ರಾಕೆಟ್ ಇಂಜಿನ್‌ನಲ್ಲಿ ತಾಂತ್ರಿಕ ದೋಷ: ಎರಡನೇ ಬಾರಿ ರಾಕೆಟ್ ಉಡಾವಣೆ ರದ್ದುಗೊಳಿಸಿದ ನಾಸಾ
ವಾಷಿಂಗ್ಟನ್, ಸೆಪ್ಟೆಂಬರ್ 4: ಮತ್ತೊಂದು ಇಂಧನ ಸೋರಿಕೆಯಿಂದಾಗಿ ನಾಸಾ ತನ್ನ ದೈತ್ಯ ಚಂದ್ರನ ರಾಕೆಟ್‌ನ ಎರಡನೇ ಉಡಾವಣಾ ಪ್ರಯತ್ನವನ್ನು ಸ್ಥಗಿತಗೊಳಿಸಿದೆ. ಸಮಸ್ಯೆ ತುಂಬಾ ಕ್ಲಿಷ್ಟವಾಗಿದ್ದು ಸಮಸ್ಯೆಯನ್ನು ಸರಿಪಡಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆನಡಿ ಬಾಹ್ಯಾಕಾಶ ಕೇಂದ್ರದ ತಂತ್ರಜ್ಞರು ರಾಕೆಟ್‌ನ ಕೋರ್-ಹಂತದ ಇಂಧನ ಟ್ಯಾಂಕ್‌ಗಳಿಗೆ ಪಂಪ್ ಮಾಡಲಾಗುತ್ತಿರುವ ಸೂಪರ್ ಕೂಲ್ಡ್ ಲಿಕ್ವಿಡ್ ಹೈಡ್ರೋಜನ್ ಪ್ರೊಪೆಲ್ಲಂಟ್‌ನ ದೊಡ್ಡ ಸೋರಿಕೆಯನ್ನು ಸರಿಪಡಿಸಲು ಮೂರು ವಿಫಲ ಪ್ರಯತ್ನಗಳನ್ನು ಮಾಡಿದ ನಂತರ ಉಡವಾಣೆಯನ್ನು ಸ್ಥಗಿತಗೊಳಿಸಲಾಯಿತು. ಬಾಹ್ಯಾಕಾಶ ನೌಕೆಯನ್ನು ಈಗ ಅದರ ಅಸೆಂಬ್ಲಿ ಕಟ್ಟಡಕ್ಕೆ ಹಿಂತಿರುಗಿಸಲಾಗುತ್ತದೆ.
ಸೆಪ್ಟೆಂಬರ್ 19 ರಿಂದ 30 ರವರೆಗೆ ನಡೆಯುವ ಮುಂದಿನ ಉಡಾವಣಾ ಅವಧಿಯಲ್ಲಿ ಅಥವಾ ನಂತರದ ಅಕ್ಟೋಬರ್ ತಿಂಗಳಲ್ಲಿ ಮತ್ತೊಮ್ಮೆ ಪ್ರಯತ್ನಿಸಲು ಆರಂಭಿಕ ಅವಕಾಶವು ಬರುತ್ತದೆ ಎಂದು ಸಹಾಯಕ ನಾಸಾ ನಿರ್ವಾಹಕರಾದ ಜಿಮ್ ಫ್ರೀ, ಸುದ್ದಿಗಾರರಿಗೆ ತಿಳಿಸಿದರು.
ನಾಸಾ ನಿರ್ವಾಹಕ ಬಿಲ್ ನೆಲ್ಸನ್ ಸುರಕ್ಷತೆಯು ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದರು, ವಿಶೇಷವಾಗಿ ಈ ರೀತಿಯ ಪರೀಕ್ಷಾ ಹಾರಾಟದಲ್ಲಿ ಪ್ರತಿಯೊಬ್ಬರೂ ರಾಕೆಟ್‌ನ ವ್ಯವಸ್ಥೆಗಳನ್ನು ಪರಿಶೀಲಿಸಲು ಬಯಸುತ್ತಾರೆ ಎಂದರು.

ಮೊದಲ ಬಾರಿ ಉಡಾವನೆಯೂ ವಿಫಲ
ನಾಲ್ಕು RS-25 ಎಂಜಿನ್‌ಗಳಲ್ಲಿ ಒಂದರಲ್ಲಿ ತಾಪಮಾನದ ಸಮಸ್ಯೆ ಇದ್ದ ಕಾರಣ, ನಾಸಾ ಬಾಹ್ಯಾಕಾಶ ಸಂಸ್ಥೆ ನಾಸಾದ ಆರ್ಟೆಮಿಸ್ 1 ಮೂನ್ ರಾಕೆಟ್ ಉಡಾವಣೆಯನ್ನು ಆಗಸ್ಟ್ 29ರಂದು ರದ್ದುಗೊಳಿಸಿತ್ತು. ಇಂಧನ ಸೋರಿಕೆಯಿಂದಾಗಿ ಉಡಾವಣೆಯನ್ನು ಅನಿವಾರ್ಯವಾಗಿ ನಾಸಾ ರದ್ದುಗೊಳಿಸಿತ್ತು ಎಂದು ನಾಸಾ ಹೇಳಿತ್ತು.
ಚಂದ್ರನ ಕಕ್ಷೆಗೆ ಕ್ಯಾಪ್ಸೂಲ್ ಅನ್ನು ಉಡಾವಣೆ ಮಾಡುವ ಕಾರ್ಯಾಚರಣೆಯನ್ನು ಬಾಹ್ಯಾಕಾಶ ಉಡಾವಣಾ ವ್ಯವಸ್ಥೆಯ ರಾಕೆಟ್‌ನ ಹಾರಾಟವು ನಡೆಸಬೇಕಿತ್ತು. ಈಗ ಎರಡನೇ ಬಾರಿಯೂ ಉಡಾವಣಾ ಯತ್ನ ವಿಫಲವಾಗಿದೆ.

