ಮುಖ್ಯಮಂತ್ರಿ ಚಂದ್ರುಗೆ ಶಿಕಾಗೋದಲ್ಲಿಯೂ ನಿರಾಶೆ

KDA Chief disillusioned with NRIsಶಿಕಾಗೋ, ಸೆ. 2 : ಶಾಶ್ವತ 'ಮುಖ್ಯಮಂತ್ರಿ' ಬಿರುದಾಂಕಿತ ನಮ್ಮ ಪ್ರೀತಿಯ ಚಂದ್ರು ಅವರಿಗೆ ಈ ಋತುವಿನಲ್ಲಿ ಗ್ರಹಬಲಗಳು ಚೆನ್ನಾಗಿಲ್ಲ. ಯಾಕೋ ಗೊತ್ತಿಲ್ಲ. ಅವರ ಗ್ರಹಬಲ ಕನ್ನಡದ ಗ್ರಹಬಲವಲ್ಲದೆ ಬೇರೆ ಅಲ್ಲ. ಕನ್ನಡ ನಾಡು, ನುಡಿ ಮತ್ತು ಗಡಿಗಾಗಿ ಸದಾ ಚಿಂತಿಸುವ ಕನ್ನಡ ಬಂಧು ಚಂದ್ರು ಅವರಿಗೆ ಕನ್ನಡ ಗಡಿಯಾಚೆ ಪ್ರವಾಸ ಕಾಲದಲ್ಲಂತೂ ಗುರುಬಲವೇ ಇಲ್ಲ!

ಯುಕೆ ಕನ್ನಡ ಬಳಗದ ರಜತ ಮಹೋತ್ಸವಕ್ಕೆಂದು ಲಂಡನ್‌ಗೆ ಹೋದರೆ ಅಲ್ಲಿ ವೇದಿಕೆಯ ಮೇಲೆ ಕುರ್ಚಿ ಸಿಗುವುದಿಲ್ಲ. ಲಂಡನ್ನಿನಿಂದ 'ಅಕ್ಕ' ಸಮ್ಮೇಳನಕ್ಕೇಂತ ಶಿಕಾಗೋಗೆ ಹೋದರೆ ವೇದಿಕೆ ಸಿಗುತ್ತದೆ ಆದರೆ ಭಾಷಣ ಮಾಡುವುದಕ್ಕೆ ಛಾನ್ಸ್ ಸಿಗುವುದಿಲ್ಲ. ಅಂತೂ ಕನ್ನಡ ಕಟ್ಟಾಳು ಚಂದ್ರು ಅವರಿಗೆ ಆಗಸ್ಟ್ ತಿಂಗಳಲ್ಲಿ ನಿರಾಶೆಗಳ ಜಾಗತೀಕರಣವಾದದ್ದು ಮಾತ್ರ ಸತ್ಯ.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿರುವ ಚಂದ್ರು, ಅಮೆರಿಕದಲ್ಲಿ ಕನ್ನಡ ಭಾಷೆ ಸಾಹಿತ್ಯ ಬೆಳೆಸುವುದು ಹೇಗೆ, ಎರಡನೇ ತಲೆಮಾರಿನ ಅಮೆರಿಕ ಕನ್ನಡಿಗರಿಗೆ ಕನ್ನಡ ಕಲಿಸುವ ಬಗೆಹೇಗೆ ಮುಂತಾದವನ್ನೆಲ್ಲ ಸಂಶೋಧನೆ ಮಾಡಿ 8 ಪುಟಗಳ ಭಾಷಣ ಸಿದ್ಧ ಮಾಡಿಕೊಂಡು ಹೋಗಿದ್ದರು. ಆದರೆ ಸಂಘಟಕರು ಅವರ ಕೈಗೆ ಧ್ವನಿವರ್ಧಕ ಕೊಡಲೇಯಿಲ್ಲ. ಅನಿವಾಸಿ ಕನ್ನಡಿಗರಿಗೆ ಅಧಿಕಾರದಲ್ಲಿರುವ ರಾಜಕಾರಣಿಗಳ, ಜನಪ್ರಿಯತೆಯ ಉತ್ತುಂಗದಲ್ಲಿರುವ ಸಿನಿಮಾ ತಾರೆಯರ ಮತ್ತಿತರ ಗಣ್ಯರ ಸಾಮೀಪ್ಯದಲ್ಲಿ ಆನಂದ ಸಿಗುತ್ತಿರುವಾಗ ಕನ್ನಡ ಅಭಿವೃದ್ಧಿ ಮಾಂತ್ರಿಕನಿಗೆ ಅಮೆರಿಕಾದಲ್ಲೇನು ಕೆಲಸ?

