Get Updates
Get notified of breaking news, exclusive insights, and must-see stories!

ಬಳ್ಳಾರಿ ಪ್ರಕರಣ: ಮಕ್ಕಳ ಬಾಲ್ಯ ಅತ್ಯಂತ ಸೂಕ್ಷ್ಮವಾದದ್ದು ಕೀಟಲೆ, ಏಕಾಂಗಿತನದ ಬಗ್ಗೆ ಇರಲಿ ಎಚ್ಚರ: ವಸುಧೇಂದ್ರ ಬರಹ

ಬಳ್ಳಾರಿಯ ವಸತಿ ಶಾಲೆಯಲ್ಲಿ ಈಚೆಗೆ ಸಹಪಾಠಿಗಳ ಮೇಲೆ ತೀವ್ರ ಹಲ್ಲೆ ಮಾಡಿ, ಒಬ್ಬ ವಿದ್ಯಾರ್ಥಿಯನ್ನು ಕೊಲೆ ಮಾಡಿದ್ದ ಕಾನೂನು ಸಂಘರ್ಷಕ್ಕೊಳಗಾದ ಬಾಲಕನಿಗೆ ಎದುರಾಗಿದ್ದ ಸಮಸ್ಯೆಗಳ ಬಗ್ಗೆ ಈಗ ಚರ್ಚೆ ಆಗುತ್ತಿದೆ. ಈ ಹುಡುಗ ತೀವ್ರ ಕೀಟಲೆ / ಅಪಹಾಸ್ಯಕ್ಕೆ ಗುರಿಯಾಗಿದ್ದ ಎಂದು ಹೇಳಲಾಗುತ್ತಿದೆ. ಆಪ್ತ ಸಮಾಲೋಚನೆ ವೇಳೆ ಬಾಲಕ ಈ ವಿಷಯವನ್ನು ವಿಚಾರಣಾ ತಂಡಕ್ಕೆ ತಿಳಿಸಿರುವುದಾಗಿ ವರದಿಯಾಗಿದೆ. ಅಲ್ಲದೆ ಈ ಹಾಸ್ಟೆಲ್‌ನಲ್ಲಿ ಎಲ್ಲರೂ ಅಂಧ್ರಪ್ರದೇಶದಿಂದ ವಿದ್ಯಾರ್ಥಿಗಳಾಗಿದ್ದರು ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಮಾತ್ರ ಕರ್ನಾಟಕದವನಾಗಿದ್ದ ಎಂದು ಹೇಳಲಾಗಿದೆ. ಮಕ್ಕಳ ಬಾಲ್ಯದ ಬಗ್ಗೆ ಬರಹಗಾರರು ಹಾಗೂ ಪುಸ್ತಕ ಪ್ರಕಾಶಕರು ಆಗಿರುವ ವಸುಧೇಂದ್ರ ಅವರ ಬರಹ ಇಲ್ಲಿದೆ.

ಬಾಲ್ಯ ಅತ್ಯಂತ ಸೂಕ್ಷ್ಮವಾದದ್ದು. ಜೊತೆಗಾರರ ಕೀಟಲೆ ಮಕ್ಕಳನ್ನು ಎಂತಹ ದುರಂತಕ್ಕೂ ಮುನ್ನುಗ್ಗುವಂತೆ ಮಾಡುತ್ತದೆ. ಸರಿ-ತಪ್ಪುಗಳ ವಿವೇಚನೆ ಮಾಡುವ ವಿವೇಕವೂ ಆಗಿರುವುದಿಲ್ಲ. ಬಳ್ಳಾರಿಯಲ್ಲಿ ನಡೆದ ಘಟನೆ ನನ್ನನ್ನು ಆಘಾತಕ್ಕೆ ಈಡು ಮಾಡಿತ್ತು. ಅದರ ನಿಜ‌ಕಾರಣ ಅರಿತಾಗ ಇನ್ನಷ್ಟು ಮನಸ್ಸಿಗೆ ನೋವಾಗುತ್ತಿದೆ. ಇಡೀ ಹಾಸ್ಟೆಲ್‌ನಲ್ಲಿ ಏಕಾಂಗಿಯಾಗಿ, ಸಹವಾಸಿಗಳ ಲೇವಡಿಯನ್ನು ಅನುಭವಿಸುವುದು ನರಕಯಾತನೆ. ಆದರೆ ಅಂತಹ ಲೇವಡಿಗಳು ಈ‌ ಮಟ್ಟದ ದುರಂತಕ್ಕೆ ಕಾರಣವಾಗುತ್ತವೆ ಎಂದು ಅರಿವಾದಾಗ ಭಯವಾಗುತ್ತದೆ.

