Twitter New Logo : ಟ್ವಿಟರ್ ನೀಲಿ ಹಕ್ಕಿಯ ಲೋಗೋವನ್ನು 'ಡಾಗ್'ಗೆ ಬದಲಾಯಿಸಿದ ಮಸ್ಕ್
ವಾಷಿಂಗ್ಟನ್ ಏಪ್ರಿಲ್ 4: ಟ್ವಿಟರ್ ಸಿಇಒ ಎಲಾನ್ ಮಸ್ಕ್ ಮೈಕ್ರೋ-ಬ್ಲಾಗಿಂಗ್ ಸೈಟ್‌ನ ಲೋಗೋವನ್ನು ಬದಲಾಯಿಸಿದ್ದಾರೆ. ಐಕಾನಿಕ್ ಬ್ಲೂ ಬರ್ಡ್ ಲೋಗೋದಿಂದ ನಾಯಿಗೆ ಸೈಟ್ ಲೋಗೋವನ್ನು ಬದಲಾಯಿಸಿದ್ದಾರೆ.
— Elon Musk (@elonmusk) April 3, 2023
ಟ್ವಿಟರ್ ಬಳಕೆದಾರರು ಸೋಮವಾರ ಟ್ವಿಟರ್‌ನ ವೆಬ್ ಸೈಟ್‌ನಲ್ಲಿ ಬ್ಲೂ ಬರ್ಡ್ ಬದಲಿಗೆ ಆ ಜಾಗಕ್ಕೆ ಕ್ರಿಪ್ಟೋಕರೆನ್ಸಿ ಡಾಗ್‌ಕಾಯಿನ್‌ನ ನಾಯಿಯ ಮೀಮ್ಸ್ ಫೋಟೋವನ್ನು ಹಾಕಿರುವುದನ್ನು ಗಮನಿಸಿದ್ದಾರೆ.

2013 ರಲ್ಲಿ ಜೋಕ್‌ಗಾಗಿ ರಚಿಸಲಾದ ಡಾಗ್‌ಕಾಯಿನ್ ಬ್ಲಾಕ್‌ಚೈನ್ ಮತ್ತು ಕ್ರಿಪ್ಟೋಕರೆನ್ಸಿಯ ಲೋಗೋದ ಭಾಗವಾಗಿರುವ 'ಡಾಗ್' ಮೀಮ್ಸ್ ಕಂಡುಬಂದಿದೆ. ಮಸ್ಕ್ ಅವರು ತಮ್ಮ ಖಾತೆಯಲ್ಲಿ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಟ್ವಿಟರ್ ಲೋಗೋ ಬದಲಾವಣೆಯು ಕೇವಲ ಆವೃತ್ತಿಗೆ ಮಾತ್ರ ಸೀಮಿತವಾಗಿದೆ. ಮೊಬೈಲ್ ಟ್ವಿಟರ್ ಆ್ಯಪ್‌ನಲ್ಲಿ ಪಕ್ಷಿಯ ಲೋಗೋ ಮುಂದುವರೆದಿದೆ.
ಬಿಟ್‌ಕಾಯಿನ್‌ನಂತಹ ಇತರ ಕ್ರಿಪ್ಟೋಕರೆನ್ಸಿಗಳನ್ನು ಅಪಹಾಸ್ಯ ಮಾಡುಲು ಹತ್ತು ವರ್ಷಗಳ ಜಿಂದೆ ಜೋಕ್ಸ್‌ಗಾಗಿ ಈ ಗಾಡ್ ಚಿತ್ರ ರಚಿಸಲಾಯಿತು. ಇದು ಡಾಗ್‌ಕಾಯಿನ್ ಬ್ಲಾಕ್‌ಚೈನ್ ಮತ್ತು ಕ್ರಿಪ್ಟೋಕರೆನ್ಸಿಯ ಲೋಗೋ ಎಂದು ಪ್ರಸಿದ್ಧವಾಗಿದೆ.
As promised pic.twitter.com/Jc1TnAqxAV
— Elon Musk (@elonmusk) April 3, 2023
ಎಲಾನ್ ಮಸ್ಕ್ ಅವರು 2022, ಮಾರ್ಚ್ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರ ಮತ್ತು ಅನಾಮಧೇಯ ಖಾತೆಯ ನಡುವಿನ ಸಂಭಾಷಣೆ ಇದೆ. ಟ್ವಿಟರ್ ಬಳಕೆದಾರನೊಬ್ಬ ಪಕ್ಷಿ ಲೋಗೋವನ್ನು 'ಡಾಗ್'ಗೆ ಬದಲಾಯಿಸಲು ಕೇಳುತ್ತಿದ್ದಾರೆ. ಈ ಪೋಸ್ಟ್ ಅನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದ ಮಸ್ಕ್, ಭರವಸೆ ನೀಡಿದ್ದರು. ಇದೀಗ ವೆಬ್ ಆವೃತ್ತಿಯಲ್ಲಿ ಮಾತ್ರ ಬದಲಾವಣೆ ಮಾಡಿದ್ದಾರೆ.