ಸಂಘಟಕರು ನನಗೆ ಮಾತನಾಡಲು ಅವಕಾಶವನ್ನೇ ಕೊಡಲಿಲ್ಲ. ಆದರೆ ಗಣಿ ಧಣಿಗಳನ್ನು ಕರೆದು ಮಣೆ ಹಾಕಿ ಭಾಷಣ ಮಾಡಿಸಿದರು. ನಾನೇನು ಮಾಡಲು ಸಾಧ್ಯ? ಎಂದು ಚಂದ್ರು ತಮ್ಮ ಹತಾಶೆ ವ್ಯಕ್ತಪಡಿಸಿದ್ದಾರೆ. ಇಂಥ ಹಿನ್ನಡೆಗಳು ಇದ್ದದ್ದೇ ಚಂದ್ರು ಅವರೆ. ಅದನ್ನು ಹೊಟ್ಟೆಗೆ ಹಾಕಿಕೊಂಡು ನಿಮ್ಮ ಕನ್ನಡದ ಕೆಲಸಗಳನ್ನು ತಪಸ್ಸಿನಂತೆ ಮಾಡುತ್ತಾ ಇರಿ, ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಬೆಂಗಳೂರಿನ ಕನ್ನಡಿಗರ ಒಂದು ಗುಂಪು ಸಾಂತ್ವನ ನೀಡುವ ಈಮೇಲ್ ಸಂದೇಶದಲ್ಲಿ ಹೇಳಿದ್ದಾರೆ.

ಶಾಪಿಂಗ್ ಹೋಗೋಣು ಬಾ : ಅಕ್ಕ ಸಮ್ಮೇಳನಕ್ಕೆ ಹೋಗಲಿರುವ ಶಾಸಕರು ಅಲ್ಲಿ ಕಡಿದು ಕಟ್ಟೆ ಹಾಕುವಂಥದ್ದೇನೂ ಇಲ್ಲ ಎಂಬ ಟೀಕೆ ನಿಜವಾಗಿದೆ. ಕನ್ನಡದ ಹೆಸರು ಹೇಳಿಕೊಂಡು ಬಂದ ಶಾಸಕರೆಲ್ಲ ಭಾನುವಾರದ ಸಮ್ಮೇಳನ ಮತ್ತು ಸಮಾರೋಪ ಕಾರ್ಯಕ್ರಮಗಳಿಗೆ ಬೈ ಹೇಳಿ, ಬಸ್ಸು ಮಾಡಿಕೊಂಡು ಸೀದಾ ಹೋಗಿದ್ದು, 'ಬೆಸ್ಟ್ ಬೈ'ಗೆ, ಅದು ಅತ್ಯಾಧುನಿಕ ಎಲೆಕ್ಟ್ರಾನಿಕ್ ಉಪಕರಣಗಳ ಬೃಹತ್ ಶೋರೂಂ.

ಈ ಮಾಹಾನುಭಾವರೆಲ್ಲ ಲ್ಯಾಪ್ ಟಾಪ್, ಕ್ಯಾಮರಾ, ಐಪಾಡ್, ವಿಡಿಯೋ ಗೇಮ್ಸ್, ಇತ್ಯಾದಿಗಳೆನ್ನೆಲ್ಲ ಕೆಜಿ ಲೆಕ್ಕದಲ್ಲಿ ಖರೀದಿಸಿದರೆಂದು ಅವರ ಜತೆ ಬೆಸ್ಟ್ ಬೈ ಅಂಗಡಿಗೆ ಕುತೂಹಲದಿಂದ ಹೋಗಿದ್ದವರೊಬ್ಬರು ತಿಳಿಸಿದ್ದಾರೆ. ಭಾನುವಾರ ಸಮ್ಮೇಳನದಲ್ಲಿ ಯಾವೊಬ್ಬ ಶಾಸಕನೂ ಕಣ್ಣಿಗೆ ಬೀಳುತ್ತಿಲ್ಲವಲ್ಲ ಎಂದು ಸಖೇದಾಶ್ಚರ್ಯದಿಂದ ವಿಚಾರಿಸಿದವರಿಗೆ bad boys gone to best buy ಎಂಬ ಉತ್ತರ ಸಿಕ್ಕಿತು.

ಪೂರಕ ಓದಿಗೆ
ಲಂಡನ್ ಕನ್ನಡ ಹೋಳಿಗೆಗೆ ತೊಟ್ಟು ನಿಂಬೆರಸ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+