ಅಮೆರಿಕಕ್ಕೆ ರಕ್ಷಣಾ ಕಾರ್ಯದರ್ಶಿಯಾಗಿ ಪ್ಯಾಟ್ರಿಕ್ ನೇಮಕ?

ವಾಷಿಂಗ್ಟನ್, ಮೇ 10: ಅಮೆರಿಕ ರಕ್ಷಣಾ ಇಲಾಖೆಯ ರಕ್ಷಣಾ ಕಾರ್ಯದರ್ಶಿಯನ್ನಾಗಿ ಪ್ಯಾಟ್ರಿಕ್ ಶೆನ್‌ಹ್ಯಾನ್ ನೇಮಕಕ್ಕೆ ವೈಟ್ ಹೌಸ್ ಒಲವು ತೋರಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

2017ರಿಂದ ಉಪಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ ಪ್ಯಾಟ್ರಿಕ್‌ರನ್ನು ಕಾರ್ಯದರ್ಶಿಯಾಗಿ ಪದೋನ್ನತಿ ನೀಡಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದಾರೆ ಎಂದು ವೈಟ್ ಹೌಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಈ ನೇಮಕಕ್ಕೆ ಸೆನೆಟ್ ಹಸಿರು ನಿಶಾನೆ ದೊರೆತರಷ್ಟೇ ಪ್ಯಾಟ್ರಿಕ್ ರಕ್ಷಣಾ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಬಹುದಾಗಿದೆ. ರಕ್ಷಣಾ ಕಾರ್ಯದರ್ಶಿಯಾಗುವ ಮುನ್ನ ಸುಮಾರು 30 ವರ್ಷಗಳ ಕಾಲ ಪ್ರತಿಷ್ಠಿತ ಬೋಯಿಂಗ್ ವೈಮಾನಿಕ ಸಂಸ್ಥೆಯಲ್ಲಿ ಇವರು ಕಾರ್ಯ ನಿರ್ವಹಿಸಿದ್ದರು. ರಕ್ಷಣಾ ಕಾರ್ಯದರ್ಶಿಯಾಗಿ ಪ್ಯಾಟ್ರಿಕ್ ನೇಮಕಕ್ಕೆ ಕೆಲ ಆಕ್ಷೇಪಗಳು ಬಂದ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಿನಿಂದ ಆಂತರಿಕ ವಿಚಾರಣೆ ನಡೆಸಲಾಗಿತ್ತು.

Trump picks Patrick Shanahan as defense secretary

ಈಗ ಪ್ಯಾಟ್ರಿಕ್ ನೇಮಕಕ್ಕೆ ಟ್ರಂಪ್ ಅಂತಿಮ ಮುದ್ರೆ ಹಾಕಿದ್ದಾರೆ. ಸಿರಿಯಾದಿಂದ ಸೇನೆಯನ್ನು ಹಿಂತೆಗೆದುಕೊಳ್ಳುವುದು ಸೇರಿ ಕೆಲ ಆಡಳಿತಾತ್ಮಕ ವಿಚಾರಗಳಲ್ಲಿ ಅಧ್ಯಕ್ಷ ಟ್ರಂಪ್ ಜೊತೆಗೆ ಭಿನ್ನಾಭಿಪ್ರಾಯವಿದ್ದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯದರ್ಶಿ ಹುದ್ದೆಗೆ ಜಾನ್ ಮ್ಯಾಟಿಸ್ ರಾಜೀನಾಮೆ ನೀಡಿದ್ದರು.

ಸಿರಿಯಾದಲ್ಲಿ ಸೇನೆಯನ್ನು ಹಿಂಪಡೆಯುವುದು ಉಗ್ರವಾದದ ವಿರುದ್ಧದ ಹೋರಾಟಕ್ಕೆ ಹಿನ್ನಡೆಯಾಗಲಿದೆ ಐಸಿಸ್ ಮತ್ತೆ ತನ್ನ ಪ್ರಭಾವವನ್ನು ಹಿಗ್ಗಿಸಲಿದೆ ಎನ್ನುವುದು ಮ್ಯಾಟಿಸ್ ವಾದವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+