ಅದ್ವೈತ : ಆತ್ಮನೇ ಪರಮಾತ್ಮ!

ನನ್ನ ಅರಿವಿದ್ದರೆ
ಇನ್ನೆಲ್ಲದರ ಅರಿವು ತಿಳಿವು
ಎಲ್ಲದರ ಉಳಿವು
ತಾನಾರೆಂದು ಬಲ್ಲವನಿಗೆ
ಆತ್ಮನೇ ಪರಮಾತ್ಮ
ಅಂತರಂಗದಲಿಹುದು
ಆಧ್ಯಾತ್ಮಿಕ ಪ್ರಪಂಚ
ಪಂಚಭೂತಗಳ ಅದ್ಭುತ
ಸಂಚಯ ಬಹಿರಂಗ
ರಂಗ ಈ ಪ್ರಪಂಚ
ಜೀವಿಗಿದು ವಂಚ ಮಂಚ
ಅಂತರಂಗ ಬಹಿರಂಗಗಳ
ಸಮ್ಮಿಲನ ಮಿಲನವೇ
ಅದ್ವೈತ! ತತ್ವ ಜೀವನ ಸತ್ವ
ಇದ ಸಾಧಿಸು ಜೀವನದಿ ನೀ ನಿತ್ಯ
ಶ್ರೀ ಶಂಕರರು ಭೋದಿಸಿದ ಸತ್ಯ












Click it and Unblock the Notifications