• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುಗಾದಿಯಂದು ಹೊಸ ಕನ್ನಡಕೂಟ 'ನಾವಿಕ' ಉದಯ

By Staff
|

ಅಮೆರಿಕ ಮತ್ತು ಹೆಚ್ಚಾಗಿ ಎಲ್ಲ ಹೊರನಾಡ ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸಲು ಮತ್ತು ಸಮಸ್ಯೆಗಳಿಗೆ ಒಗ್ಗಟ್ಟಿನಿಂದ ಪರಿಹಾರ ಕಂಡುಕೊಳ್ಳಲು 'ನಾವಿಕ' (NAVIKA ಅಂದ್ರೆ North America Vishwa Kannada Association) ಎಂಬ ಕನ್ನಡಿಗರ ಸಂಘವನ್ನು ಹುಟ್ಟುಹಾಕಲಾಗಿದೆ ಎಂದು ನಾವಿಕದ ಸ್ಥಾಪಕ ಸದಸ್ಯರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿರೋಧಿ ನಾಮ ಸಂವತ್ಸರದ ಉಗಾದಿ ಹಬ್ಬದ ಶುಭ ದಿನ ನಾವು ಉತ್ತರ ಅಮೆರಿಕದಲ್ಲಿ "ನಾವಿಕ" ಎಂಬ ಹೊಸ ಕನ್ನಡ ಸಂಸ್ಥೆಯನ್ನು ಪ್ರಾರಂಭಿಸುತ್ತಿದ್ದೇವೆ. ಉತ್ತರ ಅಮೆರಿಕ ಮತ್ತು ವಿಶ್ವದ ಎಲ್ಲ ಹೊರನಾಡ ಕನ್ನಡಿಗರನ್ನು ನಾವು ಪ್ರತಿನಿಧಿಸಲು ಉದ್ದೇಶಿಸಿದ್ದೇವೆ. ಈ ಸಂಸ್ಥೆಯು ಉತ್ತರ ಅಮೆರಿಕ ಮತ್ತು ವಿಶ್ವದ ಹೊರನಾಡ ಕನ್ನಡಿಗರಿಗೆಲ್ಲಾ ಒಂದು ಸಂಯುಕ್ತ ವೇದಿಕೆಯಾಗಿ, ವಿಶ್ವದ ಸಮಸ್ತ ಕನ್ನಡಿಗರ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಮೊದಲಾದ ವಿವಿಧ ಅವಶ್ಯಕತೆಗಳಿಗೆ ಪೂರಕವಾಗಿ ಕಾರ್ಯಕ್ರಮಗಳನ್ನು ಏರ್ಪಡಿಸುತ್ತದೆ. ಅಮೆರಿಕದ ಹಾಗೂ ವಿಶ್ವದಾತ್ಯ೦ತ ಎಲ್ಲ ಕನ್ನಡಿಗರಿಗೂ ಮತ್ತು ಕನ್ನಡ ಸಂಘಗಳಿಗೂ ಸಮಾನ ಅವಕಾಶಗಳನ್ನು ಒದಗಿಸಿ, ಪ್ರಾಂತ್ಯ, ವಲಯ, ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಒದಗಿಸುವ ಯೋಜನೆಗಳಿವೆ. ತಾಯಿನಾಡಿನಿಂದ ಹೊರಬಂದು ಸಾವಿರಾರು ಮೈಲುಗಳ ದೂರದಲ್ಲಿರುವ ನಮಗೆಲ್ಲಾ ಅನೇಕ ಸವಾಲುಗಳು ಬರುವುದು ಅನಿವಾರ್ಯ. ಇಂತಹ ಸಮಸ್ಯೆಗಳನ್ನು ನಾವು ಒಬ್ಬರೇ ಎದುರಿಸುವುದಕ್ಕಿಂತ ಒಗ್ಗಟ್ಟಿನಿಂದ ಎದುರಿಸುವುದು ಉತ್ತಮ.