Ballari

ಮನುಷ್ಯ ಯಾವತ್ತೂ ಹೆದರುವುದು ತಾನು ಗುಂಪಿನಿಂದ ದೂರವಾಗುತ್ತಿರುವೆ ಎಂಬ ಭಾವ ಮೂಡಿದಾಗ. ಆದ್ದರಿಂದಲೇ 'ಉಚ್ಛಾಟನೆ', 'ಗಡೀಪಾರು' ಎಂಬ ಶಿಕ್ಷೆಗಳು ಮರಣದಂಡನೆಗಿಂತಲೂ ಭೀಕರವಾದವುಗಳು. ಇಂತಹ ಸ್ಥಿತಿ ಸಮುದಾಯದಲ್ಲಿ ಬರದಂತೆ ನೋಡಿಕೊಳ್ಳಬೇಕು. ಆ ಕಾರಣದಿಂದಲೇ ಬಸವಣ್ಣನವರ 'ಇವನಮ್ಮವ ಇವನಮ್ಮವ ಎನ್ನಿರಯ್ಯ' ಎನ್ನುವ ಮಾತು ಅಮೃತ ತತ್ತ್ವ. ಅಲ್ಪಸಂಖ್ಯಾತ ಸ್ಥಿತಿ ಕ್ರೂರವೆನ್ನಿಸುವುದು ಅದರ ಸಂಖ್ಯೆ ಅತ್ಯಂತ ಚಿಕ್ಕದಾದಾಗ. ಅದು ಏಕಾಂಗಿಯಾಗುವಷ್ಟು ಚಿಕ್ಕದಾದಾಗ ಎಂತಹ ಹೀನ ಕೃತ್ಯಕ್ಕೂ ನಮ್ಮನ್ನು ಪ್ರೇರೇಪಿಸುತ್ತದೆ. ಅದಕ್ಕೆ ವಿರುದ್ಧವಾಗಿ ನಮ್ಮ ಸಮುದಾಯದ ಸಂಖ್ಯೆ ದೊಡ್ಡದಾದಂತೆಲ್ಲಾ ಭಂಡ‌ ಧೈರ್ಯ ಹೆಚ್ಚುತ್ತಾ ಹೋಗಿ, ನಮ್ಮ ಕುಚೇಷ್ಟೆಗಳೂ ಹೆಚ್ಚುತ್ತವೆ. ಆ ಕಾರಣದಿಂದಲೇ ವೈವಿಧ್ಯಮಯ ಬಹುತ್ವತೆಯುಳ್ಳ ಸಮುದಾಯ ಹೆಚ್ಚು ಸಹನಾಶೀಲವಾಗಿರುತ್ತದೆ.

Bengaluru : ಬಾಲ ಭವನ ಬೇಸಿಗೆ ಶಿಬಿರ 2026 ; ಕೇವಲ 1000 ರೂ.ಗೆ 10 ಬಗೆಯ ಕೌಶಲ್ಯ ತರಬೇತಿ, ಇಂದೇ ಅರ್ಜಿ ಸಲ್ಲಿಸಿ
Bengaluru : ಬಾಲ ಭವನ ಬೇಸಿಗೆ ಶಿಬಿರ 2026 ; ಕೇವಲ 1000 ರೂ.ಗೆ 10 ಬಗೆಯ ಕೌಶಲ್ಯ ತರಬೇತಿ, ಇಂದೇ ಅರ್ಜಿ ಸಲ್ಲಿಸಿ

