1,000 ಮೃತದೇಹ ಕಳುಹಿಸಿದ ರಷ್ಯಾ, ಬಿಕ್ಕಿಬಿಕ್ಕಿ ಅಳುತ್ತಿರುವ ಉಕ್ರೇನ್ ಪ್ರಜೆಗಳು... Ukraine War
ಎಲ್ಲಿ ನೋಡಿದರೂ ಹೆಣಗಳ ರಾಶಿ, ಮನೆ ಮನೆಗಳಲ್ಲಿ ಕೊಳೆತು ಹೋಗಿರುವ ಶವಗಳು... ಇಷ್ಟೆಲ್ಲಾ ರಣಭೀಕರ ದೃಶ್ಯಗಳು ಕಂಡು ಬರುವುದು ಉಕ್ರೇನ್ ಎಂಬ ನತದೃಷ್ಟ ದೇಶದಲ್ಲಿ. ಯಾಕಂದ್ರೆ ರಷ್ಯಾ ವಿರುದ್ಧ ಯುದ್ಧಕ್ಕೆ ನಿಂತಿರುವ ಉಕ್ರೇನ್‌ಗೆ ಇದೀಗ ಸಾವಿನ ಶಿಕ್ಷೆ ಸಿಗುತ್ತಿದೆ. ಉಕ್ರೇನ್ ದೇಶದಲ್ಲಿ ಈ ಕ್ಷಣವೂ ಜೀವಗಳು ಹೋಗುತ್ತಿದ್ದು, ರಷ್ಯಾ ನಡೆಸುತ್ತಿರುವ ದಾಳಿಗೆ ಲಕ್ಷಾಂತರ ಜನ ಈಗಾಗಲೇ ಬಲಿ ಆಗಿರುವ ಆರೋಪ ಕೇಳಿ ಬರುತ್ತಿದೆ. ಇಂತಹ ಪರಿಸ್ಥಿತಿಯಲ್ಲೇ 1,000 ಮೃತದೇಹ ಕಳುಹಿಸಿದ ರಷ್ಯಾ, ಬಿಕ್ಕಿಬಿಕ್ಕಿ ಅಳುತ್ತಿರುವ ಉಕ್ರೇನ್ ಪ್ರಜೆಗಳು...
ನಿಮಗೆಲ್ಲಾ ಗೊತ್ತಿರುವಂತೆ ರಷ್ಯಾ ತನ್ನ ಸೇನೆಯಲ್ಲಿರುವ ಎಲ್ಲಾ ಬಲಿಷ್ಠ ಅಸ್ತ್ರಗಳನ್ನು ಇದೀಗ ಉಕ್ರೇನ್ ವಿರುದ್ಧ ಬಳಸುತ್ತಿದ್ದು ಭಾರಿ ದೊಡ್ಡ ತಲ್ಲಣ ಸೃಷ್ಟಿಯಾಗಿದೆ. 2022 ಫೆಬ್ರವರಿ ತಿಂಗಳಲ್ಲಿ ಶುರುವಾಗಿದ್ದ ಯುದ್ಧ ಇನ್ನೇನು 4 ವರ್ಷ ಪೂರೈಸಲಿದೆ. ಹೀಗಾಗಿ ಎಲ್ಲಾ ಕಡೆ ಭಾರಿ ದೊಡ್ಡ ಸಂಚಲನ ಸೃಷ್ಟಿಯಾಗಿದೆ ಹಾಗೂ ಈ ಯುದ್ಧವನ್ನ ನಿಲ್ಲಿಸಬೇಕು ಎಂಬ ಹೋರಾಟ ಜೋರಾಗಿದೆ. ಆದ್ರೂ ರಷ್ಯಾ ಮಾತ್ರ ತನ್ನ ಹಠ ಬಿಡದೆ & ದೊಡ್ಡ ಮಟ್ಟದಲ್ಲಿ ದಾಳಿ ಮಾಡುತ್ತಿದೆ. ಹೀಗಿದ್ದಾಗಲೇ ಇಂದು ಮತ್ತೊಂದು ಆಘಾತ ನೀಡಿದೆ ರಷ್ಯಾ ಸೇನೆ.

ರಷ್ಯಾ ಸೇನೆಯಿಂದ ಭೀಕರ ಆಘಾತ
ಹೌದು, ಉಕ್ರೇನ್ ನೆಲಕ್ಕೆ ನುಗ್ಗಿ ರಷ್ಯಾ ಘೋರವಾದ ಯುದ್ಧವನ್ನೇ ನಡೆಸುತ್ತಿದ್ದು ಭಾರಿ ಅಲ್ಲೋಲ & ಕಲ್ಲೋಲ ಸೃಷ್ಟಿಯಾಗಿದೆ. ಈಗಾಗಲೇ ಲಕ್ಷಾಂತರ ಸೈನಿಕರ ಜೀವ ಕೂಡ ಹೋಗಿದ್ದು, ಉಕ್ರೇನ್ ಈ ಎಲ್ಲಾ ನಷ್ಟಗಳ ನಡುವೆ ಕೂಡ ಯುದ್ಧ ನಿಲ್ಲಿಸಲು ಸಿದ್ಧವಿಲ್ಲ. ಹೀಗಾಗಿ ಭಾರಿ ದೊಡ್ಡ ಗಲಾಟೆಯೇ ಇದೀಗ ಶುರುವಾಗಿದೆ. ಇದರ ಪರಿಣಾಮ ಉಕ್ರೇನ್ ಸೈನಿಕರು ದೇಶಬಿಟ್ಟು ಓಡಿ ಹೋಗುತ್ತಿದ್ದಾರೆ. ಈ ಪರಿಸ್ಥಿತಿ ನಡುವೆ ಇಂದು ದಿಢೀರ್ 1,000 ಮೃತದೇಹ ಕಳುಹಿಸಿದ ರಷ್ಯಾ ಮಿಲಿಟರಿ ಇನ್ನೊಂದು ಭಾರಿ ದೊಡ್ಡ ಆಘಾತವನ್ನೇ ನೀಡಿದೆ. ಹಾಗೇ ಉಕ್ರೇನ್ ಅಧ್ಯಕ್ಷನ ಅಹಂಕಾರ ಕೂಡ ಈ ಯುದ್ಧವು ಹೀಗೆ ಮುಂದುವರಿಯಲು ಕಾರಣ ಎಂಬ ಆರೋಪ ಕೇಳಿಬರುತ್ತಿದೆ.












Click it and Unblock the Notifications