ರಾಷ್ಟ್ರಕವಿ ಕುವೆಂಪು ಅವರ "ಎಲ್ಲಾದರು ಇರು, ಎಂತಾದಾರು ಇರು, ಎಂದೆದಿಗು ನೀ ಕನ್ನಡವಾಗಿರು" ಎ೦ಬುದು ನಮ್ಮ ಮೂಲ ಮಂತ್ರ. ಜಾಗತೀಕರಣದ ಪರಿಣಾಮವಾಗಿ ಹೊರನಾಡ ಕನ್ನಡಿಗರು ಕನ್ನಡ ಸಂಸ್ಕೃತಿ, ಕನ್ನಡ ಭಾಷೆ ಮೊದಲಾದ ವಿಷಯಗಳಲ್ಲಿ ಅನೇಕ ಸವಾಲುಗಳನ್ನು ಎದುರುಸುತ್ತಿದ್ದಾರೆ. ಈ ಹೋರಾಟದಲ್ಲಿ ಒಳ್ಳೆಯ 'ನಾವಿಕ'ನ ಅಗತ್ಯ ನಮಗೆಲ್ಲರಿಗೂ ಇದೆ. ಹೊರನಾಡ ಕನ್ನಡಿಗರಲ್ಲಿ ಈಗಾಗಲೆ ನೂರಾರು ನಾವಿಕದ ಸದಸ್ಯರಾಗುವ ಅಭಿಲಾಶೆ ಇರುವ ಕನ್ನಡಿಗರಿದ್ದಾರೆ. ಇವರೆನ್ನಲ್ಲ ಸೇರಿಸಿ ಒಂದು ಭವ್ಯ ವೇದಿಕೆಯನ್ನು ನಿರ್ಮಿಸುವುದೇ ನಮ್ಮ ಗುರಿ. ಇದಕ್ಕೆ ಬೇಕಾಗುವ ಚಟುವಟಿಕೆಗಳನ್ನು ನಡೆಸಲು ನಿರ್ಧರಿಸಿದ್ದೇವೆ. ಈ ವೇದಿಕೆಗೆ ನಿಮಗೆಲ್ಲರಿಗು ಸ್ವಾಗತ. ನಿಮ್ಮೆಲ್ಲರ ಅಭಿಮಾನ, ಅಕ್ಕರೆ, ಬೆಂಬಲದಿಂದ, ನಾವಿಕ ಎಲ್ಲ ಹೊರನಾಡ ಕನ್ನಡಿಗರನ್ನು ಪ್ರತಿನಿಧಿಸುವ ಸಂಸ್ಥೆ ಆಗುತ್ತದೆಂದು ನಾವು ನಂಬಿದ್ದೇವೆ.

ಈ ಸಂಸ್ಥೆಯ ಧ್ಯೇಯಗಳು ಹೀಗಿವೆ:

1. ನಮ್ಮ ಮಕ್ಕಳಿಗಾಗಿ ಹಾಗೂ ಮುಂದಿನ ಜನಾಂಗಕ್ಕಾಗಿ ಕನ್ನಡ ಭಾಷೆ, ಸಂಸ್ಕೃತಿ ಉಳಿಸಿಕೊಳ್ಳುವುದು ಮತ್ತು ವೃಧ್ಧಿಸಿಕೊಳ್ಳುವುದು.

2. ಎಲ್ಲ ಕನ್ನಡಿಗರಿಗೂ ಮತ್ತು ಕನ್ನಡ ಸಂಘಗಳಿಗೂ ಪರಸ್ಪರ ವಿನಿಮಯ ವೇದಿಕೆ ಒದಗಿಸುವುದು.

3. ಹೊರದೇಶದ ಸಾಮಾಜಿಕ ವಾತಾವರಣದಲ್ಲಿ ಎದುರಾಗುವ ಸಮಸ್ಯೆಗಳ ಚರ್ಚೆ ಮತ್ತು ಪರಿಹಾರಕ್ಕೆ ಪ್ರಾಮುಖ್ಯತೆ.

4. ಕನ್ನಡಿಗರು ತಮ್ಮ ಸಂಘ ಮತ್ತು ನಾವಿಕದ ಮೂಲಕ ವಾಸಿಸುವ ದೇಶದ ಮತ್ತು ರಾಜ್ಯಗಳ ರಾಜಕೀಯ ಕ್ರಿಯೆಯಲ್ಲಿ ಭಾಗವಹಿಸುವುದು. ಕನ್ನಡತನ ಹಾಗೂ ಭಾರತೀಯತೆಗಳನ್ನು ಉಳಿಸಿಕೊಳ್ಳುವುದು.

5. ಎಲ್ಲರೂ ಸಾಂಘಿಕವಾಗಿ ಹಬ್ಬ ಹರಿದಿನಗಳಲ್ಲಿ, ವಿಶೇಷ ಸಂದರ್ಭಗಳಲ್ಲಿ ಭಾಗವಹಿಸುವುದು.

