ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Psychology: ಕೆಲಸದ ಒತ್ತಡ ಹಾಗೂ ನಿರ್ವಹಣಾ ಕ್ರಮಗಳು

By ರೇಖಾ ಬೆಳವಾಡಿ, ಆಪ್ತ ಸಲಹೆಗಾರರು
|
Google Oneindia Kannada News

ಆಫೀಸಿನಲ್ಲಿ ಹೊಸದಾದ ಪ್ರಾಜೆಕ್ಟ್‌ಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಯಾರು ಯಾವ ಟೀಮಿನಲ್ಲಿ ಕೆಲಸ ಮಾಡಬೇಕು? ಅವರವರ ಪಾತ್ರಗಳು ಹಾಗು ಜವಾಬ್ದಾರಿಗಳ (roles and responsibilities), ಈ ಪ್ರಾಜೆಕ್ಟ್‌ಗಳು ಪೂರ್ಣಗೊಳ್ಳಲು ಹಿಡಿಯುವ ಸಮಯದ ಬಗ್ಗೆ ಮಾತನಾಡುತ್ತಿದ್ದರು.

ಎಲ್ಲರ ಮುಖದಲ್ಲೂ ಒಂದು ರೀತಿಯ ಒತ್ತಡ ಕಾಣುತ್ತಿತ್ತು. ಇದನ್ನು ಗಮಸಿದ ಅಲ್ಲಿನ ಮುಖ್ಯಸ್ಥರು , ಪರಿಸ್ಥಿತಿಯನ್ನು ಶಾಂತವಾಗಿಸಲು, ನೀರು ತುಂಬಿದ ಒಂದು ಗಾಜಿನ ಲೋಟವನ್ನು ಹಿಡಿದು ಎಲ್ಲರನ್ನು ಉದ್ದೇಶಿಸಿ "ಈ ಲೋಟವನ್ನು ಗಮನಿಸಿ" ಎಂದರು...

Psychology: ನಕಾರಾತ್ಮಕ ಭಾವನೆ ಬದಲಾಯಿಸಿಕೊಳ್ಳುವುದು ಹೇಗೆ?Psychology: ನಕಾರಾತ್ಮಕ ಭಾವನೆ ಬದಲಾಯಿಸಿಕೊಳ್ಳುವುದು ಹೇಗೆ?

ಅಲ್ಲಿದ್ದವರೆಲ್ಲಾ ನಗುತ್ತಾ...ಇದು ಬಹಳ ಹಳೆಯದಾದ ಪ್ರಶ್ನೆ, "ಗಾಜಿನ ಲೋಟದಲ್ಲಿ ಎಷ್ಟು ನೀರು ತುಂಬಿದೆ?" ಎಂದು‌ ಅಲ್ಲವೇ?

Psychology: How to overcome Work pressure, Stress

ಈ ಪ್ರಶ್ನೆಗೆ ನನಗೆ ಉತ್ತರ ತಿಳಿದಿದೆ ....ನಾನು ಉತ್ತರಿಸುತ್ತೇನೆ ತಾನು ಉತ್ತರಿಸುತ್ತೇನೆ ಅರ್ಧ ತುಂಬಿದೆ, ಅರ್ಧ ಖಾಲಿ ಇದೆ ಎನ್ನುತ್ತಾ ಮುಂದೆ ಬರುತ್ತಾರೆ.

ಆಗ ಮುಖ್ಯಸ್ಥರು ತಲೆ ಅಲ್ಲಾಡಿಸುತ್ತಾ "ಇಂದಿನ ಪ್ರಶ್ನೆಯೇ ಬೇರೆ" ಎನ್ನುತ್ತಾ... ಅವರನ್ನು ನಾಲ್ಕು ತಂಡಗಳಾಗಿ ವಿಂಗಡಿಸಿ‌, ಕೇಳುವ ಪ್ರಶ್ನೆಯನ್ನು ಗಮನಿಸಿ ಅರ್ಥೈಸಿಕೊಂಡು, ಚರ್ಚಿಸಿ‌ ಉತ್ತರಿಸಿಬೇಕೆಂದು ಹೇಳುತ್ತಾರೆ.

"ನಿಮ್ಮ ಪ್ರಕಾರ ಈ ಗಾಜಿನ ಲೋಟದಲ್ಲಿರುವ ನೀರು ಎಷ್ಟು ಭಾರವಿದೆ? " ಎಂದು ಕೇಳುತ್ತಾರೆ. ಆಗ ತಂಡಗಳು ಸ್ವಲ್ಪ ತಳಮಳಗೊಳ್ಳುತ್ತದೆ.

ಜೀವನದಲ್ಲಿ ''ಸಿಲುಕಿ ಹಾಕಿಕೊಂಡ'' ಭಾವನೆ, ಹೊರಬರೋದು ಹೇಗೆ?ಜೀವನದಲ್ಲಿ ''ಸಿಲುಕಿ ಹಾಕಿಕೊಂಡ'' ಭಾವನೆ, ಹೊರಬರೋದು ಹೇಗೆ?

ಕೆಲವರು 100 ಮಿ.ಲೀಟರ್, ಕೆಲವರು 200 ಮಿ.ಲೀಟರ್, ಇನ್ನೂ ಕೆಲವರು 500 ಮಿ.ಲೀಟರ್, ಮತ್ತೂ ಕೆಲವರು 600ಮಿ.ಲೀಟರ್ ಎಂದು ಉತ್ತರಿಸುತ್ತಾ... ಸರಿಯಾದ ಉತ್ತರವನ್ನು ಮುಖ್ಯಸ್ಥರೇ ಹೇಳಬೇಕೆಂದು ಕೇಳಿಕೊಳ್ಳುತ್ತಾರೆ.

ಆಗ ಮುಖ್ಯಸ್ಥರು ನಗುತ್ತಾ "ಎಷ್ಟು ಭಾರವಿದೆ ಎಂದು ನನಗೂ ಸರಿಯಾಗಿ ತಿಳಿದಿಲ್ಲ".

Psychology: How to overcome Work pressure, Stress

ಆದರೆ ಈ ನೀರಿನ ಲೋಟವನ್ನು ಎಷ್ಟು ಹೊತ್ತಿನ ತನಕ ನಾನು ಕೈಯಲ್ಲಿ ಹಿಡಿಯಕೊಂಡಿರಬಲ್ಲೆ ಎಂಬುದರ ಮೇಲೆ ನೀರಿನ ಭಾರ ತಿಳಿಯುತ್ತಾ ಹೋಗುತ್ತದೆ, 100ಮಿ ಲೀಟರ್ ಆಗಲೀ ಅಥವಾ ಒಂದು ಲೀಟರ್ ಆಗಲೀ ಲೆಕ್ಕಕ್ಕೆ ಬರುವುದಿಲ್ಲ ಎನ್ನುತ್ತಾ ಮಾತನ್ನು ಮುಂದುವರೆಸುತ್ತಾರೆ‌. ಎಲ್ಲರೂ ಕುತೂಹಲದಿಂದ ಕೇಳುತ್ತಾರೆ.

ನೀರಿನ‌ ಲೋಟವನ್ನು ಒಂದು ನಿಮಿಷಗಳವರೆಗೆ ಆರಾಮವಾಗಿ ಹಿಡಿದಿಟ್ಟುಕೊಳ್ಳಬಹುದು. ಅಂತಹ ಅಡೆತಡೆಗಳೇನೂ ಇರುವುದಿಲ್ಲ.

ನೀರಿನ ಲೋಟವನ್ನು ಒಂದು ಗಂಟೆ ಕೈಯಲ್ಲಿ ಎತ್ತಿಹಿಡಿದುಕೊಂಡರೆ, ಕೈಯಲ್ಲಿ ನೋವು ಅನುಭವಕ್ಕೆ ಬರುವುದು.

