ಸಾಹಿತ್ಯಗೋಷ್ಠಿಯಲ್ಲಿ ಚಿತ್ತಾಲರ ‘ಬಂದು ಹೋದವನು’
ಉತ್ತರ ಕ್ಯಾಲಿಫೋರ್ನಿಯಾದ ಸಾಹಿತ್ಯ ಗೋಷ್ಠಿಯ ಫೆಬ್ರವರಿ ತಿಂಗಳ ಕಾರ್ಯಕ್ರಮಕ್ಕೆ ಇಬ್ಬಗೆಯ ವಿಷಯ ವೈವಿಧ್ಯದ ಸೊಬಗು. ಸಹೃದಯರ ಪಾಲಿಗೆ ಎರಡು ವಿಶಿಷ್ಠ ಉಪನ್ಯಾಸಗಳನ್ನು ಒಂದೇ ಕಾರ್ಯಕ್ರಮದಲ್ಲಿ ಕೇಳುವ ಅವಕಾಶ.
ಫೆಬ್ರವರಿ 9 ರ ಭಾನುವಾರ ಸಾಹಿತ್ಯ ಗೋಷ್ಠಿಯ ತಿಂಗಳ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಕಾರ್ಯಕ್ರಮ ನಡೆಯಲಿದೆ.
ಕನ್ನಡದ ಶ್ರೇಷ್ಠ ಕಾದಂಬರಿಕಾರರಲ್ಲಿ ಹಾಗೂ ಸಣ್ಣ ಕಥೆಗಾರರಲ್ಲಿ ಒಬ್ಬರಾದ ಯಶವಂತ ಚಿತ್ತಾಲರ ಕೃತಿಯ ಬಗ್ಗೆ ಮೊದಲನೇ ಉಪನ್ಯಾಸ ಮೀಸಲು. ‘ಯಶವಂತ ಚಿತ್ತಾಲರ ಬಂದು ಹೋದವನು : ಒಂದು ವಿಮರ್ಶೆ’ ಎನ್ನುವ ವಿಷಯದ ಕುರಿತು ಪ್ರಕಾಶ್ ನಾಯಕ್ ಮಾತನಾಡುವರು.
‘ನೆನಪಿನಂಗಳದಲ್ಲಿ’ ಎನ್ನುವ ವಿಷಯದ ಕುರಿತು ವಸಂತ ರಾವ್ ಅವರು ಕಾರ್ಯಕ್ರಮದ ಎರಡನೇ ಉಪನ್ಯಾಸವನ್ನು ನೀಡುವರು. ಸಾಹಿತ್ಯ ಕೃತಿಯಾಂದು ರೂಪುಗೊಳ್ಳುವ ಬಗೆ, ಸಾಹಿತ್ಯದ ತುಣುಕು ರೂಪುಗೊಳ್ಳಲು ಬೇಕಾದ ಇಂಧನಗಳು, ಇತ್ಯಾದಿಗಳ ಕುರಿತು ವಸಂತ ರಾವ್ ಮಾತನಾಡುವರು. ಕನ್ನಡ ಸಾಹಿತ್ಯ ಕ್ಷೇತ್ರದ ಮೈಲುಗಲ್ಲುಗಳು ಹಾಗೂ ಸಾಹಿತ್ಯ ಸಾಧಕರ ಕುರಿತೂ ಉಪನ್ಯಾಸಕರು ಚರ್ಚಿಸಲಿದ್ದಾರೆ.
ಕಾರ್ಯಕ್ರಮ ನಡೆಯುವ ಸ್ಥಳ ನೆನಪಲ್ಲಿರಲಿ- Wildwood Manor Apartments - Party Hall, 260 N Mathilda Avenue, Sunnyvale CA 94086.
ಶ್ರೀವತ್ಸ ದುಗಲಾಪುರ ಅವರ ಪ್ರಾರ್ಥನೆಯಾಂದಿಗೆ ಸಾಹಿತ್ಯಗೋಷ್ಠಿಯ ಕಾರ್ಯಕ್ರಮ ಶುರುವಾಗುವುದು. ಗಣೇಶ ಕಡಬ ಕಾರ್ಯಕ್ರಮವನ್ನು ನಿರೂಪಿಸುವರು. ಯಥಾಪ್ರಕಾರ ವಿಶ್ವನಾಥ್ ಹುಲಿಕಲ್ ದಂಪತಿಗಳ ಸ್ವಾಗತ-ಆತಿಥ್ಯ ಇದ್ದೇ ಇರುತ್ತದೆ !
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications