ಜೇಮ್ಸ್ ವೆಬ್ ದೂರದರ್ಶಕ ಉಡಾವಣೆಯನ್ನು ವೀಕ್ಷಿಸುವುದು ಹೇಗೆ?
ವಾಶಿಂಗ್ಟನ್, ಡಿಸೆಂಬರ್ 24: ದಶಕಗಳ ಕಾಯುವಿಕೆಯ ನಂತರ, ವೆಬ್ ಸ್ಪೇಸ್ ಟೆಲಿಸ್ಕೋಪ್ ಉಡಾವಣೆಗೆ ಅಂತಿಮವಾಗಿ ಸಿದ್ಧವಾಗಿದೆ. ಡಿಸೆಂಬರ್ 25ರ ಕ್ರಿಸ್‌ಮಸ್ ದಿನವೇ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ಮಹತ್ವಾಕಾಂಕ್ಷೆಯ ''ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್'' ಉಡಾವಣೆ ಮಾಡಲಿದೆ. ಈ ಐತಿಹಾಸಿಕ ಉಡಾವಣೆಯನ್ನು ನೀವು ಇಲ್ಲಿಯೇ ಲೈವ್ ಆಗಿ ವೀಕ್ಷಿಸಬಹುದು.
NASA, ESA ಮತ್ತು ಕೆನಡಾದ ಬಾಹ್ಯಾಕಾಶ ಸಂಸ್ಥೆ (CSA) ಯ ಜಂಟಿ ಯೋಜನೆಯು ಕೆಲವು ದಿನ ಮೂಲಭೂತವಾಗಿ ನಮ್ಮ ವಿಶ್ವ ದೃಷ್ಟಿಕೋನವನ್ನು ಬದಲಾಯಿಸುತ್ತದೆ. "ಮುಂಬರುವ" ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕವನ್ನು ಉಲ್ಲೇಖಿಸಿದ್ದು, ಇದನ್ನು "ಹೇಗೆ ವೀಕ್ಷಿಸುವುದು" ಎಂಬುದನ್ನು ಈ ವರದಿಯಲ್ಲಿ ವಿವರಿಸಲಾಗಿದೆ.
ಜೇಮ್ಸ್ ವೆಬ್ ದೂರದರ್ಶಕ ಉಡಾವಣೆ: ಟೆಲಿಸ್ಕೋಪ್ ವಿಶೇಷತೆ ಏನು?
ಅಮೆರಿಕದ ನಾಸಾ, ಯುರೋಪ್, ಕೆನಡಾ ಬಾಹ್ಯಾಕಾಶ ಸಂಸ್ಥೆಗಳು ಜಂಟಿಯಾಗಿ ರೂಪಿಸಿದ್ದು, ಇದು ಹಬಲ್ ಟೆಲಿಸ್ಕೋಪ್‍ಗಿಂತಲೂ ಶಕ್ತಿಶಾಲಿಯಾಗಿದೆ. ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್‍ಗೆ ಇನ್‍ಫ್ರಾರೆಡ್ ವಿಷನ್ ಮೂಲಕ 1350 ವರ್ಷಗಳ ಹಿಂದಕ್ಕೆ ಹೋಗಿ ಅಲ್ಲೇನು ನಡೆದಿದೆ ಎಂಬುದನ್ನು ತಿಳಿಸುವ ಅದ್ಭುತ ಸಾಮರ್ಥ್ಯ ಇರುವುದು ವಿಶೇಷವಾಗಿದೆ.
