ಅಮೆರಿಕದಲ್ಲಿ ವಲಸಿಗರಿಗೆ ಸಂಕಷ್ಟ; ಕೋರ್ಟ್ ತೀರ್ಪಿಗೆ ತಲೆಬಾಗಿದ ಬೈಡನ್ ಸರಕಾರ
ವಾಷಿಂಗ್ಟನ್, ಜೂನ್ 28: ಅಮೆರಿಕದಲ್ಲಿ ಸಾರ್ವಜನಿಕರಿಗೆ ಹಾನಿ ಮಾಡುವ ಮತ್ತು ರಾಷ್ಟ್ರೀಯ ಭದ್ರತೆಗೆ ಅಪಾಯ ತರುವ ವಲಸಿಗರನ್ನು ಮಾತ್ರ ದೇಶದಿಂದ ಹೊರಹಾಕಬೇಕೆಂದು ಇತ್ತೀಚೆಗೆ ತಾನು ಹೊರಡಿಸಿದ್ದ ನಿರ್ದೇಶನವನ್ನು ಬೈಡನ್ ಸರಕಾರ ಹಿಂಪಡೆದುಕೊಂಡಿದೆ.
ಟೆಕ್ಸಾಸ್‌ನ ನ್ಯಾಯಾಲಯವೊಂದು ಈ ನಿರ್ದೇಶನವನ್ನು ಅಮಾನ್ಯ ಮಾಡಿದ ಹಿನ್ನೆಲೆಯಲ್ಲಿ ಬೈಡನ್ ಸರಕಾರ ಈ ಕ್ರಮ ಕೈಗೊಂಡಿದೆ. ಇದರೊಂದಿಗೆ ಅಮೆರಿಕದಲ್ಲಿ ಎಲ್ಲಾ ಅಕ್ರಮ ವಲಸಿಗರನ್ನೂ ಹೊರಹಾಕುವ ಕಾರ್ಯ ನಡೆಯಲಿದೆ.
ನ್ಯಾಯಾಲಯದ ತೀರ್ಪನ್ನು ನಾವು ಒಪ್ಪದಿದ್ದರೂ ಅದರ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂದು ಹೇಳಿರುವ ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಇಲಾಖೆ (ಅಮೆರಿಕ ಆಂತರಿಕ ವ್ಯವಹಾರಗಳ ಸಚಿವಾಲಯ), ತಾನು ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಹಾಕುವುದಾಗಿಯೂ ಸ್ಪಷ್ಟಪಡಿಸಿದೆ.
ಬೈಡನ್ ಸರಕಾರ ತನ್ನ ನಿರ್ದೇಶನವನ್ನು ವಾಪಸ್ ಪಡೆದುಕೊಂಡಿರುವುದು ಅಮೆರಿಕದ ವಲಸಿಗ ಸಮುದಾಯಗಳಿಗೆ ಚಳಿ ತರಿಸಿದೆ. ಅಕ್ರಮವಾಗಿ ನೆಲಸಿರುವವರ ಜೊತೆ ಇತರರೂ ಭಯದ ಸ್ಥಿತಿಯಲ್ಲಿದ್ದಾರೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಏನಿದು ಪ್ರಕರಣ?
ಹಿಂದೆ ಡೊನಾಲ್ಡ್ ಟ್ರಂಪ್ ಅಧಿಕಾರದಲ್ಲಿದ್ದಾಗ ಎಲ್ಲಾ ವಲಸಿಗರನ್ನು ಗುರುತಿಸಿ ಹೊರಹಾಕಲು ಸರಕಾರ ನಿರ್ಧರಿಸಿತ್ತು. ಬೈಡನ್ ಅಧಿಕಾರಕ್ಕೆ ಬಂದ ಬಳಿಕ ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಇಲಾಖೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬೇರೆ ನಡೆ ಇಟ್ಟಿತು. ರಾಷ್ಟ್ರೀಯ ಭದ್ರತೆಗೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಅಪಾಯವಾಗಿರುವ ವಲಸಿಗರು ಅಥವಾ ಇತ್ತೀಚೆಗೆ ಅಮೆರಿಕಕ್ಕೆ ಅಕ್ರಮವಾಗಿ ಬಂದಿರುವ ಜನರನ್ನು ಮಾತ್ರ ಗುರುತಿಸಿ ಹೊರಕಳುಹಿಸಬೇಕೆಂದು ನಿರ್ದೇಶನ ನೀಡಲಾಗಿತ್ತು.
