ಶ್ರೀಶೈಲ ಮಲ್ಲಿಕಾರ್ಜುನನ ದರ್ಶನಕ್ಕೆ NWKRTC ವೇಗದೂತ ಬಸ್‌ಗಳ ವ್ಯವಸ್ಥೆ: ಟಿಕೆಟ್ ದರ, ಮಾರ್ಗ-ವೇಳಾಪಟ್ಟಿ
ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಆರು ಜಿಲ್ಲೆಗಳ ಸುಮಾರು 59 ತಾಲೂಕುಗಳ ವ್ಯಾಪ್ತಿಯಲ್ಲಿ ನಿತ್ಯ ಲಕ್ಷಾಂತರ ಸಾರಿಗೆ ಸೇವೆ ನೀಡುತ್ತಿರುವ ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಹಬ್ಬ, ಜಾತ್ರೆಗಳ ಸಂದರ್ಭದಲ್ಲಿ ವಿಶೇಷ ಬಸ್‌ಗಳನ್ನು ಓಡಿಸುತ್ತದೆ. ಇದೀಗ ಚಂದ್ರಮಾನ ಯುಗಾಗಿ ಪ್ರಯುಕ್ತ ಮಾರ್ಚ್ 18ರವರೆಗೆ ಶ್ರೀಶೈಲಂಗೆ ವೇಗದೂತ ವಿಶೇಷ ಬಸ್ ವ್ಯವಸ್ಥೆ ಮಾಡಿದೆ. ಈ ಬಸ್‌ಗಳ ಸಂಚಾರ ಮಾರ್ಗ, ಸಮಯ, ಟಿಕೆಟ್ ದರ ವೇಳಾಪಟ್ಟಿ ಪೂರ್ಣ ಮಾಹಿತಿ ಇಲ್ಲಿದೆ.
ಉತ್ತರ ಕರ್ನಾಟಕ ಭಾಗದಿಂದ ಯಾರೆಲ್ಲ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದರ್ಶನಕ್ಕೆ ತೆರಳಲಿದ್ದಾರೋ ಅವರಿಗೆಲ್ಲ ಅನುಕೂಲವಾಗುವ ನಿಟ್ಟಿನಲ್ಲಿ ವೇಗದೂತ ಬಸ್‌ಗಳ ಕಾರ್ಯಾಚರಣೆ ಮಾಡಲಾಗುತ್ತಿದೆ. ಹಿಂದೂಗಳ ಪಾಲಿನ ಹೊಸ ವರ್ಷ ಯುಗಾದಿ ಹಬ್ಬ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿರುವ ಶ್ರೀಶೈಲದಲ್ಲಿನ ಮಲ್ಲಿಕಾರ್ಜುನ ಸ್ವಾಮಿ ದರ್ಶನ ಪಡೆಯುವುದು ವಾಡಿಕೆ. ಭಕ್ತರು ಈ ವಿಶೇಷ ಸಾರಿಗೆಯ ಉಪಯೋಗ ಪಡೆದುಕೊಳ್ಳಬಹುದು.

ಮಾರ್ಚ್ 18ರವರೆಗೂ ವೇಗಧೂತ ಸೇವೆ ಲಭ್ಯ
ಬೆಳಗಾವಿ ಜಿಲ್ಲೆಯ ಅಥಣಿಯ NWKRTC ಘಟಕದಿಂದ ಈ ಬಸ್‌ಗಳು ಸಂಚಾರ ಮಾಡಲಿವೆ. ಸುಮಾರು 673 ಕೀಲೋ ಮೀಟರ್ ದೂರವನ್ನು ವೆಂಕಟಾಪುರ ಮಾರ್ಗವಾಗಿ ಸಂಚಾರ ಮಾಡಲಿದೆ. ಮಾರ್ಚ್ 05 ರಿಂದಲೇ ವೇಗದೂತ ಬಸ್‌ಗಳ ಸಂಚಾರ ಶುರುವಾಗಿದೆ. ಮಾರ್ಚ್ 18ರವರೆಗೂ ಓಡಾಲಿವೆ.
