅಲ್ಲದೆ ನೆಟ್ಟಿಗರು ಈ ಬಗ್ಗೆ ಆಕ್ರೋಶ ಹೊರ ಹಾಕುತ್ತಿದ್ದು, ಯಾವ ರೈಲಿನಲ್ಲಿ ಘಟನೆ ನಡೆದಿದೆ? ಅನ್ನೋ ಬಗ್ಗೆ ಮಾಹಿತಿ ಇನ್ನೂ ಸಿಕ್ಕಿಲ್ಲ.












Click it and Unblock the Notifications