• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಂಡನ್ನಿನ ಹೆಮ್ಮೆಯ ಕನ್ನಡಿಗ ಕಿಕಿ ತಮ್ಮಯ್ಯ ಇನ್ನಿಲ್ಲ

By * ಕುಮಾರ ಕುಂಟಿಕಾನಮಠ
|

ಸುಮಾರು ದಶಕಗಳ ಹಿಂದೆ ಕರ್ನಾಟಕದ ಕೊಡಗಿನಿಂದ ಇಂಗ್ಲೆಂಡಿಗೆ ಬಂದು, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸಾಧನೆಯನ್ನು ಮಾಡಿದ ಕಿಕಿ ತಮ್ಮಯ್ಯ(76)ನವರು ಮಾರ್ಚ್ 28ರಂದು ರಾತ್ರಿ ತಮ್ಮ ಸ್ವಗೃಹದಲ್ಲಿ ದೈವಾಧೀನರಾದರು. ಅತ್ಯಂತ ಸಹೃದಯಿಯಾಗಿದ್ದ ಅವರು ಹ್ಯಾರೋದ ಮೊದಲ ಏಷ್ಯನ್ ಮೇಯರ್ ಆದ ಹೆಗ್ಗಳಿಕೆ ಪಾತ್ರರಾಗಿದ್ದರು.

ಕರ್ನಾಟಕ ರಾಜ್ಯಕ್ಕೆ, ಕೊಡಗಿಗೆ ಹೆಮ್ಮೆ ತರುವಂತಹ ವೀರ ಕನ್ನಡಿಗನ ಸಾಧನೆ ನಿಜಕ್ಕೂ ಅನನ್ಯ. 1964ರಲ್ಲಿ ಬ್ರಿಟನ್ನಿಗೆ ಬಂದ ಅವರು 2000 ಇಸವಿಯಲ್ಲಿ ಪ್ರಪ್ರಥಮ ಭಾರಿಗೆ ಲಂಡನ್ನಿನ ಹ್ಯಾರೋ ಕೌನ್ಸಿಲ್ ಗೆ ಮೇಯರ್ ಆದರು. 20 ವರುಷಗಳ ಕಾಲ ಲೇಬರ್ ಪಕ್ಷದ ಸೋಲಿಲ್ಲದ ಕೌನ್ಸಿಲ್ಲರ್ ಆಗಿದ್ದ ಅವರು, ಇಂಗ್ಲೆಂಡಿನ ಮಾಜಿ ಪ್ರಧಾನಿಗಳಾದ ಟೋನಿ ಬ್ಲೇರ್ ಮೊದಲಾದವರೊಂದಿಗೆ ರಾಜಕೀಯ ಒಡನಾಟ, ಬ್ರಿಟನಿನ ರಾಜಮನೆತನದೊಂದಿಗೆ ನಿಕಟ ಸಂಬಂಧವಿಟ್ಟುಕೊಂಡಿದ್ದರು.

ಕರ್ನಾಟಕದ ರಾಜಕೀಯ ಮುತ್ಸದ್ದಿಗಳಾದ ರಾಮಕೃಷ್ಣ ಹೆಗಡೆ, ಎಂಪಿ ಪ್ರಕಾಶ್ ಮುಂತಾದ ರಾಜಕಾರಣಿಗಳೊಂದಿಗೆ ಒಡನಾಟ ಇಟ್ಟುಕೊಂಡಿದ್ದರು. ಹತ್ತಾರು ಅಂತಾರಾಷ್ಟ್ರೀಯ ಸನ್ಮಾನಗಳು ಸಂದಿದ್ದರೂ ಯಾವುದೇ ಪ್ರಚಾರವನ್ನು ಬಯಸದ, ನಿಗರ್ವಿ, ಸಹೃದಯಿಯಾಗಿದ್ದರು ಕಿಕಿ ತಮ್ಮಯ್ಯನವರು. ಅವರ ಜೀವ ಇಂದು ನಮ್ಮೊಂದಿಗಿಲ್ಲದಿದ್ದರು ಅವರ ವ್ಯಕ್ತಿತ್ವ ನಮ್ಮೊಂದಿಗಿದೆ.

ಜಾತಸ್ಯ ಹಿ ಮರಣಂ ಧ್ರುವಂ. ಆದರೆ ಬೆರಳೆಣಿಕೆಯಷ್ಟು ಜನರು ಮಾತ್ರ ಪ್ರಪಂಚದಲ್ಲಿ ದೈಹಿಕವಾಗಿ ಇಲ್ಲದಿದ್ದರೂ ಎಲ್ಲರ ಮನಸ್ಸಿನಲ್ಲೂ ಜೀವಂತವಾಗಿರುತ್ತಾರೆ. ಅಂತಹ ಉತ್ತಮರ ಸಾಲಿಗೆ ಸೇರಿದ ತಮ್ಮಯ್ಯನವರನ್ನು ಕರ್ನಾಟಕ ಸರಕಾರ ಗುರುತಿಸದೆ ಹೋದದ್ದು ನಿಜಕ್ಕೂ ಖೇದನೀಯ. ಇನ್ನಾದರೂ ಕರ್ನಾಟಕ ಸರಕಾರ ಮರಣೋತ್ತರವಾಗಿ ಗೌರವಿಸಬೇಕು ಎಂಬುದು ಎಲ್ಲರ ಆಶಯ.