ಮಕ್ಕಳಲ್ಲಿ ಕೊಲೆ ಮಾಡುವಷ್ಟು ದುರಾಲೋಚನೆ ಬರುತ್ತಿರುವುದು ಈ ಕಾಲದ ದುರಂತವೇ ಸರಿ. ಸದ್ಯದ ದೃಶ್ಯ ಮಾಧ್ಯಮಗಳು, ಮೊಬೈಲ್ - ಎಲ್ಲವೂ ಆ ಬಾಲಕನನ್ನು ಅಂತಹ ಮನಸ್ಥಿತಿಗೆ ದೂಡುವುದಕ್ಕೆ ಕಾರಣವಾಗಿರುತ್ತವೆ. ಆ ನಿಟ್ಟಿನಿಂದ ಮಕ್ಕಳಿಗೆ ಮೊಬೈಲ್ ನಿರಾಕರಿಸುವ ಸರಕಾರದ ನಿಲುವು ಸ್ವಾಗತಾರ್ಹವಾಗಿದೆ. ಒಂದು ಮಗು ಹಾಸ್ಟೆಲ್‌ನಲ್ಲಿ ಇಷ್ಟೆಲ್ಲಾ ಲೇವಡಿಗೆ ಗುರಿಯಾಗುತ್ತಿದ್ದರೂ ಸಂಬಂಧ ಪಟ್ಟ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲವೆ ಎಂದು ಅಚ್ಚರಿಯಾಗುತ್ತದೆ. ಅವರು ಮಕ್ಕಳ ಪಾಲನೆಯಲ್ಲಿ ಜಾಗೃತರಾಗಿರಬೇಕಿತ್ತು. ಮಕ್ಕಳಿಗೆ ಆಪ್ತಸಮಾಲೋಚನೆ ಅತ್ಯಂತ ಅಗತ್ಯ. ಯಾರಾದರೂ ಆಪ್ತಸಮಾಲೋಚಕರು ಒಂದರ್ಧ ಗಂಟೆ ಈ ಮಗುವಿನ ಜೊತೆ ಸಮಯ ಕಳೆದಿದ್ದರೂ ಇಂತಹ ಘಟನೆ ಸಂಭವಿಸುತ್ತಿರಲಿಲ್ಲ.

ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ: ಇದು ನಿಜಕ್ಕೂ ಕಾರ್ಯಸಾಧುವೆ? ತಜ್ಞರು ಹೇಳುವುದೇನು?
ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ: ಇದು ನಿಜಕ್ಕೂ ಕಾರ್ಯಸಾಧುವೆ? ತಜ್ಞರು ಹೇಳುವುದೇನು?

ಈ ಮಗುವಿನ ಮುಂದಿನ ದಿನಗಳ ಬಗ್ಗೆ ನೆನೆದರೆ ಭಯವಾಗುತ್ತದೆ. ಕೊಲೆಗಾರ ಎಂಬ ಕಳಂಕ ಸುತ್ತ ಮುತ್ತ ಹಬ್ಬಿಯೇ ಹಬ್ಬುತ್ತದೆ. ಇನ್ನೂ ಬಾಲಕನಾದ್ದರಿಂದ ಶಿಕ್ಷೆಯಾಗದೆ ಬಿಡುಗಡೆಯಾಗುತ್ತದೆ. ಆದರೆ ಈ ಕಳಂಕಕ್ಕಾಗಿ ಅವನು ಸಮಾಜವನ್ನು ಎದುರಿಸುವುದು ಸವಾಲುನ ಸಂಗತಿಯಾಗುತ್ತದೆ. ಅದೇ ರೀತಿ ತಮ್ಮ ಮಗುವನ್ನು ಕಳೆದುಕೊಂಡ ತಂದೆ - ತಾಯಿಯರ ಬಗ್ಗೆಯೂ ದುಃಖವಾಗುತ್ತದೆ. ಕ್ಷುಲ್ಲಕ ಕೀಟಲೆಯ ಕಾರಣದಿಂದ ತಮ್ಮ ಮಗುವಿನ ಜೀವವೇ ಬಲಿಯಾಯ್ತು ಎಂದು ಅವರು ಸಹಿಸುವುದಾದರೂ ಹೇಗೆ ? ಜೀವನಪೂರ್ತಿ ಈ ದುಃಖ ಅವರನ್ನು ಕಾಡುತ್ತದೆ.

ಬಳ್ಳಾರಿಯಂತಹ ಜಿಲ್ಲೆಯಲ್ಲಿ ಇಂತಹ ಘಟನೆಗಳನ್ನು ನಾವು ಕೇಳಿಯೇ ಇರಲಿಲ್ಲ. ಕೈಎತ್ತಿ ಹೊಡೆಯಲೂ ಅಂಜುತ್ತಿದ್ದ ಬಾಲ್ಯ ನಮ್ಮದಾಗಿತ್ತು. ಹಿರಿಯರು ತುಸು ಕಣ್ಣು ಬಿಟ್ಟರೂ ತೆಪ್ಪಗಾಗುತ್ತಿದ್ದೆವು. ಈಗ ಇದೆಂತಹ ಸ್ಥಿತಿ?

ವಸುಧೇಂದ್ರ - ಬರಹಗಾರ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+