ಅಂದ್ಕೊಳ್ಳುವುದು ಒಂದು, ಆಗುವುದು ಮತ್ತೊಂದು!

(ಕಥೆಯ ಮುಂದಿನ ಭಾಗ...) ಕೊನೆಗೆ ಬಿಸಿ ಬಿಸಿ ಕಡುಬು, ಮೆಂತೆ ಚಟ್ನಿ ತಿಂದು ಎಲ್ಲ ಹಿರಿಯರಿಗೆ ನಮಸ್ಕರಿಸಿ, ಬಾಯ್ ಹೇಳಿ (ಸುಗುಣಗೆ ಕಣ್ಣಲ್ಲೇ) ಅಲ್ಲಿಂದ ಹೊರಟಾಗ ಒಂಬತ್ತಾಗಿತ್ತು. ದಾರಿಯಲ್ಲಿ ಬರುವಾಗ ಅಪ್ಪ-ಅಮ್ಮ ಕೇಳಿದ್ದರು. 'ಏನಪ್ಪಾ ಹುಡುಗಿ ನಿಂಗೆ ಒಪ್ಪಿಗೆನಾ' ಅಂತ ಅಂದಾಗ 'ಎಸ್' ಅಂತ ತಲೆದೊಗಿದ್ದೆ. ಅವರಿಗೂ ಸುಗುಣ, ಅವಳ ಒಳ್ಳೆಯ ಗುಣಗಳು, ಅವರ ಮನೆಯವರ ನಡತೆ ಎಲ್ಲ ಇಷ್ಟ ಆಗಿದ್ದವು. ಸರಿ ಊರಿಗೆ ಹೋಗಿ ಎರಡು ಹುಡುಗಿಯರ ಜಾತಕ ತೋರಿಸುವ ಅಂತ ಅವರೇಳಿದಾಗ ಓಕೆ ಅಂದು ಮತ್ತೆ ಬಂದ ನಿದ್ದೆಗೆ ಶರಣಾಗಿದ್ದೆ.

ಅಮೇರಿಕಾದಿಂದ ಬಂದು ಒಂದು ವಾರ ಕಳೆದಿತ್ತು. ಇನ್ನು ಜ್ಯೋತಿಷಿಗಳ ಕೈಗೆ ಕೊಟ್ಟ ಜಾತಕದ ರಿಪೋರ್ಟ್ ಬಂದಿರಲಿಲ್ಲ. ಅಷ್ಟರಲ್ಲಿ ಇಷ್ಟವಿಲ್ಲದಿದ್ದರೂ ಒತ್ತಾಯಕ್ಕೆ ಇನ್ನೆರಡು ಕಡೆ ವಧು ನೋಡಿ ಬರುವ ಶಾಸ್ತ್ರ ಮುಗಿಸಿದ್ದೆ. ಇನ್ನೇನು ಎರಡು ವಾರಗಳು ಕಳೆಯಿತು ಅನ್ನೋ ವೇಳೆಗೆ ಅಣ್ಣ ಜಾತಕದ ರಿಪೋರ್ಟ್ ಹಿಡಿದು ತಂದು ಅಪ್ಪನ ಕೈಲಿತ್ತಾಗ ಎದೆ ಡವಗುಟ್ಟಿತ್ತು. ಏನಿದಿಯೋ ಏನೋ ಅಂತಾ? ಕೊನೆಗೆ ಅಪ್ಪ ತೆಗೆದು ನೋಡಿ ಹೇಳಿದಾಗ ಮನಸ್ಸಿಗೆ ಪಿಚ್ಚೆನಿಸಿತ್ತು. ಬೆಂಗಳೂರು ಹುಡುಗಿ ಆಶಾಳ ಜಾತಕ ಚೆನ್ನಾಗಿ ಕೂಡಿ ಬಂದಿದೆ. ಇಪ್ಪಂತೆಂಟು ಗುಣಗಳು ಕೂಡಿಬಂದಿವೆ. ಆದರೆ, ಸುಗುಣಳ ಜಾತಕ ಕೂಡಿಬರುತ್ತಿಲ್ಲ. ಏನೋ ದೋಷವಿದೆ, ಬರಿ ಹನ್ನೆರಡು ಗುಣಗಳು ಕೂಡಿ ಬಂದಿವೆ ಅಂತ ಹೇಳಿದಾಗ. ಏನು ಮಾಡುವುದು ಎಂದು ತೋಚದಾಗಿತ್ತು! ನನ್ನಷ್ಟೇ ಬೇಜಾರಾದ ಅಪ್ಪ-ಅಮ್ಮ ಅಷ್ಟಕ್ಕೇ ಬಿಡದೇ. ಕೆಲವೊಂದು ಬಾರಿ ಹುಟ್ಟಿದ ಹೆಸರು ಬದಲಿಸಿಕೊಂಡರೆ ಜಾತಕ ಕೂಡಿ ಬಂದರೂ ಬರಬಹುದು ಅಂದಾಗ ಮತ್ತೆ ಜ್ಯೋತಿಷಿಗಳ ಬಳಿ ಹೋಗಿ ಕೇಳಿದೆವು. ಅವರು ಮತ್ತೆ ತಾಳೆ ಹಾಕಿ ಎಲ್ಲ ಲೆಕ್ಕಾಚಾರ ಮಾಡಿ ಹೇಳಿದರು 'ಸಾರೀ' ಅಂತಾ.

