ರೋಮಾಂಚನಕಾರಿ ಗಳಿಗೆಗಳ ಎರಡನೇ ಪುಟ
ಸೆಪ್ಟೆಂಬರ್ 26ಕ್ಕೆ ಮೋದಿ ಅಮೆರಿಕ ದೇಶಕ್ಕೆ ಬಂದರು. 27ರಂದು ಸಂಯುಕ್ತ ರಾಷ್ಟ್ರಗಳ ಸಭೆಯಲ್ಲಿ ಅಮೋಘ ಭಾಷಣ ಮಾಡಿ ವಿಶ್ವನಾಯಕರನ್ನೆಲ್ಲ ದಂಗುಬಡಿಸಿದರು. ಅವರ ಅಮೆರಿಕ ಪ್ರವಾಸದ ಅಪ್‌ಡೇಟ್‌ಗಳನ್ನೆಲ್ಲ ಮಾಧ್ಯಮಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ನೋಡಿ, ಕೇಳಿ ನಮ್ಮ ಕುತೂಹಲ ತಾರಕಕ್ಕೇರಿತ್ತು. ಕೊನೆಗೂ 28ರ ರವಿವಾರ ಬಂದೇಬಂತು. ಬೆಳಿಗ್ಗೆ ಒಂಬತ್ತಕ್ಕೆಲ್ಲ ಮ್ಯಾಡಿಸನ್ ಸ್ಕ್ವೇರ್‌ನಲ್ಲಿರುವಂತೆ ನಮಗೆ ಮೊದಲೇ ಸೂಚನೆ ಕೊಟ್ಟಿದ್ದರು.
ನಾವಂತೂ ಹಿಂದಿನರಾತ್ರಿ ಹೋಗಿ ಅಲ್ಲೇ ಠಿಕಾಣಿ ಹೂಡುವುದಾದರೂ ಸಿದ್ಧರಿದ್ದೆವು, ಅಷ್ಟೂ ಕಾತರ, ಸಂಭ್ರಮ. ಪಾಸ್‌ಗಳನ್ನು ಪಡೆದವರಷ್ಟೇ ಅಲ್ಲದೆ ನಮ್ಮ ಕೂಟದ ಸದಸ್ಯರು ಮತ್ತು ಮಕ್ಕಳೆಲ್ಲ ಸೇರಿ ಕಾಶ್ಮೀರದಲ್ಲಿ ನೆರೆಪೀಡಿತರಿಗೆ ಧನಸಹಾಯಕ್ಕಾಗಿ ದುಡ್ಡು ಸಂಗ್ರಹಿಸಿ ಅದನ್ನೂ ಪ್ರಧಾನಿಯವರಿಗೆ ಒಪ್ಪಿಸಲು ತೆಗೆದುಕೊಂಡು ಹೋಗುವವರಿದ್ದೆವು. ನಮ್ಮ ಮನೆಯಿಂದ ಮ್ಯಾಡಿಸನ್ ಸ್ಕ್ವೇರ್ ಸುಮಾರು 40 ಮೈಲು ದೂರ. ಟ್ರಾಫಿಕ್ ದಟ್ಟಣೆ ಇರುತ್ತದೆಂದು ಗೊತ್ತಿದ್ದರಿಂದ ಕಾರಲ್ಲಿ ಹೋಗುವಂತಿಲ್ಲ.

ನಾವಿಬ್ಬರೂ ರೈಲಿನಲ್ಲಿ ಹೋಗಿ ಸಭಾಂಗಣ ತಲುಪಿ, ಭದ್ರತಾ ತಪಾಸಣೆಯನ್ನೆಲ್ಲ ದಾಟಿ ಒಳಹೋಗುವಷ್ಟಕ್ಕೆ ಹತ್ತು ಗಂಟೆ ಆಗಿತ್ತು. ಸಭಾಂಗಣ ಹೆಚ್ಚೂಕಡಿಮೆ ತುಂಬಿತ್ತು. ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಜನರು ಸೇರಿಯಾಗಿತ್ತು. ಪ್ರತಿಯೊಬ್ಬರ ಮುಖದಲ್ಲೂ ಸಂಭ್ರಮ ಎದ್ದುಕಾಣುತ್ತಿತ್ತು. ನಮ್ಮ ಕೂಟದ ಸದಸ್ಯರೂ ಒಬ್ಬೊಬ್ಬರಾಗಿ ಬರತೊಡಗಿದರು. ವೇದಿಕೆಗೆ ತುಂಬಾ ಹತ್ತಿರದಲ್ಲೇ, ಅಂದರೆ ಮೋದಿಯವರು ನಿಂತು ಭಾಷಣ ಮಾಡಲಿರುವ ಸ್ಟ್ಯಾಂಡ್‌ನಿಂದ ಹತ್ತಿಪ್ಪತ್ತು ಅಡಿಗಳ ಅಂತರದೊಳಗೆ ನಮಗೆಲ್ಲರಿಗೆ ಆಸನವ್ಯವಸ್ಥೆ ಸಿಕ್ಕಿತು.
ಹನ್ನೊಂದು ಗಂಟೆ ಸುಮಾರಿಗೆ ಸಮೂಹ ನೃತ್ಯಗಳು ಮತ್ತಿತರ ಸಾಂಸ್ಕೃತಿಕ ಪ್ರದರ್ಶನಗಳು ಶುರುವಾದವು. ಅವು ಚೆನ್ನಾಗಿಯೇನೋ ಇದ್ದವು, ಆದರೆ ನಮಗೋ ಮೋದಿಯವರದೇ ಧ್ಯಾನ, ಅವರ ಆಗಮನದ್ದೇ ನಿರೀಕ್ಷೆ. ಕೊನೆಗೂ ಹನ್ನೆರಡರ ಸುಮಾರಿಗೆ ಮೋದಿ ಬಂದರು! ಅದೇ ಟ್ರೇಡ್‌ಮಾರ್ಕ್ ನಸುಕೇಸರಿ ಬಣ್ಣದ ಕುರ್ತಾ. ಮುಖದಲ್ಲಿ ಅದೇ ಚಿರಪರಿಚಿತ ಗಾಂಭೀರ್ಯದ ನಗು. ಕಣ್ಣುಗಳಲ್ಲಿ ಹೊಳೆಯುವ ಮಿಂಚು. ಇಷ್ಟು ಹತ್ತಿರದಿಂದ ನೋಡುತ್ತಿದ್ದೇವಲ್ಲ ಈ ಪುಣ್ಯಪುರುಷನನ್ನು ಎಂದು ಒಮ್ಮೆ ನಮ್ಮ ಮೈ ಚಿವುಟಿ ನೋಡುವಂಥ ಸನ್ನಿವೇಶ. ಅಷ್ಟು ಹೊತ್ತಿಗೆ ಅಲ್ಲಿ ನೆರೆದಿದ್ದ ಅಮೆರಿಕದ ಸಂಸದರು ಮತ್ತು ಜನಪ್ರತಿನಿಧಿಗಳನ್ನು ವೇದಿಕೆಯ ಮೇಲೆ ಆಹ್ವಾನಿಸಿ ಪರಿಚಯಿಸಲಾಯ್ತ್ತು. ಅಮೆರಿಕದ ರಾಷ್ಟ್ರಗೀತೆಯನ್ನೂ ಹಾಡಲಾಯಿತು. ಮೋದಿಯವರ ಆಗಮನವಾದ ಮೇಲೆ ಮತ್ತೊಮ್ಮೆ ಅಮೆರಿಕದ ರಾಷ್ಟ್ರಗೀತೆ ಮೊಳಗಿತು.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ












Click it and Unblock the Notifications