ಸಾಮಾಜಿಕ ಜಾಲತಾಣ ಮುಚ್ಚುವ ಬೆದರಿಕೆ ಹಾಕಿದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್, ಮೇ 28: ಎರಡು ಟ್ವೀಟ್‌ಗಳನ್ನು ಟ್ವಿಟ್ಟರ್ 'ಆಧಾರರಹಿತ' ಎಂದು ಟ್ವಿಟ್ಟರ್ ಹೇಳಿರುವ ಕಾರಣ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಮುಚ್ಚುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಟ್ವಿಟ್ಟರ್ ಕಂಪನಿಯ ವಿರುದ್ಧವೇ ಕಿಡಿಕಾರಿದ್ದಾರೆ.

ಮಂಗಳವಾರ ಟ್ರಂಪ್ ಅಮೆರಿಕ ಚುನಾವಣೆಯಲ್ಲಿ ಪೋಸ್ಟಲ್ ಮೂಲಕ ಚಲಾವಣೆಯಾಗುವ ಮತಗಳಲ್ಲಿ ಭಾರೀ ಅಕ್ರಮ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಟ್ರಂಪ್ ಅವರ ಈ ಟ್ವೀಟ್ ಗೆ ಮೊದಲ ಬಾರಿಗೆ ಟ್ವಿಟ್ಟರ್ ಈ ರೀತಿ ಫ್ಯಾಕ್ಟ್ ಚೆಕ್ ಬಟನ್ ನೀಡಿದ್ದು ಅಮೆರಿಕ ಅಧ್ಯಕ್ಷರ ಕೋಪಕ್ಕೆ ಕಾರಣವಾಗಿದೆ.

Trump Threatens To Close Down Social Media

ಫೇಕ್ ನ್ಯೂಸ್‍ಗಳಾದ ಸಿಎನ್‍ಎನ್, ಅಮೆಜಾನ್, ವಾಷಿಂಗ್ಟನ್ ಪೋಸ್ಟ್ ವರದಿಯನ್ನು ಫ್ಯಾಕ್ಟ್ ಚೆಕ್ ನಲ್ಲಿ ತೋರಿಸುತ್ತಿದೆ. ಟ್ಟಿಟ್ಟರ್ ಪೂರ್ಣವಾಗಿ ನನ್ನ ವಾಕ್ ಸ್ವಾತಂತ್ರ್ಯ ನಿಗ್ರಹಿಸಲು ಮುಂದಾಗುತ್ತಿದೆ. ಈ ರೀತಿ ಮಾಡಲು ನಾನು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಟ್ರಂಪ್ ಅವರು ಈ ಆರೋಪ ಮಾಡಿದ ಬೆನ್ನಲ್ಲೇ ಮೊದಲ ಬಾರಿಗೆ ಟ್ವಿಟ್ಟರ್ ಈ ವಿಚಾರದ ಬಗ್ಗೆ ಫ್ಯಾಕ್ಟ್ ಚೆಕ್ ಬಟನ್ ಸೇರಿಸಿದೆ. ಟ್ರಂಪ್ ಅವರ ಟ್ವೀಟ್ ಕೆಳ ಭಾಗದಲ್ಲಿ ಫ್ಯಾಕ್ಟ್ ಚೆಕ್ ಸೇರಿಸಿದ್ದಕ್ಕೆ ಟ್ರಂಪ್ ಈಗ ಕಿಡಿಕಾರಿದ್ದಾರೆ. ಈ ಫ್ಯಾಕ್ಟ್ ಚೆಕ್ ಬಟನ್ ಕ್ಲಿಕ್ ಮಾಡಿದರೆ ಟ್ರಂಪ್ ಅವರ ಹೇಳಿಕೆ ಸುಳ್ಳು ಎಂದು ತಿಳಿಸುವ ಹಲವು ಮಾಧ್ಯಮಗಳ ವರದಿ ಕಾಣಿಸುತ್ತದೆ.

ಈ ಕುರಿತು ಟ್ವಿಟ್ಟರ್ ಉದ್ದೇಶಿಸಿ ಬುಧವಾರ ಟ್ವೀಟ್ ಮಾಡಿರುವ ಟ್ರಂಪ್ 2020ರ ಅಧ್ಯಕ್ಷ ಚುನಾವಣೆಗೆ ಟ್ವಿಟ್ಟರ್ ಎಂಟ್ರಿ ಕೊಟ್ಟಿದೆ. ಮೇಲ್ - ಇನ್ ಬ್ಯಾಲೆಟ್ಸ್ ನಲ್ಲಿ ಭಾರೀ ಅಕ್ರಮ ಮತ್ತು ಭ್ರಷ್ಟಾಚಾರ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+