ಬಸ್ ಮಾರ್ಗ, ಸಮಯ, ವೇಳಾಪಟ್ಟಿ ಹೀಗಿದೆ
ಅಥಣಿಯಿಂದ ವಾಯುವ್ಯ ಸಾರಿಗೆ ಸಂಸ್ಥೆ ವೇಗದೂತ ಬಸ್ ಬೆಳಗ್ಗೆ ರಾತ್ರಿ 10.30ಕ್ಕೆ ನಿಲ್ದಾಣದಿಂದ ಹೊರಡುತ್ತದೆ. ಅಲ್ಲಿಂದ ನೇರ ವೆಂಕಟಾಪುರಕ್ಕೆ 21.30ಕ್ಕೆ (ರಾತ್ರಿ 9.30 ಗಂಟೆ) ತಲುಪುತ್ತದೆ. ಅಲ್ಲಿಂದ ಸಂಚಾರ ಮುಂದುವರಿಸಿ ಮಧ್ಯರಾತ್ರಿ 00.30ಕ್ಕೆ (12.30ಗಂಟೆ) ಶ್ರೀಶೈಲಂ ಸೇರುತ್ತದೆ.
ಮತ್ತೊಂದು ಬಸ್ ಮಧ್ಯಾಹ್ನ 14.30ಕ್ಕೆ (2.30 ಗಂಟೆಗೆ) ಹೊರಟು ವೆಂಕಟಾಪುರವನ್ನು ಬೆಳಗಿನ ಜಾವ 1.30ಕ್ಕೆ ತಲುಪುತ್ತದೆ. ಅಲ್ಲಿಂದ ಸಂಚಾರ ಮುಂದುವರಿಸಿ ನಸುಕಿನ ಜಾವ 4.30ಕ್ಕೆ ಶ್ರೀಶೈಲಂ ತಲುಪುತ್ತದೆ. ಮೂರನೇ ವೇಗದೂತ ಬಸ್ ಸಂಜೆ 17.30ಕ್ಕೆ (4.30 ಗಂಟೆ) ಹೊರಟು ಮಾರನೇ ದಿನ ಬೆಳಗಿನ ಜಾವ 4.30ಕ್ಕೆ ವೆಂಕಟಾಪುರ, ನಂತರ ಬೆಳಗ್ಗೆ 7.30ಕ್ಕೆ ಶ್ರೀಶೈಲಂ ಮುಟ್ಟಲಿದೆ. ಸುದೀರ್ಘ ಪ್ರಯಾಣ ಇದಾಗಿದ್ದು, ಭಕ್ತರಿಗೆ ಈ ವ್ಯವಸ್ಥೆಯಿಂದಾಗಿ ಇಳಿದು ಹತ್ತುವ ತೊಂದರೆ ತಪ್ಪಲಿದ್ದು, ನೇರವಾಗಿ ಶ್ರೀಶೈಲಂಗೆ ತೆರಳಬಹುದಾಗಿದೆ.
ಟಿಕೆಟ್ ದರ ಎಷ್ಟು?
ಅಥಣಿಯಿಂದ ತಲಾ ಒಬ್ಬ ಪ್ರಯಾಣಿಕರಿಗೆ ವೆಂಕಟಾಪುರಕ್ಕೆ 857 ರೂಪಾಯಿ ಹಾಗೂ ಶ್ರೀಶೈಲಂಗೆ 1110 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ಆನ್‌ಲೈನ್ ಮೂಲಕ (www.ksrtc.in) ಟಿಕೆಟ್ ಬುಕ್ ಮಾಡಲು ಅವಕಾಶ ಇದೆ. ಹೆಚ್ಚಿನ ಮಾಹಿತಿಗೆ ನೀವು ದೂರವಾಣಿ 81474 85560, 98800 18180, 81238 00453 ಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ವಾಯುವ್ಯ ರಸ್ತ ಸಾರಿಗೆ ಸಂಸ್ತೆ ಮಾಹಿತಿ ನೀಡಿದೆ.
ಈ ಹಿಂದೆ ಹುಬ್ಬಳ್ಳಿ, ಹಾವೇರಿ, ಬೆಳಗಾವಿಯಿಂದ ಗೋಕಾಕ್ ಜಲಪಾತ, ಸವದತ್ತಿ ದೇವಸ್ಥಾನ, ಜೋಗ ಜಲಪಾತ ವೀಕ್ಷಣೆಗೆ ವಿಶೇಷ ಬಸ್‌ಗಳನ್ನು ವಾಯುವ್ಯ ಸಾರಿಗೆ ಸಂಸ್ಥೆ ಕಾರ್ಯಾಚರಣೆ ನಡೆಸಿತ್ತು.












Click it and Unblock the Notifications