ನನ್ನ ಜೀವಮಾನದ ಮರೆಯಲಾರದ ಅನುಭವ
ಇದು ನಿಮಗೆ ತುಸು ಹೆಚ್ಚೇ ಭಾವುಕ ಎನಿಸಬಹುದು, ಆದರೆ ನಮಗಲ್ಲಿ ಆದ ರೋಮಾಂಚನವನ್ನು ಅಕ್ಷರಗಳಲ್ಲಿ ಹಿಡಿದಿಡುವುದಂತೂ ಖಂಡಿತ ಸಾಧ್ಯ ಇಲ್ಲ! ಓರ್ವ ವಿವಾಹಿತ ಹೆಣ್ಣಿಗೆ ಪಂಚಮಿಹಬ್ಬಕ್ಕೆ ತೌರಿಗೆ ಕರೆಯಲು ಅಣ್ಣ ಬಂದಾಗಿನ ಸಂತಸ ಹೇಗಿರುತ್ತದೋ ಅಂಥ ಮಧುರಭಾವ ಇವತ್ತು ಅಲ್ಲಿ ಸೇರಿದ ಪ್ರತಿಯೊಬ್ಬ ಅನಿವಾಸಿ ಭಾರತೀಯನಿಗೂ ಆಗಿದೆ, ಮಾತ್ರವಲ್ಲ ಅಲ್ಲಿದ್ದ ಒಬ್ಬೊಬ್ಬರ ಹೃದಯವನ್ನೂ ತಟ್ಟಿ ಆನಂದಬಾಷ್ಪ ಹರಿಸಿದೆ. "ಮೋದಿ... ಮೋದಿ... ಮೋದಿ... ಎಂಬ ಹರ್ಷೋದ್ಗಾರವಂತೂ ಈಗಲೂ ನನ್ನ ಕಿವಿಗಳಲ್ಲಿ ರಿಂಗಣಿಸುತ್ತಿದೆ. ಜೀವಮಾನದಲ್ಲೊಮ್ಮೆ ಅನ್ನಬಹುದಾದ ಅನುಭವ ಇವತ್ತು ನಮಗೆ ಆಗಿರುವುದನ್ನು ನಿಮ್ಮೊಡನೆ ಈ ಪುಟ್ಟ ಬರೆಹದಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿದ ಮೇಲೆ ಅಮೆರಿಕ ದೇಶಕ್ಕೆ, ಅದರಲ್ಲೂ ಮೊದಲಿಗೆ ನ್ಯೂಯಾರ್ಕ್‌ಗೆ ನರೇಂದ್ರ ಮೋದಿ ಬರಲಿದ್ದಾರೆಂದು ಆಗಸ್ಟ್‌ನಲ್ಲಿ ಅಧಿಕೃತವಾಗಿ ತಿಳಿದಾಗಲೇ ಇಲ್ಲಿನ ಭಾರತೀಯ ಸಂಘಟನೆಗಳವರಿಗೆ ಸಡಗರ ಆರಂಭವಾಗಿತ್ತು. [ಮೋದಿ ಮಾಂತ್ರಿಕ ಭಾಷಣ]

ನ್ಯೂಯಾರ್ಕ್, ನ್ಯೂಜೆರ್ಸಿ, ಕನೆಕ್ಟಿಕಟ್ ಮತ್ತು ಸುತ್ತಮುತ್ತಲಿನ ಸುಮಾರು ನೂರಕ್ಕೂ ಹೆಚ್ಚು ಸಂಘಟನೆಗಳು ಸೇರಿ ಮೋದಿಯವರ ಸ್ವಾಗತಕ್ಕೆ ಟೊಂಕಕಟ್ಟಿ ನಿಂತಿದ್ದವು. ನ್ಯೂಜೆರ್ಸಿಯಲ್ಲಿರುವ ನಮ್ಮ 'ಬೃಂದಾವನ ಕನ್ನಡಕೂಟಕ್ಕೂ ಸ್ವಾಗತ ಸಮಿತಿಯಲ್ಲಿ ಭಾಗೀದಾರನಾಗುವಂತೆ ಕರೆ ಬಂದಿತ್ತು. ಕೂಟದ ಪ್ರಸಕ್ತಸಾಲಿನ ಅಧ್ಯಕ್ಷೆಯಾಗಿ ನಾನೇ ಆ ಆಹ್ವಾನವನ್ನು ಮನಸಾರೆ ಒಪ್ಪಿಕೊಂಡಿದ್ದೆ. ಭಾರತದ ಏಳಿಗೆಗಾಗಿ, ಮೋದಿಯವರ ಕನಸನ್ನು ನನಸು ಮಾಡುವುದಕ್ಕಾಗಿ ನಮ್ಮಿಂದ ಏನು ಸಾಧ್ಯವಾಗುತ್ತದೋ ಅಷ್ಟು ಸಹಾಯವನ್ನು ಕೊಡುವೆವೆಂಬ ಪ್ರಮಾಣ (pledge)ದೊಂದಿಗೆ ನಾವು ಭಾಗಿಯಾದೆವು.
ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಸಭಾಂಗಣದಲ್ಲಿ ಸೆಪ್ಟೆಂಬರ್ 28ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಮೋದಿಯವರನ್ನು ಕಾಣುವುದಕ್ಕೆ ಈ ಸಂಘಟನೆಗಳ ಸದಸ್ಯರಿಗೆ ಎಂಟ್ರಿ-ಪಾಸ್‌ಗಳನ್ನು ವಿತರಿಸಿದರು. ಅದೂ ಹೇಗೆಂದರೆ ಪ್ರತಿಯೊಬ್ಬರ ಹೆಸರು, ಜನ್ಮದಿನ, ಸಂಪರ್ಕವಿವರ ಇತ್ಯಾದಿ ಎಲ್ಲ ವಿವರಗಳನ್ನು ಆನ್‌ಲೈನ್ ನೋಂದಣಿ ಮೂಲಕ ಪಡಕೊಂಡು, ಹಿನ್ನೆಲೆ ತಪಾಸಣೆ ನಡೆಸಿ ಆಮೇಲಷ್ಟೇ ಸುಮಾರಾಗಿ ಎಂಬತ್ತು ಶೇಕಡಾ ಸದಸ್ಯರಿಗೆ ಪಾಸ್‌ಗಳು ಸಿಕ್ಕವು. ನಮ್ಮ ಬೃಂದಾವನ ಕನ್ನಡಕೂಟದಿಂದ ನಾವು 80 ಪಾಸ್‌ಗಳಿಗೆ ಕೋರಿಕೆ ಸಲ್ಲಿಸಿದ್ದೆವು. ಅರುವತ್ತಷ್ಟೇ ಸಿಕ್ಕಿದ್ದವು. ಆಗಸ್ಟ್ ತಿಂಗಳ ಕೊನೆಗೆ ನೋಂದಣಿಗಳೆಲ್ಲ ಮುಗಿದೂ ಹೋಗಿದ್ದವು.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ












Click it and Unblock the Notifications