ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ ಜತೆ ಭಾರತ ಉತ್ತಮ ಸಂಬಂಧ ಹೊಂದಿದೆ: ಅಮೆರಿಕ ಅಡ್ಮಿರಲ್

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 25: ರಷ್ಯಾದ ಜತೆ ಭಾರತವು ಉತ್ತಮ ಸಂಬಂಧ ಹೊಂದಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ ಎಂದು ಅಮೆರಿಕದ ಅಡ್ಮಿರಲ್ ಜಾನ್ ಅಕ್ವಿಲಿನೊ ಹೇಳಿದ್ದಾರೆ.

ಮಿಲಿಟರಿ ಆಮಗ್ರಿಗಳು ಹಾಗೂ ಭದ್ರತಾ ಸಹಕಾರದ ವಿಷಯದಲ್ಲಿ ರಷ್ಯಾದ ಜತೆ ಭಾರವು ಉತ್ತಮ ಸಂಪರ್ಕ ಹೊಂದಿದೆ.

ಭಯೋತ್ಪಾದನೆ, ಸೈಬರ್ ಭದ್ರತೆ ಬಗ್ಗೆ ಭಾರತದೊಂದಿಗೆ ಮತ್ತೆ ಅಮೆರಿಕ ಮಾತುಕತೆಭಯೋತ್ಪಾದನೆ, ಸೈಬರ್ ಭದ್ರತೆ ಬಗ್ಗೆ ಭಾರತದೊಂದಿಗೆ ಮತ್ತೆ ಅಮೆರಿಕ ಮಾತುಕತೆ

ರಷ್ಯಾದಿಂದ ಮಹತ್ವದ ರಕ್ಷಣಾ ಸಾಮಗ್ರಿಗಳನ್ನು ಖರೀದಿಸುವಂತೆ ಭಾರತದ ಮೇಲೆ ಒತ್ತಡ ಹೇರಬಹುದೇ ವಿನಾ ನಿರ್ಬಂಧಗಳನ್ನು ಹೇರುವ ಮಾರ್ಗ ಅನುಸರಿಸಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

US Needs To Understand That India Has Longstanding Relationship With Russia: American admiral

ಭಾರತದ ಜತೆಯೂ ಅಮೆರಿಕ ಹಲವಾರು ಕ್ಷೇತ್ರಗಳಲ್ಲಿ ಸಹಭಾಗಿತ್ವ ಹೊಂದಿದೆ. ಹೀಗಾಗಿ, ಈ ಹುದ್ದೆಗೆ ನನ್ನನ್ನು ನೇಮಿಸಿದರೆ ಅಮೆರಿಕದ ರಕ್ಷಣಾ ಸಾಮಗ್ರಿಗಳನ್ನು ಖರೀದಿಸುವ ಪ್ರಸ್ತಾವವನ್ನು ಪರಿಗಣಿಸಬೇಕು ಎಂದು ಹೇಳಿದ್ದಾರೆ.

ಇಂಡೋ-ಪೆಸಿಫಿಕ್- ಅಮೆರಿಕ ಕಮಾಂಡರ್ ಹುದ್ದೆಗೆ ನೇಮಕಗೊಳ್ಳುವ ಮುನ್ನ ಸೆನೆಟರ್‌ಗಳ ಜತೆ ನಡೆದ ಸಂದರ್ಶನದಲ್ಲಿ ಜಾನ್ ಅಕ್ವಿಲಿನೊ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಸ್ 400 ಕ್ಷಿಪಣಿಗಳನ್ನು ಖರೀದಿಸಿದರೆ ಭಾರತದ ಮೇಲೆ ನಾವು ನಿರ್ಬಂಧ ವಿಧಿಸಬೇಕೆ ಎಂದು ಸೆನೆಟರ್ ಜಿಯಾನ್ನೆ ಶಹೀನ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನೀತಿ ನಿರೂಪಕರು ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು.

ಆದರೆ, ಪರ್ಯಾಯ ಪರಿಹಾರ ಕಂಡುಕೊಳ್ಳುವ ಕುರಿತು ಆಲೋಚಿಸಬೇಕಿದೆ. ಭಾರತದ ಜತೆ ನಾವು ಯಾವ ರೀತಿಯ ಸಂಬಂಧ ಹಿಂದಿದ್ದೇವೆ ಎಂಬುದನ್ನು ನಿರ್ಬಂಧ ವಿಧಿಸುವ ಮುನ್ನ ಆಲೋಚಿಸಬೇಕು ಎಂದು ಹೇಳಿದರು.

English summary
The US needs to understand that India has had a longstanding relationship with the Russians for security cooperation and military equipment, a top American admiral told lawmakers, indicating that he would push for encouraging New Delhi to move away from Moscow rather than taking the route of sanctions for the purchase of major defence equipment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X