ಅಕ್ಕ : ಕಾರ್ಯಕ್ರಮ ನಿರೂಪಕಿ ಸುಚೇತ

ಮೂಲತಃ ಧಾರವಾಡದವರಾದ ಸುಚೇತ ಕುಲಕರ್ಣಿಯವರು ಕಳೆದ ಹದಿನಾಲ್ಕು ವರ್ಷಗಳಿಂದ ಪೆನ್ಸಿಲ್ವೇನಿಯಾ ರಾಜ್ಯದ ನಿವಾಸಿಯಾಗಿರುತಾರೆ. ರಾಜ್ಯ ಸರಕಾರದ ಹುದ್ಧೆಯಲ್ಲಿ ಕೆಲಸ ಮಾಡುತ್ತಿರುವ ಅವರು ಸಂಗೀತ ಹಾಗು ಇನ್ ಟೀರಿಯರ್ ಡಿಸೈನ್ ನಲ್ಲಿ ಅಭಿರುಚಿ ಹೊಂದಿರುತ್ತಾರೆ. ಕಳೆದ ಏಳೆಂಟು ವರ್ಷಗಳಿಂದ ಇಲ್ಲಿ ಜರಗುವ ಕಾರ್ಯಕ್ರಮಗಳಿಗೆ ಕನ್ನಡ, ಹಿಂದಿ ಮತ್ತು ಆಂಗ್ಲ ಭಾಷೆಗಳಲ್ಲಿ ನಿರೂಪಕಿಯಾಗಿ ಮತ್ತೆ ಕೆಲವೊಮ್ಮೆ ಧ್ವನಿ ಸಹಾಯಕಿಯೂ ಆಗಿ ಕಾರ್ಯ ನಿರ್ವಹಿಸಿದ್ಧಾರೆ.
ತಮ್ಮ ಈ ಅನುಭವವನ್ನು ನ್ಯೂ ಜೆರ್ಸಿ ಸಮ್ಮೇಳನದ ಮೂಲಕ ಅಕ್ಕ ಕುಟುಂಬಕ್ಕೆ ತರುವ ಇಚ್ಛೆ ಅವರದು. ಚರ್ಚಾ ಸ್ಪರ್ಧೆ, ಆಶು ಭಾಷಣ ಮತ್ತು ಲವಲವಿಕೆಯ ನಿರೂಪಣೆಗೆ ಹೆಸರಾಗಿರುವ ಸುಚೇತ ಅವರು ಒಂದು ಕಾರ್ಯಕ್ರಮದ ಯಶಸ್ಸಿನಲ್ಲಿ ನಿರೂಪಕರ ಪಾತ್ರ ಮುಖ್ಯ ಎಂದು ಬಲವಾಗಿ ನಂಬಿದ್ದಾರೆ.
ಅಕ್ಕ : ಕಾರ್ಯಕ್ರಮ ನಿರೂಪಕಿ ಅನುರಾಧ »











Click it and Unblock the Notifications