ಯಾವಾಗ ಉಡಾವಣೆ:
ಫ್ರೆಂಚ್ ಗಯಾನಾದ ಕೌರೌನಲ್ಲಿರುವ ಗಯಾನಾ ಬಾಹ್ಯಾಕಾಶ ಕೇಂದ್ರದಿಂದ ಕ್ರಿಸ್‌ಮಸ್ ದಿನವೇ ಬೆಳಿಗ್ಗೆ 7:20 EST (4:20 a.m. PST )ಕ್ಕೆ ಬಾಹ್ಯಾಕಾಶ ದೂರದರ್ಶಕವನ್ನು ಹಾರಿಸುವುದಕ್ಕೆ ನಿರ್ಧರಿಸಲಾಗಿದೆ. ಏರಿಯನ್ 5 ರಾಕೆಟ್ ಭಾರ ಎತ್ತುವಿಕೆಯನ್ನು ನಿರ್ವಹಿಸುತ್ತದೆ, ಉಡಾವಣಾ ಸಂಕೀರ್ಣ ELA-3 ನಿಂದ ಉಡಾವಣೆಯಾದ 32 ನಿಮಿಷಗಳ ಉಡಾವಣೆಯು ಬೆಳಗ್ಗೆ 7:52 EST (4:52 a.m. PST)ಕ್ಕೆ ಕೊನೆಗೊಳ್ಳುತ್ತದೆ.
ನಾಸಾ ಟಿವಿಯಲ್ಲಿ ನೇರ ದರ್ಶನ:
NASA TV ಬೆಳಗ್ಗೆ 3:00 EST (12:00 a.m. PST) ನಲ್ಲಿ ರಾಕೆಟ್ ಇಂಧನ ನವೀಕರಣದ ಬಗ್ಗೆ ಮಾಹಿತಿ ಒದಗಿಸುತ್ತದೆ, ಆದರೆ ನಿಜವಾದ ಪ್ರದರ್ಶನವು 6:00 a.m. EST (3:00 a.m. PST) ಕ್ಕೆ ಪ್ರಾರಂಭವಾಗುತ್ತದೆ. ಉಡಾವಣೆಯ ಲೈವ್ ಫೀಡ್‌ಗಳು NASA TV, YouTube, ಮತ್ತು ESA WEB TV ONE ನಲ್ಲಿ ಲಭ್ಯವಾಗಲಿವೆ. ನೀವು ಅದನ್ನು ಇಲ್ಲಿ ಲೈವ್ ಆಗಿ ನೋಡಬಹುದು ಅಥವಾ ತದನಂತರದಲ್ಲಿ ವಿಡಿಯೋಗಳನ್ನು ಪಡೆಯಬಹುದು.
ಬೆಳಗ್ಗೆ 9 ಗಂಟೆಗೆ ನಾಸಾ ಸುದ್ದಿಗೋಷ್ಠಿ:
ESA ಫ್ರೆಂಚ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿಯೂ ಸಹ ಉಡಾವಣೆಯ ಕುರಿತು ಮಾಹಿತಿ ಸಹಿತ ವಿಡಿಯೋ ಪ್ರಸಾರವಾಗಲಿದೆ. ಫೇಸ್‌ಬುಕ್, ಟ್ವಿಟರ್ ಮತ್ತು ಟ್ವಿಚ್‌ನಲ್ಲಿ ಸ್ಥಿರವಾದ ಮಾಹಿತಿಯು ಲೈವ್ ಆಗಿ ಗೋಚರಿಸುತ್ತದೆ, ಆದ್ದರಿಂದ ನೀವು ಇಂಟರ್ನೆಟ್ ಸಂಪರ್ಕವನ್ನು ಹೊಂದಿರಬೇಕು. ಉಡಾವಣೆ ನಂತರ NASAದ ಪತ್ರಿಕಾಗೋಷ್ಠಿಯು ಬೆಳಗ್ಗೆ 9:00 EST (6:00 a.m. PST) ಕ್ಕೆ NASA TV ಯಲ್ಲಿಯೂ ಪ್ರಾರಂಭವಾಗಲಿದೆ.