ಇತ್ತೀಚಿಗೆ, ಸಂಗಮ ಸಮಿತಿಯು ವಿಶ್ವ ಕನ್ನಡ ಸಮ್ಮೇಳನ ಯುರೋಪ್-2011 ಲಂಡನ್ನಿನಲ್ಲಿ ಆಯೋಜಿಸಿದ್ದೇವೆ, ನೀವು ಸಂಗಮ ಸಮಿತಿಯ ಅಧ್ಯಕ್ಷರಾಗಿ ನಮ್ಮನ್ನು ನಿರ್ದೇಶಿಸಬೇಕೆಂದು ಕೇಳಿಕೊಂಡಾಗ ಅವರು ಹೇಳಿದ ಮಾತು "ಕನ್ನಡಕ್ಕಾಗಿ ನನ್ನ ತನು ಮನ ಧನ. ಆದರೆ ಅಂತಹ ದೊಡ್ಡ ಸಾಧನೆಯನ್ನೇನು ನಾನು ಮಾಡಿಲ್ಲ. ನಿಮ್ಮೊಂದಿಗೆ ನಾನು ಅಳಿಲು ಸೇವೆ ಮಾಡುತ್ತೇನೆ. ಅಧ್ಯಕ್ಷರನ್ನಾಗಿ ಬೇರೆಯವರನ್ನು ಮಾಡಿ" ಎಂದು ಸೌಜನ್ಯ ಪೂರ್ವಕವಾಗಿ ಹೇಳಿದ್ದರು.

ನಿಮ್ಮ ಹೆಸರೇ ನಮಗೆ ಶ್ರೀರಕ್ಷೆ, ಗೌರವ, ಸ್ಫೂರ್ತಿ. ಹಾಗಾಗಿ ನೀವೇ ಅಧ್ಯಕ್ಷರಾಗಬೇಕೆಂದು ಹೇಳಿದಾಗ ವಿಶ್ವ ಕನ್ನಡ ಸಮ್ಮೇಳನ ಲಂಡನ್ನಿನಲ್ಲಿ ಆಗಲೇಬೇಕಾದ್ದು. ಎಲ್ಲ ಕನ್ನಡಿಗರನ್ನು ಈ ವಯಸ್ಸಿನಲ್ಲಿ ಕಾಣುವ ಯೋಗ ಬಂದಿದೆ. ನಾನು ಅಧ್ಯಕ್ಷನಾಗಿ ಸಹಕರಿಸುತ್ತೇನೆ ಎಂದು ಅನಾರೋಗ್ಯ ಇದ್ದಾಗ್ಯೂ ಒಪ್ಪಿಕೊಂಡಿದ್ದರು. ಮೊದಲನೇ ಮೀಟಿಂಗ್ ನಮ್ಮ ಮನೆಯಲ್ಲೇ ನಡೆಯಲಿ ಎಂದು ಮಾರ್ಚ್ 27, ಭಾನುವಾರ ಸಂಜೆ ಮೂರು ಘಂಟೆಗೆ ಎಲ್ಲರನ್ನು ಬಹಳ ಆದರದಿಂದ ಬರಮಾಡಿಕೊಂಡು, ಎಲ್ಲರೊಡನೆ ಬೆರೆತು, ಚರ್ಚಿಸಿ ಹುರಿದುಂಬಿಸಿದ್ದರು. ಇಂತಹ ನಿಸ್ವಾರ್ಥವಿರುವ ಕನ್ನಡಿಗರು ಸಿಗುವುದು ನಿಜಕ್ಕೂ ಅಪರೂಪ. ದಿವಂಗತ ತಮ್ಮಯ್ಯನವರ ಗೌರವಾರ್ಥ ಬ್ರಿಟಿಶ್ ಸರಕಾರದ ಹ್ಯಾರೋ ಕೌನ್ಸಿಲ್ ನವರು ಸಿವಿಲ್ ಫ್ಯೂನೆರಲ್ ಸರ್ವಿಸ್ ಏರ್ಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Keeki Thammaiah (76), known for his kind heartedness died at his residence in London. He was the first Asian Mayor of Harrow council. Originally from Coorg Thammaiah had agreed to chair the Vishwa Kannada Sammalena in Europe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more