ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಹಿತ್ಯ ರಂಗದ 'ನಮ್ಮ ಹೆಮ್ಮೆಯ ಬರಹಗಾರರು'

By Prasad
|
Google Oneindia Kannada News

5th Vasanta Sahityotsava
ಆತ್ಮೀಯ ಸಹೃದಯರೆ, ಪ್ರತಿಬಾರಿಯಂತೆ ಈ ಸಲವೂ ನಮ್ಮ ಹೆಮ್ಮೆಯ ಬರಹಗಾರರನ್ನು ಮತ್ತು ಅವರ ಇತ್ತೀಚಿನ ಕೃತಿಗಳನ್ನು ಸಾಹಿತ್ಯಪ್ರಿಯರಿಗೆ ಏಪ್ರಿಲ್ 30, ಮೇ 1ರಂದು ಕ್ಯಾಲಿಫೋರ್ನಿಯಾದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ರಂಗದ ಐದನೇ ವಸಂತ ಸಾಹಿತ್ಯೋತ್ಸವದ ಸಂದರ್ಭದಲ್ಲಿ ಪರಿಚಯ ಮಾಡಿಕೊಡಲು ನಾವು ಕಾತುರರಾಗಿದ್ದೇವೆ.

ಕಳೆದ ಸಮ್ಮೇಳನದಿಂದೀಚೆಗೆ (2009 ಮೇ) ಪ್ರಕಟವಾಗಿರುವ ಅಮೆರಿಕದ ಬರಹಗಾರರು ಬರೆದ ಅಥವಾ ಸಂಪಾದಿಸಿದ ಹಲವು ಪುಸ್ತಕಗಳನ್ನು ಕನ್ನಡ ಸಾಹಿತ್ಯ ರಂಗ ಈಗಾಗಲೇ ಗುರುತಿಸಿದೆ. ಅವುಗಳಲ್ಲಿ ಎರಡು ಕಾದಂಬರಿಗಳು, ಒಂದು ಕಥಾ ಸಂಕಲನ, ಒಂದು ಮಕ್ಕಳ ಸಾಹಿತ್ಯ, ಒಂದು ವಿಮರ್ಶಾ ಗ್ರಂಥ, ಒಂದು ಅನುವಾದ, ಒಂದು ಸ್ಮರಣ ಗ್ರಂಥ ಸಹ ಇವೆ. ಇವೇ ಅಲ್ಲದೇ ಇನ್ನೂ ಮೂರು ಕಥಾಸಂಕಲನಗಳು ಮತ್ತೊಂದು ಅನುವಾದ ಕೂಡ ನಮ್ಮ ವಸಂತ ಸಾಹಿತ್ಯೋತ್ಸವದ ವೇಳೆಗೆ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಅವುಗಳ ಬಗ್ಗೆ ಹೆಚ್ಚಿನ ವಿವರಗಳನ್ನು ನಿಮ್ಮೊಡನೆ ಹಂಚಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ.

ನಮ್ಮ ಗಮನಕ್ಕೆ ಬಂದಿರದ, ಕಳೆದ ಎರಡು ವರ್ಷಗಳಲ್ಲಿ ಪ್ರಕಟವಾದ ಅಮೆರಿಕದ ಕನ್ನಡಿಗರ ಕೃತಿಗಳಿದ್ದಲ್ಲಿ, ಅವುಗಳನ್ನು ಅದರ ಲೇಖಕರಾಗಲೀ ಅವರ ಪ್ರತಿನಿಧಿಗಳಾಗಲೀ ಪರಿಚಯ ಮಾಡಿಕೊಡುವ ಅಭಿಪ್ರಾಯ ಹೊಂದಿದ್ದಲ್ಲಿ, ಅಂಥವರು ಈ ಕೆಳಕಂಡವರನ್ನು ದಯಮಾಡಿ ಕೂಡಲೇ (2011 ಏಪ್ರಿಲ್ 2ರ ಮುನ್ನ) ಸಂಪರ್ಕಿಸಬೇಕೆಂದು ಕೋರಿಕೆ. ಹಾಗೇ ಕೃತಿಗಳ ಬಗ್ಗೆ ಸೂಕ್ಷ್ಮ ಪರಿಚಯವನ್ನೂ ಕಳುಹಿಸಿದಲ್ಲಿ, ನಮ್ಮ ಗೋಷ್ಠಿಯನ್ನು ಯೋಜಿಸಲು ತುಂಬಾ ಸಹಾಯವಾಗುತ್ತದೆ.

ಮೈ ಶ್ರೀ ನಟರಾಜ
ಮಧು ಕೃಷ್ಣಮೂರ್ತಿ

English summary
Kannada sahitya ranga is conducting 5th Vasanta Sahityotsava in America from April 30 to May 1, 2011. KSR will be introducing the American Kannada writers and their publications on this occasion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X