ಡೊನಾಲ್ಡ್ ಟ್ರಂಪ್ ವಿರುದ್ಧ ಅಖಾಡಕ್ಕಿಳಿದ ಬರಾಕ್ ಒಬಾಮ..!

ವಾಷಿಂಗ್ಟನ್, ಆಗಸ್ಟ್ 02: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ರಮಗಳು ಅಮೆರಿಕದ ಪ್ರಜಾಪ್ರಭುತ್ವಕ್ಕೆ ಬೆದರಿಕೆ ತಂದೊಡ್ಡಿವೆ ಎಂದು ಮಾಜಿ ಅಧ್ಯಕ್ಷ ಬರಾಕ್ ಒಬಾಮ ಆರೋಪಿಸಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ವಿರುದ್ಧ ರಣಕಹಳೆ ಮೊಳಗಿಸಿರುವ ಡೆಮಾಕ್ರಟ್ಸ್, ಹಾಲಿ ಅಧ್ಯಕ್ಷರ ಸೋಲಿಗಾಗಿ ಪಣತೊಟ್ಟಿದ್ದಾರೆ.

ಅಖಾಡದಲ್ಲಿ ಅಭ್ಯರ್ಥಿಯಾಗಿ ಜೋ ಬಿಡೆನ್ ಇದ್ದರೂ ಟ್ರಂಪ್ ವಿರುದ್ಧದ ನಿರ್ಣಾಯಕ ಕದನದಲ್ಲಿ ಒಬಾಮ ಡೆಮಾಕ್ರಟ್ ಪಕ್ಷದ ಸಾರಥ್ಯ ವಹಿಸಿದ್ದಾರೆ. ಇತ್ತೀಚೆಗೆ ನಿಧನರಾಗಿದ್ದ ಹೋರಾಟಗಾರ ಜಾನ್ ಲೆವಿಸ್ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಬಾಮ ಹೀಗೆ ವಾಗ್ದಾಳಿ ನಡೆಸಿದ್ದಾರೆ.

ಅಮೆರಿಕದ ಮೊಟ್ಟಮೊದಲ ಕಪ್ಪು ವರ್ಣೀಯ ಅಧ್ಯಕ್ಷ ಮಾರ್ಟಿನ್ ಲೂಥರ್ ಕಿಂಗ್ ಜೊತೆಗಾರ ಜಾನ್ ಲೆವಿಸ್ ಕ್ಯಾನ್ಸರ್‌ನಿಂದ ಜುಲೈ 17ರಂದು ಮೃತಪಟ್ಟಿದ್ದರು. ಅಮೆರಿಕದಲ್ಲಿ ಜನಾಂಗೀಯ ನೀತಿ ವಿರುದ್ಧ ಹೋರಾಟ ನಡೆಸಿದ್ದ ಮಾರ್ಟಿನ್ ಲೂಥರ್ ಕಿಂಗ್‌ಗೆ ಲೆವಿಸ್ ಕೂಡ ಸಾಥ್ ನೀಡಿದ್ದರು. ಇನ್ನು ಲೆವಿಸ್ ಸ್ಮರಣಾರ್ಥ ನಡೆದ ಸಮಾರಂಭದಲ್ಲೇ ಟ್ರಂಪ್ ನಡೆ ಹಾಗೂ ತೀರ್ಮಾನಗಳ ಬಗ್ಗೆ ಒಬಾಮ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ಈ ನಿರ್ಧಾರಗಳು ಭವಿಷ್ಯದಲ್ಲಿ ದೇಶಕ್ಕೆ ದೊಡ್ಡ ಅಪಾಯ ತಂದೊಡ್ಡಲಿವೆ ಎಂದಿದ್ದಾರೆ.

ಸೋಲುತ್ತಾರಾ ಟ್ರಂಪ್..?

ಸೋಲುತ್ತಾರಾ ಟ್ರಂಪ್..?

ಒಂದುಕಡೆ ಕೊರೊನಾ ಕೂಪದಲ್ಲಿ ಹೊತ್ತಿ ಉರಿಯುತ್ತಿರುವ ಅಮೆರಿಕ, ಮತ್ತೊಂದ್ಕಡೆ ಜನಾಂಗೀಯ ಘರ್ಷಣೆಯಲ್ಲಿ ಧಗಧಗಿಸುತ್ತಿದೆ. ಇದು ಅಮೆರಿಕದ ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಧಕ್ಕೆ ತಂದೊಡ್ಡಿದೆ. ಈಗಾಗಲೇ ಸೋಂಕು ಹರಡದಂತೆ ತಡೆಯುವಲ್ಲಿ ಹಾಗೂ ಪರಿಸ್ಥಿತಿ ನಿಭಾಯಿಸುವಲ್ಲಿ ಟ್ರಂಪ್ ಎಡವಿದ್ದಾರೆ. ಇದು ಅಮೆರಿಕದ ಮತದಾರರ ಕಣ್ಣು ಕೆಂಪಾಗಿಸಿದೆ.

