ದ್ವೈತ : ಯಾದವ ಮಾಧವ ಓರ್ವನೇ ದೇವನು!

ದ್ವೈತ ಸಿಹಿಯನು ಉಣಿಸಿದೆ
ಮಾಧವ ಆಚಾರ್ಯ ಮಧ್ವಾಚಾರ್ಯ||ಅ||
ಯಾದವ ಮಾಧವ
ಓರ್ವನೇ ದೇವನು
ಧ್ಯಾನಿಸಿ ಭೋಧಿಸಿ
ದ್ವೈತ ತತ್ವವ ಅನುಮೋದಿಸಿದೆ||ಅ||
ಆತ್ಮ ಪರಮಾತ್ಮ
ಭೇದದ ವೇದವ
ನಿವೇದಿಸಿ ವಾದಿಸಿ
ದ್ವೈತ ಮತ ಕತೃ ನೀನಾದೆ||ಅ||
ಜಗವಿದು ಸತ್ಯ
ಜಗನ್ನಾಥನು ನಿತ್ಯ
ನಿತ್ಯವು ಈ ಸತ್ಯ
ದೇವನ ಕೃತಿ ಇದು ಈ ಪ್ರಕೃತಿ ||ಅ||
ಜೀವಿಯು ಜೀವಿಸಿ
ಮಾಧವನ ಸೇವಿಸಿ
ಸೇರುವ ಈ ಜೀವಾತ್ಮ
ಪರಮ ನಾ ಪರಮಾತ್ಮ||ಅ||











Click it and Unblock the Notifications