ನೀರಿನ ಲೋಟವನ್ನು ಒಂದು ದಿನವೆಲ್ಲಾ ಹಿಡಿದುಕೊಂಡಿದ್ದರೆ, ಕೈ ವಿಪರೀತ ನೋವು ಹಾಗು ಜೌ/ಜಡ ಹಿಡಿದು, ಚಲಿಸದಂತಾಗಬಹುದು.

Psychology: ಆಲೋಚನೆ ನಿಗ್ರಹ, ದುರ್ಬಲ ಮನಸ್ಸು ಹತೋಟಿ ಹೇಗೆ?Psychology: ಆಲೋಚನೆ ನಿಗ್ರಹ, ದುರ್ಬಲ ಮನಸ್ಸು ಹತೋಟಿ ಹೇಗೆ?

ಈ ಮೇಲಿನ ಮೂರೂ ಸಂದರ್ಭಗಳಲ್ಲಿ, ಗಾಜಿನಲ್ಲಿದ್ದ ನೀರು ಅಷ್ಟೇ ಇದೆ, ಅದರಲ್ಲಿ ಯಾವುದೇ ರೀತಿಯ ಬದಲಾವಣೆ ಆಗಿಲ್ಲ. ಆದರೆ ಹೆಚ್ಚು ಹೆಚ್ಚು ಸಮಯದ ವರೆಗೆ ನೀರಿನ ಲೋಟವನ್ನು ಹಿಡಿದಂತೆ ನೋವೂ ಸಹ ಹೆಚ್ಚುತ್ತಾ ಹೋಗುತ್ತದೆ.

ಈ ಗಾಜಿನ ಲೋಟದ ನೀರಿನ್ನು ನಮ್ಮ ಜೀವನದ ಒತ್ತಡ, ಆತಂಕಗಳಿಗೆ ಹೋಲಿಸಿಕೊಳ್ಳಬಹುದು. ಒತ್ತಡಗಳು, ಜೀವನದಲ್ಲಿ ಸಹಜ. ಯಾರೊಬ್ಬರೂ ಒತ್ತಡ ರಹಿತರು ಎಂದು ಹೇಳಲಾಗುವುದಿಲ್ಲ. ಸಣ್ಣ ಮಕ್ಕಳಿಂದ ಹಿಡಿದು, ವೃದ್ಧಾಪ್ಯದ ತನಕ ಎಲ್ಲಾ ಹಂತಗಳಲ್ಲೂ ಒತ್ತಡಗಳನ್ನು ಎಲ್ಲರೂ ಅನುಭವಿಸುತ್ತಾರೆ. ಆದರೆ ಎಷ್ಟು ಹೊತ್ತಿನ ತನಕ ನೀವು ಒತ್ತಡದ ಬಗ್ಗೆಯೇ ಗಮನಿಸುತ್ತೀರಿ ಎಂಬುದರಲ್ಲಿ ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತೇವೆ.

ಒಂದೆರಡು ನಿಮಿಷಗಳು ಒತ್ತಡ ತರುವ ವಿಚಾರಗಳ ಬಗ್ಗೆ ಯೋಚಿಸಬಹುದು. ನಮ್ಮ ದಿನ ನಿತ್ಯದ ಕೆಲಸದ ಮೇಲಾಗಲೀ ನಮ್ಮ ದೈಹಿಕ ಹಾಗು ಮಾನಸಿಕ‌ ಆರೋಗ್ಯದ ಮೇಲಾಗಲೀ ಅಂತಹ ಪರಿಣಾಮ ಬೀರುವುದಿಲ್ಲ.

Psychology: How to overcome Work pressure, Stress

ಸ್ವಲ್ಪ ಹೆಚ್ಚು ಕಾಲ ಒತ್ತಡ / ಆತಂಕ ಹುಟ್ಟಿಸಿರುವ ವಿಚಾರದ ಬಗ್ಗೆ ಯೋಚಿಸುವುದರಿಂದ, ಮನಸ್ಸಿಗೆ ಹೆಚ್ಚಿನ‌ ನೋವುಂಟಾಗುತ್ತದೆ. ಆರೋಗ್ಯದ ಮೇಲೆ, ಚಟುವಟಿಕೆಗಳ ಮೇಲೆ ಸ್ಪಲ್ಪ ಪರಿಣಾಮ ಬೀರುತ್ತದೆ.

ಹೀಗಿರುವಾಗ ದಿನವಿಡೀ ಇರುವ ಒತ್ತಡಗಳ ಬಗ್ಗೆಯೇ ಯೋಚಿಸುತ್ತಾ ಕುಳಿತರೆ ನಿರಂತರ ನೋವು, ದಿನನಿತ್ಯದ ಕೆಲಸಗಳ ಮೇಲೆ ಪರಿಣಾಮ ಬೀರಿ, ಒಂದು ರೀತಿಯ ಜಡತ್ವ ಉಂಟಾಗುತ್ತದೆ.

ಹೆಚ್ಚು ಒತ್ತಡ, ನೋವಿನ ವಿಚಾರಗಳು, ಆತಂಕದ ತರುವ ಯೋಚನೆಗಳ ಬಗ್ಗೆಯೇ ಸದಾ ಯೋಚಿಸಿದಾಗ ಪ್ರಶ್ನೆಗಳು ಮತ್ತೊಂದು ಮೊಗದೊಂದು ಎಂಬಂತೆ ಬೆಳೆಯುತ್ತಾ ಹೋಗುತ್ತದೆ. ಇದು ನಮ್ಮನ್ನು ಪರಿಸ್ಥಿತಿ ಇಂದ ಹೊರಗೆ ಬರುವ ರೀತಿ ಹಾಗು ಧನಾತ್ಮಕವಾಗಿ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯವನ್ನು ಕುಗ್ಗಿಸುತ್ತದೆ.

ಏನು ಮಾಡಬಹುದು?

* ಒತ್ತಡಗಳು, ಆತಂಕಗಳು, ಕುಂದು ಕೊರತೆಗಳನ್ನು ಒಪ್ಪಿಕೊಳ್ಳುವ ಪ್ರಯತ್ನ ಮಾಡಿ. ಇದು ಬಹಳ ಮುಖ್ಯ.

* ಒತ್ತಡದ ರೂಪುರೇಷೆಗಳನ್ನು ಗಮನಿಸಿ.

* ಭಾರವಾಗುತ್ತಿದೆ, ಕೈ ನೋವುತ್ತದೆ ಎನಿಸಿದಾಗ ಗಾಜಿನ‌ಲೋಟವನ್ನು ಸ್ವಲ್ಪ‌ಹೊತ್ತು ಕೆಳಗಿಡುವ ಅಭ್ಯಾಸ ಬೆಳೆಸಿಕೊಳ್ಳುವುದು ಉತ್ತಮ.

ಅಂದರೆ ಪರಿಸ್ಥಿತಿ‌ ಮತ್ತು ಒತ್ತಡಗಳ ‌ಬಗ್ಗೆ ಅರಿವು ಹೆಚ್ಚಿಸಿಕೊಳ್ಳಿ ಆಗಾಗ್ಗೆ ವಿಶ್ರಾಂತಿ ಪಡೆಯಿರಿ.

* ಒಬ್ಬರೇ ನಿಭಾಯಿಸಬಹುದೇ ಅಥವಾ ಮತ್ತೊಬ್ಬರ ಸಹಾಯ ಬೇಕಿದೆಯೇ ಅರಿಯಿರಿ. ಸಹಾಯ ಬೇಕಾದಲ್ಲಿ‌ ಕೇಳಿ‌ಪಡೆಯಿರಿ.