ಟ್ರಂಪ್ ಸಾಕಷ್ಟು ಹಿನ್ನಡೆ ಅನುಭವಿಸುತ್ತಿದ್ದಾರೆ

ಟ್ರಂಪ್ ಸಾಕಷ್ಟು ಹಿನ್ನಡೆ ಅನುಭವಿಸುತ್ತಿದ್ದಾರೆ

ಹಾಗೇ ಕಳೆದ ಬಾರಿ ಭರ್ಜರಿ ಗೆಲುವು ಸಾಧಿಸಿದ್ದ ರಾಜ್ಯಗಳಲ್ಲೇ ಟ್ರಂಪ್ ಸಾಕಷ್ಟು ಹಿನ್ನಡೆ ಅನುಭವಿಸುತ್ತಿದ್ದಾರೆ. ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಟ್ರಂಪ್‌ಗೆ ನಿರಾಶೆಯಾಗಿದೆ. ಇಂತಹ ಹೊತ್ತಲ್ಲೇ ಜೋ ಬಿಡೆನ್ ಪರವಾಗಿ ಒಬಾಮ ಅಖಾಡ ಪ್ರವೇಶ ಮಾಡಿದ್ದಾರೆ. ಈ ಮೊದಲು ಒಬಾಮ ಆಡಳಿತದಲ್ಲಿ ಉಪಾಧ್ಯಕ್ಷರಾಗಿದ್ದ ಬಿಡೆನ್ ಪರ ಅಲೆ ಇದ್ದು, ಒಬಾಮ ಬೆಂಬಲ ಸಿಕ್ಕಿರುವುದು ಆನೆಬಲ ತಂದಿದೆ. ಇದನ್ನೆಲ್ಲಾ ನೋಡುತ್ತಿದ್ದರೆ ಟ್ರಂಪ್ ಸೋಲಿಗೆ ಕೌಂಟ್‌ಡೌನ್ ಶುರುವಾಗಿದೆಯಾ ಎಂಬ ಅನುಮಾನ ಮೂಡುತ್ತಿದೆ.

ಟ್ರಂಪ್ ಸೋಲಿಗೆ ಮುನ್ನುಡಿ..?

ಟ್ರಂಪ್ ಸೋಲಿಗೆ ಮುನ್ನುಡಿ..?

ಈಗಾಗಲೇ ಚುನಾವಣೆ ಮುಂದೂಡುವ ಪ್ರಸ್ತಾವನೆ ಮಂಡಿಸಿರುವ ಟ್ರಂಪ್ ಈ ಬಾರಿ ಚುನಾವಣೆ ಗೆಲ್ಲಲು ಏನು ಬೇಕಾದರು ಮಾಡುತ್ತಾರೆ ಅಂತಾ ವಿಪಕ್ಷ ನಾಯಕರು ಆರೋಪಿಸುತ್ತಿದ್ದಾರೆ. ಸ್ವಪಕ್ಷೀಯರು ಕೂಡ ಟ್ರಂಪ್‌ ವಿರುದ್ಧ ನಿಲ್ಲುತ್ತಿದ್ದಾರೆ. ಜೊತೆಗೆ ರಾಜಕೀಯ ತಜ್ಞರು ಕೂಡ ಟ್ರಂಪ್ ವರ್ತನೆ ಭವಿಷ್ಯದಲ್ಲಿ ಅಮೆರಿಕದ ಸಾರ್ವಭೌಮತ್ವಕ್ಕೆ ಅಪಾಯ ತಂದೊಡ್ಡಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟ್ರಂಪ್‌ರನ್ನು ಸೋಲಿನ ಸುಳಿಗೆ ಸಿಲುಕಿಸುತ್ತಿವೆ

ಟ್ರಂಪ್‌ರನ್ನು ಸೋಲಿನ ಸುಳಿಗೆ ಸಿಲುಕಿಸುತ್ತಿವೆ

ಒಟ್ನಲ್ಲಿ ಸದ್ಯದ ಬೆಳವಣಿಗೆಗಳು ಹಾಲಿ ಅಧ್ಯಕ್ಷ ಟ್ರಂಪ್‌ರನ್ನು ಸೋಲಿನ ಸುಳಿಗೆ ಸಿಲುಕಿಸುತ್ತಿವೆ. ಇದರ ಜೊತೆ ಜೊತೆಗೆ ನಿರುದ್ಯೋಗ, ಜನಾಂಗೀಯ ಸಂಘರ್ಷ ಸಮಸ್ಯೆಗಳ ಮೇಲೆ ಸಮಸ್ಯೆ ತಂದೊಡ್ಡುತ್ತಿವೆ. ಇದನ್ನೆಲ್ಲಾ ಅಳೆದು ತೂಗಿ ನೋಡುತ್ತಿರುವ ರಾಜಕೀಯ ತಜ್ಞರು, ಟ್ರಂಪ್ ಸೋಲಿಗೆ ಇದು ಮುನ್ನುಡಿ ಎಂಬ ಅಭಿಪ್ರಾಯ ಮಂಡಿಸುತ್ತಿದ್ದಾರೆ. ಆದರೆ ಈ ಪ್ರಶ್ನೆಗಳಿಗೆಲ್ಲಾ ಉತ್ತರ ಪಡೆಯಲು ಇನ್ನಷ್ಟು ದಿನ ಕಾಯಲೇಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+