ನೇಪಾಳ ಜೊತೆ ಗಟ್ಟಿಯಾಗುತ್ತಿದೆ ಭಾರತದ ಬಾಂಧವ್ಯ, ಜಾಗತಿಕ ಮಟ್ಟದಲ್ಲಿ ಚರ್ಚೆ...
ಭಾರತ ಏಷ್ಯಾದ ಅತಿದೊಡ್ಡ ರಾಷ್ಟ್ರವಾಗಿದ್ದರೂ ಅಕ್ಕಪಕ್ಕದ ದೇಶಗಳು ಒಂದೊಂದಾಗಿ ಬೇರೆ ಬೇರೆ ಹಾದಿ ಹಿಡಿದಿದ್ದವು. ಅದರಲ್ಲೂ ಭಾರತದ ಜೊತೆಗೆ ಗಟ್ಟಿಯಾದ ಬಾಂಧವ್ಯ ಹೊಂದಿದ್ದ ನೇಪಾಳದ ಪರಿಸ್ಥಿತಿ ಕೂಡ ಬದಲಾಗಿ ಹೋಗಿತ್ತು ಎನ್ನುವಾಗಲೇ ಅಲ್ಲೋಲ ಕಲ್ಲೋಲ ಉಂಟಾಗಿತ್ತು. ನೇಪಾಳ ದೇಶದಲ್ಲಿ ಹೊಸ ತಲೆಮಾರಿನ ಯುವಕರು ದೊಡ್ಡ ಹೋರಾಟ ಶುರು ಮಾಡಿದ್ದರು.
ಮತ್ತೊಂದು ಕಡೆ ಈ ಹೋರಾಟ ದೊಡ್ಡದಾಗಿ ಕೊನೆಗೆ ಏನೇನೋ ಆಗಿ ಹೋಗಲಿದೆ ಎಂಬ ಭಯವೂ ನೇಪಾಳ ದೇಶದಲ್ಲಿ ಎದುರಾಗಿತ್ತು. ಆದರೆ, ಕೊನೆಗೂ ನೇಪಾಳ ತಣ್ಣಗಾಗಿ ಇದೀಗ ಹೊಸ ಹಾದಿಗೂ ಹೆಜ್ಜೆ ಹಾಕಿದೆ, ಇದೇ ಸಮಯದಲ್ಲೇ ಭಾರತದ ಜೊತೆಗೂ ಉತ್ತಮ ಸಂಬಂಧ ರೂಪುಗೊಂಡಿದೆ. ಈ ಮೂಲಕ ಮತ್ತೊಂದು ಹೊಸ ಮನ್ವಂತರ ಆರಂಭವಾಗಿದೆ.

ಹೌದು, ನೇಪಾಳ ಮತ್ತು ಭಾರತದ ಸಂಬಂಧ ಶತಮಾನಗಳ ಹಿಂದಕ್ಕೆ ಹೋಗುತ್ತದೆ. ಹೀಗಿದ್ದಾಗಲೂ ಕೆಲವು ವರ್ಷಗಳಿಂದ ನೇಪಾಳ ಮತ್ತು ಭಾರತದ ಸಂಬಂಧ ಹಳಸುತ್ತಾ ಹೋಗಿತ್ತು. ಆದರೆ ಪ್ರತಿಭಟನೆ ನಂತರ ನೇಪಾಳ ಮತ್ತು ಭಾರತದ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ. ಅದರಲ್ಲೂ ನೇಪಾಳ ನೆಲದಲ್ಲಿ ಅಸ್ತಿತ್ವಕ್ಕೆ ಬಂದ ಹೊಸ ಸರ್ಕಾರ ಭಾರತದ ಜೊತೆಗೆ ಉತ್ತಮ ಸಂಬಂಧ ಹೊಂದಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಕೂಡ ನೇಪಾಳ ಜೊತೆಯಲ್ಲಿ ಸತತ ಸಂಪರ್ಕದಲ್ಲಿ ಇದೆ.
ಹೊತ್ತಿ ಉರದಿತ್ತು ನೇಪಾಳ ದೇಶ
ಅಂದಹಾಗೆ ನೇಪಾಳ ನೆಲದಲ್ಲಿ ದೊಡ್ಡ ಬೆಂಕಿಯ ಕಿಡಿ ಹೊತ್ತಿಕೊಂಡು ಏನೇನೋ ಆಗಿ ಹೋಗಿತ್ತು. ಈ ಕಾರಣಕ್ಕೆ ಚಿಂತೆ ಕೂಡ ಹೆಚ್ಚಾಗಿತ್ತು, ಆದರೆ ಇದೀಗ ಪರಿಸ್ಥಿತಿ ಸುಧಾರಣೆ ಕಾಣುತ್ತಿದೆ. ಹೀಗಾಗಿ ಇದೀಗ ನೇಪಾಳ ಮತ್ತು ಭಾರತ ನಡುವೆ ಹೊಸ ಮಾತುಕತೆ ಆರಂಭವಾಗುವ ನಿರೀಕ್ಷೆ ಕೂಡ ಮೂಡಿದೆ. ಹಾಗೇ ನೇಪಾಳ ಮತ್ತು ಭಾರತದ ನಡುವೆ ಉತ್ತಮ ಸಂಬಂಧ ರೂಪುಗೊಂಡರೆ ಅದು ಭವಿಷ್ಯದಲ್ಲೂ ಉತ್ತಮ ಫಲಿತಾಂಶ ನೀಡುವ ನಿರೀಕ್ಷೆ ಇದೆ.












Click it and Unblock the Notifications