50 ಸಾವಿರಕ್ಕೇರಿದ ಕೊರೊನಾ ಸಾವು:ಅಮೆರಿಕದಲ್ಲಿ ಆರ್ಥಿಕತೆ ಪುನರಾರಂಭಕ್ಕೆ ಆತುರ
ವಾಷಿಂಗ್ಟನ್, ಏಪ್ರಿಲ್ 25: ಅಮೆರಿಕದಲ್ಲಿ ಕೊರೊನಾ ವೈರಸ್‌ನಿಂದ ಮೃತಪಟ್ಟವರ ಸಂಖ್ಯೆ 50 ಸಾವಿರಕ್ಕೆ ಏರಿಕೆಯಾಗಿದೆ. ಹೀಗಿದ್ದಾಗಲೂ ಕೂಡ ಆರ್ಥಿಕತೆಯನ್ನು ಪುನರಾರಂಭಿಸುವ ಆತುರಕ್ಕೆ ಬಿದ್ದಿದೆ.
ಕಳೆದ 24 ಗಂಟೆಗಳಲ್ಲಿ ಅಮೆರಿಕದಲ್ಲಿ 3,300 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎಂದು ಜಾನ್ ಹಾಪ್‌ಕಿನ್ಸ್ ಯೂನಿವರ್ಸಿಟಿ ತಿಳಿಸಿದೆ. ಒಟ್ಟು 8,90000 ಮಂದಿಗೆ ಕೊರೊನಾ ವೈರಸ್ ತಗುಲಿದೆ. ನ್ಯೂಯಾರ್ಕ್‌ನಲ್ಲಿ 2,63,000 ಸಾವಿರ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 16 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಕಳೆದ 5 ವಾರಗಳಿಂದ ಸಾಕಷ್ಟು ಮಂದಿ ನಿರುದ್ಯೋಗ ಸಮಸ್ಯೆಯಿಂದ ನರಳುತ್ತಿದ್ದಾರೆ. ಹೀಗಾಗಿ ಆರ್ಥಿಕತೆ ಪುನರಾರಂಭಿಸುವುದು ಅನಿವಾರ್ಯವಾಗಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ತಿಳಿಸಲಾಗಿದೆ.

ಓಕ್ಲಾಹೋಮಾ, ಅಲಾಸ್ಕಾ, ಜಾರ್ಜಿಯಾದಲ್ಲಿ ಆರ್ಥಿಕತೆ ಪುನರರಾರಂಭಿಸಳಾಗುತ್ತಿದೆ. ಕ್ಯಲಿಫೋರ್ನಿಯಾ, ಇಲಿನಾಯಿಸ್‌ನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿವೆ.
ಜಾರ್ಜಿಯಾದಲ್ಲಿ ಬಿಜಿನೆಸ್, ಜಿಮ್‌ಗಳನ್ನು ತೆರೆಯಲಾಗುತ್ತದೆ. ಜಾರ್ಜಿಯಾದಲ್ಲಿ 22 ಸಾವಿರ ಕೊರೊನಾ ಪ್ರಕರಣಗಳಿವೆ. 900 ಮಂದಿ ಮೃತಪಟ್ಟಿದ್ದಾರೆ.ಸಣ್ಣ ಕೈಗಾರಿಕೆಗಳಿಗಾಗಿ ಡೊನಾಲ್ಡ್ ಟ್ರಂಪ್ 484 ಬಿಲಿಯನ್ ಡಾಲರ್ ಬಿಡುಗಡೆ ಮಾಡಿದ್ದಾರೆ.
ಮೊದಲ ಹಾಗೂ ಎರಡನೇ ಹಂತದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುಬೇಕು, 10ಕ್ಕಿಂತ ಹೆಚ್ಚು ಮಂದಿ ಒಟ್ಟಿಗೆ ಓಡಾಡಬಾರದು, ಹಾಗೆಯೇ ವಿನಾಕಾರಣ ವಾಹನಗಳಲ್ಲಿ ತಿರುಗಾಡಬಾರದು ಎಂದು ಹೇಳಿದ್ದಾರೆ.
ಚೀನಾದಿಂದ "ಕೊರೊನಾ' ಪರಿಹಾರ ಕೇಳಲು ಡೊನಾಲ್ಡ್ ಟ್ರಂಪ್‌ಗೆ ಒತ್ತಾಯ ಮೂರನೇ ಹಂತದಲ್ಲಿ ಸಾರ್ವಜನಿಕ ಸಭೆ, ಸಮಾರಂಭಗಳನ್ನು ಕಡಿಮೆ ಪ್ರಮಾಣದಲ್ಲಿ ನಡೆಸಬೇಕು, ಜಿಮ್, ಬಾರ್, ರೆಸ್ಟೋರೆಂಟ್‌ಗಳ ನಿಯಮ ಕೂಡ ಬದಲಾಗಲಿದೆ.
ಅಮೆರಿಕ ಕೊರೊನಾ ವೈರಸ್ ಪ್ರಕರಣಗಳ ಅತ್ಯಂತ ಹೀನಾಯ ಸ್ಥಿತಿಯನ್ನು ತಲುಪಿದ್ದು, ಮುಂದಿನ ಒಂದು ತಿಂಗಳಲ್ಲಿ ರಾಜ್ಯಗಳಲ್ಲಿ ಚಟುವಟಿಕೆಗಳು ಪುನಾರಂಭಗೊಳ್ಳಬಹುದು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.












Click it and Unblock the Notifications