ವರ್ಷಾರಂಭಕ್ಕೆ ಬೃಹತ್ ಸಂಸ್ಕೃತ ಪುಸ್ತಕ ಮೇಳ

ಸಂಸ್ಕೃತ ಪುಸ್ತಕ ಮೇಳದ ಮುಖ್ಯಾಂಶಗಳು:
* ಸುಮಾರು 10,000ಕ್ಕೂ ಹೆಚ್ಚು ಸಂಸ್ಕೃತ ವಿದ್ವಾಂಸರು ಪಾಲ್ಗೊಳ್ಳಲಿದ್ದಾರೆ.
* ಸುಮಾರು 14 ದೇಶಗಳ 150 ಕ್ಕೂ ಹೆಚ್ಚು ಪ್ರಕಾಶಕರು ಭಾಗವಹಿಸಲಿದ್ದಾರೆ.
* ಸುಮಾರು 500ಕ್ಕೂ ಹೆಚ್ಚು ಹೊಸ ಪ್ರಕಟನೆಗಳನ್ನು ಹೊರತರಲಾಗುವುದು.
* ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಂದ ಪುಸ್ತಕ ಮೇಳ ಉದ್ಘಾಟನೆ
* ಸುಮಾರು 290ಕ್ಕೂ ಅಧಿಕ ಸಂಸ್ಕೃತ ವಿಶ್ವವಿದ್ಯಾಲಯಗಳು ಪಾಲ್ಗೊಳ್ಳಲಿವೆ.
* ಗ್ರಾಹಕರು ಹಳೆಪುಸ್ತಕವನ್ನು ಕೊಟ್ಟು ಹೊಸ ಪುಸ್ತಕವನ್ನು ಪಡೆಯಬಹುದು. ವಿನಿಮಯ ಸಂಸ್ಕೃತಿಗೆ ಒತ್ತು.
*ಪುಸ್ತಕ ಪ್ರದರ್ಶನ, ವಿಮರ್ಶೆ, ಕಲೆ ಸಂಸ್ಕೃತಿ ಪರಂಪರೆ ವಸ್ತು ಪ್ರದರ್ಶನ, ಸಮ್ಮೇಳನಗಳು, ಕಾರ್ಯಾಗಾರಗಳು ಇರುತ್ತವೆ.
* ಖ್ಯಾತ ಕಲಾವಿದರಿಂದ ಸಂಸ್ಕೃತ ಗೀತೆಗಳ ಗಾಯನ.ನಾಟಕೋತ್ಸವ ಏರ್ಪಡಿಸಲಾಗಿದೆ.
* 2010 ರ ನವೆಂಬರ್, ಡಿಸೆಂಬರ್ ಗಳಲ್ಲಿ1008 ತರಗತಿಗಳನ್ನು ಆಯೋಜಿಲಾಗಿದೆ.
ಆಯೋಜಕರು: ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ್, ಕರ್ನಾಟಕ ರಾಜ್ಯ ಸರ್ಕಾರ, ಸಂಸ್ಕೃತ ವಿಶ್ವವಿದ್ಯಾಲಯಗಳು, ಸಂಸ್ಕೃತ ಅಕಾಡೆಮಿಗಳು, ಸಂಸ್ಖೃತ ಭಾರತಿ, ಓರಿಯೆಂಟಲ್ ರಿಸರ್ಚ್ ಇನ್ಸ್ ಸ್ಟಿಟ್ಯೂಟ್ಸ್, ನ್ಯಾಷನಲ್ ಮ್ಯಾನುಸ್ಕ್ರಿಪ್ಟ್ ಮಿಷನ್, ಅಖಿಲ ಭಾರತೀಯ ಸಂಸ್ಕೃತ್ ಪ್ರಕಾಶಕ್ ಸಂಘ್, ಸಂಸ್ಕೃತ್ ಪ್ರಮೋಷನ್ ಫೌಂಡೇಷನ್.
ರಾಷ್ಟ್ರೀಯ ಸಲಹಾ ಸಮಿತಿ: ಜಸ್ಟೀಸ್ ಎಂಎನ್ ವೆಂಕಟಾಚಲಯ್ಯ, ಜಸ್ಟೀಸ್ ಆರ್ ಸಿ ಲಹೋಟಿ, ಜಸ್ಟೀಸ್ ಎಂ ರಾಮಾಜೋಯಿಸ್, ಮಾಜಿ ಚುನಾವಣಾ ಆಯುಕ್ತ ಎನ್ ಗೋಪಾಲಸ್ವಾಮಿ ಮುಂತಾದವರಿದ್ದಾರೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಸಂಸ್ಕೃತ ಭಾರತಿ
'ಅಕ್ಷರಂ', 8 ನೇ ಅಡ್ಡರಸ್ತೆ, 2 ನೇ ಹಂತ
ಗಿರಿನಗರ, ಬೆಂಗಳೂರು-85
ದೂರವಾಣಿ: +91-80-2672 1052/2672 2576
ಈ ಮೇಲ್: [email protected] / [email protected]
ವೆಬ್ ತಾಣ:www.samskritbookfair.org












Click it and Unblock the Notifications