ಹೋಮ್‌ಲ್ಯಾಂಡ್ ಸೆಕ್ಯೂರಿಟಿ ಕಾರ್ಯದರ್ಶಿ ನೀಡಿದ ಈ ನಿರ್ದೇಶನವನ್ನು ಪ್ರಶ್ನಿಸಿ ಟೆಕ್ಸಾಸ್ ಮತ್ತು ಲೂಸಿಯಾನದ ರಿಪಬ್ಲಿಕನ್ ಪಕ್ಷದ ಸರಕಾರಗಳು ನ್ಯಾಯಾಲಯದ ಮೊರೆಹೋಗಿದ್ದವು. ಜೂನ್ ೧೦ರಂದು ನೀಡಿದ ತೀರ್ಪಿನಲ್ಲಿ ಟೆಕ್ಸಾಸ್‌ನ ಯುಎಸ್ ಡಿಸ್ಟ್ರಿಕ್ಟ್ ಜಡ್ಜ್ ಡ್ರ್ಯೂ ಟಿಪ್ಟನ್ ಅವರು ಬೈಡನ್ ಸರಕಾರದ ನಿರ್ದೇಶನವನ್ನು ಅಮಾನ್ಯಗೊಳಿಸಿತು.

ಭಯದಲ್ಲಿ ವಲಸಿಗರು
ಬೈಡನ್ ಸರಕಾರ ಈ ತೀರ್ಪನ್ನು ಒಲ್ಲದ ಮನಸಿನಿಂದ ಒಪ್ಪಿದ್ದೇವೆ ಎಂದು ಸ್ಪಷ್ಟಪಡಿಸಿದೆ. ಮೇಲ್ಮನವಿ ಹೋಗುವುದಾಗಿಯೂ ತಿಳಿಸಿದೆ. ಆದರೂ ವಲಸಿಗರಲ್ಲಿ ಮತ್ತೆ ಭಯ ಶುರುವಾಗಿದೆ. ಅಕ್ರಮವಾಗಿ ನೆಲಸಿರುವವರ ಜೊತೆ ಇತರ ವಲಸಿಗ ಸಮುದಾಯಗಳಿಗೂ ಬಂಧನದ ಭೀತಿ ಎದುರಾಗಿದೆ ಎನ್ನುತ್ತಾರೆ ಕಾರ್ನೆಲ್ ಯೂನಿವರ್ಸಿಟಿಯ ಒಬ್ಬ ಪ್ರೊಫೆಸರ್.

ಟ್ರಂಪ್ ಇದ್ದಾಗ ವಲಸಿಗರ ಪರದಾಟ
ಡೊನಾಲ್ಡ್ ಟ್ರಂಪ್ ಅಧಿಕಾರದಲ್ಲಿದ್ದಾಗ ಅಕ್ರಮ ವಲಸಿಗರ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಿದ್ದರು. ವಲಸೆ ಅಧಿಕಾರಿಗಳಿಗೆ ಹೆಚ್ಚು ಸ್ವಾತಂತ್ರ್ಯ ನೀಡಿದ್ದರು. ಆಗ ಅಕ್ರಮವಾಗಿ ನೆಲಸಿದ್ದ ವಲಸಿಗರು ಅಧಿಕಾರಿಗಳ ಕಣ್ತಪ್ಪಿಸಲು ಬೇರೆ ಬೇರೆ ಮಾರ್ಗೋಪಾಯಗಳನ್ನು ಹುಡುಕುತ್ತಿದ್ದುದು ಕಂಡುಬಂದಿತ್ತು. ಕಾರಿನಲ್ಲಿ ಹೋದರೆ ನಿಲ್ಲಿಸಿ ಅಧಿಕಾರಿಗಳು ದಾಖಲೆಗಳನ್ನು ಕೇಳಬಹುದು ಎಂದು ಇವರು ಕಾರಿನಲ್ಲೇ ಹೋಗುವುದನ್ನು ನಿಲ್ಲಿಸಿದ್ದರು.