* ಯಾವಾಗಲೂ ಒಂದೇ ಕೈಯಲ್ಲಿ ನೀರಿನ ಲೋಟವನ್ನು‌ ಹಿಡಿಯಲಾಗುವುದಿಲ್ಲ. ಆಗಾಗ ಕೈ ಬದಲಿಸುತ್ತಿರಿ. ಅಂದರೆ ಒತ್ತಡದ ನಿರ್ವಹಣೆಗೆ ಬೇರೆ ಬೇರೆ ವಿಧಾನಗಳನ್ನು ಅಳವಡಿಸಿಕೊಳ್ಳಿ.

* ಇತರರೊಂದಿಗೆ ನಿಮ್ಮ ಒತ್ತಡ ವಿಚಾರಗಳ ಬಗ್ಗೆ ಹೋಲಿಸಿಕೊಳ್ಳುವುದು ಬೇಡ.

* ನಿಮ್ಮದೇ ಆದ ಸಮಯವನ್ನು ತೆಗೆದುಕೊಳ್ಳಿ.

* ನಿಮಗೆ ಹೊಂದಿಕೆಯಾಗುವಂತಹ ಕ್ರಮಗಳನ್ನು ಬೆಳೆಸಿ ಅಳವಡಿಸಿಕೊಳ್ಳಿ.

* ಪ್ರತಿಯೊಬ್ಬರು ಎದುರಿಸುವ ಒತ್ತಡಗಳು ಭಿನ್ನವಾಗಿರುತ್ತದೆ. ಬೆಳೆದ ಪರಿಸರ, ಒತ್ತಡಗಳನ್ನು ತೆಗೆದುಕೊಳ್ಳುವ ರೀತಿ, ನಿಭಾಯಿಸುವ ವಿಧಾನ, ಭಿನ್ನವಾಗಿರುತ್ತದೆ. ಅದರಲ್ಲಿ‌ ಯಾವುದೇ ಮುಜುಗರ ಬೇಡ.

* ಒತ್ತಡ ನಿರ್ವಹಣೆ ಕ್ರಮಗಳನ್ನು ಅಳವಡಿಸಿಕೊಳ್ಳುವುದರಿಂದ, ನಾವು ದೈಹಿಕ, ಬೌದ್ದಿಕ ಹಾಗು ಮಾನಸಿಕವಾಗಿ ಆರೋಗ್ಯವಾಗಿರಬಹುದು.

ನೆನಪಿಡಿ,

  • ಆಗಾಗ ಗಾಜಿನ ಲೋಟ ಹಿಡಿಯಿವ ಕೈ ಬದಲಿಸುತ್ತಿರಿ.
  • ಆಗಾಗ ನೀರು ತುಂಬಿದ ಗಾಜಿನ ಲೋಟವನ್ನು ಕೆಳಗಿಡುತ್ತಿರಿ
  • ಗಾಜಿನ ಲೋಟದಲ್ಲಿರುವ ನೀರನ್ನು ಆಗ್ಗಿಂದ್ದಾಗ್ಗೆ ಖಾಲಿ ಮಾಡುತ್ತಿರಿ. ಭಾರ ಕಡಿಮೆಯಾಗುತ್ತದೆ.

ಅಂದ ಹಾಗೆ ನೀವು ಎಷ್ಟು ಸಮಯದ ತನಕ ಕೈಯಲ್ಲಿ ಗಾಜಿನ ನೀರಿನ ಲೋಟ ಹಿಡಿದುಕೊಳ್ಳಬಲ್ಲಿರಿ? ನೀವು ಅಳವಡಿಸಿಕೊಂಡಿರುವ ಒತ್ತಡ ನಿರ್ವಹಣಾ ಕ್ರಮಗಳ‌ ಬಗ್ಗೆ ಒಂದೆರಡು ವಾಕ್ಯಗಳಲ್ಲಿ ಬರೆದು ತಿಳಿಸಿ.

English summary
Psychology: How to overcome Work pressure, Stress, Here are the simple methods
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X