• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜನಾಂಗೀಯ ಹತ್ಯೆ ವಿರುದ್ಧದ ಪ್ರತಿಭಟನೆ: ನೈಕಿ ಶೋ ರೂಮ್ ಲೂಟಿ

|

ವಾಷಿಂಗ್ಟನ್, ಮೇ 31: ಅಮೆರಿಕದಲ್ಲಿ, ಆಫ್ರಿಕನ್ ಪ್ರಜೆ ಜಾರ್ಜ್ ಪ್ಲೋಯ್ಡ್ ಎಂಬಾತನ ಜನಾಂಗೀಯ ಹತ್ಯೆ ಖಂಡಿಸಿ ಪ್ರತಿಭಟನೆಗಳು ಹೆಚ್ಚುತ್ತಿವೆ.

ಈ ನಡುವೆ ಮಿಚಿಗನ್‌ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ನೈಕಿ ಶೋ ರೂಮ್ ಒಂದನ್ನು ಹಾಡಹಗಲೇ ಲೂಟಿ ಮಾಡಿರುವ ಘಟನೆ ಶನಿವಾರ ನಡೆದಿದೆ. ಈ ಕುರಿತ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ.

ಅಮೇರಿಕಾದಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ: ಗುಂಡೇಟಿಗೆ ಓರ್ವ ಬಲಿ.!

ಪ್ರತಿಭಟನಾಕಾರರು ನೈಕಿ ಮಳಿಗೆಗೆ ಹಾನಿ ಮಾಡಿ, ಮಳಿಗೆಯಲ್ಲಿನ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಈ ವೇಳೆ ಪೊಲೀಸರು ಸ್ಥಳಕ್ಕೆ ಬರುವ ವೇಳೆಗೆ ಮಳಿಗೆ ಸಂಪೂರ್ಣ ಲೂಟಿಯಾಗಿರುವುದು ಕಂಡು ಬಂದಿದೆ.

ಕಳೆದ ವಾರ ಖೋಟಾ ನೋಟು ಚಲಾವಣೆ ಆರೋಪದ ಮೇಲೆ ಜಾರ್ಜ್ ಪ್ಲೋಯ್ಡ್ ಎಂಬ ವ್ಯಕ್ತಿಯನ್ನು ಮಿನ್ನೆಸೋಟಾದಲ್ಲಿ ಪೊಲೀಸರು ಥಳಿಸಿದ್ದರು. ಕಾರ್‌ನಿಂದ ಹೊರಗೆಳೆದು ಜಾರ್ಜ್ ಕುತ್ತಿಗೆಯ ಮೇಲೆ ಪೊಲೀಸ್ ಅಧಿಕಾರಿಯೊಬ್ಬ ಕಾಲಿಟ್ಟು ಅಮಾನವೀಯವಾಗಿ ನಡೆದುಕೊಂಡಿದ್ದ. ಈ ವೇಳೆ ಜಾರ್ಜ್ ಉಸಿರುಗಟ್ಟಿ ಸಾವನ್ನಪ್ಪಿದ್ದ. ಈ ಜನಾಂಗೀಯ ಹತ್ಯೆಯನ್ನು ಖಂಡಿಸಿ ಅಮೇರಿಕದ ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.

English summary
Protests Over George Floyd Death: Nike Showroom Loot In Michigan by protesters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X