ಜೇಮ್ಸ್ ವೆಬ್ ದೂರದರ್ಶಕದಿಂದ ಲಾಭ:
ಹಬಲ್ ದೂರದರ್ಶಕವು ಈ ಬ್ರಹ್ಮಾಂಡದ ಕುರಿತು ನಮಗೆ ಅಗಾಧ ಮಾಹಿತಿಯನ್ನು ಒದಗಿಸಿದೆ. ಈಗ ಉಡಾವಣೆಯಾಗಲಿರುವ ಜೇಮ್ಸ್ ವೆಬ್ ದೂರದರ್ಶಕವು ಬ್ರಹ್ಮಾಂಡದಲ್ಲಿ ಆರಂಭದಲ್ಲಿ ಸೃಷ್ಟಿಯಾದ ಕೆಲವು ನಕ್ಷತ್ರಪುಂಜಗಳನ್ನು ಪತ್ತೆಹಚ್ಚಲು ಹಾಗೂ ನಮ್ಮ ಕ್ಷೀರಪಥ ಸೇರಿದಂತೆ ವಿವಿಧ ತಾರಾಪುಂಜಗಳು ಸೃಷ್ಟಿಯಾಗಿದ್ದು, ಹೇಗೆ ಎಂಬುದನ್ನು ಅರ್ಥಮಾಡಿಕೊಳ್ಳಲೂ ಖಗೋಳವಿಜ್ಞಾನಿಗಳಿಗೆ ನೆರವಾಗಲಿದೆ. ಜೇಮ್ಸ್ ವೆಬ್‌ನ ಮೂಲ ದರ್ಪಣವು ಚಿನ್ನ ಲೇಪಿತವಾಗಿದ್ದು, 6.5 ಮೀಟರ್ ವ್ಯಾಸವನ್ನು ಹೊಂದಿದೆ. ಹಬಲ್ ದೂರದರ್ಶಕದಲ್ಲಿ ಇದು 2.4 ಮೀ. ಆಗಿದೆ. ಜೇಮ್ಸ್ ವೆಬ್ ದೂರದರ್ಶಕದ ಅವರೋಹಿತ ಪರಿವೀಕ್ಷಣಾ ಸಾಮರ್ಥ್ಯದಿಂದಾಗಿ, ದೂರದ ತಾರಾಪುಂಜಗಳಲ್ಲಿರುವ ನಕ್ಷತ್ರಗಳನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸಲು ಸಾಧ್ಯವಾಗಲಿದೆ.
750 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ:
ವಿಶ್ವಸೃಷ್ಟಿಯ ಆರಂಭಿಕ ದಿನಗಳಲ್ಲಿ ನಕ್ಷತ್ರಗಳು, ನಕ್ಷತ್ರ ಮಂಡಲಗಳ ಹುಟ್ಟು. ಅವುಗಳ ಅಂತ್ಯ ಹೇಗೆ ಆಯಿತು ಎಂಬುದನ್ನು ತಿಳಿದುಕೊಳ್ಳಲು ಇದು ಸಹಾಯಕವಾಗಲಿದೆ. ಇದನ್ನು ಕೆಲವರು ನೆಕ್ಸ್ಟ್ ಜನೆರೇಷನ್ ಸ್ಪೇಸ್ ಟೆಲಿಸ್ಕೋಪ್ ಎಂದು ಕರೆಯುತ್ತಾರೆ. 2007ರಲ್ಲೇ ಇದನ್ನು ಪ್ರಯೋಗಿಸಲು ಸಿದ್ಧತೆ ನಡೆದಿತ್ತು. ಆದ್ರೆ ಇದು ಸಾಧ್ಯನಾ ಎಂದು ತುಂಬಾ ಮಂದಿ ಅನುಮಾನಿಸಿದ್ದರು.
ಇದರ ನಿರ್ಮಾಣಕ್ಕೆ ಆರಂಭದಲ್ಲಿ 50 ಕೋಟಿ ಡಾಲರ್ ಆಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಈಗ 730 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಉಡಾವಣೆ ಆದ ನಂತರ ನಿಗದಿತ ಸ್ಥಳ ಸೇರಲು ಒಂದು ತಿಂಗಳು ಹಿಡಿಯುತ್ತದೆ. ಇದನ್ನು ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ ಲಾಗಾಂಗ್ರೆ ಪಾಯಿಂಟ್ ಎಲ್2 ಬಳಿ ಸ್ಥಿರ ಮಾಡಲಾಗುತ್ತದೆ. ಇಲ್ಲಿಂದ ವಿಶ್ವವನ್ನು ತುಂಬಾ ಸ್ಪಷ್ಟವಾಗಿ ಗಮನಿಸಲು ಅವಕಾಶ ಇದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.