6. ಕನ್ನಡ ನಾಡಿನಲ್ಲಿ, ಭಾರತದ ಇತರ ಪ್ರಾ೦ತ್ಯಗಳಲ್ಲಿ, ಹಾಗು ನಾವು ವಾಸಿಸುವ ದೇಶಗಳಲ್ಲಿ ವಿವಿಧ ದಾನ ಧರ್ಮ ಸತ್ಕಾರ್ಯಗಳಲ್ಲಿ ತೊಡಗುವುದು.

ನಾವಿಕದ ಬಗ್ಗೆ ತಿಳಿಯಬಯಸುವವರು ಮತ್ತು ಸೇರ್ಪಡೆಯಾಗಬಯಸುವವರು naavika.kannadiga@gmail.com ವಿಳಾಸಕ್ಕೆ ಬರೆಯಬಹುದು.

ನಾವಿಕದ ಬೆಂಬಲಿಗರು ಮತ್ತು ಸ್ಥಾಪಕರು

ಡಾ. ಶರಣಬಸವ ರಾಜೂರ್, ಮೆಸಾಚುಸೆಟ್ಸ್

ವಿ. ನಂಜುಂಡರಾಮ್, ವರ್ಜಿನಿಯಾ

ಡಾ. ಕೇಶವ ಬಾಬು, ಫ್ಲೋರಿಡಾ

ಇಂದಿರಾ ಶಾಸ್ತ್ರಿ, ಫ್ಲೋರಿಡಾ

ಡಾ. ರಾಮ್ ಆರ್. ಕೃಷ್ಣ, ಅರಿಜೋನಾ

ವಲ್ಲೀಶಾ ಶಾಸ್ತ್ರಿ, ಕ್ಯಾಲಿಫೋರ್ನಿಯಾ

ಡಾ. ಕೆಆರ್ಎಸ್ ಮೂರ್ತಿ, ಕ್ಯಾಲಿಫೋರ್ನಿಯಾ

ಡಾ. ರೇಣುಕಾ ರಾಮಪ್ಪ/ಡಾ. ಜಿಎಮ್ ರಾಮಪ್ಪ, ಫ್ಲೋರಿಡಾ

ಡಾ. ನಾಗನ ಗೌಡ, ಕ್ಯಾಲಿಫೋರ್ನಿಯಾ

ರಮೇಶ್ ಬೆಂಗಳೂರು, ಕೆನಡ

ಡಾ. ದೇವಾಂಗಿ ಶ್ರೀಕಾಂತ್, ಇಲಿನಾಯ್

ಎಂ. ಕೃಷ್ಣಮೂರ್ತಿ, ಕ್ಯಾಲಿಫೋರ್ನಿಯಾ, ಭಾರತ

ಪದ್ಮಾ ರಾವ್, ಕ್ಯಾಲಿಫೋರ್ನಿಯಾ

ನಾಗಶ್ರೀ ಕಡೂರ್/ಅನಂತ್ ಕಡೂರ್, ಕ್ಯಾಲಿಫೋರ್ನೀಯಾ

ರಾಗಿಣಿ ಧರ್ಮಪ್ಪ, ಫ್ಲೋರಿಡಾ

ಸುರೇಶ್ ರಾಮಚಂದ್ರ, ಮೇರಿಲ್ಯಾಂಡ್

ನಾರಾಯಣ ಸ್ವಾಮಿ, ಅಟ್ಲಾಂಟಾ

ಶ್ರೀಕಾಂತ್ ಬಾಬು, ನ್ಯೂಜೆರ್ಸಿ

ಕೆವಿ ಕುಮಾರ್, ಅರಿಜೋನಾ

ಅಶ್ವಿನಿ ಪಂಡಿತ್, ನ್ಯೂ ಆರ್ಲೀನ್ಸ್

ವಿಶ್ವನಾಥ್ ರಾವ್, ಅಲಬಾಮ

ಉಮಾ ಜಯಸ್ವಾಮಿ, ಇಲಿನಾಯ್

ಚಕ್ರಪಾಣಿ ರಾವ್/ರೂಪಶ್ರೀ ಕಡೂರ್, ಇಂಡಿಯಾನಾಪೊಲೀಸ್

ದ್ವಾರಕಾನಾಥ್, ಓಹಿಯೋ

ಪೂರಕ ಓದಿಗೆ

ಅಮೆರಿಕದಲ್ಲಿ ಕನ್ನಡಿಗರ ಹೊಸ ಸಂಸ್ಥೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X