ಅಷ್ಟೇ ಅಲ್ಲ, ವಲಸೆ ಅಧಿಕಾರಿಗಳ ವ್ಯಾಪ್ತಿಗೆ ಬರದ ಚರ್ಚ್ ಮತ್ತಿತರ ಸ್ಥಳಗಳಲ್ಲಿ ಈ ಅಕ್ರಮ ವಲಸಿಗರು ಆಶ್ರಯ ಪಡೆಯುತ್ತಿದ್ದರು ಎಂದು ಹೇಳಲಾಗುತ್ತದೆ.

ಮುಂದೇನು?
ಈಗ ಅಮೆರಿಕದಲ್ಲಿ ಎಲ್ಲಾ ಅಕ್ರಮ ವಲಸಿಗರನ್ನು ಗುರುತಿಸಿ ವಾಪಸ್ ಕಳುಹಿಸಲು ಸಿಬ್ಬಂದಿ ಕೊರತೆ ಇದೆ. ಹೀಗಾಗಿ, ವಿವಿಧ ರಾಜ್ಯಗಳಲ್ಲಿ ಮತ್ತು ನಗರಗಳಲ್ಲಿ ಅಲ್ಲಿನ ಸ್ಥಳೀಯ ಆಡಳಿತಗಳೇ ಕಾರ್ಯತಂತ್ರ ರೂಪಿಸುವ ಹೊಣೆ ಹೊರಬಹುದು. ಸಿಬ್ಬಂದಿ ಕೊರತೆ ಇರುವುದರಿಂದ ಯಾವ ವಲಸಿಗರನ್ನು ಮೊದಲು ಗುರುತಿಸಬೇಕೆಂದು ಆದ್ಯತೆಗಳ ಪಟ್ಟಿ ತಯಾರಿಸಿ ಅದರಂತೆ ನಡೆಯಬಹುದು. ಅದರಂತೆ, ಮೊದಲಿಗೆ ಸಮಾಜಘಾತಕ ಶಕ್ತಿಗಳ ಮೇಲೆ ಗಮನ ನೆಡಬಹುದು ಎಂಬ ಅಭಿಪ್ರಾಯವಿದೆ.
ಅಮೆರಿಕದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ 74 ಸಾವಿರಕ್ಕೂ ಹೆಚ್ಚು ವಲಸಿಗರನ್ನು ಬಂಧಿಸಲಾಗಿತ್ತು. 59 ಸಾವಿರಕ್ಕೂ ಹೆಚ್ಚು ಮಂದಿಯನ್ನು ಗಡೀಪಾರು ಮಾಡಲಾಗಿತ್ತು. ಅದಕ್ಕೂ ಹಿಂದಿನ ಹಣಕಾಸು ವರ್ಷದಲ್ಲಿ, 1 ಲಕ್ಷಕ್ಕೂ ಹೆಚ್ಚು ಮಂದಿಯ ಬಂಧನ ಹಾಗು 1.86 ಲಕ್ಷ ಮಂದಿಯ ಗಡೀಪಾರು ಆಗಿತ್ತು.
ಅಮೆರಿಕದಲ್ಲಿರುವ ವಲಸಿಗ ಸಮುದಾಯದಲ್ಲಿ ಅನೇಕ ಭಾರತೀಯರೂ ಇದ್ದಾರೆ. ಅಕ್ರಮವಾಗಿ ವಲಸೆ ಹೋಗಿ ನೆಲಸಿರುವ ನೂರಾರು ಭಾರತೀಯರನ್ನು ಬಂಧಿಸಿದ ಘಟನೆಗಳೂ ನಡೆದಿವೆ.
(ಒನ್ಇಂಡಿಯಾ ಸುದ್ದಿ)
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ












Click it and Unblock the Notifications