ಗಗನಯಾತ್ರಿಗಳನ್ನು ಕಳುಹಿಸುವ ಉದ್ದೇಶ
2025 ರಲ್ಲಿ ಚಂದ್ರನ ಮೇಲೆ ಗಗನಯಾತ್ರಿಗಳನ್ನು ಇರಿಸುವುದು, 2024ರಲ್ಲಿ ನಾಲ್ವರು ಗಗನಯಾತ್ರಿಗಳನ್ನು ಚಂದ್ರನಿಗೆ ಕಳಿಸುವ ದೃಷ್ಟಿಯಿಂದ ನಾಸಾಗೆ ಈ ಬಾಹ್ಯಾಕಾಶ ಕಾರ್ಯಾಚಣೆ ಸಾಕಷ್ಟು ಪ್ರಮುಖವಾಗಿದೆ.
ಗಗನಯಾತ್ರಿಗಳನ್ನು ಕಳಿಸುವ ಮೊದಲು ಅದಕ್ಕೆ ಪೂರಕವಾಗಿ ಆರ್ಟೆಮಿಸ್ I ಬಾಹ್ಯಾಕಾಶದ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಆರ್ಟೆಮಿಸ್ ಮಿಷನ್‌ನ್ನು ಮಂಗಳ ಗ್ರಹಕ್ಕೆ ಗಗನಯಾತ್ರಿಗಳನ್ನು ಕಳುಹಿಸುವ ಮೊದಲ ಮೆಟ್ಟಿಲು ಎಂದೇ ಹೇಳಲಾಗುತ್ತದೆ.

ಚಂದ್ರನಲ್ಲಿ ಮಿನಿ ಸ್ಪೇಸ್ ಸ್ಟೇಷನ್ ನಿರ್ಮಾಣಕ್ಕೆ ಯೋಜನೆ
2024ರಲ್ಲಿ ಗಗನಯಾತ್ರಿಗಳು ಚಂದ್ರನ ಅಂಗಳದಲ್ಲಿ ಇಳಿಯುವ ಮೊದಲು ಅದರ ಸುತ್ತ ಸುತ್ತುವ ಮಿನಿ-ಸ್ಪೇಸ್ ಸ್ಟೇಷನ್‌ನ್ನು ಸ್ಥಾಪಿಸಲು ನಾಸಾದ ಆರ್ಟೆಮಿಸ್ ಪ್ರೋಗ್ರಾಂನಲ್ಲಿ ಗ್ರಾಫಿಕ್ ಮಾಡಲಾಗಿದೆ. ಕ್ಯಾಪ್ಸುಲ್ ಚಂದ್ರನ ಆಚೆಗೆ 40,000 ಮೈಲುಗಳಷ್ಟು ದೂರದ ರೆಟ್ರೋಗ್ರೇಡ್ ಆರ್ಬಿಟ್ (DRO)ಗೆ ಹೋಗಲು ಅದರ ಎಂಜಿನ್‌ಗಳನ್ನು ಉಪಯೋಗಿಸಿಕೊಳ್ಳುತ್ತದೆ.
ಭವಿಷ್ಯದ ಯೋಜನೆಯನ್ನು ಸಕಾರಗೊಳಿಸಲು ನಾಸಾ ಆರ್ಟೆಮಿಸ್-I ಮಿಷನ್ ಸಾಕಷ್ಟು ಚಂದ್ರಯಾನಕ್ಕೆ ಹಾಗೂ ತಂತ್ರಜ್ಞಾನವನ್ನು ಸುಧಾರಿಸಲು ಸಹಾಯವಾಗಲಿದೆ. ಮಾನವರಹಿತವಾಗಿ ಚಂದ್ರಯಾನ ಕೈಗೊಳ್ಳಲಿರುವ ಆರ್ಟೆಮಿಸ್-I ಚಂದ್ರನ ಸುತ್ತಲು ಹೊಸ ಸಂಶೋಧನೆಗಳನ್ನು ನಡೆಸಲಿದೆ.

ಚಂದ್ರನ ಅಂಗಳಕ್ಕೆ ಮೊದಲ ಮಹಿಳೆ!
2024ರಲ್ಲಿ ಚಂದ್ರನ ಮೇಲೆ ಗಗನಯಾತ್ರಿಗಳನ್ನು ಇಳಿಸುವ ಗುರಿ ಹೊಂದಲಾಗಿದ್ದು, ಇದರಲ್ಲಿ ಓರ್ವ ಮಹಿಳೆ ಕೂಡ ಸೇರಿರುತ್ತಾರೆ. ಒಂದು ವೇಳೆ ನಾಸಾ ಯಶಸ್ವಿಯಾಗಿ ಚಂದ್ರನ ಮೇಲೆ ಗಗನಯಾತ್ರಿಗಳನ್ನು ಇಳಿಸಿದ್ದೇ ಆದಲ್ಲಿ ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಆರ್ಟೆಮಿಸ್-I ಉಡಾವಣೆಯಾದ ನಂತರ ಒಟ್ಟು 42 ದಿನಗಳ ಕಾಲ ಕಾರ್ಯಾಚರಣೆ ನಡೆಸಲಿದೆ. 42 ದಿನಗಳ ಬಳಿಕ ಭೂಮಿಗೆ ವಾಪಸ್ ಬರಲಿದೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications