Get Updates
Get notified of breaking news, exclusive insights, and must-see stories!

ಬದುಕಿನ ಲಗಾಮು ದೇವ್ರ ಕೈಯಲ್ಲಿ.. ನಾವೇನು ಮಾಡೋಣ?

"ಕುತ್ತೆ ಕನ್ವರ್ಲಾಲ್ ಬೋಲೋ...!" ಎಂಥವರ ಗುಂಡಿಗೆಯನ್ನೂ ನಡುಗಿಸುವಂಥ ಅಬ್ಬರದ ಡೈಲಾಗನ್ನು ಮರೆಯಲು ಸಾಧ್ಯವೆ?

"ಹಲೋ ಬುಲ್ಬುಲ್ ...ಮಾತಾಡಕಿಲ್ವಾ?" ಅಂತ ದುರ್ಗದ ಕೋಟೆ ಬೀದಿಯಲ್ಲಿ ಕಾಲೇಜು ಹುಡುಗಿ ಹಿಂದೆ ಹೋಗ್ತಾ... "ಚಳಿ ಚಳಿ ತಾಳೆನು ಈ ಚಳಿಯ... ಗೆಳತಿಯೇ ಬಾರೆ ನೀ ಸನಿಹ" ಮಳೆಯಲಿ ನೆನೆಯುತ್ತಾ ಅಂಬಿಕಾ ಜೊತೆ ಡಾನ್ಸ್ ಮಾಡುತ್ತಾ, ಸರಿಯಾಗಿ ಚಡ್ಡಿ ಹಾಕಲು ಬರದೇ ಪ್ರೈಮರಿ ಸ್ಕೂಲ್ಗೆ ಹೋಗ್ತಿದ್ದ ನಮಗೆ ಅಂದೇ ರೋಮ್ಯಾಂಟಿಕ್ ಸಾಂಗ್ ಅಂದ್ರೆ ಹೆಂಗಿರುತ್ತೆ? ಅಂತಾ ತೋರಿಸಿಕೊಟ್ಟು...

"ತಂದೆ ಕೊಡಿಸೋ ಸೀರೆ ಮದುವೆ ಆಗೋವರೆಗೆ, ತಾಯಿ ಉಡಿಸೋ ಸೀರೆ ತಾಯಿ ಆಗೋವರೆಗೆ, ಬಂದು ಕೊಡಿಸು ಸೀರೆ ಬಣ್ಣ ಹೋಗೋವರೆಗೆ... ಗಂಡ ಕೊಡಿಸೋ ಸೀರೆ ಕುಂಕುಮ ಇರುವವರೆಗೆ" ಅಂತ ಬದುಕಿನ ಸಾರವ ನೀ ಹೇಳಿ...

NRI fan of Ambareesh pays rich tribute to legendary actor

"ಒಲವಿನ ಉಡುಗೊರೆ ಕೊಡಲೇನು, ರಕುತದಿ ಬರೆದೆನು ಇದ ನಾನು" ಅಂತ ಕೆಂಪು ರಕ್ತದಲ್ಲಿ ಪ್ರೇಮಪತ್ರವ ಬರೆವುದ ಹೇಳಿಕೊಟ್ಟು...

"ನಾನು ಯಾರು... ಯಾವ ಊರು.. ಇಲ್ಲಿ ಯಾರೋ ಬಲ್ಲೋರಿಲ್ಲ.. ನನ್ನ ಹೆಸರಲ್ಲೇ ಕಮಾಲ್.. ನಾನೇ ಕನ್ವರ್ಲಾಲ್" ಅಂತ 'ಅಂತ' ದಲ್ಲಿ ಹಾಡಿ... "ಕುತ್ತೆ ಕನ್ವರ್ಲಾಲ್ ಬೋಲೋ" ಅಂತ ಹೇಳಿ...

"ಮಸಣದ ಹೂವೆಂದು ನೀನೇಕೆ ಕೊರಗುವೆ" ಅಂತ ಎಲ್ಲರಿಗೂ ಸಮಾಧಾನಿಸುತ್ತಾ...

NRI fan of Ambareesh pays rich tribute to legendary actor

"ಬೊಂಬೆ ಆಡ್ಸೋನು ಮೇಲೆ ಕುಂತವ್ನು, ನಮ್ಗೆ ನಿಮ್ಗೆ ಯಾಕೆ ಟೆನ್ಶನ್?" ಅಂತ ಹಾಡುತ್ತಾ... "ಭೂಮಿ ಮೇಲಿನ ಈ ಬಾಳು, ಒಂದು ನಾಟಕ... ನಾವು ಅದರಲ್ಲಿ ಬಂದು ಹೋಗುವ ಪಾತ್ರಧಾರಿಗಳು"... ನಮ್ಮ ಸರದಿ ಬಂದಾಗ... ಬರ್ಬೇಕು, ಹೋಗ್ಬೇಕು... ಅಷ್ಟೇ... ಬದುಕಿನ ಲಗಾಮು ದೇವ್ರ ಕೈಯಲ್ಲಿ.. ನಾವೇನು ಮಾಡೋಣ?" ಅಂತ ಹೇಳುತ್ತಾ...

"ಹುಟ್ದೋರು ಯಾರು ಸಾಯದೆ ಹೋದ್ರೆ... ಹೆಂಗೆ ಹೇಳ್ರಣ್ಣ... ಮುಂದೆ ಹುಟ್ಟೋ ಮಂದಿಗೆ ಜಾಗ ಬ್ಯಾಡ ಏನ್ರಣ್ಣ... ಹುಟ್ಸೋದು, ಸಾಯ್ಸೋದು ಎಲ್ಲಾ ಅವ್ನ ಆಟ ಕನ್ರಣ್ಣ...

ನಮ್ಮ ಆಟ ಮುಗ್ಸಿ ಹೋಗೋ ಹೊತ್ನಲ್ಲಿ ಕಣ್ಣೇರು ಏಕಣ್ಣ...?" ಅಂತ ಅಂದೇ ನುಡಿದು...

NRI fan of Ambareesh pays rich tribute to legendary actor

ಇಂದು ನಮ್ಮನ್ನು ಆಗಲಿ ಹೋದ... ನಮ್ಮೆಲ್ಲರ ಮೆಚ್ಚಿನ ರೆಬೆಲ್ ಸ್ಟಾರ್ ಅಂಬರೀಷ್... ಕಣ್ಮರೆಯಾಗಿದ್ದರೂ... ಎಂದೆಂದಿಗೂ ಅಮರವಾಗಿರುವ ಅಮರನಾಥ್!

ನಿನ್ನ ಕೈಲಾದಷ್ಟು ಸಹಾಯ ಮಾಡಿ
ಆಗಿದ್ದೆ ಕಲಿಯುಗದ ಕರ್ಣ, ನೀ ಅಂಬಿ...!
ಸಾವಿರಾರು ಜನ ಕಷ್ಟ - ಸುಖ
ಅಂತ ಬಂದಾಗ ನಿನ್ನ ನಂಬಿ...!

NRI fan of Ambareesh pays rich tribute to legendary actor

ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಕ್ರಮ: ಕುಮಾರಸ್ವಾಮಿ ಭರವಸೆ

ಚಕ್ರವ್ಯೂಹವ ಭೇದಿಸಿದ ರೆಬೆಲ್ ಸ್ಟಾರ್ ಆಗಿ, ಕಲಿಯುಗದ ಕರ್ಣನಾಗ, ಮಂಡ್ಯದ ಗಂಡಾಗಿ, ಸ್ಯಾಂಡಲ್ವುಡ್ ಗೆ ಹಿರಿಯಣ್ಣನಾಗಿ, ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡ ನೇರ ನುಡಿಯ ನಾಯಕ... "ಅಂದವೋ ಅಂದವೋ ಕನ್ನಡ ನಾಡು... ನನ್ನ ಗೂಡು ಇಲ್ಲಿದೆ ನೋಡು" ಅಂತ ಅಂದು ನೀ ಹಾಡಿದ ಹಾಗೆ... ಮತ್ತೆ ನೀ ಇಲ್ಲೇ ಶ್ರೀಗಂಧದ ನಾಡಲ್ಲಿ ಹುಟ್ಟಿ ಬರುವೆಯಾ?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+