ಸದ್ಯ ಈ ಲೋಗೋ ಬದಲಾವಣೆಗೆ @WSBCchairman ಪ್ರತಿಕ್ರಿಯಿಸಿದ್ದಾರೆ. "ಟ್ವಿಟರ್ ಅನ್ನು ಖರೀದಿಸಿ ...ಪಕ್ಷಿ ಲೋಗೋವನ್ನು ನಾಯಿಗೆ ಬದಲಾಯಿಸಿ" ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೆ ಮಸ್ಕ್, "ಹಹಾ ಅದು ಸಿಕ್ಕ್ಕ್ಕ್" ಎಂದು ಪ್ರತಿಕ್ರಿಯಿಸಿದ್ದಾರೆ.
ಟ್ವಿಟರ್ ಖರೀದಿ ಒಪ್ಪಂದ
ವಿಶ್ವದೆಲ್ಲೆಡೆ ಭಾರೀ ಚರ್ಚೆಗೆ ಗ್ರಾಸವಾಗಿದ್ದ 44 ಬಿಲಿಯನ್ ಡಾಲರ್ (ಸುಮಾರು 3.5 ಲಕ್ಷ ಕೋಟಿ ರೂ.) ಮೊತ್ತದ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನ ಖರೀದಿಯನ್ನು ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಕೈಬಿಟ್ಟರು. ಸಾಮಾಜಿಕ ಮಾಧ್ಯಮ ಕಂಪನಿಯು ತನ್ನ ಪ್ಲಾಟ್‌ಫಾರ್ಮ್‌ನಲ್ಲಿನ ನಕಲಿ ಖಾತೆಗಳ ಬಗ್ಗೆ ಮಾಹಿತಿಯನ್ನು ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಈ ಡೀಲ್‌ನಿಂದ ಹಿಂದೆ ಸರಿಯುತ್ತಿರುವುದಾಗಿ ಎಲಾನ್ ಮಸ್ಕ್ ತಿಳಿಸಿದ್ದಾರೆ. ಅಮೆರಿಕದ ಸೆಕ್ಯುರಿಟೀಸ್ ಆಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ)ಗೆ ಸಲ್ಲಿಸಿದ ಫೈಲಿಂಗ್‌ನಲ್ಲಿ, ಎಲಾನ್ ಮಸ್ಕ್ ಪರ ವಕೀಲರು, ಪ್ಲಾಟ್‌ಫಾರ್ಮ್‌ನಲ್ಲಿರುವ ನಕಲಿ ಅಥವಾ ಸ್ಪ್ಯಾಮ್ ಖಾತೆಗಳ ಕುರಿತು ಮಾಹಿತಿ ನೀಡಲು ಟ್ವಿಟರ್ ವಿಫಲವಾಗಿದೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರತಿಕ್ರಿಯಿಸಿಲ್ಲ ಎಂದು ಹೇಳಿದ್ದರು.
ಇದರಿಂದ ಕೆರಳಿ ಕೆಂಡವಾಗಿರುವ ಟ್ವಿಟರ್ ಅಧ್ಯಕ್ಷ ಬ್ರೆಟ್ ಟೇಲರ್, ಕಂಪನಿಯ ಆಡಳಿತ ಮಂಡಳಿಯು ವಿಲೀನ ಒಪ್ಪಂದವನ್ನು ಜಾರಿಗೊಳಿಸಲು ಕಾನೂನು ಕ್ರಮವನ್ನು ಅನುಸರಿಸಲು ಯೋಜಿಸಿದೆ ಎಂದು ಟ್ವಟ್ಟರ್‌ನಲ್ಲಿ ಘೋಷಿಸಿದ್ದರು.

"ಟ್ವಿಟ್ಟರ್ ಮಂಡಳಿಯು ಮಸ್ಕ್ ಜೊತೆಗಿನ ಒಪ್ಪಂದದ ಬೆಲೆ ಮತ್ತು ಷರತ್ತುಗಳ ಅನ್ವಯ ವಹಿವಾಟನ್ನು ಮುಚ್ಚಲು ಬದ್ಧವಾಗಿದೆ. ಡೆಲವೇರ್ ಕೋರ್ಟ್ ಆಫ್ ಚಾನ್ಸರಿಯಲ್ಲಿ ನಾವು ಮೇಲುಗೈ ಸಾಧಿಸುತ್ತೇವೆ ಎಂದು ನಮಗೆ ವಿಶ್ವಾಸವಿದೆ," ಎಂದು ಬ್ರೆಟ್ ಟೇಲರ್ ಟ್ವೀಟ್ ಮಾಡಿದ್ದರು.
ಬಳಿಕ ಟ್ವಿಟರ್‌ನ ವಕೀಲರು ತಮ್ಮ ವಿಚಾರಣೆಯ ಪ್ರಾರಂಭದ ಮೊದಲು ಮಸ್ಕ್ ಅವರನ್ನು ಪದಚ್ಯುತಗೊಳಸಲು ನಿರ್ಧರಿಸಿದಾಗ ಮಸ್ಕ ಮತ್ತೊಮ್ಮೆ ಯು-ಟರ್ನ್ ಹೊಡೆಯುವ ಮೂಲಕ ಒಪ್ಪಂದವನ್ನು ಪೂರ್ಣಗೊಳಿಸಲು ಮುಂದಾದರು. ಅದರಂತೆ ಶುಕ್ರವಾರ ಒಪ್ಪಂದವನ್ನು ಪೂರ್ಣಗೊಳಿಸಿದ ಮಸ್ಕ್ ಟ್ವಿಟರ್‌ನ ಮುಖ್ಯಸ್ಥರಾಗಿ ಹೊರಹೊಮ್ಮಿದ್ದಾರೆ.












Click it and Unblock the Notifications