ಪಶ್ಚಿಮಕರಾವಳಿಯಲ್ಲಿ ನಾವಿಕ ಸಮ್ಮೇಳನ-2010

ಮೂರು ದಿನಗಳ ಈ ಕನ್ನಡ ಸಂಸ್ಕತಿ ಉತ್ಸವದಲ್ಲಿ ಕಲೆ, ಸಾಹಿತ್ಯ, ವಾಣಿಜ್ಯ, ಯುವ ಕಾರ್ಯಕ್ರಮ ಹಾಗೂ ಕನ್ನಡ ಪರಂಪರೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದಲ್ಲಿ 3000ಕ್ಕೂ ಹೆಚ್ಚು ಕನ್ನಡಿಗರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಸಮ್ಮೇಳನದ ಆಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಮ್ಮೇಳನದಲ್ಲಿ ಭಾಗವಹಿಸಲು ಸಂತೋಷದಿಂದ ಒಪ್ಪಿಕೊಂಡಿದ್ದಾರೆ ಎಂದೂ ಪ್ರಕಟಣೆ ತಿಳಿಸಿದೆ.
ಉತ್ತರ ಅಮೆರಿಕ ಹಾಗೂ ವಿಶ್ವ ಕನ್ನಡಿಗರಲ್ಲಿ ಕನ್ನಡದ ಪರಂಪರೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಜನಿಸಿದ ಸಂಸ್ಥೆ ನಾವಿಕ. ಮಾತೃಭೂಮಿಯಿಂದ ದೂರವಾಗಿ ಬಂದು ನೆಲೆಸಿರುವ ಕನ್ನಡಿಗರ ಸೇವೆಗಾಗಿಯೇ ಮೀಸಲಾಗಿರುವ ಸಂಸ್ಥೆ. ನಾವಿಕ ಹೊರನಾಡ ಕನ್ನಡಿಗರನ್ನು ಒಂದು ಗೂಡಿಸಿ, ಅವರ ಮತ್ತು ಕರ್ನಾಟಕದ ನಡುವೆ ಸ್ವರ್ಣ ಸೇತುವೆಯಾಗಿ ಸೇವೆಮಾಡುವ ಸಂಸ್ಥೆಯಾಗಿದೆ. ವಿಶ್ವ ಕನ್ನಡಿಗರ ತನು ಮನ ಧನ ಸಹಾಯವನ್ನು ಕರ್ನಾಟಕದ ಉದ್ಧಾರಕ್ಕಾಗಿ ಉಪಯೋಗಿಸಿಕೊಳ್ಳುವ ಉದ್ಧೇಶ ಹೊಂದಿದೆ ಎಂದು ಪ್ರಕಟಣೆಯಲ್ಲಿ ಅಧ್ಯಕ್ಷ ಅಯ್ಯಂಗಾರ್ ತಿಳಿಸಿದ್ದಾರೆ.
ಭಾರತ, ಕರ್ನಾಟಕದ ಸ್ಥಳೀಯ ಸಂಪರ್ಕ ಸಂಯೋಜಕ ಎಂ. ಕೃಷ್ಣಮೂರ್ತಿ +91-99452 46028, Email : [email protected]
NAVIKA : North America Vishwa Kannada Association)4610 Cerro Vista Drive, Anaheim CA, 92807 Phone: 001-714-549-1294











Click it and Unblock the Notifications