ಅಕ್ಕ: ಕಾರ್ಯಕ್ರಮ ನಿರೂಪಕಿ ಧರ್ಮಶ್ರೀ

Dharmashree Iyengar
ಬೃಂದಾವನ ಕನ್ನಡ ಸಂಘದ ಆಶ್ರಯದಲ್ಲಿ ನ್ಯೂ ಜೆರ್ಸಿಯಲ್ಲಿ ನಡೆಯುತ್ತಿರುವ 6ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ನೂರಾರು ಬಗೆಯ ಕಾರ್ಯಕ್ರಮಗಳಿವೆ. ಉದ್ಘಾಟನೆ, ವಾಣಿಜ್ಯ ಸಭೆ, ಮಹಿಳಾ ವೇದಿಕೆ, ಯುವ ವೇದಿಕೆ, ಅಕ್ಕ ಐಡಲ್, ಸಾಹಿತ್ಯಗೋಷ್ಠಿ, ಚಲನಚಿತ್ರ ರಸಮಂಜರಿ, ನೃತ್ಯ, ನಾಟಕ, ಯಕ್ಷಗಾನ, ಧಾರ್ಮಿಕ, ಸಂಗೀತ ಕಚೇರಿಗಳು ಸೇರಿದಂತೆ ಬಗೆ ಬಗೆಯ ಕಾರ್ಯಕ್ರಮಗಳು ಒಟ್ಟು 6 ರಂಗಮಂಚಗಳಲ್ಲಿ ನಡೆಯುತ್ತವೆ. ಈ ಕಾರ್ಯಕ್ರಮಗಳ ನಿರೂಪಣೆಗಾಗಿ ಒಂದು ನಿರೂಪಕರ ತಂಡ (MC pool)ರಚಿಸಲಾಗಿದೆ. ನಿರೂಪಕಿ ಧರ್ಮಶ್ರೀ ಅಯ್ಯಂಗಾರ್ ಅವರ ಕಿರು ಪರಿಚಯ ಇಲ್ಲಿದೆ.

ಧರ್ಮಶ್ರೀ ಅಯ್ಯಂಗಾರ್. ಸುಮಾರು 5 ವರ್ಷಗಳಿಂದ ನ್ಯೂಯಾರ್ಕ್ ನಗರದಲ್ಲಿ ವಾಸವಾಗಿದ್ದಾರೆ. ಮೂಲತಃ ಮೈಸೂರಿನವರಾಗಿದ್ದು ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಪ್ರಾಚೀನ ಭಾರತದ ಕೃತಿಗಳ ಅಧ್ಯಯನದಲ್ಲಿ ಎಡೆಬಿಡದ ಆಸಕ್ತಿ ಹೊಂದಿರುವ ಅವರು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪರೀಕ್ಷೆ ಬರೆದು ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.

ಕನ್ನಡ, ಸಂಸ್ಕೃತದಲ್ಲಿ ಬರವಣಿಗೆ, ಸಾಹಿತ್ಯ ಮತ್ತು ಸಂಗೀತ ಅವರ ಒಲವಿನ ಹವ್ಯಾಸಗಳು. ಸದ್ಯ ನ್ಯೂಯಾರ್ಕ್ ನಗರದ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ. ಪಂಡಿತ್ ವೀರಭದ್ರಯ್ಯ ಯಾರಗಲ್ ರವರ ಬಳಿ ಕೆಲ ಕಾಲ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕಲಿತಿರುವ ಧರ್ಮಶ್ರೀ ದಿವಂಗತ ಸಿ. ಅಶ್ವತ್ಥ್ ಅವರ ಸುಗಮ ಸಂಗೀತ ಕಾರ್ಯಕ್ರಮಗಳ ಕೂಲಂಕಷ ಅಧ್ಯಯನ ಮಾಡುತ್ತಿದ್ದಾರೆ.

ಅಕ್ಕ : ಕಾರ್ಯಕ್ರಮ ನಿರೂಪಕಿ ಸುಚೇತ ಕುಲಕರ್ಣಿ »

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+