ಕೊವಿಡ್ 19 ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆಗೆ ಅಮೆರಿಕ ಒಪ್ಪಿಗೆ
ವಾಷಿಂಗ್ಟನ್, ಆಗಸ್ಟ್ 24: ಕೊವಿಡ್ 19 ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಅಮೆರಿಕ ಒಪ್ಪಿಗೆ ನೀಡಿದೆ.
Recommended Video
ಪ್ಲಾಸ್ಮಾ ಚಿಕಿತ್ಸೆಯಿಂದಾಗಿ ದೇಹದಲ್ಲಿ ಕೊರೊನಾವೈರಸ್ ವಿರುದ್ಧ ಹೋರಾಡುವ ಪ್ರತಿಕಾಯಗಳು ಉತ್ಪತ್ತಿಯಾಗುತ್ತವೆ.
ಅಮೆರಿಕದಲ್ಲಿ ಈಗಾಗಲೇ 1,76,000 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ, ಭಾರತದಲ್ಲೂ ಪ್ಲಾಸ್ಮಾ ಚಿಕಿತ್ಸೆ ಯಶಸ್ಸನ್ನು ಕಂಡಿದೆಎ. ಹೀಗಾಗಿ ಕೊರೊನಾ ವೈರಸ್ ವಿರುದ್ಧ ಹೋರಾಡುವ ಶಕ್ತಿ ಈ ಪ್ಲಾಸ್ಮಾ ಚಿಕಿತ್ಸೆ ಬಳಿಕ ಬರುತ್ತದೆ ಎಂಬುದನ್ನು ಒಪ್ಪಿಕೊಂಡಿದೆ.

ನವೆಂಬರ್‌ನಲ್ಲಿ ಚುನಾವಣೆ ನಡೆಯಲಿರುವ ಕಾರಣ ಅಷ್ಟರೊಳಗೆ ಹೇಗಾದರೂ ಮಾಡಿ ವೈರಸ್ ಅನ್ನು ಹೊಡೆದೋಡಿಸುವ ಗುರಿಯನ್ನು ಅಮೆರಿಕ ಹೊಂದಿದೆ. ಹೀಗಾಗಿ ಅನೇಕ ಪ್ರಯತ್ನಗಳನ್ನು ಮಾಡುತ್ತಿದೆ. ಈಗಾಗಲೇ ಕೊರೊನಾ ಲಸಿಕೆಗೆ ಮುಂಚಿತವಾಗಿಯೇ ಬೇಡಿಕೆ ಇಟ್ಟಿದ್ದಾರೆ.
ಪ್ಲಾಸ್ಮಾ ಚಿಕಿತ್ಸೆಯಿಂದಾಗಿ ರೋಗ ಹೆಚ್ಚಾಗುವ ಮುನ್ನವೇ ಹಿಡಿತಕ್ಕೆ ಬರುತ್ತದೆ. ಪ್ಲಾಸ್ಮಾ ಥೆರಪಿಯಿಂದ ಬಹಳ ಉಪಯೋಗವಿದೆ ಆದರೂ ಅದು ಕ್ಲಿನಿಕಲ್ ಟ್ರಯಲ್‌ಮೂಲಕ ತಿಳಿದುಬರಬೇಕಿದೆ.
ಈಗಾಗಲೇ ಕೊರೊನಾ ಸೋಂಕಿಗೆ ತುತ್ತಾದ ವ್ಯಕ್ತಿಯಿಂದ ಈ ಪ್ಲಾಸ್ಮಾ ತೆಗೆದುಕೊಳ್ಳಲಾಗುತ್ತದೆ. ದೇಹದಲ್ಲಿ ಇನ್‌ಫೆಕ್ಷನ್ ಅನ್ನು ಕಡಿಮೆ ಮಾಡುತ್ತದೆ.












Click it and Unblock the Notifications