ಸುದ್ದಿಗೋಷ್ಠಿ ಅರ್ಧಕ್ಕೆ ಮೊಟಕುಗೊಳಿಸಿ ಹೊರ ನಡೆದ ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್, ಮೇ 12: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುದ್ದಿಗೋಷ್ಠಿ ಅರ್ಧಕ್ಕೆ ಮೊಟಕುಗೊಳಿಸಿ ಶ್ವೇತಭವನದಿಂದ ತೆರಳಿದ ಘಟನೆ ಸೋಮವಾರ ನಡೆದಿದೆ.
ಸಿಬಿಎಸ್ ನ್ಯೂಸ್‌ನ ವೈಟ್‌ಹೌಸ್ ಕರೆಸ್ಪಾಡೆಂಟ್ ವೈಜಾ ಜಯಾಂಗ್ ಅವರು ಅಮರಿಕದಲ್ಲಿ 80 ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ . ಕೊರೊನಾವನ್ನು ಜಾಗತಿಕ ಸ್ಪರ್ಧೆಯಂತೆ ಏಕೆ ಕಾಣುತ್ತೀರಿ ಎಂದು ಟ್ರಂಪ್ ಅವರನ್ನು ಪ್ರಶ್ನಿಸಿದ್ದರು. ಇದಕ್ಕೆ ಟ್ರಂಪ್ ಪ್ರತಿಕ್ರಿಯಿಸಿ ಬಹುಶಃ ನೀವು ಇದನ್ನು ಚೀನಾದ ಬಳಿಯೇ ಕೇಳಬೇಕು ಎಂದು ಖಾರವಾಗಿಯೇ ಉತ್ತರಿಸಿದರು.
ಪತ್ರಕರ್ತೆ ವೈಜಾ ಅವರಿಗೆ ಸಮರ್ಪಕ ಉತ್ತರ ಸಿಗದ ಕಾರಣ ಸರ್ ನೀವು ಇದನ್ನು ನನ್ನನ್ನೇ ಉದ್ದೇಶಿಸಿ ಯಾಕೆ ಹೇಳುತ್ತೀರಿ ಎಂದರು. ಹೌದು ನಿಮಗೇ ಹೇಳುತ್ತಿರುವುದು ಆದರೆ ನಿನಗೆ ಬೊಟ್ಟು ಮಾಡಿ ತೋರಿಸುತ್ತಿಲ್ಲ.ಕಿರಿಕಿರಿ ಉಂಟು ಮಾಡುವ ಪ್ರಶ್ನೆ ಯಾರೇ ಕೇಳಿದರೂ ನನ್ನ ಉತ್ತರ ಹೀಗೆಯೇ ಇರಲಿದೆ ಎಂದು ಹೇಳಿದರು.

ಸಂದರ್ಭದಲ್ಲಿ ಕೊಲಿನ್ಸ್ ಕೇಳಿದ ಎರಡೂ ಪ್ರಶ್ನೆಗಳಿಗೂ ಟ್ರಂಪ್ ಉತ್ತರಿಸಲಿಲ್ಲ. ಪ್ರಶ್ನೆಗಳು ಮುಗಿಯುವುದಕ್ಕೆ ಮುಂದೆಯೇ ಥ್ಯಾಂಕ್ಯೂ ವೆರಿಮಚ್ ಎಂದು ರೋಸ್ ಗಾರ್ಡನ್‌ನಿಂದ ತೆರಳಿಯೇ ಬಿಟ್ಟರು.












Click it and Unblock the Notifications