ಶ್ರೀಲಂಕಾದಲ್ಲಿ 13.80 ಕೋಟಿ ಮಂದಿ ಸತ್ತರೆಂದು ಟ್ರಂಪ್ ಟ್ವೀಟ್ ಯಡವಟ್ಟು

ವಾಷಿಂಗ್ಟನ್, ಏಪ್ರಿಲ್ 21: ಶ್ರೀಲಂಕಾದ ವಿವಿಧೆಡೆ ಭಾನುವಾರ ನಡೆದ ಸ್ಫೋಟವನ್ನು ಖಂಡಿಸಿ ಟ್ವೀಟ್ ಮಾಡುವ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಡವಟ್ಟು ಮಾಡಿದ್ದಾರೆ. ಸತ್ತವರ ಸಂಖ್ಯೆ 138 ಅಂತ ಟ್ವೀಟ್ ಮಾಡುವ ಬದಲು 138 ದಶಲಕ್ಷ ಮಂದಿ ಸಾವನ್ನಪ್ಪಿದ್ದಾಗಿ ಹಾಕಿದ್ದಾರೆ. 138 ದಶಲಕ್ಷ ಮಂದಿ ಅಂದರೆ, 13.80 ಕೋಟಿ ಮಂದಿ. ಅಂದ ಹಾಗೆ ಶ್ರೀಲಂಕಾ ಜನಸಂಖ್ಯೆ ಇರುವುದೇ 2.14 ಕೋಟಿ.

ಇತ್ತೀಚಿನ ಮಾಹಿತಿ ಪ್ರಕಾರ, ಶ್ರೀಲಂಕಾದಲ್ಲಿ ಮೃತರ ಸಂಖ್ಯೆ 158. ಅದರಲ್ಲಿ 35 ಮಂದಿ ವಿದೇಶೀಯರೂ ಇದ್ದಾರೆ. ಜತೆಗೆ 400 ಮಂದಿ ಗಾಯಗೊಂಡಿದ್ದಾರೆ.

ಚರ್ಚ್ ಗಳು ಹಾಗೂ ಹೋಟೆಲ್ ಗಳ ಮೇಲೆ ನಡೆದ ಭೀಕರ ಉಗ್ರ ದಾಳಿಗೆ ಅಮೆರಿಕದ ಜನರ ಪರವಾಗಿ ಶ್ರೀಲಂಕಾದ ಜನರಿಗೆ ಹೃದಯಪೂರ್ವಕ ಸಂತಾಪಗಳು. ಇದರಲ್ಲಿ ಕನಿಷ್ಠ 138 ಮಿಲಿಯನ್ ಜನರು ಸಾವನ್ನಪ್ಪಿ ಮತ್ತು 600ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ನಾವು ನೆರವಿಗೆ ಸಿದ್ಧರಿದ್ದೇವೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

Trump tweets as 138 Million wrong figure for number of dead in Sri Lanka

ಮೊದಲ ಸ್ಫೋಟವು ಶ್ರೀಲಂಕಾ ರಾಜಧಾನಿಯಲ್ಲಿನ ಮೂರು ವಿಲಾಸಿ ಹೋಟೆಲ್ ನಲ್ಲಿ ಮತ್ತು ಚರ್ಚ್ ನಲ್ಲಿ ಸಂಭವಿಸಿತು. ಉಳಿದ ಎರಡು ಚರ್ಚ್ ಕೊಲಂಬೋ ಹೊರ ಭಾಗದಲ್ಲಿದೆ. ಈಸ್ಟರ್ ಮಾಸ್ ನಡೆಯುವ ಸ್ಫೋಟ ಸಂಭವಿಸಿದೆ. ಕೆಲ ಗಂಟೆಗಳ ನಂತರ ಹೋಟೆಲ್ ನ ಎದುರಿಗೆ ಇರುವ ದೆಹಿವಾಲ ಪ್ರದೇಶದ ರಾಷ್ಟ್ರೀಯ ಝೂನಲ್ಲಿ ಸಂಭವಿಸಿದೆ.

ಸ್ಫೋಟದ ನಂತರ ಶ್ರೀಲಂಕಾ ಸರಕಾರವು ತುರ್ತು ಸಭೆಯನ್ನು ಕರೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+