Gold Rate Today: ಶುಭ ಶುಕ್ರವಾರವೇ ಚಿನ್ನ-ಬೆಳ್ಳಿ ಖರೀದಿದಾರರಿಗೆ ಶಾಕ್‌, ಎಷ್ಟಿದೆ ಇಂದಿನ ದರ?

ಶುಭ ಶುಕ್ರವಾರದಂದು ಚಿನ್ನ ಖರೀದಿಗೆ ಜನ ಮುಂದಾಗುತ್ತಿದೆ. ಈ ದಿನ ಚಿನ್ನ ಖರೀದಿಸಿದರೆ ಒಳ್ಳೆಯದು ಎನ್ನುವ ನಂಬಿಕೆಯೂ ಇದೆ. ಆದರೆ ಕಳೆದ ಎರಡು ದಿನಗಳಿಂದ ಚಿನ್ನ ಹಾಗೂ ಬೆಳ್ಳಿಯ ದರಗಳು ಭಾರೀ ಇಳಿಕೆ ಕಂಡಿದ್ದವು. ಆದರೆ ಇಂದು ಚಿನ್ನದ ದರವು ದಿಢೀರ್‌ ಮತ್ತೆ ಏರಿಕೆ ಕಂಡಿದೆ. ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಇಂದಿನ 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಹಾಗೂ ಬೆಳ್ಳಿಯ ದರಗಳು ಗ್ರಾಂ.ಗೆ ಎಷ್ಟಿದೆ? ಎನ್ನುವ ಮಾಹಿತಿ ಇಲ್ಲಿ ತಿಳಿಯಿರಿ.

ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹11,133, 22 ಕ್ಯಾರೆಟ್ ಚಿನ್ನಕ್ಕೆ ₹10,205 ಮತ್ತು 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹8,350 ಇದೆ. ಬೆಂಗಳೂರಿನಲ್ಲಿ ಇಂದಿನ 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹11,133, 8 ಗ್ರಾಂ. ಚಿನ್ನದ ದರ ₹89,064, 10 ಗ್ರಾಂ. ಚಿನ್ನದ ದರ ₹1,11,330, 100 ಗ್ರಾಂ. ಚಿನ್ನದ ದರ ₹11,13,300 ಆಗಿದ್ದು, ಬರೋಬ್ಬರಿ ₹1,600 ಏರಿಕೆ ಕಂಡಿದೆ.

Gold Rate India Bengaluru Today Sep 19 2025

ಬೆಂಗಳೂರಿನಲ್ಲಿ ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂ.ಗೆ ₹10,205, 8 ಗ್ರಾಂ.ಗೆ ₹81,640, 10 ಗ್ರಾಂ.ಗೆ ₹1,02,050, 100 ಗ್ರಾಂ.ಗೆ ₹10,20,500 ಆಗಿದೆ. ನಿನ್ನೆಗಿಂತ ದರ ₹1,500 ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಇಂದಿನ 18 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹8,350, 8 ಗ್ರಾಂ.ಗೆ ₹66,800, 10 ಗ್ರಾಂ.ಗೆ ₹83,500, 100 ಗ್ರಾಂ.ಗೆ ₹8,35,000 ಆಗಿದ್ದು, ನಿನ್ನೆಗಿಂತ ₹1,200 ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಕಳೆದ 10 ದಿನಗಳ ಚಿನ್ನದ ದರಪಟ್ಟಿ (ಗ್ರಾಂ.ಗೆ)

ದಿನಾಂಕ: 24 ಕ್ಯಾರೆಟ್ ಚಿನ್ನ; 22 ಕ್ಯಾರೆಟ್ ಚಿನ್ನ

ಸೆಪ್ಟೆಂಬರ್ 19, ₹11,133 ; ₹10,205

ಸೆಪ್ಟೆಂಬರ್ 18, ₹11,117 ; ₹10,190

ಸೆಪ್ಟೆಂಬರ್ 17, ₹11,171 ; ₹10,240

ಸೆಪ್ಟೆಂಬರ್ 16, ₹11,193 ; ₹10,260

ಸೆಪ್ಟೆಂಬರ್ 15, ₹11,106 ; ₹10,180

ಸೆಪ್ಟೆಂಬರ್ 14, ₹11,117 ; ₹11,117

ಸೆಪ್ಟೆಂಬರ್ 13, ₹11,117 ; ₹10,190

ಸೆಪ್ಟೆಂಬರ್ 12, ₹11,128 ; ₹10,200

ಸೆಪ್ಟೆಂಬರ್ 11, ₹11,051 ; ₹10,130

ಸೆಪ್ಟೆಂಬರ್ 10, ₹11,051 ; ₹10,130

ಸೆಪ್ಟೆಂಬರ್ 09, ₹11,029 ; ₹10,110

ಬೆಳ್ಳಿ ದರ ಎಷ್ಟಿದೆ?

ಬೆಳ್ಳಿಯ ದರ ಕೂಡ ನಿನ್ನೆಗಿಂತ ಮತ್ತೆ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ ₹133.70 ಮತ್ತು ಪ್ರತಿ ಕಿಲೋಗ್ರಾಂಗೆ ₹1,33,700 ಆಗಿದೆ. ಪ್ಲಾಟಿನಂ ಬೆಲೆ ಕೂಡ ಇಂದು ದಿಢೀರ್‌ ಏರಿಕೆ ಕಂಡಿದ್ದು, ಬೆಂಗಳೂರಿನಲ್ಲಿ ಇಂದು ಪ್ಲಾಟಿನಂ ಬೆಲೆ ಪ್ರತಿ ಗ್ರಾಂಗೆ ₹3,928 ಮತ್ತು 10 ಗ್ರಾಂಗೆ ₹39,280 ನಿಗದಿಯಾಗಿದೆ. ಚಿನ್ನದ ದರವು ಈ ವಾರ ಹಾವು-ಏಣಿ ಆಟ ಆಡುತ್ತಿದ್ದು, ಮುಂದಿನ ವಾರ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+