ಅಮೆರಿಕ ಬೆಂಗಳೂರು ನಡುವೆ ನಾನ್‌ಸ್ಟಾಪ್ ವಿಮಾನ ಸೇವೆ
ಬೆಂಗಳೂರು, ಫೆಬ್ರವರಿ 25: ಅಮೆರಿಕನ್ ಏರ್‌ಲೈನ್ಸ್ ಬರುವ ಅಕ್ಟೋಬರ್‌ನಿಂದ ಅಮೆರಿಕದ ಸೀಟಲ್‌ನಿಂದ ಬೆಂಗಳೂರಿಗೆ ನಾನ್‌ಸ್ಟಾಪ್ ವಿಮಾನ ಸೇವೆಯನ್ನು ಒದಗಿಸಲಿದೆ.
ಇದು ಮೊಟ್ಟ ಮೊದಲ ನಾನ್‌ಸ್ಟಾಪ್ ವಿಮಾನವಾಗಿರಲಿದೆ. ಅಮೆರಿಕ ಏರ್‌ಲೈನ್ಸ್ ಅಮೆರಿಕದ ಮೂರನೇ ಅತಿದೊಡ್ಡ ವಿಮಾನವಾಗಿದೆ. ಡೆಲ್ಟಾ ಏರ್‌ಲೈನ್ಸ್, ಯುನೈಟೆಡ್ ಏರ್‌ಲೈನ್ಸ್ ಎರಡು ಅತಿದೊಡ್ಡ ವಿಮಾನಗಳಾಗಿವೆ.
ಅಮೆರಿಕನ್ ಏರ್‌ಲೈನ್ಸ್ 285 ಸೀಟರ್‌ಗಳನ್ನು ಒಳಗೊಂಡಿದೆ. ಬಿಜಿನೆಸ್ ಕ್ಲಾಸ್‌ನಲ್ಲಿ 30 ಸೀಟ್‌ಗಳು, ಪ್ರೀಮಿಯಂ ಎಕಾನಮಿಯಲ್ಲಿ 21, 36 ಮೈನ್ ಕ್ಯಾಬಿನ್ ಎಕ್ಟ್ರಾ, 198 ಮೈನ್ ಕ್ಯಾಬಿನ್ ಸೀಟುಗಳನ್ನು ಒಳಗೊಂಡಿದೆ.

ಸ್ಯಾನ್ ಫ್ರಾನ್ಸಿಸ್ಕೋ, ಸಿಲಿಕಾನ್ ವ್ಯಾಲಿ, ಅರಿಝೋನಾ, ಡಲ್ಲಾಸ್, ಚಿಕಾಗೋಗೆ ತೆರಳುವವರು ಯಾವುದೇ ಅಡಚಣೆ ಇಲ್ಲದೆ ನೇರವಾಗಿ ಹೋಗಬಹುದಾಗಿದೆ. ಡಲ್ಲಾಸ್-ಹಾಂಕ್‌ಕಾಂಗ್ ಬಳಿಕ, ಇದು ಎರಡನೇ ಅತಿ ಉದ್ದದ ಮಾರ್ಗವಾಗಿದೆ.
ಬೆಂಗಳೂರು ಹೊರತುಪಡಿಸಿ ಚೆನ್ನೈ ದೇಶದ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದೆ. ಏರ್‌ಪೋರ್ಟ್ ಇದೀಗ 28 ದೇಶಗಳಿಗೆ ಸಂಪರ್ಕ ಕಲ್ಪಿಸಲಿದೆ.












Click it and Unblock the Notifications