ಒಂದೆರಡು ದಿನ ಬೇಜಾರಾಗಿ ಸರಿಯಾಗಿ ಊಟನು ಮಾಡದೆ, ಮದುವೆ ಬೇಡ ಏನು ಬೇಡ ಅಂತ ಒಂದು ವಾರ ಮುಂಚೆನೇ ವಾಪಸು ಅಮೆರಿಕಾಕ್ಕೆ ಬಂದಿದ್ದೆ. ಕುಳಿತರೂ, ಮಲಗಿದರೂ ಅವಳದೇ ನೆನಪು ಬರುತ್ತಿತ್ತು. ಆಗ ಅವಳ ಫೋಟೋ ಕ್ಲಿಕ್ ಮಾಡಿದ ನೆನಪಾಗಿ ಫೋಟೋ ರೀಲ್ ತೆಗೆದುಕೊಂಡು ತೊಳೆಸಲು ಓದಿದ್ದೆ, ಹತ್ತಿರವಿದ್ದ ರೇಡಿಯೋ ಶಾಕ್ ಸ್ಟೋರಿಗೆ. ಅಲ್ಲಿಯೂ ನಂಗೆ ಕಾಡಿತ್ತು ಶಾಕ್. ಏನೋ ಎಡವಟ್ಟಾಗಿ ಆ ಫೋಟೋ ರೀಲ್ ನಲ್ಲಿದ್ದ ಎಲ್ಲ ಫೋಟೋಗಳು ಬ್ಲಾಂಕ್ ಆಗಿ ಬಂದಿದ್ದವು!

ಹೆಸರಿಗೆ ತಕ್ಕಂತೆ ಒಳ್ಳೆಯ ಗುಣಗಳನ್ನೇ ಮೈಗೂಡಿಸಿಕೊಂಡಿದ್ದ ಸುಗುಣಳ ಜೋಡಿಯಾಗಲು ನನಗೇ ಅದೃಷ್ಟವಿರುವಂತಿಲ್ಲ ಎಂದು ಕೊನೆಗೆ ನನಗೇ ನಾನೇ ಸಮಾಧಾನ ಮಾಡಿಕೊಂಡಿದ್ದೆ.

ರೀ.. ಅದೆಷ್ಟು ಬಾರಿ ಅದೇ ಹಾಡು ನೋಡ್ತೀರಿ.. ಅಂಥದ್ದೇನು ವಿಶೇಷ ಇದೆ ಅದರಲ್ಲಿ? ಅಂತ ನನ್ನ ಎರೆಸೀಮೆಯ ಮಡದಿ ಕೇಳಿದಾಗ. ನಾ ಹೇಗೆ ಹೇಳಲಿ ಅವಳಿಗೆ.. ಆ ಮಲೆನಾಡಿನ ಸುಂದರಿ ಸುಗುಣಳ ಬಗ್ಗೆ?

ಈಗಲೂ ಕೇಳಿಬಂದಾಗ ಹಕ್ಕಿ-ಪಕ್ಷಿಗಳ
ಚಿಲಿಪಿಲಿ, ಕೋಗಿಲೆಯ ಕುಹೂ ಕುಹೂ
ಆಗುವುದು ನೆನಪು ನನಗೆ
ಇಂಪಾದ ಆ ಸುಗುಣಳ ಇಂಚರ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+